Homeಕರೋನಾ ತಲ್ಲಣಮಧ್ಯಪ್ರದೇಶ ಉಪ ಚುನಾವಣೆಯಲ್ಲಿ ಕೋವಿಡ್‌ಗೆ ಏಳು ನಾಯಕರು ಬಲಿ: ಸರ್ಕಾರದ ವಿರುದ್ಧ ಮೃತರ ಕುಟುಂಬಗಳ ಆಕ್ರೋಶ

ಮಧ್ಯಪ್ರದೇಶ ಉಪ ಚುನಾವಣೆಯಲ್ಲಿ ಕೋವಿಡ್‌ಗೆ ಏಳು ನಾಯಕರು ಬಲಿ: ಸರ್ಕಾರದ ವಿರುದ್ಧ ಮೃತರ ಕುಟುಂಬಗಳ ಆಕ್ರೋಶ

- Advertisement -
- Advertisement -

ಮಧ್ಯಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ, ಉನ್ನತ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕಾರಣಿಗಳು ಏಪ್ರಿಲ್ 17 ರ ಉಪ ಚುನಾವಣೆಗೆ ದಮೋಹ್ ದಲ್ಲಿ ಪ್ರಚಾರ ನಡೆಸಿದರು. ಇದರಿಂದಾಗಿ ಕೋವಿಡ್‌ನಿಂದ ಏಳು ನಾಯಕರು ಸಾವನ್ನಪ್ಪಿದರೆ, ಇತರ ಕೆಲವರು ಕುಟುಂಬ ಸದಸ್ಯರನ್ನು ಕಳೆದುಕೊಂಡರು.

ಮತದಾನ ಮುಂದೂಡಿದ್ದರೆ ಪ್ರಜಾಪ್ರಭುತ್ವವೇನೂ ಅಲ್ಲಾಡಿ ಹೋಗುತ್ತಿತ್ತಾ ಎಂದು ಮೃತ ನಾಯಕರ ಕುಟುಂಬಗಳು ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಏಪ್ರಿಲ್ 9 ರಂದು ಮಧ್ಯಪ್ರದೇಶದಲ್ಲಿ 4,882 ಹೊಸ ಕೋವಿಡ್ ಪ್ರಕರಣಗಳು ದಾಖಲಾದಾಗ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ದಮೋಹ್ ಜಿಲ್ಲೆಯಲ್ಲಿ ಬೃಹತ್ ಚುನಾವಣಾ ರ‍್ಯಾಲಿ ನಡೆಸುತ್ತಿದ್ದರು. ಹಿಂದಿನ ದಿನ, ಚೌಹಾಣ್ ಸರ್ಕಾರವು ದಮೋಹ್ ಹೊರತುಪಡಿಸಿ ಇಡೀ ರಾಜ್ಯದಲ್ಲಿ ವಾರಾಂತ್ಯದ ಲಾಕ್‌ಡೌನ್ ಘೋಷಿಸಿತ್ತು. ಇಲ್ಲಿ ಮಾತ್ರ ಏಪ್ರಿಲ್ 17ರಂದು ನಡೆದ ವಿಧಾನಸಭೆ ಉಪಚುನಾವಣೆ ನಿಮಿತ್ತ ಲಾಕ್‌ಡೌನ್ ಘೋಷಣೆ ಮಾಡಿರಲಿಲ್ಲ.

ಮಧ್ಯಪ್ರದೇಶದ ಉನ್ನತ ರಾಜಕೀಯ ನಾಯಕರು ಈ ಉಪ ಚುನಾವಣೆಯಲ್ಲಿ ರ‍್ಯಾಲಿಗಳನ್ನು ನಡೆಸಿದರು. ಬಿಜೆಪಿಯ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಉಮಾಭಾರತಿ, ಹಾಗೂ ಕಾಂಗ್ರೆಸ್‌ನ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ಉಪಚುನಾವಣೆಯಲ್ಲಿ ಬೃಹತ್ ರ‍್ಯಾಲಿಗಳಲ್ಲಿ ಭಾಗಿಯಾಗಿದ್ದರು.

ಏಪ್ರಿಲ್ 16ರಂದು, ಮಾಜಿ ಸಿಎಂ ದಿಗ್ವಿಜಯಸಿಂಗ್ ಅವರಿಗೆ ಪಾಸಿಟಿವ್ ಕಾಣಿಸಿಕೊಂಡಿತು. ಹಿರಿಯ ನಾಯಕರಂತೆ ಸ್ಥಳೀಯ ನಾಯಕರೂ ಬೃಹತ್ ರ‍್ಯಾಲಿ, ಪ್ರಚಾರಗಳಲ್ಲಿ ಭಾಗಿಯಾದರು. ಮುಂದಿನ ಏಳು ದಿನಗಳಲ್ಲಿ ಅವರಲ್ಲಿ ಏಳು ಮಂದಿ ಸಾವನ್ನಪ್ಪಿದರು.

ಪ್ರಾಣ ಕಳೆದುಕೊಂಡ ಬಿಜೆಪಿ ಸದಸ್ಯರಲ್ಲಿ ದಮೋಹ್ ಜಿಲ್ಲಾ ಮಾಜಿ ಮುಖ್ಯಸ್ಥ ದೇವನಾರಾಯಣ್ ಶ್ರೀವಾಸ್ತವ, ವಾರ್ಡ್ ಕೌನ್ಸಿಲರ್ ಮಹೇಂದ್ರ ರೈ, ಯುವ ಮೋರ್ಚಾ ನಾಯಕ ಸಂದೀಪ್ ಪಂಥಿ ಮತ್ತು ಬಿನಾ ನಗರ ಪಕ್ಷದ ಮುಖ್ಯಸ್ಥ ಅಮೃತ ಖತಿಕ್ ಸೇರಿದ್ದಾರೆ. ಕಾಂಗ್ರೆಸ್‌ನ ಪೈಕಿ ಮಾಜಿ ರಾಜ್ಯ ವಾಣಿಜ್ಯ ಸಚಿವ ಮತ್ತು ದಮೋಹ್ ಉಪಚುನಾವಣೆ ಉಸ್ತುವಾರಿ ಬ್ರಜೇಂದ್ರ ಸಿಂಗ್ ರಾಥೋಡ್, ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷೆ ಮಾಂಡ್ವಿ ಚೌಹಾಣ್ ಮತ್ತು ಸ್ಥಳೀಯ ಮುಖಂಡ ಗೋಕುಲ್ ಪಟೇಲ್ ಕೋವಿಡ್‌ಗೆ ಬಲಿಯಾಗಿದ್ದರೆ.

ಕೊರೊನಾಕ್ಕೆ ಹೆದರಬೇಡಿ: ಚುನಾವಣಾ ಆಯೋಗದ ಪೋಸ್ಟರ್‌ಗಳು

ಇಲ್ಲಿನ ಕಾಂಗ್ರೆಸ್ ಶಾಸಕ ರಾಹುಲ್ ಲೋಧಿ ಅವರು ಪಕ್ಷವನ್ನು ತೊರೆದು 2020 ರ ಅಕ್ಟೋಬರ್‌ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಾಗ ದಮೋಹ್ ಉಪಚುನಾವಣೆ ಅಗತ್ಯವಾಗಿತ್ತು. ಉಪಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಹಾಕಿತು, ಜನರು ಹೊರಗೆ ಬಂದು ಮತ ಚಲಾಯಿಸುವಂತೆ ಸಕ್ರಿಯವಾಗಿ ಪ್ರೋತ್ಸಾಹಿಸಿತು ಮತ್ತು “ಭಯಪಡಬೇಡಿ” ಎಂದು ಪೋಸ್ಟರ್‌ಗಳನ್ನು ಹಾಕಿತ್ತು.

