Homeಕರೋನಾ ತಲ್ಲಣಕೊರೊನಾ ಆರ್ಥಿಕ ಕುಸಿತದಿಂದ ಭಾರತದಲ್ಲಿ ಸುಮಾರು 1 ಲಕ್ಷ ಶಿಶುಗಳ ಸಾವು: ವಿಶ್ವಬ್ಯಾಂಕ್ ಸಂಶೋಧನಾ ವರದಿ

ಕೊರೊನಾ ಆರ್ಥಿಕ ಕುಸಿತದಿಂದ ಭಾರತದಲ್ಲಿ ಸುಮಾರು 1 ಲಕ್ಷ ಶಿಶುಗಳ ಸಾವು: ವಿಶ್ವಬ್ಯಾಂಕ್ ಸಂಶೋಧನಾ ವರದಿ

ಬಿಜೆಪಿಯ ಮೋದಿ ನೇತೃತ್ವದ ಸರ್ಕಾರವು ಕಳೆದ ವರ್ಷ ದೇಶದಾದ್ಯಂತ ಏಕಾಏಕಿ ಲಾಕ್‌ಡೌನ್‌ ಘೋಷಿಸಿತ್ತು. ಇದು ದೇಶದ ಆರ್ಥಿಕತೆಗೆ ಭಾರಿ ಹೊಡೆತ ನೀಡಿದವು.

- Advertisement -
- Advertisement -

ಕೊರೊನಾ ಜೊತೆ ಜೊತೆಗೆ ಆದ ಆರ್ಥಿಕ ಕುಸಿತದಿಂದಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ, ಕಳೆದೊಂದು ವರ್ಷದಲ್ಲಿ 2.67 ಲಕ್ಷ ಶಿಶುಗಳ ಸಾವಿಗೀಡಾಗಿದ್ದಾರೆ ಎಂದು ವಿಶ್ವ ಬ್ಯಾಂಕ್ ಸಂಶೋಧಕರು ಅಂದಾಜಿಸಿದ್ದಾರೆ. ಅದರಲ್ಲಿ ಮೂರನೇ ಒಂದು ಭಾಗದಷ್ಟು ಭಾರತದಲ್ಲಿ ಸಂಭವಿಸಿದೆ ಸಂಶೋಧನೆಯು ತಿಳಿಸಿದೆ.

ಸಂಶೋಧಕರು 128 ದೇಶಗಳಲ್ಲಿ 2,67,208 ಅಧಿಕ ಶಿಶು ಸಾವುಗಳನ್ನು ಅಂದಾಜಿಸಿದ್ದಾರೆ. ಇದು 2020 ರಲ್ಲಿ ನಿರೀಕ್ಷಿತ ಒಟ್ಟು ಶಿಶು ಸಾವಿನ ಸಂಖ್ಯೆಯಲ್ಲಿ 6.8% ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಕೊರೊನಾ ಸಾಂಕ್ರಾಮಿಕದಿಂದ ಉಂಟಾದ ನಕಾರಾತ್ಮಕ ಆದಾಯದಿಂದಾಗಿ ಇದು ಸಂಭವಿಸಿದೆ ಎಂದು ವಿಶ್ವ ಬ್ಯಾಂಕ್ ಒತ್ತಿ ಹೇಳಿದೆ.

ಭಾರತದಲ್ಲಿ ಕೊರೊನಾ ಪತ್ತೆಯಾಗುವುದಕ್ಕಿಂಲೂ ಮೊದಲೇ ದೇಶದ ಆರ್ಥಿಕತೆಯೂ ಇಳಿಕೆಯ ಹಾದಿಯಲ್ಲೇ ಇದ್ದವು. ಇದರ ಜೊತೆಗೆ ಯಾವುದೇ ಮುನ್ಸೂಚನೆಯಿಲ್ಲದೆ ಬಿಜೆಪಿಯ ಮೋದಿ ನೇತೃತ್ವದ ಸರ್ಕಾರವು ಕಳೆದ ವರ್ಷ ದೇಶದಾದ್ಯಂತ ಏಕಾಏಕಿ ಲಾಕ್‌ಡೌನ್‌ ಘೋಷಿಸಿತ್ತು. ಇದು ದೇಶದ ಆರ್ಥಿಕತೆಗೆ ಭಾರಿ ಹೊಡೆತ ನೀಡಿದವು.

