ಉತ್ತರ ಪ್ರದೇಶದ ಕಂದಾಯ ಸಚಿವ ವಿಜಯ್ ಕಶ್ಯಪ್ ಮಂಗಳವಾರ ಗುರಗಾಂವ್ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ನಿಧನರಾದರು.
ಮುಜಫರ್‌ನಗರ ಜಿಲ್ಲೆಯ ಚಾರ್ತವಾಲ್ ಕ್ಷೇತ್ರದ ಶಾಸಕರಾಗಿದ್ದ ಕಶ್ಯಪ್ (56) ಗುರಗಾಂವ್‌ನ ಮೆದಾಂತ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ವೈರಸ್‌ಗೆ ಬಲಿಯಾದ ಮೂರನೇ ಯುಪಿ ಸಚಿವರು. ಕಳೆದ ವರ್ಷ ಉತ್ತರ ಪ್ರದೇಶದ ಮಂತ್ರಿಗಳಾದ ಕಮಲ್ ರಾಣಿ ವರುಣ್ ಮತ್ತು ಚೇತನ್ ಚೌಹಾನ್ ಸೋಂಕಿನಿಂದ ಸಾವನ್ನಪ್ಪಿದ್ದರು. ಕೋವಿಡ್ ಎರಡನೇ ಅಲೆಯಲ್ಲಿ ಉತ್ತರಪ್ರದೇಶದ ಬಿಜೆಪಿಯ ಐವರು ಶಾಸಕರು (ಕಶ್ಯಪ್ ಸೇರಿ) ಬಲಿಯಾಗಿದ್ದಾರೆ.
ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ. ಕಶ್ಯಪ್ ಸಾರ್ವಜನಿಕ ಹಿತಾಸಕ್ತಿ ಕಾರ್ಯಗಳಿಗೆ ಬದುಕನ್ನು ಮೀಸಲಿಟ್ಟಿದ್ದರು ಎಂದು ಹೇಳಿದ್ದಾರೆ.
“ಉತ್ತರ ಪ್ರದೇಶ ಸರ್ಕಾರದಲ್ಲಿ ಬಿಜೆಪಿ ಮುಖಂಡ ಮತ್ತು ಸಚಿವರಾದ ವಿಜಯ್ ಕಶ್ಯಪ್ ಅವರ ನಿಧನ ತುಂಬಾ ದುಃಖಕರವಾಗಿದೆ. ಅವರು ತಳಮಟ್ಟದ ಸಂಪರ್ಕ ಹೊಂದಿದ್ದ ನಾಯಕರಾಗಿದ್ದರು ಮತ್ತು ಯಾವಾಗಲೂ ಸಾರ್ವಜನಿಕ ಹಿತಾಸಕ್ತಿ ಕಾರ್ಯಗಳಿಗೆ ಜೀವನವನ್ನು ಮೀಸಲಿಟ್ಟಿದ್ದರು. ಈ ದುಃಖದ ಕ್ಷಣದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪ. ಓಂ ಶಾಂತಿ!” ಎಂದು ಪ್ರಧಾನಿ ಪಿಎಂ ಮೋದಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಕಶ್ಯಪ್ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
“ಚಾರ್ತವಾಲ್‌ನ ಶಾಸಕರಾದ ಕಶ್ಯಪ್ ಅವರು ಮಂತ್ರಿಯಾಗಿ ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದ ಜನಪ್ರಿಯ ನಾಯಕರಾಗಿದ್ದರು. ಅವರ ಸಾವಿನಲ್ಲಿ ಜನರು ತಮ್ಮ ನಿಜವಾದ ಹಿತೈಷಿಯನ್ನು ಕಳೆದುಕೊಂಡಿದ್ದಾರೆ” ಎಂದು ಯೋಗಿ ಆದಿತ್ಯನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರ ನಿಧನಕ್ಕೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಧಾ ಮೋಹನ್ ಸಿಂಗ್ ಮತ್ತು ಇತರ ಹಿರಿಯ ನಾಯಕರು ಸಂತಾಪ ಸೂಚಿಸಿದ್ದಾರೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.
ಎರಡನೇ ಕೊರೋನಾ ವೈರಸ್ ಅಲೆಯಲ್ಲಿ ಮೃತಪಟ್ಟ ಐದನೇ ಉತ್ತರಪ್ರದೇಶದ ಬಿಜೆಪಿ ಶಾಸಕ ಕಶ್ಯಪ್.
ಇದಕ್ಕೂ ಮುನ್ನ ಸಾಲೋನ್ ಕ್ಷೇತ್ರದ ಶಾಸಕ ದಾಲ್ ಬಹದ್ದೂರ್ ಕೋರಿ, ಕೇಸರ್ ಸಿಂಗ್ ಗಂಗ್ವಾರ್ (ನವಾಬ್‌ಗಂಜ್), ರಮೇಶ್ ದಿವಾಕರ್ (ಔರಿಯಾ) ಮತ್ತು ಸುರೇಶ್ ಕುಮಾರ್ ಶ್ರೀವಾಸ್ತವ (ಲಕ್ನೋ ವೆಸ್ಟ್) ಸೋಂಕಿಗೆ ಬಲಿಯಾಗಿದ್ದರು.
ಇದನ್ನೂ ಓದಿ: ಹೆಚ್ಚು ಮಾತನಾಡಿದರೇ ನನ್ನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಬಹುದು: ಬಿಜೆಪಿ ಶಾಸಕ