Homeಕರೋನಾ ತಲ್ಲಣಆರೋಗ್ಯ ಕಾರ್ಯಕರ್ತರ ಸಾವಿನ ವಿಂಗಡಣೆಯ ಡೇಟಾವಿಲ್ಲ ಎಂದ ಒಕ್ಕೂಟ ಸರ್ಕಾರ

ಆರೋಗ್ಯ ಕಾರ್ಯಕರ್ತರ ಸಾವಿನ ವಿಂಗಡಣೆಯ ಡೇಟಾವಿಲ್ಲ ಎಂದ ಒಕ್ಕೂಟ ಸರ್ಕಾರ

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ರೋಗ ಮಾರ್ಚ್ 2020 ರಿಂದ ಏಕಾಏಕಿ ಏರಿಕೆಯಾದಾಗಿನಿಂದ ಉಂಟಾದ ಸರ್ಕಾರಿ ಮತ್ತು ಖಾಸಗಿ ವೈದ್ಯರು ಸೇರಿದಂತೆ ಆರೋಗ್ಯ ಕಾರ್ಯಕರ್ತರ ಸಾವಿನ ಕುರಿತು ವಿಂಗಡಣೆಯ ಡೇಟಾವನ್ನು ಹೊಂದಿಲ್ಲ ಎಂದು ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಒಪ್ಪಿಕೊಂಡಿದೆ.

ಸಾಂಕ್ರಾಮಿಕ ಸಮಯದಲ್ಲಿ ಉಂಟಾದ ಆರೋಗ್ಯ ಕಾರ್ಯಕರ್ತರ ಒಟ್ಟು ಸಾವಿನ ಕುರಿತು ವಿಂಗಡಣೆಯ ಡೇಟಾವನ್ನು ನೀಡುವಂತೆ ಒತ್ತಾಯಿಸಿ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯನ್ ಅವರ ಪ್ರಶ್ನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಲಿಖಿತ ಉತ್ತರ ನೀಡಿದೆ.

ಈ ಅತೃಪ್ತಿಕರ ಉತ್ತರದ ಬಗ್ಗೆ ವಿಷಾದಿಸುತ್ತಾ, ಟಿಎಂಸಿ ಸಂಸದ, ಎನ್‌ಡಿಎ ಸರ್ಕಾರ ಈಗ ‘ಡೇಟಾ ಲಭ್ಯವಿಲ್ಲ’ ಎಂಬ ಕ್ಲೀಷೆಗೆ ಬಂದು ನಿಂತಿದೆ ಎಂದು ಲೇವಡಿ ಮಾಡಿದ್ದಾರೆ. ’ಆರೋಗ್ಯವು ರಾಜ್ಯಗಳ ವಿಷಯವಾಗಿರುವುದರಿಂದ, ಭಾರತ ಸರ್ಕಾರವು ಕೊರೊನಾ ಒಟ್ಟು ಪ್ರಕರಣಗಳು ಮತ್ತು ರಾಜ್ಯಗಳು ವರದಿ ಮಾಡಿದ ಸಾವುಗಳ ಡೇಟಾವನ್ನು ನಿಯಮಿತವಾಗಿ ನಿರ್ವಹಿಸುತ್ತಿದೆ’ ಎಂದು ಸಚಿವಾಲಯ ಉತ್ತರ ನೀಡಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಮೋದಿಯಿಂದಾಗಿ ಕೊರೊನಾ ಸಮಯದಲ್ಲಿ ಪ್ರತಿ ಮನೆಗೆ ಲಕ್ಷ್ಮಿ ದೇವಿ ಬಂದಿದ್ದರು ಎಂಬ ಅಮಿತ್ ಶಾ ಹೇಳಿಕೆ ನಿಜವೇ?

“ವಿಂಗಡಣೆಯ ಡೇಟಾವನ್ನು ರಾಜ್ಯ ಸರ್ಕಾರ ನಿರ್ವಹಿಸುವ ಅಗತ್ಯವಿದೆ. ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿವರಗಳನ್ನು ಒದಗಿಸುವಂತೆ ವಿನಂತಿಸಿದೆ. ಆದರೆ, ಇದುವರೆಗೆ ಮಹಾರಾಷ್ಟ್ರ ಸೇರಿದಂತೆ ಆರು ರಾಜ್ಯಗಳು ಮಾತ್ರ ವಿವರಗಳನ್ನು ಒದಗಿಸಿವೆ” ಎಂದು ತಿಳಿಸಿದೆ.

ರಾಜ್ಯಸಭೆಯಲ್ಲಿ ಟಿಎಂಸಿ ಸಂಸದ ಡೆರೆಕ್ ಒಬ್ರಿಯನ್‌ಗೆ ಲಭ್ಯವಾದ ಮಾಹಿತಿಯ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ 67 ವೈದ್ಯರು ಮತ್ತು 19 ದಾದಿಯರು ಸೇರಿದಂತೆ ಒಟ್ಟು 217 ಆರೋಗ್ಯ ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ.

ಗುಜರಾತ್‌ನಲ್ಲಿ 20 ವೈದ್ಯರು, 20 ದಾದಿಯರು, 6 ಆಂಬ್ಯುಲೆನ್ಸ್ ಚಾಲಕರು ಮತ್ತು 128 ಅರೆವೈದ್ಯರು ಕೊರೊನಾ ಸಮಯದಲ್ಲಿ ಕೋವಿಡ್ ರೋಗಿಗಳಿಗೆ ಸೇವೆ ಸಲ್ಲಿಸುವ ಮೂಲಕ ಪ್ರಾಣ ಕಳೆದುಕೊಂಡಿದ್ದಾರೆ.

’ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 2022 ರ ಜನವರಿ 31 ರವರೆಗೆ ಒಟ್ಟು 808 ಕೋಟಿ ರೂಪಾಯಿಗಳನ್ನು ಮೃತ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರ ಕುಟುಂಬದ ಸದಸ್ಯರಿಗೆ ಪಾವತಿಸಲಾಗಿದೆ.

ಸಾಂಕ್ರಾಮಿಕ ಸಮಯದಲ್ಲಿ ಕರ್ತವ್ಯದಲ್ಲಿರುವ ಸುಮಾರು 22.12 ಲಕ್ಷ ಸರ್ಕಾರಿ ಮತ್ತು ಖಾಸಗಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು 2020 ರಲ್ಲಿ ಪ್ರಾರಂಭಿಸಲಾಯಿತು.


ಇದನ್ನೂ ಓದಿ: ಕಾಂಗ್ರೆಸ್ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸುವ ಮೂಲಕ ದೇಶಾದ್ಯಂತ ಕೊರೊನಾ ಹರಡಿತು: ಪಿಎಂ ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...