Homeಮುಖಪುಟಬಜೆಟ್‌‌ 2022: ಒಕ್ಕೂಟ ಸರ್ಕಾರದ ಮೇಲೆ ಜನರ ನಿರೀಕ್ಷೆಗಳೇನು?

ಬಜೆಟ್‌‌ 2022: ಒಕ್ಕೂಟ ಸರ್ಕಾರದ ಮೇಲೆ ಜನರ ನಿರೀಕ್ಷೆಗಳೇನು?

- Advertisement -
- Advertisement -

ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿಯಿಂದ ದೇಶದ ಮಧ್ಯಮ ವರ್ಗದ ಜನರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಫೆಬ್ರವರಿ 1 ರಂದು ಒಕ್ಕೂಟ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿರುವ 2022 -23 ರ ಬಜೆಟ್‌ ನಿರೀಕ್ಷೆಗಳ ಪಟ್ಟಿ ದೊಡ್ಡದಿದೆ. ಆದಾಯ ತೆರಿಗೆ ಪರಿಹಾರದಿಂದ ಹಿಡಿದು ಭವಿಷ್ಯ ನಿಧಿ ಹೂಡಿಕೆಗಳಿಗೆ ತೆರಿಗೆಯಿಂದ ವಿನಾಯಿತಿ ನೀಡುವವರೆಗೆ ಮಧ್ಯಮ ವರ್ಗ ಹಲವಾರು ನಿರೀಕ್ಷೆಗಳನ್ನಿಟ್ಟುಕೊಂಡಿದೆ.

ಒಕ್ಕೂಟ ಸರ್ಕಾರ ಸೋಮವಾರ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ, ಭಾರತೀಯ ಅರ್ಥವ್ಯವಸ್ಥೆ ಕೊವಿಡ್ ಸಂಕಷ್ಟವನ್ನು ದಾಟಿ 8-8.5% ರಷ್ಟು ಜಿಡಿಪಿ ಪ್ರಗತಿ ದರವನ್ನು ಸಾಧಿಸಲಿದೆ ಎನ್ನುವ ನಿರೀಕ್ಷೆಯನ್ನು 2022-23 ರ ವಿತ್ತವರ್ಷಕ್ಕೆ ನೀಡಿದೆ. ಕೊವಿಡ್ ಸಾಂಕ್ರಾಮಿಕ ರೋಗದ ನಡುವೆ ಮಂಡಿಸಲಾಗುತ್ತಿರುವ ಮತ್ತೊಂದು ಬಜೆಟ್‌ನಲ್ಲಿ ಏರುತ್ತಿರುವ ಹಣದುಬ್ಬರದ ದರ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ. ಹಣದುಬ್ಬರವನ್ನು ಗಮನಿಸಿಯೇ ತೆರಿಗೆ ಸುಧಾರಣೆಗಳಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ:ಕೊರೊನಾ ಲಸಿಕೆ ಅಭಿವೃದ್ಧಿಗೆ ಒಂದು ಪೈಸೆಯು ಕೊಡದ ಪಿಎಂ ಕೇರ್‌!

ಕಳೆದ ಎರಡು ವರ್ಷಗಳ ಆರ್ಥಿಕ ಅಸ್ಥಿರತೆಯಿಂದಾಗಿ ಮಧ್ಯಮ ವರ್ಗ ಮತ್ತು ದುಡಿಯುವ ಸಮುದಾಯ ಸರ್ಕಾರ ವಿಧಿಸುವ ಆದಾಯ ತೆರಿಗೆಯಲ್ಲಿ ಸ್ವಲ್ಪ ರಿಯಾಯಿತಿ ಬಯಸಿದ್ದು, ಸರ್ಕಾರ ಕನಿಷ್ಠ ರೂ 50 ರಿಂದ ರೂ 1 ಲಕ್ಷಗಳವರೆಗೆ ಮಿತಿಯನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿದ್ದಾರೆ.

