Homeಅಂತರಾಷ್ಟ್ರೀಯನೇಪಾಳದ ನೂತನ ಪ್ರಧಾನಿಯಾಗಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಆಯ್ಕೆ: ಇಂದು ಪ್ರಮಾಣವಚನ

ನೇಪಾಳದ ನೂತನ ಪ್ರಧಾನಿಯಾಗಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಆಯ್ಕೆ: ಇಂದು ಪ್ರಮಾಣವಚನ

- Advertisement -
- Advertisement -

ನೇಪಾಳದ ನೂತನ ಪ್ರಧಾನಿಯಾಗಿ ಸಿಪಿಎನ್-ಮಾವೋವಾದಿ ಕೇಂದ್ರದ ಅಧ್ಯಕ್ಷರಾದ ಪುಷ್ಪ ಕಮಲ್ ದಹಾಲ್ ಪ್ರಚಂಡ ಆಯ್ಕೆಯಾಗಿದ್ದಾರೆ. ಇದು ಅವರ ಮೂರನೇ ಅವಧಿಗೆ ಪ್ರಧಾನಿಯಾಗಿ ನೇಮಕವಾಗುತ್ತಿದ್ದು, ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ನೇಪಾಳದ ಅಧ್ಯಕ್ಷರಾದ ಬಿದ್ಯಾ ದೇವಿ ಭಂಡಾರಿಯವರು ಬಹುಮತ ಹೊಂದಿರುವ ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್‌ನ ಸದಸ್ಯರು ಸರ್ಕಾರ ರಚನೆಗೆ ಮುಂದೆ ಬರುವಂತೆ ಸೂಚನೆ ನೀಡಿದ್ದರು. ಅದರಂತೆ ಪ್ರಂಚಂಡರವರು 169 ಸದಸ್ಯ ಬಲ ಇರುವುದಾಗಿ ಹಕ್ಕು ಮಂಡಿಸಿದ್ದರು. ಹಾಗಾಗಿ ಅವರನ್ನು ನೂತನ ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಸಿಪಿಎನ್-ಯುಎಂಎಲ್ ಪಕ್ಷದ ಅಧ್ಯಕ್ಷ ಕೆ.ಪಿ ಶರ್ಮಾ ಓಲಿ, ರಾಷ್ಟ್ರೀಯ ಸ್ವತಂತ್ರ ಪಕ್ಷದ ಅಧ್ಯಕ್ಷ ರವಿ ಲಮಿಚ್ಚನೆ, ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ ರಾಜೇಂದ್ರ ಲಿಂಗ್ಡೆನ್ ಸೇರಿದಂತೆ ಹಲವು ಪಕ್ಷೇತರರು ನೂತನ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ.

275 ಸದಸ್ಯಬಲದ ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್‌ನಲ್ಲಿ 169 ಸದಸ್ಯರು ನೂತನ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಸಿಪಿಎನ್-ಯುಎಂಎಲ್ ಪಕ್ಷವು 78 ಸದಸ್ಯಬಲವನ್ನು ಹೊಂದಿದ್ದರೆ, ಸಿಪಿಎನ್-ಮಾವೋವಾದಿ ಕೇಂದ್ರದ 32 ಸದಸ್ಯರು, ರಾಷ್ಟ್ರೀಯ ಸ್ವತಂತ್ರ ಪಕ್ಷದ 20 ಸದಸ್ಯ ಬಲವನ್ನು ಹೊಂದಿದೆ. ಇತರ ಸಣ್ಣ ಪುಟ್ಟ ಪಕ್ಷಗಳು ನೂತನ ಸರ್ಕಾರದ ಭಾಗವಾಗಿದ್ದಾರೆ.

ನೇಪಾಳಿ ಕಾಂಗ್ರೆಸ್ ಪಕ್ಷವು 89 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿದ್ದರೂ ಸಹ ಅಧ್ಯಕ್ಷರು ನೀಡಿದ ಗಡುವಿನೊಳಗೆ ಇತರ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಈಗಿನ ನೂತನ ಸರ್ಕಾರದಲ್ಲಿ ಮೊದಲ ಎರಡೂವರೆ ವರ್ಷದ ಅವಧಿಗೆ ಸಿಪಿಎನ್-ಮಾವೋವಾದಿ ಕೇಂದ್ರದ ಪುಷ್ಪ ಕಮಲ್ ದಹಾಲ್ ಪ್ರಚಂಡ ಪ್ರಧಾನಿಯಾದರೆ, ಉಳಿದ ಎರಡೂವರೆ ವರ್ಷಕ್ಕೆ ಸಿಪಿಎನ್-ಯುಎಂಎಲ್ ಪಕ್ಷದ ಅಧ್ಯಕ್ಷ ಕೆ.ಪಿ ಶರ್ಮಾ ಓಲಿಯವರು ಪ್ರಧಾನಿಯಾಗಲಿದ್ದಾರೆ ಎಂದು ಒಪ್ಪಂದ ಮಾಡಿಕೊಂಡಿದ್ದಾರೆ.

ಪುಷ್ಪ ಕಮಲ್ ದಹಾಲ್ ಪ್ರಚಂಡರು ಈ ಮೊದಲು 2008-09 ಮತ್ತು 2016-17 ಅವಧಿಯಲ್ಲಿ ಎರಡು ಬಾರಿ ನೇಪಾಳದ ಪ್ರಧಾನಿಯಾಗಿದ್ದರು. ಇದು ಅವರ ಮೂರನೇ ಅವಧಿಯಾಗಿದೆ.

ಇದನ್ನೂ ಓದಿ: ಲಾಲು ಪ್ರಸಾದ್ ವಿರುದ್ಧದ ಭ್ರಷ್ಟಾಚಾರ ಪ್ರಕರಣ; ಸಿಬಿಐನಿಂದ ತನಿಖೆ ಪುನಾರಂಭ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...