ಚಿನ್ನ, ಬೆಳ್ಳಿ ಬೆಲೆ ದುಬಾರಿಯಾಗುತ್ತಿರುವಂತೆಯೇ ಇಂಧನ, ಈರುಳ್ಳಿ ಬೆಲೆಯೂ ಹೆಚ್ಚುತ್ತಿದೆ. ಮದುವೆಗಳಲ್ಲಿ ದುಬಾರಿ ಗಿಫ್ಟ್ ಕೊಡುವವರು ಈಗ ಹೊಸ ಹೊಸ ಪ್ಲಾನ್‌ಗಳನ್ನು ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ನಡೆದ ಮದುವೆಯೊಂದರಲ್ಲಿ ನವದಂಪತಿಗೆ ಸ್ನೇಹಿತರು ಎಲ್‌ಪಿಜಿ ಸಿಲಿಂಡರ್, ಪೆಟ್ರೋಲ್ ಮತ್ತು ಈರುಳ್ಳಿ ಉಡುಗೊರೆ ನೀಡಿದ್ದಾರೆ.
ತಮಿಳುನಾಡಿನ ಚೆನೈನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧು-ವರರ ಸ್ನೇಹಿತರು ದುಬಾರಿ ಉಡುಗೊರೆ ನೀಡಲು ಯೋಚಿಸಿ, ಒಂದು ಎಲ್‌ಪಿಜಿ ಸಿಲಿಂಡರ್, ಕ್ಯಾನ್ ಪೆಟ್ರೋಲ್ ನೀಡಿದ್ದಾರೆ. ಜೊತೆಗೆ ಈರುಳ್ಳಿಯಿಂದ ಮಾಡಿದ ಹೂಮಾಲೆಗಳನ್ನು ತೋಡಿಸಿದ್ದಾರೆ.
45 ಸೆಕೆಂಡ್‌ಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೂರಾರು ಮಂದಿ ತಮ್ಮ ವಾಲ್‌ಗಳಲ್ಲಿ ಹಂಚಿಕೊಂಡಿದ್ದಾರೆ.
Couple gets Petrol, Gas Cylinder and Onions as a Wedding Gift in Tamilnadu. pic.twitter.com/IWxqDRXy1s
— बेरोजगार मनराज सिंह (@manraj_mokha) February 18, 2021
ನವ ದಂಪತಿಯಾದ ಕಾರ್ತಿಕ್ ಮತ್ತು ಶರಣ್ಯ ಈ ಗಿಫ್ಟ್‌ಗಳಿಂದ ಆಶ್ಚರ್ಯಚಕಿತರಾಗಿದ್ದು, ಎಲ್‌ಪಿಜಿ ಸಿಲಿಂಡರ್, ಪೆಟ್ರೋಲ್, ಈರುಳ್ಳಿ ಹಾರಗಳನ್ನು ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಮದುವೆಗೆ ಆಗಮಿಸಿದ್ದ ಅತಿಥಿಗಳು ಕೂಡ ಸ್ನೇಹಿತರ ಈ ಉಡುಗೊರೆಗಳನ್ನು ನೋಡಿ ನಗು ಚೆಲ್ಲಿದ್ದಾರೆ.
ದೇಶದಲ್ಲಿ ಕಳೆದ 12 ದಿನಗಳಿಂದ ಇಂಧನ ಬೆಲೆ ಸತತವಾಗಿ ಹೆಚ್ಚಾಗುತ್ತಿದೆ. ಇದರ ಜೊತೆಗೆ ಒಕ್ಕೂಟ ಸರ್ಕಾರ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಯುವ ಜನತೆ ಹೀಗೆ ಉಡುಗೊರೆಗಳನ್ನು ನೀಡುವ ಮೂಲಕ ಬೆಲೆ ಏರಿಕೆಯನ್ನು ವಿಭಿನ್ನವಾಗಿ ವಿರೋಧಿಸಿದ್ದಾರೆ.
ಇದನ್ನೂ ಓದಿ: ಒಬ್ಬನೇ ಒಬ್ಬ ಪ್ರೇಕ್ಷಕನಿಗೆ ಐವರು ಭಾಷಣಕಾರರು!: ಬಿಜೆಪಿ ಕಾಲೆಳೆದ ಸಂಸದ ಶಶಿ ತರೂರ್
Tamil people are savage ? https://t.co/vRc5EBf24v
— Jatzin Yadrov (@jatin781) February 19, 2021
ಇಂಧನ ದರ ಏರಿಕೆ ಖಂಡಿಸಿ ದೇಶದಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಮೀಮ್ಸ್‌ಗಳು ಹರಿದಾಡುತ್ತಿವೆ. ನಿನ್ನೆಯಷ್ಟೇ (ಫೆ.20) ಮಹಾರಾಷ್ಟ್ರದಲ್ಲಿ ಅಂತರರಾಜ್ಯ ಡೀಸೆಲ್ ಕಳ್ಳರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿ, ಗ್ಯಾಂಗ್‌ನ 14 ಸದಸ್ಯರನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ: ಅಂತರರಾಜ್ಯ ಡೀಸೆಲ್ ಕಳ್ಳರ ಗ್ಯಾಂಗ್‌ನ 14 ಸದಸ್ಯರ ಬಂಧನ