“2 ವರ್ಷಗಳಿಂದ ಆರೋಗ್ಯ ಹಾಗೂ ಆದಾಯದ ವಿಚಾರದಲ್ಲಿ ವಿಶೇಷವಾಗಿ ದುಡಿಯವ ಜನ ಅಧಿಕ ಒತ್ತಡದಲ್ಲಿ ದಿನದೂಡುವ ಸ್ಥಿತಿ ನಿರ್ಮಾಣವಾಗಿತ್ತು. ಬಹಳಷ್ಟು ಜನರು ಅನಾರೋಗ್ಯ ಸಂಬಂಧ ಸಾಕಷ್ಟು ಆಸ್ಪತ್ರೆ ವೆಚ್ಚ ಭರಿಸಿದ್ದಾರೆ. ಇದರಿಂದ, ಸರ್ಕಾರ ಮಿತಿಯನ್ನು ರೂ 50 ರಿಂದ ರೂ1 ಲಕ್ಷಗಳವರೆಗೆ ಹೆಚ್ಚಿಸಬೇಕು” ಎಂದು ತ್ವರಿತ ವೈಯಕ್ತಿಕ ಸಾಲ ಅಪ್ಲಿಕೇಶನ್ ಅರ್ಲಿಸ್ಯಾಲಿಯ ಸಿಇಒ ಮತ್ತು ಸಹ ಸಂಸ್ಥಾಪಕ ಅಕ್ಷಯ್ ಮೆಹ್ರೋತ್ರಾ ಅಭಿಪ್ರಾಯಪಟ್ಟಿದ್ದಾರೆ.

ಆದಾಯ ತೆರಿಗೆ ರಿಯಾಯಿತಿ

ಮೈ ಗವರ್ನಮೆಂಟ್‌ ವೆಬ್‌ತಾಣದ ದತ್ತಾಂಶದ ಪ್ರಕಾರ, ತೆರಿಗೆ ಕಡಿತಗೊಳಿಸುವ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡಬೇಕೆಂದು ಬಳಕೆದಾರರು ಸರ್ಕಾರವನ್ನು ಕೋರಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಇಂಧನವನ್ನು ಸೇರಿಸಲು ಸರ್ಕಾರ ಪರಿಗಣಿಸಬೇಕೆಂದು ಕೆಲವರು ಸಲಹೆ ನೀಡಿದ್ದಾರೆ. ಭವಿಷ್ಯ ನಿಧಿ ಮತ್ತು ಸ್ವಯಂಪ್ರೇರಿತ ಭವಿಷ್ಯ ನಿಧಿ ಹೂಡಿಕೆಗಳನ್ನು   ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ಸರ್ಕಾರ ಪರಿಗಣಿಸಬೇಕು ಎಂದೂ ಮೈ ಗವರ್ನಮೆಂಟ್ ವೆಬ್‌ತಾಣದಲ್ಲಿ ಬಳಕೆದಾರರ ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಲಸಿಕೆ ಕಡ್ಡಾಯದಿಂದ ಯಾರೂ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿಲ್ಲ: ಒಕ್ಕೂಟ ಸರ್ಕಾರ

ರೈತರು, ಮಹಿಳೆಯರು, ಯುವ ಜನತೆ

ಫೆಬ್ರವರಿ 10ರಿಂದ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಪ್ರಸಕ್ತ ಬಜೆಟ್‌ನ್ನು ರೈತರು, ಮಹಿಳೆಯರು, ಯುವ ಜನತೆಯನ್ನು ಕೇಂದ್ರವಾಗಿಟ್ಟುಕೊಂಡು ಸಿದ್ಧಪಡಿಸಿರುತ್ತಾರೆಂಬ ನಿರೀಕ್ಷೆ ಸಹಜವಾಗಿ ಎಲ್ಲರಲ್ಲೂ ಇದೆ. ನರೇಂದ್ರ ಮೋದಿ ಸರ್ಕಾರ, ಸಮಾಜದ ಕೆಲ ವರ್ಗಗಳನ್ನು ಸಮಾಧಾನಪಡಿಸುವ ಉದ್ದೇಶದಿಂದ ಮತ್ತು ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳಿಂದ ಸೆಳೆಯುವ ಪ್ರಯತ್ನ ಮಾಡುವುದೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮೂರು ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸಿ ವರ್ಷವಿಡೀ ಪ್ರತಿಭಟನೆ ಮಾಡಿದ ರೈತರ ಒತ್ತಡಕ್ಕೆ ಮಣಿದ ಸರ್ಕಾರ, ಡಿಸೆಂಬರ್ 2021ರಲ್ಲಿ ಅವುಗಳನ್ನು ಹಿಂಪಡೆಯಿತು. ಇದರ ಪರಿಣಾಮ ಕೇಂದ್ರ ಹಾಗೂ ಚುನಾವಣೆ ಘೋಷಣೆಯಾದ ಪಂಚ ರಾಜ್ಯಗಳಲ್ಲಿ ಪಾಲು ಹೊಂದಿರುವ ಬಿಜೆಪಿ ಆಡಳಿತದ ವಿರುದ್ಧ ಕೃಷಿಕ ಸಮುದಾಯ ತಿರುಗಿ ಬಿದ್ದಿದ್ದಾರೆಂಬ ಅಭಿಪ್ರಾಯವಿದ್ದು, ಕೇಂದ್ರ ಸರ್ಕಾರ ಅವರನ್ನು ಸಮಾಧಾನಿಸಲು ಬಜೆಟ್‌ನಲ್ಲಿ ಉತ್ತಮ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ. ಹೀಗಾಗಿ ರೈತರು ಬಜೆಟ್‌ನಲ್ಲಿ ಸುಧಾರಣೆಗಳನ್ನು ನಿರೀಕ್ಷಿಸಿದ್ದಾರೆ.

ಮಹಿಳೆಯರು

ಕಾಂಗ್ರೆಸ್ ‘ಲಡ್ಕಿ ಹೂ, ಲಡ್ ಸಕ್ತಿ ಹೂ’ (ನಾನು ಹುಡುಗಿ, ನಾನು ಹೋರಾಡಬಲ್ಲೆ). ಎಂದೇ ಪಕ್ಷದ ಶೇ 40ರಷ್ಟು ವಿಧಾನಸಭೆ ಟಿಕೆಟ್ಗಳನ್ನು ಮಹಿಳೆಯರಿಗೆ ಹಂಚಿಕೆ ಮಾಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಚುನಾವಣಾ ಪ್ರಚಾರದಲ್ಲಿ ಮಹಿಳೆಯನ್ನು ಕೇಂದ್ರವಾಗಿಟ್ಟುಕೊಂಡ ಬೆನ್ನಲ್ಲೇ ಬಿಜೆಪಿ ಸಹ ಬಜೆಟ್‌ ಮೂಲಕ ಕೊಡುಗೆ ನೀಡಬಹುದೆಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:‘ಪ್ರಧಾನಿಯ ಭದ್ರತಾ ಲೋಪದ ಬಗ್ಗೆ ಎಲ್ಲವನ್ನೂ ನೀವೇ ತೀರ್ಮಾನಿಸಿದರೆ ನಮಗೇನು ಕೆಲಸ?: ಒಕ್ಕೂಟ ಸರ್ಕಾರಕ್ಕೆ ಸುಪ್ರೀಂಕೋರ್ಟ್‌

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಜ್ಯ ಘಟಕ ರಾಜ್ಯ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕೆಲವು ಅಂಶಗಳನ್ನು ಘೋಷಿಸಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಹ ಇತ್ತೀಚೆಗೆ ತನ್ನ ಮಹಿಳಾ ವಿಭಾಗವನ್ನು ರಚಿಸಿದ್ದಾರೆ. ಮಹಿಳೆಯರಿಗೆ ಸುಧಾರಿತ ಶಿಕ್ಷಣ ಮತ್ತು ಉದ್ಯೋಗಾವಕಾಶದ ಭರವಸೆ ನೀಡಿದ್ದಾರೆ. ಬಿಎಸ್‌ಪಿ ವರಿಷ್ಠೆ ಮಾಯಾವತಿ, 2007 ಮತ್ತು 2012 ರ ನಡುವೆ ತಮ್ಮ ಸರ್ಕಾರ ಮಹಿಳೆಯರ ಆರ್ಥಿಕ ಮತ್ತು ಶೈಕ್ಷಣಿಕ ಸ್ವಾತಂತ್ರ್ಯಕ್ಕಾಗಿ ಮಾಡಿದ ಕೆಲಸಗಳನ್ನು ಎತ್ತಿ ತೋರಿಸಿದ್ದಾರೆ. ಕಾಂಗ್ರೆಸ್, ಎಸ್‌ಪಿ ಮತ್ತು ಬಿಎಸ್‌ಪಿ ಪಕ್ಷಗಳನ್ನು ಎದುರಿಸಲು ಕೇಂದ್ರ ಬಜೆಟ್‌ನಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಕೆಲವು ಆಕರ್ಷಕ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆ.

