Homeಮುಖಪುಟದೆಹಲಿ: ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಆತ್ಮಹತ್ಯೆ ವದಂತಿ- ಮತ್ತೆ 3 FIR ದಾಖಲು

ದೆಹಲಿ: ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಆತ್ಮಹತ್ಯೆ ವದಂತಿ- ಮತ್ತೆ 3 FIR ದಾಖಲು

ಅತ್ಯಾಚಾರ ಸಂತ್ರಸ್ತೆಯ ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದು, ಕೊರಳಿಗೆ ಚಪ್ಪಲಿ ಹಾರ ಹಾಕಿದ್ದ ನೆರೆಹೊರೆಯವರು ಹರ್ಷೋದ್ಗಾರದ ನಡುವೆ ಆಕೆಯ ಮೆರವಣಿಗೆ ಮಾಡಿ ವಿಕೃತಿ ಮೆರೆದಿದ್ದರು.

- Advertisement -
- Advertisement -

ಕಳೆದ ವಾರ ದೆಹಲಿಯಲ್ಲಿ 20 ವರ್ಷದ ಮಹಿಳೆಯ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ತನ್ನ ನೆರೆಹೊರೆಯವರೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಪ್ರಕರಣದಲ್ಲಿ ಮತ್ತೆ ಮೂವರು ಎಫ್‌ಐಆರ್‌ ದಾಖಲಾಗಿವೆ. ಸಂತ್ರಸ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಡಿದವರ ವಿರುದ್ಧ ದೆಹಲಿಯ ಶಹದಾರಾ ಜಿಲ್ಲೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ವದಂತಿಗಳನನ್ನು ಹಬ್ಬಿದ್ದ ಪೋಸ್ಟ್‌ಗಳು ಹಿಂಸಾಚಾರವನ್ನು ಪ್ರಚೋದಿಸುವ ಯತ್ನದಲ್ಲಿ ಕೋಮು ಸೌಹಾರ್ದತೆಯನ್ನು ಹಾಳುಗೆಡವಲು ಪ್ರಯತ್ನಿಸಿದವು ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಯೂಟ್ಯೂಬ್ ಚಾನೆಲ್ ಒಂದು  ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿತ್ತು ಎಂದು ತಿಳಿಸಿದ್ದಾರೆ.

ಉಪ ಪೊಲೀಸ್ ಆಯುಕ್ತ (ಶಹದಾರಾ) ಆರ್ ಸತ್ಯಸುಂದರಂ ನೀಡಿರುವ ವೀಡಿಯೊ ಹೇಳಿಕೆಯಲ್ಲಿ, “ಕೆಲವರು ಲೈಂಗಿಕ ದೌರ್ಜನ್ಯ ಘಟನೆಯ ಬಗ್ಗೆ ವದಂತಿ ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿದ್ದರು. ಅವರು ಸಂತ್ರಸ್ತೆಯ ಗುರುತನ್ನು ಹಂಚಿಕೊಳ್ಳುತ್ತಿದ್ದರು. ಜೊತೆಗೆ ಘಟನೆಗೆ ಕೋಮುಬಣ್ಣ ನೀಡಲು ಪ್ರಯತ್ನಿಸುತ್ತಿದ್ದರು. ಇಂತಹ ವದಂತಿಗಳನ್ನು ಹರಡಿದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗುರುತಿಸಿದ್ದೇವೆ. ಸುಳ್ಳು, ತಪ್ಪು ಮಾಹಿತಿ ಪ್ರಚಾರಕ್ಕಾಗಿ ಅವರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್‌ ಅಧಿಕಾರಿಯಿಂದ ವಿಕಲಾಂಗ ಮಹಿಳೆಗೆ ಥಳಿತ: ಬೆಂಗಳೂರಿನಲ್ಲಿ ಸದ್ಯಕ್ಕಿಲ್ಲ ಟೋಯಿಂಗ್

ಇನ್ನು ಅಪಹರಣ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ 20 ವರ್ಷದ ಯುವತಿ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದು, ತನ್ನ ಕುಟುಂಬ ಮತ್ತು  ಮೂರು ವರ್ಷದ ಮಗನಿಂದ ದೂರವಾಗಿದ್ದಾರೆ. ಆಕೆ ತನ್ನ ಮಗುವನ್ನು ನೋಡಿಕೊಳ್ಳುವ ಮಾನಸಿಕ ಸ್ಥಿತಿಯಲ್ಲಿಲ್ಲ ಎಂದು ಆಕೆಯ ಕುಟುಂಬದವರು ಹೇಳುತ್ತಾರೆ.

ಕಳೆದ ಬುಧವಾರ (ಜ.26) ದೆಹಲಿಯ ಶಹದಾರ್‌ ಜಿಲ್ಲೆಯಲ್ಲಿ 20 ವರ್ಷದ ಯುವತಿಯನ್ನು ಅಪಹರಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿತ್ತು. ಬಳಿಕ ಆಕೆಯ ನೆರೆಹೊರೆಯವರು ಸಂತ್ರಸ್ತೆಯ ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದು, ಕೊರಳಿಗೆ ಚಪ್ಪಲಿ ಹಾರ ಹಾಕಿ ಹರ್ಷೋದ್ಗಾರದ ನಡುವೆ ಆಕೆಯ ಮೆರವಣಿಗೆ ಮಾಡಿ ವಿಕೃತಿ ಮೆರೆದಿದ್ದರು. ಈ ಬಗ್ಗೆ ದೆಹಲಿ ಮಹಿಳಾ ಆಯೋಗ ತಿಳಿಸಿತ್ತು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಕಳೆದ ವರ್ಷ ನವೆಂಬರ್‌ನಲ್ಲಿ ಯುವತಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ 14 ವರ್ಷದ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗಿನಿಂದ ಆತನ ಸಾವಿಗೆ ಸಂತ್ರಸ್ತ ಯುವತಿ ಕಾರಣ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ ಎಂದು ಸಂತ್ರಸ್ತೆಯ ಸಹೋದರಿ ಹೇಳಿದ್ದಾರೆ.

ಬುಧವಾರ ಆಕೆಯ ಮೇಲೆ ನಡೆದ ದಾಳಿಯಲ್ಲಿ ಹೆಚ್ಚಾಗಿ ಮೃತ ಹುಡುಗನ ಕುಟುಂಬದ ಮಹಿಳೆಯರು ಮತ್ತು ಯುವಕರು ಸೇರಿದ್ದರು. ಇವರೆಲ್ಲಾ ಕಸ್ತೂರ್ಬಾ ನಗರದಲ್ಲಿ ಯುವತಿಯ ನೆರೆಹೊರೆಯವರು. ಸದ್ಯ ಪೊಲೀಸರು ನೆರೆಹೊರೆಯಿಂದ ಎಂಟು ಮಹಿಳೆಯರು ಮತ್ತು ನಾಲ್ವರು ಪುರುಷರನ್ನು (12 ಮಂದಿ) ಬಂಧಿಸಿದ್ದಾರೆ.

 

“ಯಾವುದೇ ಯುವತಿ, ಯಾವುದೇ ಮಗಳಿಗೂ ಇಂತಹ ಸ್ಥಿತಿ ಬರಬಾರದು. ಆಕೆಯ ಮೇಲೆ ಹಲ್ಲೆ ಮಾಡಿರುವ ರೀತಿ, ಆಕೆಯನ್ನು ತಪ್ಪಾಗಿ ತೋರಿಸಿದ್ದು, ಆಕೆಯನ್ನು ಆಘಾತಕ್ಕೆ ತಳ್ಳಿದ್ದು… ಓ ನನಗೆ ನ್ಯಾಯ ಸಿಗುವ ಬಗ್ಗೆ ನಂಬಿಕೆ ಇಲ್ಲ. ನನಗೆ ನನ್ನ ಮಗಳು ಮನೆಗೆ ಮರಳಬೇಕು ಅಷ್ಟೇ” ಎಂದು ಪಾರ್ಶ್ವವಾಯುಗೆ ತುತ್ತಾಗಿ ಹಾಸಿಗೆ ಹಿಡಿದಿರುವ ಸಂತ್ರಸ್ತ ಯುವತಿಯ ತಂದೆ ತಿಳಿಸಿದ್ದಾರೆ.


ಇದನ್ನೂ ಓದಿ: ದೆಹಲಿಯಲ್ಲಿ ಹೀನಕೃತ್ಯ: ಅತ್ಯಾಚಾರ ಸಂತ್ರಸ್ತೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ನೆರೆಹೊರೆಯವರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆ ಸಂಚು: ವಾಷಿಂಗ್ಟನ್ ಪೋಸ್ಟ್ ವರದಿಗೆ ಅಮೆರಿಕ ಪ್ರತಿಕ್ರಿಯೆ

0
ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್‌ ಹತ್ಯೆಯ ಸಂಚಿಗೆ ಸಂಬಂಧಿಸಿದ 'ದಿ ವಾಷಿಂಗ್ಟನ್ ಪೋಸ್ಟ್ ವರದಿ' ಬೆನ್ನಲ್ಲಿ ಆರೋಪಗಳ ಬಗ್ಗೆ ತನಿಖೆಗೆ ಭಾರತ ಸರ್ಕಾರದೊಂದಿಗೆ ನಿಯಮಿತವಾಗಿ ಕೆಲಸ ಮಾಡುತ್ತಿದೆ ಎಂದು ಅಮೆರಿಕ...