Homeಮುಖಪುಟಲಾಲು ಪ್ರಸಾದ್ ವಿರುದ್ಧದ ಭ್ರಷ್ಟಾಚಾರ ಪ್ರಕರಣ; ಸಿಬಿಐನಿಂದ ತನಿಖೆ ಪುನಾರಂಭ

ಲಾಲು ಪ್ರಸಾದ್ ವಿರುದ್ಧದ ಭ್ರಷ್ಟಾಚಾರ ಪ್ರಕರಣ; ಸಿಬಿಐನಿಂದ ತನಿಖೆ ಪುನಾರಂಭ

- Advertisement -
- Advertisement -

ಬಿಹಾರದಲ್ಲಿ ನಿತೀಶ್‌ ಕುಮಾರ್‌ ಅವರ ಜೆಡಿಯು ಜೊತೆ ಸೇರಿ ಆರ್‌ಜೆಡಿ ಮೈತ್ರಿ ಸರ್ಕಾರ ರಚಿಸಿದ ನಂತರದಲ್ಲಿ ರಾಜಕೀಯ ಬಿರುಗಾಳಿ ಎದ್ದಿದೆ. ಕೇಂದ್ರೀಯ ತನಿಖಾ ದಳವು (ಸಿಬಿಐ) ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಮತ್ತೆ ತೆರೆದಿದೆ.

ಲಾಲ್‌ ಪ್ರಸಾದ್‌ ಅವರು ಯುಪಿಎ ಮೊದಲ ಅವಧಿಯಲ್ಲಿ ಸಚಿವರಾಗಿದ್ದಾಗ ರೈಲ್ವೆ ಯೋಜನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪಗಳು ಬಂದಿದ್ದವು. 2018ರಲ್ಲಿ ಸಿಬಿಐ ತನಿಖೆಯನ್ನು ಪ್ರಾರಂಭಿಸಿತ್ತು.

“ಆರೋಪ ಮಾಡಲಾಗಿದ್ದರೂ ಯಾವುದೇ ಪ್ರಕರಣವಿಲ್ಲ” ಎಂದು ಸಿಬಿಐ ಮೂಲಗಳು ಹೇಳುವ ಮೂಲಕ ವಿಚಾರಣೆಯನ್ನು ಮೇ 2021 ರಲ್ಲಿ ಮುಚ್ಚಲಾಗಿತ್ತು. ಲಾಲೂ ಪ್ರಸಾದ್‌ ಅವರಲ್ಲದೆ, ಅವರ ಪುತ್ರ ಮತ್ತು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಪುತ್ರಿಯರಾದ ಚಂದಾ ಯಾದವ್, ರಾಗಿಣಿ ಯಾದವ್ ಅವರ ಹೆಸರನ್ನೂ ಪ್ರಕರಣದಲ್ಲಿ ಸೇರಿಸಲಾಗಿತ್ತು.

ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಬಿಜೆಪಿಯಿಂದ ಬೇರ್ಪಟ್ಟು ಸರ್ಕಾರ ರಚಿಸಲು ಆರ್‌ಜೆಡಿ ಜೊತೆ ಕೈಜೋಡಿಸಿದ ನಂತರದಲ್ಲಿ ಪ್ರಕರಣವನ್ನು ಮತ್ತೆ ತೆರೆಯಲು ಸಿಬಿಐ ಮುಂದಾಗಿದೆ. ತಮ್ಮ ಪಕ್ಷವನ್ನು ವಿಭಜಿಸಲು ಬಿಜೆಪಿ ರೂಪಿಸಿರುವ ಯೋಜನೆ ಇದೆಂದು ನಿತೀಶ್‌ ಕುಮಾರ್‌ ಆರೋಪಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ತಮ್ಮ ಆರೋಪಗಳನ್ನು ಮಾಡುತ್ತಿರುವ ಹೊತ್ತಿನಲ್ಲಿ ಸಿಬಿಐನ ಹೊಸ ಕ್ರಮವು ಭಾರೀ ರಾಜಕೀಯ ಗದ್ದಲವನ್ನು ಹುಟ್ಟುಹಾಕುವ ಸಾಧ್ಯತೆ ಇದೆ.

ಮುಂಬೈನ ಬಾಂದ್ರಾದ ರೈಲು ಭೂಮಿ ಗುತ್ತಿಗೆ ಯೋಜನೆ ಮತ್ತು ಹೊಸ ದೆಹಲಿ ರೈಲು ನಿಲ್ದಾಣದ ನವೀಕರಣದ ಕಾರ್ಯದಲ್ಲಿ ಆಸಕ್ತಿ ಹೊಂದಿದ್ದ ರಿಯಲ್ ಎಸ್ಟೇಟ್ ಸಂಸ್ಥೆಯಾದ ಡಿಎಲ್‌ಎಫ್ ಗ್ರೂಪ್‌ನಿಂದ ಲಾಲು ಪ್ರಸಾದ್‌ ಯಾದವ್ ಅವರು ದಕ್ಷಿಣ ದೆಹಲಿಯ ಆಸ್ತಿಯನ್ನು ಲಂಚವಾಗಿ ಸ್ವೀಕರಿಸಿದ್ದಾರೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ.

ಶೆಲ್ ಕಂಪನಿಯು ₹ 5 ಕೋಟಿಗೆ ಆಸ್ತಿಯನ್ನು ಖರೀದಿಸಿದೆ. ಆದರೆ ಅಂದಿನ ಮಾರುಕಟ್ಟೆ ದರ ₹ 30 ಕೋಟಿಗಿಂತ ಕಡಿಮೆ ಇರಲಿಲ್ಲ ಎಂದು ದೂರಲಾಗಿದೆ.

ಶೆಲ್ ಕಂಪನಿಯನ್ನು ತೇಜಸ್ವಿ ಯಾದವ್ ಮತ್ತು ಲಾಲೂ ಪ್ರಸಾದ್‌ ಯಾದವ್ ಅವರ ಇತರ ಸಂಬಂಧಿಕರು ಷೇರುಗಳ ವರ್ಗಾವಣೆಯ ಮೂಲಕ ಕೇವಲ ₹ 4 ಲಕ್ಷಕ್ಕೆ ಖರೀದಿಸಿದರು. ಅವರಿಗೆ ದಕ್ಷಿಣ ದೆಹಲಿ ಬಂಗಲೆಯ ಮಾಲೀಕತ್ವವನ್ನು ನೀಡಲಾಯಿತು ಎಂದು ಆರೋಪಿಸಲಾಗಿದೆ.

73 ವರ್ಷದ ಲಾಲು ಅವರು ಈ ತಿಂಗಳ ಆರಂಭದಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಸಿಬಿಐ ಕ್ರಮ ಜರುಗಿಸಲು ಮುಂದಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...