ಯುವಕರು ಮತ್ತು ನಿರುದ್ಯೋಗ

ಎಸ್‌ಪಿ ಮತ್ತು ಬಿಎಸ್‌ಪಿ ಮತ್ತು ಕಾಂಗ್ರೆಸ್ ಪಕ್ಷಗಳು ಯುವಜನರ ನಿರುದ್ಯೋಗ ಸಮಸ್ಯೆಯನ್ನು ಆಡಳಿತಾರೂಢ ಬಿಜೆಪಿ ಮೇಲೆ ಒತ್ತಡ ಹಾಕುತ್ತಿವೆ. ಅಖಿಲೇಶ್ ಯಾದವ್, ಅಧಿಕಾರಕ್ಕೆ ಬಂದರೆ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಲ್ಯಾಪ್ಟಾಪ್‌ಗಳನ್ನು ನೀಡುವುದಾಗಿ ಹಾಗೂ ಉದ್ಯೋಗದ ಭರವಸೆ ನೀಡಿದ್ದಾರೆ.

ಪ್ರಿಯಾಂಕಾ ವಾದ್ರಾ ಮತ್ತು ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ, ಚುನಾವಣೆ ಪೂರ್ವ ಹೇಳಿದಂತೆ ಉದ್ಯೋಗ ಸೃಷ್ಟಿಸಿಲ್ಲವೆಂದು ಉತ್ತರಪ್ರದೇಶ ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2017 ಮತ್ತು 2019 ರಲ್ಲಿ ಉತ್ತರಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಮುಂಚಿತವಾಗಿ ಕೇಂದ್ರ ಬಜೆಟ್‌ಗಳನ್ನು ಅನುಕ್ರಮವಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ:ಗಣರಾಜ್ಯೋತ್ಸವ ಟ್ಯಾಬ್ಲೊ: ತಮಿಳುನಾಡಿಗೂ ನಿರಾಕರಣೆ; ಸ್ವಾತಂತ್ಯ್ರ ಹೋರಾಟಗಾರನನ್ನು ‘ವ್ಯಾಪಾರಿ’ ಎಂದು ಕರೆದ ಒಕ್ಕೂಟ ಸರ್ಕಾರ

ಉದ್ಯಮಗಳ ನಿರೀಕ್ಷೆ

ಶಿಕ್ಷಣ ಸೆಸ್ ತೆಗೆದುಹಾಕುವ ಮೂಲಕ ಎಲ್ಲರಿಗೂ ಶಿಕ್ಷಣ ಲಭ್ಯವಾಗುವಂತೆ ಮಾಡಬೇಕೆಂದು ಜನರು ಸರ್ಕಾರವನ್ನು ಕೋರಿದ್ದಾರೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟ ಹೇಳಿದೆ. ಪ್ರಸಕ್ತ ಬಜೆಟ್‌ನಲ್ಲಿ ಸರ್ಕಾರ, ಜಿಡಿಪಿಯನ್ನು ಶೇ. 4.43 ರಿಂದ ಜಿಡಿಪಿಯ ಶೇ.6 ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತದೆ ಎಂಬುದು ಉದ್ಯಮ ಸಂಸ್ಥೆಯ ನಿರೀಕ್ಷೆಯಾಗಿದೆ.

ಸಿಐಐ ಡಿಜಿಟಲ್ ಮೂಲಸೌಕರ್ಯಕ್ಕಾಗಿ ಶಾಲೆಗಳಿಗೆ ವಿಶೇಷ ಬಜೆಟ್ ಒದಗಿಸಬೇಕು, ಹೊಸ ಬೋಧನಾ ವಿಧಾನಗಳಿಗೆ ಹೊಂದಿಕೊಳ್ಳಲು ಶಾಲಾ ಶಿಕ್ಷಕರ ಮರು ಕೌಶಲ್ಯಕ್ಕೆ ಹೆಚ್ಚಿನ ಹಣ ಒದಗಿಸುವಂತೆ ಸರ್ಕಾರವನ್ನು ಭಾರತೀಯ ಕೈಗಾರಿಕಾ ಒಕ್ಕೂಟ ಒತ್ತಾಯಿಸಿದೆ.

