HomeUncategorizedಗುಜರಾತ್‌ನಲ್ಲಿ ಕೊರೊನಾದ ಹೊಸ ರೂಪಾಂತರ XE ವೈರಸ್‌ ಪತ್ತೆ: ಸರ್ಕಾರಿ ಮೂಲಗಳು

ಗುಜರಾತ್‌ನಲ್ಲಿ ಕೊರೊನಾದ ಹೊಸ ರೂಪಾಂತರ XE ವೈರಸ್‌ ಪತ್ತೆ: ಸರ್ಕಾರಿ ಮೂಲಗಳು

- Advertisement -
- Advertisement -

ಕೊರೊನಾ ವೈರಸ್‌ನ ರೂಪಾಂತರವಾದ ಓಮೈಕ್ರಾನ್‌ನ ಉಪ-ರೂಪಾಂತರ XE ವೈರಸ್‌‌ ಪ್ರಕರಣವು ಗುಜರಾತ್‌ನಲ್ಲಿ ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ NDTV ಶನಿವಾರ ವರದಿ ಮಾಡಿದೆ. ವರದಿಯ ಪ್ರಕಾರ, ರೋಗಿಯು ಮಾರ್ಚ್ 13 ರಂದು ಕೊರೊನಾ ಪಾಸಿಟಿವ್‌‌ ಆಗಿದ್ದರು ಮತ್ತು ಒಂದು ವಾರದಲ್ಲಿ ಚೇತರಿಸಿಕೊಂಡಿದ್ದಾರೆ.

ವೈರಸ್‌ನ ಅನುವಂಶೀಯ ರಚನೆಯ ಬಗ್ಗೆ ಅಧ್ಯಯನ ಮಾಡಿದ ನಂತರ ರೋಗಿಯು ಕೊರೊನಾ ವೈರಸ್‌‌ನ XE ರೂಪಾಂತರದ ಸೋಂಕಿಗೆ ಒಳಗಾಗಿದ್ದಾರೆ ಎಂದು ಕಂಡುಹಿಡಿಯಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ಇದು XE ರೂಪಾಂತರವೇ ಆಗಿದೆ ಎಂದು ಖಚಿತಪಡಿಸಲು ಮಾದರಿಯನ್ನು ಮರುಪರಿಶೀಲಿಸಲಾಗುವುದು ಎಂದು ಸರ್ಕಾರದ ಮೂಲವೊಂದು ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರಾಜ್ಯದಲ್ಲಿ XM ರೂಪಾಂತರದ ಒಂದು ಪ್ರಕರಣ ಕೂಡಾ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ XE ಮತ್ತು XM ರೂಪಾಂತರ ಸೋಂಕಿತರಿಬ್ಬರ ಆರೋಗ್ಯ ಸ್ಥಿತಿಯ ಬಗ್ಗೆ ಅವರು ಯಾವುದೆ ಮಾಹಿತಿಯನ್ನು ನೀಡಿಲ್ಲ.

ಇದನ್ನೂ ಓದಿ: ಲಸಿಕೆ ಕಡ್ಡಾಯದಿಂದ ಯಾರೂ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿಲ್ಲ: ಒಕ್ಕೂಟ ಸರ್ಕಾರ

XE ರೂಪಾಂತರವು BA 1 ಮತ್ತು BA 2 ಓಮಿಕ್ರಾನ್ ತಳಿಗಳ ರೂಪಾಂತರವಾಗಿದೆ. ಓಮೈಕ್ರಾನ್‌‌ನ BA 2ನ ಉಪ ರೂಪಾಂತರಕ್ಕಿಂತ ಹೊಸ ರೂಪಾಂತರವಾದ XE ವೈರಸ್‌ 10 ಪಟ್ಟು ಹೆಚ್ಚು ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

XM ರೂಪಾಂತರ ಕೂಡಾ ಒಮಿಕ್ರಾನ್‌ನ BA 1 ಮತ್ತು BA 2 ತಳಿಗಳ ಉಪ ರೂಪಾಂತರ ವೈರಸ್‌‌ ಆಗಿದೆ.

ಈ ವಾರದ ಆರಂಭದಲ್ಲಿ, ವಿದೇಶ ಪ್ರಯಾಣ ಮಾಡಿದ್ದ ರೋಗಿಯು XE ರೂಪಾಂತರ ವೈರಸ್‌‌ಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಆರೋಗ್ಯ ಸಚಿವಾಲಯವು ಈ ವರದಿಯನ್ನು ನಿರಾಕರಿಸಿದ್ದು, “ಪ್ರಸ್ತುತ ಪುರಾವೆಗಳು ಹೊಸ ರೂಪಾಂತರದ ಉಪಸ್ಥಿತಿಯನ್ನು ಸೂಚಿಸುವುದಿಲ್ಲ” ಎಂದು ಹೇಳಿದೆ.

ಹೊಸ ರೂಪಾಂತರವು ಮೊದಲಿಗೆ ಇಂಗ್ಲೇಂಡಿನಲ್ಲಿ ಪತ್ತೆಯಾಗಿತ್ತು. ಇದು ಇತರ ಯಾವುದೆ ಕೊರೊನಾ ವೈರಸ್‌ಗಿಂತ ವೇಗವಾಗಿ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳೆದ ವಾರ ಹೇಳಿತ್ತು.

ಆದಾಗ್ಯೂ, ದೇಶದಲ್ಲಿ ಮತ್ತೊಂದು ಕೊರೊನಾ ಅಲೆಯನ್ನು ಉಂಟುಮಾಡುವಷ್ಟು ಹೊಸ ರೂಪಾಂತರ ಪ್ರಬಲವಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಭಾರತದಲ್ಲಿನ ವೈರಾಲಜಿಸ್ಟ್‌ಗಳು ಹೇಳಿದ್ದಾರೆ. ಹೊಸ ರೂಪಾಂತರದ ಬಗ್ಗೆ ಎಚ್ಚರಿಕೆ ವಹಿಸಲು ಮತ್ತು ಕೊರೊನಾದ ಸೂಕ್ತ ನಡವಳಿಕೆಯನ್ನು ಅನುಸರಿಸಲು ಸಲಹೆ ನೀಡಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಓಮಿಕ್ರಾನ್‌ನ ಉಪ- ರೂಪಾಂತರಗಳನ್ನು ಪತ್ತೆಹಚ್ಚಲಾಗಿದ್ದರೂ, ಇದುವರೆಗೆ ಸೋಂಕಿನ ಪ್ರಸರಣದಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದನ್ನೂ ಓದಿ: ಆರೋಗ್ಯ ಕಾರ್ಯಕರ್ತರ ಸಾವಿನ ವಿಂಗಡಣೆಯ ಡೇಟಾವಿಲ್ಲ ಎಂದ ಒಕ್ಕೂಟ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...