ತೌತೆ ಚಂಡಮಾರುತದಿಂದ ಉಂಟಾದ ಪರಿಸ್ಥಿತಿ ಮತ್ತು ಹಾನಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುಜರಾತ್‌ನ ಭಾವನಗರ ತಲುಪಿದ್ದಾರೆ. ಪ್ರಧಾನಿಯನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ.
ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ಬಗ್ಗೆ ಪ್ರಧಾನಿಯು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ರೂಪಾನಿ ಹೇಳಿದ್ದಾರೆ.
ತೌತೆ ಚಂಡಮಾರುತದಿಂದ ಹಾನಿಗೊಳಗಾದ ಅಮ್ರೆಲಿ, ಗಿರ್ ಸೋಮನಾಥ್ ಮತ್ತು ಭಾವನಗರ ಜಿಲ್ಲೆಗಳಲ್ಲಿ ಅವರು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎಂದು ರೂಪಾನಿ ಟ್ವೀಟ್ ಮಾಡಿದ್ದಾರೆ.
Honourable Prime Minister Shri @narendramodi ji landed in Bhavnagar. He will conduct an aerial survey of the areas of Amreli, Gir Somnath and Bhavnagar districts hit by #CycloneTauktae. pic.twitter.com/VcBk6lwbau
— Vijay Rupani (@vijayrupanibjp) May 19, 2021
ಚಂಡಮಾರುತದಿಂದ ಉಂಟಾದ ಹಾನಿಯನ್ನು ಪರಿಶೀಲಿಸಲು ಕೇಂದ್ರಾಡಳಿತ ಪ್ರದೇಶವಾದ ‘ದಿಯು’ ಗೆ ಕೂಡಾ ಪ್ರಧಾನಿ ಇಂದು ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ಕೋವಿಡ್‌ನಿಂದ ಯುಪಿ ಸಚಿವ ನಿಧನ: 2ನೆ ಅಲೆಗೆ ಯುಪಿ ಬಿಜೆಪಿಯ 5 ಶಾಸಕರು ಬಲಿ
ವೈಮಾನಿಕ ಸಮೀಕ್ಷೆಯ ನಂತರ ಪ್ರಧಾನಿ ಅಹಮದಾಬಾದ್‌ನಲ್ಲಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ರೂಪಾನಿ ಮಂಗಳವಾರ ಮಾಹಿತಿ ನೀಡಿದ್ದರು.
“ತೌತೆ ಚಂಡಮಾರುತದಿಂದ ಹಾನಿಗೊಳಗಾದ ಅಮ್ರೆಲಿ, ಗಿರ್ ಸೋಮನಾಥ್ ಮತ್ತು ಭಾವನಗರ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುಜರಾತ್ ಭೇಟಿ ನೀಡಲಿದ್ದಾರೆ. ಇದರ ನಂತರ ಪ್ರಧಾನಿಯು ಅಹಮದಾಬಾದ್‌ನಲ್ಲಿ ಸಿಎಂ ವಿಜಯ್ ರೂಪಾನಿ ಮತ್ತು ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ” ಎಂದು ಗುಜರಾತ್ ಮುಖ್ಯಮಂತ್ರಿ ಕಚೇರಿಯ ಟ್ವಿಟರ್ ಹ್ಯಾಂಡಲ್ ಟ್ವೀಟ್ ಮಾಡಿತ್ತು.
PM Shri @narendramodi will visit Gujarat tomorrow to conduct an aerial survey of the areas of Amreli, Gir Somnath & Bhavnagar distrcts hit by #CycloneTauktae. The PM will also hold a review meeting with CM Shri @vijayrupanibjp and top officials of the State later in Ahmedabad.
— CMO Gujarat (@CMOGuj) May 18, 2021
‘1998 ನಂತರ ಗುಜರಾತ್ ಮೇಲೆ ಭಾರಿ ಕೆಟ್ಟ ಪರಿಣಾಮ ಬೀರಿದ ಅತ್ಯಂತ ಪ್ರಬಲವಾದ ಚಂಡಮಾರುತವಾಗಿದೆ ತೌತೆ. ಇದು ಗುಜರಾತ್‌ನ ಕರಾವಳಿಯುದ್ದಕ್ಕೂ ವಿನಾಶವನ್ನು ಉಂಟು ಮಾಡಿದ್ದು, ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದೆ. ಜೊತೆಗೆ ಹಲವಾರು ಮನೆಗಳು ಮತ್ತು ರಸ್ತೆಗಳಿಗೂ ಹಾನಿಯುಂಟು ಮಾಡಿದೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ತೌತೆ ಚಂಡಮಾರುತವು ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ದೆಹಲಿ ಸೇರಿದಂತೆ ಉತ್ತರ ಭಾರತದ ಹಲವಾರು ಭಾಗಗಳಲ್ಲಿನ ಹವಾಮಾನ ವೈಪರೀತ್ಯದ ಮೇಲೆ ಪರಿಣಾಮ ಬೀರಿದೆ.
ಇದನ್ನೂ ಓದಿ: 13 ಐಪಿಎಸ್ ಅಧಿಕಾರಿಗಳ ಕಡ್ಡಾಯ ನಿವೃತ್ತಿ: ಕೇಂದ್ರ ಗೃಹ ಸಚಿವಾಲಯ


