Homeಮುಖಪುಟ13 ಐಪಿಎಸ್‌ ಅಧಿಕಾರಿಗಳ ಕಡ್ಡಾಯ ನಿವೃತ್ತಿ: ಕೇಂದ್ರ ಗೃಹ ಸಚಿವಾಲಯ

13 ಐಪಿಎಸ್‌ ಅಧಿಕಾರಿಗಳ ಕಡ್ಡಾಯ ನಿವೃತ್ತಿ: ಕೇಂದ್ರ ಗೃಹ ಸಚಿವಾಲಯ

ಅಮಾನತ್ತಿನಲ್ಲಿರುವ 24 ಐಪಿಎಸ್ ಅಧಿಕಾರಿಗಳ ಮಾಹಿತಿಯನ್ನು ನೀಡಲು ಕೇಂದ್ರವು ನಿರಾಕರಿಸಿದೆ.

- Advertisement -
- Advertisement -

2014 ರಿಂದ ದೇಶದಾದ್ಯಂತ 13 ಭಾರತೀಯ ಪೊಲೀಸ್ ಸೇವೆ (ಐಪಿಎಸ್‌) ಅಧಿಕಾರಿಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕಡ್ಡಾಯ ನಿವೃತ್ತಿ ಮಾಡಲಾಗಿದ್ದು, ಐವರು ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಬಹಿರಂಗಪಡಿಸಿದೆ. ಆದರೆ ಅಮಾನತ್ತಿನಲ್ಲಿರುವ 24 ಐಪಿಎಸ್ ಅಧಿಕಾರಿಗಳ ಮಾಹಿತಿಯನ್ನು ನೀಡಲು ಕೇಂದ್ರವು ನಿರಾಕರಿಸಿದೆ.

ದೇಶಾದ್ಯಂತ ಐದು ಐಪಿಎಸ್‌ ಅಧಿಕಾರಿಗಳ ವಿರುದ್ಧ ಸಚಿವಾಲಯವು ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಸಚಿವಾಲಯವು ನಿವೃತ್ತರಾದ, ವಜಾಗೊಳಿಸಿದ ಮತ್ತು ಕಾನೂನು ಕ್ರಮ ಜರುಗಿಸಲ್ಪಟ್ಟ ಎಲ್ಲ ಅಧಿಕಾರಿಗಳ ಹೆಸರನ್ನು ಹಂಚಿಕೊಂಡಿದೆ. ಆದರೆ ಪ್ರಸ್ತುತ ಅಮಾನತುಗೊಂಡಿರುವ 24 ಐಪಿಎಸ್‌ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಹಾಗೂ ಅದರಲ್ಲಿ “ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ” ಎಂದು ತಿಳಿಸಿದೆ.

ಫೆಬ್ರವರಿ 21, 2021 ರಲ್ಲಿ ಆರ್‌ಟಿಐ ಅರ್ಜಿಯ ಮೂಲಕ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ವಕೀಲರಾದ ಹೇಮಂತ್ ಕುಮಾರ್ ಅವರು 2014 ರ ಮೇ ತಿಂಗಳಿನಿಂದ ಯಾವ ಐಪಿಎಸ್‌ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಬಗ್ಗೆ ಮಾಹಿತಿ ಕೋರಿದ್ದರು.

ಇದನ್ನೂ ಓದಿ: CAA, NRC, NPR ಕುರಿತು ಚರ್ಚೆಗೆ ಸಿದ್ಧನಿದ್ದೇನೆ: ಅಮಿತ್‌ ಶಾಗೆ ಪತ್ರಬರೆದ ಮಾಜಿ ಐಎಎಸ್‌ ಕಣ್ಣನ್‌ ಗೋಪಿನಾಥನ್‌

ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರಗಳು ಮತ್ತು ವಿಶೇಷ ನ್ಯಾಯಾಲಯಗಳಿಗೆ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದ ಎಲ್ಲಾ ಐಪಿಎಸ್ ಅಧಿಕಾರಿಗಳ ಬಗ್ಗೆ ಮಾಹಿತಿಯನ್ನು ಅರ್ಜಿಯಲ್ಲಿ ಕೋರಲಾಗಿತ್ತು.

ಈ ಮೊದಲು ಮಾರ್ಚ್ 11 ರಂದು ಆರ್‌ಟಿಐ ಅರ್ಜಿಗೆ ಉತ್ತರವಾಗಿ, ಗೃಹ ಸಚಿವಾಲಯವು ಮಾಹಿತಿಯನ್ನು ನೀಡಲು ನಿರಾಕರಿಸಿತ್ತು. ಮಾಹಿತಿಯನ್ನು ನೀಡುವಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಮತ್ತು ಅಂತಹ ಮಾಹಿತಿಯನ್ನು ಆರ್‌‌ಟಿಐ ಕಾಯ್ದೆ, 2005 ಸೆಕ್ಷನ್ 8 (1) (ಜೆ) ಅಡಿಯಲ್ಲಿ ಒದಗಿಸಲಾಗುವುದಿಲ್ಲ ಎಂದು ಹೇಳಿತ್ತು.

ಆದಾಗ್ಯೂ, ಮೇ 10 ರಂದು, ಮಾರ್ಚ್ 11 ರ ಪತ್ರಕ್ಕೆ ಮುಂದುವರಿದ ಪತ್ರವಾಗಿ ಗೃಹ ಸಚಿವಾಲಯವು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದೆ.

ಅಮಾನತುಗೊಂಡಿರುವ 24 ಐಪಿಎಸ್ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಲು ಗೃಹ ಸಚಿವಾಲಯ ಏಕೆ ಹಿಂಜರಿಯುತ್ತಿದೆ ಎಂದು ಅರ್ಜಿದಾರ ಹೇಮಂತ್‌ ಕುಮಾರ್ ಪ್ರಶ್ನಿಸಿದ್ದಾರೆ.

“ಸೆಪ್ಟೆಂಬರ್ 2017 ರಲ್ಲಿ, ಗೃಹ ಸಚಿವಾಲಯವು ಅಮಾನತುಗೊಂಡ 15 ಐಪಿಎಸ್ ಅಧಿಕಾರಿಗಳ ಹೆಸರು ಮತ್ತು ವಿವರಗಳನ್ನು ನನಗೆ ಒದಗಿಸಿತ್ತು. ಆದರೆ ಈಗ ಇದೇ ರೀತಿಯ ಮಾಹಿತಿಯನ್ನು ನಿರಾಕರಿಸಲಾಗುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಲಸಿಕಾ ರಾಜಕೀಯ: ಮೇ 1 ರಿಂದ ಲಸಿಕೆ ಎಂಬುದು ನಿಜವೇ? ನಿಮಗೆ ಲಸಿಕೆ ಸಿಗಲು ಎಷ್ಟು ತಿಂಗಳು/ವರ್ಷ ಬೇಕು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -