ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮುಂಬರುವ ನಾಲ್ಕು ವಾರಗಳು ರಾಜ್ಯಕ್ಕೆ ಬಹಳ ನಿರ್ಣಾಯಕವಾಗಲಿದೆ ಎಂದು ಜನರಿಗೆ ಸೋಮವಾರ ಎಚ್ಚರಿಕೆ ನೀಡಿದ್ದಾರೆ. “ಆರ್ಥಿಕ ಚಟುವಟಿಕೆಗಳು ನಡೆಯಬೇಕಾಗಿರುವುದರಿಂದ ಲಾಕ್‌ಡೌನ್ ಅನ್ನು ಸಾರ್ವಕಾಲಿಕವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ. ಜೀವನ ಮತ್ತು ಜೀವನೋಪಾಯ ಎರಡನ್ನೂ ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ” ಎಂದು ವೀಣಾ ಜಾರ್ಜ್ ಹೇಳಿದ್ದಾರೆ.
‘‘ಎಲ್ಲಾ ಕೋವಿಡ್ ಪ್ರೋಟೋಕಾಲ್‌ಗಳು ನಿರ್ವಹಣೆಯಾಗುವಂತೆ ಖಚಿತಪಡಿಸಿಕೊಳ್ಳಲು ನಾವು ಸ್ಪಷ್ಟಪಡಿಸಿದ್ದೇವೆ. ಕೆಲವು ಕಡೆ ಅವುಗಳನ್ನು ಪಾಲಿಸಲಾಗಿದೆ, ಆದರೆ ಅನೇಕ ಸ್ಥಳಗಳಲ್ಲಿ ನಾವು ಬಯಸಿದ ರೀತಿಯಲ್ಲಿ ನಡೆಯಲಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜಾತಿ ಆಧಾರಿತ ಜನಗಣತಿಯಿಂದ ವಿವಿಧ ವರ್ಗದವರಿಗೆ ಕಲ್ಯಾಣ ಯೋಜನೆ ಜಾರಿಗೆ ಸಹಾಯ: ತೇಜಸ್ವಿ ಯಾದವ್
“ಡೆಲ್ಟಾ ರೂಪಾಂತರದ ಪತ್ತೆಯಾಗುತ್ತಿರುವುದು ನಮ್ಮ ಕಳವಳಕ್ಕೆ ಕಾರಣ. ಇದರ ಜೊತೆಗೆ ಮೂರನೇ ಅಲೆಯನ್ನು ಕೂಡಾ ನಿರೀಕ್ಷಿಸಲಾಗಿದೆ. ಆದ್ದರಿಂದ ಮುಂಬರುವ ವಾರಗಳು ಬಹಳ ನಿರ್ಣಾಯಕವಾಗಲಿವೆ” ಎಂದು ವೀಣಾ ಜಾರ್ಜ್ ಹೇಳಿದ್ದಾರೆ.
ಕೇರಳದಲ್ಲಿ 10 ದಿನಗಳ ಓಣಂ ಹಬ್ಬಗಳು ಭಾನುವಾರ ಮುಕ್ತಾಯಗೊಂಡಿದೆ. ಹಬ್ಬದ ವಾರ ಶುರುವಾಗುವ ಮೊದಲೇ ದೇಶದ 50% ಕೊರೊನಾ ಪ್ರಕರಣ ಕೇರಳ ರಾಜ್ಯವೊಂದರಲ್ಲೆ ವರದಿಯಾಗುತ್ತಿತ್ತು.
“ಮೂರನೇ ಅಲೆಯ ಸಾಧ್ಯತೆಯನ್ನು ಪರಿಗಣಿಸಿ, ಆರೋಗ್ಯ ಮೂಲಸೌಕರ್ಯವನ್ನು ಪರಿಷ್ಕರಿಸಲಾಗಿದೆ. ನಾವು ಪ್ರಸ್ತುತ 870 ಟನ್ ಆಕ್ಸಿಜನ್ ಸ್ಟಾಕ್ ಮತ್ತು 33 ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿದ್ದೇವೆ” ಎಂದು ವೀಣಾ ಜಾರ್ಜ್ ಹೇಳಿದ್ದಾರೆ.
“ಸಾಧ್ಯವಾದಷ್ಟು ಜನರನ್ನು ಒಳಗೊಳ್ಳಲು ಲಸಿಕೆ ಅಭಿಯಾನವನ್ನು ವೇಗಗೊಳಿಸುವುದು ನಮ್ಮ ಗುರಿಯಾಗಿದೆ. ಲಸಿಕೆಗಳನ್ನು ಅನೇಕರು ತೆಗೆದುಕೊಂಡಿದ್ದರೂ, ಡೆಲ್ಟಾ ರೂಪಾಂತರವು ಬೇಗನೆ ಹರಡುವ ಸಾಧ್ಯತೆಗಳಿವೆ. ಆದ್ದರಿಂದ ಎಲ್ಲರೂ ಜಾಗರೂಕರಾಗಿರಬೇಕು ಮತ್ತು ಎಲ್ಲಾ ಸುರಕ್ಷತಾ ನಿಯಮಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ” ಆರೋಗ್ಯ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಪುತ್ತೂರು-ಸುಳ್ಯದಲ್ಲಿ ಅನೈತಿಕ ಪೊಲೀಸ್‌ಗಿರಿ ಉಪದ್ರವ; ಜಿ.ಪಂ-ತಾ.ಪಂ ಚುನಾಚಣೆಗಾಗಿ ಈ ಆಟ?