ಏಪ್ರಿಲ್ 1 ರಂದು, ಉಪಚುನಾವಣೆಯ ಪ್ರಚಾರ ಪ್ರಾರಂಭವಾಗುವ ಮುನ್ನ, ಜಿಲ್ಲೆಯಲ್ಲಿ ವರದಿಯಾದ ಕೋವಿಡ್ -19 ಪ್ರಕರಣಗಳ ಸಂಖ್ಯೆ 11 ಆಗಿತ್ತು. ಏಪ್ರಿಲ್ 6 ರಂದು, ಈ ಸಂಖ್ಯೆ 28 ಕ್ಕೆ ಏರಿತು, ಮತ್ತು 10 ದಿನಗಳ ನಂತರ, ಏಪ್ರಿಲ್ 16 ರಂದು, ಅಂದರೆ ಮತದಾನದ ಹಿಂದಿನ ದಿನ 377 ಹೊಸ ಪ್ರಕರಣಗಳು ಕಂಡುಬಂದವು. ಜಿಲ್ಲೆಯಲ್ಲಿ ಅದುವರೆಗಿನ ದೈನಿಕ ಸೋಂಕು ಪ್ರಮಾಣದಲ್ಲಿ ಇದೇ ಅಧಿಕವಾಗಿತ್ತು.

ಮತದಾನದ ಆರು ದಿನಗಳ ನಂತರ, ಏಪ್ರಿಲ್ 23 ರಂದು 165 ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,060 ಕ್ಕೆ ತಲುಪಿತು.

ಮಧ್ಯಪ್ರದೇಶದ ಉನ್ನತ ನಾಯಕರ ರ‍್ಯಾಲಿಗಳ ಬಗ್ಗೆ ಆಶ್ಚರ್ಯವಾಯಿತು ಎಂದು ದಮೋಹ್ ನಿವಾಸಿಗಳು ತಿಳಿಸಿದ್ದಾರೆ. “ಆ ಸಮಯದಲ್ಲಿ ಪಶ್ಚಿಮ ಬಂಗಾಳ ಚುನಾವಣೆಗಳು ನಡೆಯದಿದ್ದರೆ, ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಕೂಡ ದಮೋಹ್‌ಗೆ ಬರ‍್ತಾ ಇದ್ದರು ಎಂದು ನನಗೆ ಖಾತ್ರಿಯಿದೆ” ಎಂದು ನಾಗರಿಕರೊಬ್ಬರು ಹೇಳಿದ್ದಾರೆ.

ಮೇ 2 ರಂದು ಫಲಿತಾಂಶಗಳನ್ನು ಪ್ರಕಟಿಸುವ ಮುನ್ನ ಮಧ್ಯಪ್ರದೇಶದ ಹೈಕೋರ್ಟ್ ದಾಮೋಹ್ ದಲ್ಲಿ ವಿಜಯ ಮೆರವಣಿಗೆಗಳನ್ನು ನಿಷೇಧಿಸಿತು. ಆದರೆ ಅಷ್ಟೊತ್ತಿಗೆ ತಡವಾಗಿತ್ತು. ಉಪಚುನಾವಣೆಯ ನಂತರ, ದಮೋಹ್ ಮತಕ್ಷೇತ್ರ ಪ್ರತಿದಿನ ಸುಮಾರು 150-160 ಕೋವಿಡ್ ಪ್ರಕರಣಗಳನ್ನು ದಾಖಲಿಸುತ್ತಿದೆ.

‘ಯಾರೂ ಸಹಾಯ ಮಾಡಲು ಬಂದಿಲ್ಲ’

ಬಿಜೆಪಿ ನಾಯಕ ದೇವನಾರಾಯಣ್ ಶ್ರೀವಾಸ್ತವ ಅವರಲ್ಲಿ ಏಪ್ರಿಲ್ 17ರ ಉಪಚುನಾವಣೆಯ ಕೆಲವು ದಿನಗಳ ನಂತರ ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡವು. ಅವರು ಏಪ್ರಿಲ್ 27 ರಂದು ನಿಧನರಾದರು. ಅವರ 26 ವರ್ಷದ ಮಗಳು ಸೋನಾಕ್ಷಿ, ನಾವು ಪ್ರಚಾರಕ್ಕೆ ಹೋಗಬೇಡಿ ಎಂದು ತಂದೆಯನ್ನು ತಡೆಯಲು ಯತ್ನಿಸಿದೆವು. ಆದರೆ ಅವರ ಪಕ್ಷನಿಷ್ಟೆಗೆ ಕಟ್ಟುಬಿದ್ದು ಜೀವ ಕಳೆದುಕೊಂಡರು’ ಎಂದು ದಿ ಪ್ರಿಂಟ್‌ಗೆ ತಿಳಿಸಿದ್ದಾರೆ.

ಆದರೆ ಪಕ್ಷದ ಬಗ್ಗೆ ಈ ನಿಷ್ಠೆಯ ಹೊರತಾಗಿಯೂ, ಶ್ರೀವಾಸ್ತವ ಅನಾರೋಗ್ಯಕ್ಕೆ ಒಳಗಾದಾಗ “ಯಾರೂ ಸಹಾಯ ಮಾಡಲು ಬಂದಿಲ್ಲ” ಎಂದು ಸೋನಾಕ್ಷಿ ಆರೋಪಿಸಿದರು.

“ನಂತರ, ನಾವು ಅನೇಕ ಜನರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಆದರೆ ಜಯಂತ್ ಮಲೈಯಾ (ಬಿಜೆಪಿಯ ಹಿರಿಯ ಮುಖಂಡ ಮತ್ತು ದಮೋಹ್‌ನ ಮಾಜಿ ಶಾಸಕ) ಅವರಲ್ಲದೆ ಪಕ್ಷದ ಬೇರೆ ಯಾರೂ ಸಹಾಯ ಮಾಡಲಿಲ್ಲ. ಪ್ರತಿಯೊಬ್ಬರೂ ಟ್ವಿಟರ್‌ನಲ್ಲಿ ಅವರಿಗೆ ಸಂತಾಪ ಸಂದೇಶಗಳನ್ನು ಬರೆದಿದ್ದಾರೆ… ಆದರೆ ನಮಗೆ ನಿಜವಾದ ಸಹಾಯ ಬೇಕಾದಾಗ ಯಾರೂ ಸಹಾಯ ಮಾಡಲಿಲ್ಲ” ಎಂದು ಅವರು ಹೇಳಿದರು.

ಆರು ತಿಂಗಳಲ್ಲಿ, ಸೋನಾಕ್ಷಿ ತನ್ನ ಹೆತ್ತವರನ್ನು ಕಳೆದುಕೊಂಡಿದ್ದಾರೆ. ತಂದೆಯ ಸಾವಿಗೆ ಉಪ ಚುನಾವಣೆಯೇ ಕಾತಣ ಎಂದು ಅಪಾದಿಸಿದ್ದಾರೆ.

‘ಈ ಉಪಚುನಾವಣೆ ನಡೆಯದಿದ್ದಲ್ಲಿ ನಮ್ಮ ಪ್ರಜಾಪ್ರಭುತ್ವವು ಅಪಾಯಕ್ಕೆ ಸಿಲುಕುತ್ತಿರಲಿಲ್ಲ.… ಇದನ್ನು ಮುಂದೂಡಿದ್ದರೆ ಪ್ರಜಾಪ್ರಭುತ್ವವೇನೂ ಅಳ್ಳಾಡುತ್ತಿರಲಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಪೋಲ್‌ನ ಸಮಯವು ಹೆಚ್ಚು ಸೂಕ್ತವಲ್ಲ

ಕಾಂಗ್ರೆಸ್ ಅಭ್ಯರ್ಥಿ ಅಜಯ್ ಟಂಡನ್ ದಮೋಹ್ ಉಪಚುನಾವಣೆಯನ್ನು ಆರಾಮವಾಗಿ ಗೆದ್ದರು. ಆದರೆ ಅವರ ಪರವಾಗಿ ಸಕ್ರಿಯವಾಗಿ ಪ್ರಚಾರ ಮಾಡಿದ ನಾಯಕರಲ್ಲಿ ಒಬ್ಬರಾದ ಲಾಲ್ ಚಂದ್ ರಾಯ್ ಅವರು ವಿಷಾದದಿಂದ ಹೊರಬರುತ್ತಾರೆ.

