Homeಕರೋನಾ ತಲ್ಲಣಲಸಿಕೆ ಕಡ್ಡಾಯದಿಂದ ಯಾರೂ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿಲ್ಲ: ಒಕ್ಕೂಟ ಸರ್ಕಾರ

ಲಸಿಕೆ ಕಡ್ಡಾಯದಿಂದ ಯಾರೂ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿಲ್ಲ: ಒಕ್ಕೂಟ ಸರ್ಕಾರ

- Advertisement -
- Advertisement -

ಹಲವು ರಾಜ್ಯ ಸರ್ಕಾರಗಳು ಹೊರಡಿಸಿರುವ ಕಡ್ಡಾಯ ಕೋವಿಡ್‌ ಲಸಿಕೆ ಆದೇಶಗಳಿಂದಾಗಿ ಜನರು ತಮ್ಮ ಉದ್ಯೋಗ ಮತ್ತು ಪಡಿತರವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಹೇಳಿಕೆಗಳನ್ನು ಒಕ್ಕೂಟ ಸರ್ಕಾರವು ವಿರೋಧಿಸಿದ್ದು, ‘ಯಾರೂ ಏನನ್ನೂ ಕಳೆದುಕೊಳ್ಳುತ್ತಿಲ್ಲ’ ಎಂದು ಸೋಮವಾರ ಪ್ರತಿಪಾದಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಹಲವಾರು ರಾಜ್ಯಗಳು ಮತ್ತು ಅಧಿಕಾರಿಗಳ ಆದೇಶದಿಂದ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಲಸಿಕೆಯನ್ನು ಕಡ್ಡಾಯ ಮಾಡಿರುವುದರ ತುರ್ತು ಏನಿತ್ತು ಎಂದು ಅವರು ಕೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ಲಸಿಕೆ ಅಭಿವೃದ್ಧಿಗೆ ಒಂದು ಪೈಸೆಯು ಕೊಡದ ಪಿಎಂ ಕೇರ್‌!

“ಇದೀಗ, ಲಸಿಕೆಯನ್ನು ಕಡ್ಡಾಯ ಮಾಡುವುದರ ತುರ್ತು ಏನಿದೆ? ಇದರಿಂದಾಗಿ ಜನರು ತಮ್ಮ ಉದ್ಯೋಗವನ್ನು ಮತ್ತು ಪಡಿತರವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಲಸಿಕೆ ಕಡ್ಡಾಯ  ಆದೇಶಗಳ ಪರಿಣಾಮವಾಗಿ ಜನರು ಮುಕ್ತವಾಗಿ ತಿರುಗಾಡಲು ಕೂಡಾ ಸಾಧ್ಯವಾಗುತ್ತಿಲ್ಲ” ಎಂದು ಪ್ರಶಾಂತ್‌‌ ಭೂಷಣ್ ಹೇಳಿದ್ದಾರೆ.

ಈ ವಾದವನ್ನು ವಿರೋಧಿಸಿದ, ಒಕ್ಕೂಟ ಸರ್ಕಾರದ ಪ್ರತಿನಿಧಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಲಸಿಕೆ ಹಾಕದ ಕಾರಣ ಯಾರೂ ಉದ್ಯೋಗ ಕಳೆದುಕೊಳ್ಳುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ ಮುಂದೆ ಹೇಳಿದ್ದಾರೆ.

ಕೋವಿಡ್‌ ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳ ದತ್ತಾಂಶದ ಬಹಿರಂಗಪಡಿಸುವಿಕೆಗೆ ಮತ್ತು ಲಸಿಕೆ ಕಡ್ಡಾಯ ಆದೇಶಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಗಿನ ಪ್ರಕರಣವನ್ನು ಸುಪ್ರೀಂಕೋರ್ಟ್‌ ಪೀಠವು ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: ಕೊರೊನಾ ಪ್ರಕರಣ ಹೆಚ್ಚಾದರೂ, ಲಸಿಕೆ ಕಾರಣಕ್ಕೆ ಸಾವು ನೋವು ಕಡಿಮೆಯಾಗಿದೆ: ICMR ಮುಖ್ಯಸ್ಥ

“ಕಡ್ಡಾಯ ಲಸಿಕೆಯಿಂದಾಗಿ ಯಾರೂ ಏನನ್ನೂ ಕಳೆದುಕೊಳ್ಳುತ್ತಿಲ್ಲ ಮತ್ತು ಈ ಬಗ್ಗೆ ಯಾರೂ ನ್ಯಾಯಾಲಯದ ಮುಂದೆ ಬಂದಿಲ್ಲ” ಎಂದು ಒಕ್ಕೂಟ ಸರ್ಕಾರ ಹೇಳಿದೆ.

ಒಬ್ಬ ವ್ಯಕ್ತಿಗೆ ಸೋಂಕು ತಗುಲಿದ್ದರೆ, ಈ ಸೋಂಕಿನಿಂದ ಅವರನ್ನು ರಕ್ಷಿಸಲು ಲಸಿಕೆಗಿಂತ ಉತ್ತಮವಾದ ಬೇರೆ ಮಾರ್ಗಗಳಿವೆ ಎಂದು ಸಾಬೀತಾಗಿದೆ ಎಂದು ಪ್ರಶಾಂತ್‌ ಭೂಷಣ್ ಸುಪ್ರೀಂಕೋರ್ಟ್‌ಗೆ ಹೇಳಿದ್ದಾರೆ.

ಕಡ್ಡಾಯ ಲಸಿಕೆ ಆದೇಶಗಳು ನಾಗರಿಕರ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುತ್ತಿವೆ ಎಂದು ಅವರು ವಾದಿಸಿದ್ದಾರೆ. ತನಗೆ ಲಸಿಕೆ ಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವುದು ವ್ಯಕ್ತಿಯೊಬ್ಬರ ಮೂಲಭೂತ ಹಕ್ಕು ಎಂದು ಅವರು ಹೇಳಿದ್ದಾರೆ.

ವಾದಗಳನ್ನು ಆಲಿಸಿದ ನಂತರ, ಪ್ರಕರಣದ ಅಂತಿಮ ವಿಚಾರಣೆಗೆ ದಿನಾಂಕ ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನೂ ಓದಿ: ದಡಾರ-ರುಬೆಲ್ಲಾ ಲಸಿಕೆ ಅತ್ಯಂತ ಸುರಕ್ಷಿತ; ಬೆಳಗಾವಿ ಮಕ್ಕಳ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು: ಡಾ. ಹಿಮಾಂಶು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...