ನಕಲಿ ಇಮೇಲ್ ಐಡಿ ಮೂಲಕ ಸಂಸ್ಥೆಯೊಂದಕ್ಕೆ 2.11 ಕೋಟಿ ರೂಪಾಯಿ ವಂಚಿಸಿದ್ದ ಮಧ್ಯಪ್ರದೇಶದ 23 ವರ್ಷದ ಯುವಕನನ್ನು ಬಳ್ಳಾರಿ ಸೈಬರ್ ಕ್ರೈಮ್ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಪೊಲೀಸರು 1.48 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದು, ಇದು ಸೈಬರ್ ಕ್ರೈಮ್ ಪ್ರಕರಣಗಳಲ್ಲಿ ರಾಜ್ಯದ ಪೊಲೀಸರು ವಶಕ್ಕೆ ಪಡೆದ ಅತಿದೊಡ್ಡ ಪ್ರಕರಣಗಳಲ್ಲಿ ಒಂದಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.ಸೈಬರ್ ವಂಚನೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆರೋಪಿಯನ್ನು ಮಧ್ಯಪ್ರದೇಶದ ರೇವಾ ಜಿಲ್ಲೆಯ ನಿವಾಸಿ ಅಜಯ್ ಕುಮಾರ್ ಜೈಸ್ವಾಲ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಿರುವುದಾಗಿ ಬಳ್ಳಾರಿಯ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ ಬುಧವಾರ ಪ್ರಕಟಿಸಿದ್ದಾರೆ. ಆರೋಪಿ ಜೈಸ್ವಾಲ್ ಆಗಸ್ಟ್ 21ರಿಂದ ಮತ್ತು ಸೆಪ್ಟೆಂಬರ್ 2 ರ ನಡುವೆ ಹಿಂದೂಸ್ತಾನ್ ಕ್ಯಾಲ್ಸಿನ್ಡ್ ಮೆಟಲ್ಸ್ ಪ್ರೈವೇಟ್ ಲಿಮಿಟೆಡ್ (HCMPL)ಗೆ ಮೋಸ ಮಾಡಲು ನಕಲಿ ಇಮೇಲ್ ಐಡಿಯನ್ನು ಸೃಷ್ಟಿದ್ದನು ಎಂದು ಆರೋಪಿಸಲಾಗಿದೆ.
ಇದನ್ನೂಓದಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆತ್ಮಹತ್ಯೆ ತಡೆಗೆ ಮಾರ್ಗಸೂಚಿ | ಸರ್ಕಾರ ನಿರ್ಧಾರ
ಎಚ್‌ಸಿಎಂಪಿಎಲ್ ಕಳೆದ ಏಳೆಂಟು ವರ್ಷಗಳಿಂದ ಬಳ್ಳಾರಿಯ ಅಗರ್ವಾಲ್ ಕೋಲ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ (ಎಸಿಸಿಪಿಎಲ್) ನಿಂದ ಕಲ್ಲಿದ್ದಲು ಖರೀದಿಸುತ್ತಿದೆ. ಕಂಪೆನಿಯು ತನ್ನ ವಹಿವಾಟುಗಳನ್ನು ಆನ್‌ಲೈನ್‌ನಲ್ಲಿ ಮಾಡುತ್ತಿದೆ.