ಪಿಂಚಣಿ ನಿಧಿಗಳ ಕೊಡುಗೆ ಹೆಚ್ಚಿಸಬೇಕು, ವೈದ್ಯಕೀಯ ವೆಚ್ಚ ಮಿತಿ ಹೆಚ್ಚಳ, ಶಿಕ್ಷಣ ಸಂಸ್ಥೆಗಳಿಗೆ ಪಾವತಿಸುವ ಬೋಧನಾ ಶುಲ್ಕದ ಪ್ರತ್ಯೇಕ ಕಡಿತವನ್ನು ಮಧ್ಯಮ ವರ್ಗದ ತೆರಿಗೆದಾರರು ನಿರೀಕ್ಷಿಸುತ್ತಾರೆ ಎಂದು ಜೆ.ಸಾಗರ್ ಅಸೋಸಿಯೇಟ್ಸ್ (ಜೆಎಸ್ಎ) ಪಾಲುದಾರ ಕುಮಾರ ಮಂಗಳಮ್ ವಿಜಯ್ ಹೇಳಿದ್ದಾರೆ.

ಇದನ್ನೂ ಓದಿ:‘ಖಾಸಗೀಕರಣ’: ಒಕ್ಕೂಟ ಸರ್ಕಾರದ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಸಲಿರುವ ವಿದ್ಯುತ್ ವಲಯದ ನೌಕರರು

ಕಾರ್ಡ್ ಪಾವತಿಗಳ ಮೇಲೆ ಜಿಎಸ್‌ಟಿ

ರೂ.2,000 ಗಿಂತ ಹೆಚ್ಚು ವೆಚ್ಚ ಮಾಡಿದ ಪಾವತಿದಾರನು, ಈಗಾಗಲೇ ಖರೀದಿಸಿದ ಸರಕುಗಳು ಅಥವಾ ಸೇವೆಗಳ ಮೇಲೆ ತೆರಿಗೆ ಪಾವತಿಸುತ್ತಿರುವಾಗ ಪಾವತಿಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವುದು ಸರಿಯೇ? ನಾವು ಪಾವತಿಗಳನ್ನು ಸೇವೆಯಾಗಿ ಪರಿಗಣಿಸಬೇಕೆ? ಸಾಮಾನ್ಯವಾಗಿ, ಕ್ರೆಡಿಟ್ ಕಾರ್ಡ್‌ಗಳು ವಹಿವಾಟು ಸೌಲಭ್ಯ ಶುಲ್ಕಗಳಾಗಿ ಸುಮಾರು ಶೇಕಡಾ ಎರಡು ಶುಲ್ಕಗಳನ್ನು ವಿಧಿಸುತ್ತದೆ (ಮರ್ಚೆಂಟ್ ಡಿಸ್ಕೌಂಟ್ ದರವನ್ನು ಹೊಂದಿರುವ ಎಂಡಿಆರ್ ಎಂದೂ ಕರೆಯಲಾಗುತ್ತದೆ). ಈ ಎರಡು ಪ್ರತಿಶತವನ್ನು ನಂತರ ವಹಿವಾಟು ಆಯೋಜಿಸುವ ಅನೇಕರು ಹಂಚಿಕೊಳ್ಳುತ್ತಾರೆ. ಹೀಗಾಗಿ ಕ್ರೆಡಿಟ್ ಕಾರ್ಡುಗಳ ಮೇಲಿನ ಜಿಎಸ್‌ಟಿ ನಿವಾರಣೆಯ ನಿರೀಕ್ಷೆ ಜನರಲ್ಲಿದೆ.

ಲೆಕ್ಕಪತ್ರ ಸುಧಾರಣೆಗೆ ಮನವಿ

ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ಐಸಿಎಐ) ಸುಮಾರು 14 ತೆರಿಗೆ ಮತ್ತು ಲೆಕ್ಕಪತ್ರ ಸುಧಾರಣೆಗೆ ಮನವಿ ಮಾಡಿದೆ. ಕಾನೂನುಗಳನ್ನು ಸರಳ, ನ್ಯಾಯಯುತ, ಪಾರದರ್ಶಕಗೊಳಿಸುವ ಗುರಿಯನ್ನು ಹೊಂದಿದ್ದು, ಸಲಹೆಗಳು ಅಗತ್ಯವಾಗಿವೆ. ಇವು ಕಡಿಮೆ ದಾವೆ ಮತ್ತು ಬಳಕೆದಾರ ಸ್ನೇಹಿಯಾಗಿರಬೇಕೆಂದು ಐಸಿಎಐ ಅಧ್ಯಕ್ಷ ನಿಹಾರ್ ಎನ್ ಜಂಬುಸಾರಿಯಾ ಹೇಳಿದ್ದಾರೆ.

ಇದನ್ನೂ ಓದಿ:ಭದ್ರತಾ ಕಾರಣ ನೀಡಿ ಮೀಡಿಯಾ ಒನ್ ಚಾನೆಲ್‌ಗೆ ನಿರ್ಬಂಧ ಹೇರಿದ ಒಕ್ಕೂಟ ಸರ್ಕಾರ

ಫಾರ್ಮಾ ವಲಯದಲ್ಲಿ ಅಧಿಕ ಹೂಡಿಕೆ

ಔಷಧೀಯ ಉದ್ಯಮದಲ್ಲಿ ಹೂಡಿಕೆಗಳನ್ನು ಹೆಚ್ಚು ಆಕರ್ಷಕಗೊಳಿಸುವ ಬೇಡಿಕೆಯನ್ನು ಬಜೆಟ್ ಪೂರ್ವ ನಿರೀಕ್ಷೆಗಳ ಸಮೀಕ್ಷೆ ನೀಡಿದ್ದು, ಗ್ರಾಂಟ್ ಥಾರ್ನ್‌ಟನ್ ಭಾರತ್ ಸಮೀಕ್ಷೆಯ ಪ್ರಕಾರ, ಜೈವಿಕ ಔಷಧಗಳು ಮತ್ತು ವೈದ್ಯಕೀಯ ಸಾಧನಗಳ ಮೇಲೆ ಗಮನ ಕೇಂದ್ರೀಕರಿಸಿ, ಪಿಎಲ್ಐ ಯೋಜನೆಯಲ್ಲಿ ವೆಚ್ಚ ಹೆಚ್ಚಿಸಬೇಕೆಂಬ ಬಯಸಿದ್ದಾರೆ. “ನಾವಿನ್ಯತೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಪ್ರಮುಖ ಹೂಡಿಕೆ ಚಾಲಕರಾಗಿರುತ್ತಾರೆಂದು ಉದ್ಯಮ ನಿರೀಕ್ಷಿಸುತ್ತದೆ” ಎಂದು ಸಮೀಕ್ಷೆಯ ವರದಿ ಹೇಳಿದೆ.

ರಿಯಲ್ ಎಸ್ಟೇಟ್ ನಿರೀಕ್ಷೆ

ಕೃಷಿಯ ನಂತರ ಎರಡನೇ ಅತಿದೊಡ್ಡ ಉದ್ಯೋಗದಾತ ರಿಯಲ್ ಎಸ್ಟೇಟ್ ವಲಯದ ಸಂಸ್ಥೆಗಳಿಂದ ಅನೇಕ ನಿರೀಕ್ಷೆಗಳಿವೆ. ಅವುಗಳಲ್ಲಿ ಪ್ರಮುಖವಾದುದು, ದ್ರವ್ಯತೆಯನ್ನು ಸುಧಾರಿಸಲು ಸ್ವಯಂ-ಆಕ್ರಮಿತ ಆಸ್ತಿಗಾಗಿ ತೆಗೆದುಕೊಂಡ ವಸತಿ ಸಾಲಗಳ ಮೇಲಿನ ಬಡ್ಡಿಗಾಗಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24 (ಬಿ) ಅಡಿಯಲ್ಲಿ ವಿನಾಯಿತಿ ಮಿತಿಯನ್ನು ಪ್ರಸ್ತುತ ರೂ. 2 ಲಕ್ಷ ದಿಂದ ರೂ. 5 ಲಕ್ಷಗಳಿಗೆ ಹೆಚ್ಚಿಸಬೇಕು ಎಂದು ರಿಯಲ್ ಎಸ್ಟೇಟ್ ಮಧ್ಯವರ್ತಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಲಸಿಕೆ ಕಡ್ಡಾಯದಿಂದ ಯಾರೂ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿಲ್ಲ: ಒಕ್ಕೂಟ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...