ಮತದಾನದ ಕೆಲವು ದಿನಗಳ ನಂತರ ಕಾಂಗ್ರೆಸ್ ನಾಯಕ ಲಾಲ್ ಚಂದ್ ಎಂಬ ನಾಯಕರಿಗೆ ಪಾಸಿಟಿವ್ ಕಾಣಿಸಿಕೊಂಡಿತು. ನಂತರ ಅವರ ಪತ್ನಿ ವಂದನಾ ಮತ್ತು ಅವರ 17 ವರ್ಷದ ಮಗ ಕೂಡ ಸೋಂಕಿಗೆ ಒಳಗಾಗಿದ್ದಾರೆ. ಲಾಲ್ ಚಂದ್ ಮತ್ತು ಅವರ ಮಗ ಚೇತರಿಸಿಕೊಂಡರೆ, ವಂದನಾ ನಿಧನರಾದರು

“ಚುನಾವಣಾ ಪ್ರಚಾರದಿಂದಾಗಿ ದಾಮೋಹ್ ದಲ್ಲಿನ ಹಲವಾರು ಕುಟುಂಬಗಳು ಹಾಳಾಗಿವೆ. ನನ್ನ ಜೀವನ ಸಂಗಾತಿ ಈ ಕಾರಣದಿಂದಾಗಿ ನಿಧನರಾದರು … ನಾನು ತುಂಬಾ ವಿಚಲಿತನಾಗಿದ್ದೇನೆ” ಎಂದು ಕಾಂಗ್ರೆಸ್ ನಾಯಕ ದಿ ಪ್ರಿಂಟ್‌ಗೆ ತಿಳಿಸಿದ್ದು, ಕೋವಿಡ್ ಹೆಚ್ಚುತ್ತಿರುವಾಗ ಉಪಚುನಾವಣೆ ನಡೆಸುವುದು ಸೂಕ್ತವಲ್ಲ ಎಂದಿದ್ದಾರೆ.

ಕೋವಿಡ್‌ಗೆ ಬಲಿಯಾದ ಬಿಜೆಪಿ ಕೌನ್ಸಿಲರ್ ಮಹೇಂದ್ರ ರಾಯ್ ಅವರ 17 ವರ್ಷದ ಮಗ ಸಚಿನ್ ರೈ, ಉಪಚುನಾವಣೆ ಮೂಂದೂಡಲಿಲ್ಲವೇಕೆ ಮತ್ತು ದಾಮೋಹ್‌ ದಲ್ಲಿ ಏಕೆ ಲಾಕ್ ಡೌನ್ ವಿಧಿಸಲಿಲ್ಲವೇಕೆ? “ಜನರ ಜೀವನಕ್ಕಿಂತ ಉಪಚುನಾವಣೆ ಮುಖ್ಯವಾಯಿತೇ?’ ಎಂದು ಅವರು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ಕೋವಿಡ್‌ನಿಂದ ಯುಪಿ ಸಚಿವ ನಿಧನ: 2ನೆ ಅಲೆಗೆ ಯುಪಿ ಬಿಜೆಪಿಯ 5 ಶಾಸಕರು ಬಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...

ಯುಪಿ: ಮೊಹರಂ ಮೆರವಣಿಗೆಯಲ್ಲಿ ಪಿತೂರಿ: ಪಾಕ್ ಪರ ಘೋಷಣೆಯ ಸುಳ್ಳು ವಿಡಿಯೋ ಹರಿಬಿಟ್ಟ ಇಬ್ಬರು ಹಿಂದುತ್ವವಾದಿಗಳ ಬಂಧನ 

ಬರೇಲಿ (ಉತ್ತರ ಪ್ರದೇಶ): ಮೊಹರಂ ಮೆರವಣಿಗೆಯೊಂದರಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ದೇಶವಿರೋಧಿ ಘೋಷಣೆ ಕೂಗಲಾಗಿದೆ ಎಂಬ ನಕಲಿ ವೀಡಿಯೋ ಸೃಷ್ಟಿಸಿ, ಮುಸ್ಲಿಂ ಸಮುದಾಯದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿದ ಇಬ್ಬರು ಹಿಂದುತ್ವವಾದಿ...

ಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ರಾಜಸ್ಥಾನದ ಜುಂಜುನು ಜಿಲ್ಲೆಯ ನವೀನ್ ಚೌಧರಿ ಎಂಬ 25 ವರ್ಷದ ಯುವಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. 'ಜುಂಜುನು ಎಕ್ಸ್‌ಪ್ರೆಸ್' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ...

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...