9 ನೇ ತರಗತಿಯ ನಂತರ ಶಾಲೆಯನ್ನು ತೊರೆದ ಜೈಸ್ವಾಲ್, ಡೇಟಾ ಎಂಟ್ರಿ ಆಪರೇಟರ್ ಆಗಿದ್ದು, ಕೆಲಸದ ನಿಮಿತ್ತ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾನೆ. ಆರೋಪಿ ಎಸಿಸಿಪಿಎಲ್‌ನ ಅಧಿಕೃತ ಇಮೇಲ್ ಐಡಿಯನ್ನು ಹೋಲುವ ಇಮೇಲ್ ಐಡಿಯನ್ನು ರಚಿಸಿ, ಕಂಪನಿಯ ಬ್ಯಾಂಕ್ ಖಾತೆ ಸಂಖ್ಯೆಯನ್ನು ಬದಲಾಯಿಸಲಾಗಿದೆ ಎಂದು ಇಮೇಲ್ ಕಳುಹಿಸಿ ಮತ್ತು ನಮೂದಿಸಿದ ಬ್ಯಾಂಕ್ ಖಾತೆ ಸಂಖ್ಯೆಗೆ ಬಾಕಿ ಪಾವತಿಸಲು ಎಚ್‌ಸಿಎಂಪಿಎಲ್ ಅನ್ನು ಕೇಳಿದ್ದಾನೆ. ಸೈಬರ್ ವಂಚನೆ
ಈ ವೇಳೆ ಕ್ರಾಸ್-ಚೆಕಿಂಗ್ ಮಾಡದೆ HCMPL ಕಂಪೆನಿಯವರು ಆರು ವಹಿವಾಟುಗಳ ಹಣವನ್ನು ವರ್ಗಾಯಿಸಿದೆ. ಮೊದಲ ವಹಿವಾಟು ಆಗಸ್ಟ್ 21 ರಂದು ನಡೆದಿದ್ದರೂ, ಸೆಪ್ಟೆಂಬರ್ 2ರಂದು ಎಸಿಸಿಪಿಎಲ್‌ನ ಪ್ರತಿನಿಧಿಯೊಬ್ಬರು HCMPL ಜೊತೆಗೆ ಬಾಕಿ ಹಣ ಕೇಳಿದಾಗ ಇದು ಬೆಳಕಿಗೆ ಬಂದಿತ್ತು.
ಇದರ ನಂತರ ಸೆಪ್ಟೆಂಬರ್ 3ರಂದು ಬಳ್ಳಾರಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಹಾಗಾಗಿ ಡಿಎಸ್ಪಿ ಸಂತೋಷ್ ಚೌಹಾಣ್ ನೇತೃತ್ವದ ತಂಡ ಮಧ್ಯಪ್ರದೇಶಕ್ಕೆ ತೆರಳಿ ಆರೋಪಿ ಜೈಸ್ವಾಲ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಜೈಸ್ವಾಲ್ ಖಾತೆಗೆ ವರ್ಗಾಯಿಸಲಾದ ಹಣವನ್ನು ಆತ 18 ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಜೈಸ್ವಾಲ್ 1.21 ಕೋಟಿ ರೂಪಾಯಿಗಳನ್ನು ಬ್ಯಾಂಕ್‌ನಿಂದ ಪಡೆದಿದ್ದು, 27.97 ಲಕ್ಷ ರೂಪಾಯಿಗಳನ್ನು ವಿವಿಧ ಖಾತೆಗಳಲ್ಲಿ ಇಡಲಾಗಿದೆ. ನಾವು ಈ ಹಣವನ್ನು ವಶಪಡಿಸಿಕೊಂಡಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೈಸ್ವಾಲ್ ದೆಹಲಿಯ ಕೆಲವು ಸೈಬರ್ ಕ್ರಿಮಿನಲ್‌ಗಳೊಂದಿಗೆ ಸಂಪರ್ಕದಲ್ಲಿದ್ದು, ಅವರು ಕಂಪನಿಗಳಿಂದ ಹಣವನ್ನು ವಂಚಿಸಲು ಆಕರ್ಷಕ ಕಮಿಷನ್‌ಗಳನ್ನು ನೀಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿ 1.21 ಕೋಟಿ ಬ್ಯಾಂಕ್‌ನಿಂದ ವಿತ್‌ಡ್ರಾ ಮಾಡಿ ತಮ್ಮ ಮನೆಯಲ್ಲಿ ಇಟ್ಟುಕೊಂಡು ದೆಹಲಿ ತಂಡಕ್ಕೆ ಹಸ್ತಾಂತರಿಸಲು ಬಯಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. “ಇದು ಅವನ ಮೊದಲ ಸೈಬರ್ ಕ್ರೈಮ್ ಎಂದು ತೋರುತ್ತಿದೆ ಮತ್ತು ನಾವು ಆತನ ಹಿಂದಿನ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿಡಿಯೊ ನೋಡಿ: ಗೌರಿ ನೆನಪು ಕಾರ್ಯಕ್ರಮದಲ್ಲಿ ರಾಮಕುಮಾರ್ ಅವರ ಮಾತುಗಳು