ಇದನ್ನೂ ಓದಿ: ಬ್ರಿಟನ್: ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ರಾಜೀನಾಮೆ ನೀಡಿದ ಆರೋಗ್ಯ ಸಚಿವ

“ಕೊರೊನಾ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಕಡೆಗೆ ಪ್ರಯತ್ನಗಳು ಅತ್ಯುನ್ನತವಾಗಿದ್ದರೂ, ಜಾಗತಿಕ ಸಮುದಾಯವು ಸಾಮಾಜಿಕ ಸುರಕ್ಷತಾ ಜಾಲಗಳನ್ನು ಬಲಪಡಿಸಬೇಕು. ಅಗತ್ಯ ಆರೋಗ್ಯ ಸೇವೆಯ ನಿರಂತರತೆಯನ್ನು ಖಾತರಿಪಡಿಸಬೇಕು” ಎಂದು ಸಂಶೋಧಕರು ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಪ್ರಾರಂಭದ ಮೊದಲ ಆರು ತಿಂಗಳಲ್ಲಿ ಪ್ರಪಂಚವು 2.5 ಲಕ್ಷದಿಂದ 11.5 ಲಕ್ಷ ಚಿಕ್ಕ ಮಕ್ಕಳ ಸಾವುಗಳಾಗುತ್ತದೆ ಎಂದು ಊಹಿಸಲಾಗಿತ್ತು.

ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ವಿಶ್ಲೇಷಣೆಯು ಅಧಿಕ ಶಿಶು ಮರಣದ ಮೂರನೇ ಒಂದು ಭಾಗಕ್ಕಿಂತ ಹೆಚ್ಚು (99, 642) ಭಾರತದಲ್ಲಿ ಆಗಿದೆ ಎಂದು ಅಂದಾಜಿಸಿದೆ.

ಭಾರತವು ಹೆಚ್ಚಿನ ಸಂಖ್ಯೆಯ ವಾರ್ಷಿಕ ಜನನಗಳನ್ನು ಹೊಂದಿದೆ (2,42,38,000) ಹಾಗೂ ನಿರ್ದಿಷ್ಟವಾಗಿ ದೊಡ್ಡ ಯೋಜಿತ ಆರ್ಥಿಕ ಕೊರತೆ (17.3%)ಯನ್ನೂ ಎದುರಿಸಿದೆ ಎಂದು ಸಂಶೋಧನೆ ತಿಳಿಸಿದೆ.

“ಈ ಕಾರಣದಿಂದಾಗಿ, ದಕ್ಷಿಣ ಏಷ್ಯಾವು ಅತಿ ಹೆಚ್ಚು ಶಿಶು ಮರಣವನ್ನು ನಿರೀಕ್ಷಿಸಿದ ಪ್ರದೇಶವಾಗಿದೆ. ಆದರೂ ಎಂಟು ದೇಶಗಳು ಮಾತ್ರ ಈ ವಿಶ್ಲೇಷಣೆಯಲ್ಲಿ ಒಳಗೊಂಡಿವೆ” ಎಂದು ಸಂಶೋಧನಾ ಲೇಖನವು ತಿಳಿಸಿದೆ.

ಇದನ್ನೂ ಓದಿ: ಪದ್ಮ ಪ್ರಶಸ್ತಿ: ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಶಿಫಾರಸ್ಸು ಮಾಡಲಿರುವ ದೆಹಲಿ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ್ದಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿತ: ಅವಮಾನ ತಾಳಲಾರದೆ ಆತ್ಮಹತ್ಯೆ

0
ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಸವರ್ಣೀಯರು ಮರಕ್ಕೆ ಕಟ್ಟಿ ಥಳಿಸಿರುವ ಮತ್ತು ಆ ಯುವಕ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಜಾತಿ...