Homeಕರ್ನಾಟಕಒಕ್ಕಲಿಗರ ನಾಯಕ ಡಿಕೆಶಿ ಹಣಿಯಲು ಸಂಘ ಪರಿವಾರದ ವ್ಯವಸ್ಥಿತ ಹುನ್ನಾರ!

ಒಕ್ಕಲಿಗರ ನಾಯಕ ಡಿಕೆಶಿ ಹಣಿಯಲು ಸಂಘ ಪರಿವಾರದ ವ್ಯವಸ್ಥಿತ ಹುನ್ನಾರ!

- Advertisement -
- Advertisement -

ರಾಮನಗರ ಜಿಲ್ಲೆಯ ಕನಕಪುರದಲ್ಲಿ ಹಿಂದೂ ಜಾಗರಣಾ ವೇದಿಕೆ ಜಾಥಾ ಒಂದನ್ನು ನಡೆಸಿ, ನಂತರ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಾತನಾಡುತ್ತ ಹಿರಿಯ ಆರ್‍ಎಸ್‍ಎಸ್ ಮುಖಂಡರಾದ ಕಲ್ಲಡ್ಕ ಪ್ರಭಾಕರ್ ಭಟ್, ‘ಇನ್ನೊಂದು ಹಿಂದೂ ಸ್ಥಳವನ್ನು ಕ್ರೈಸ್ತರ ಸ್ಥಳವನ್ನಾಗಿಸಲು ಬಿಡುವುದಿಲ್ಲ’ ಎಂದಿದ್ದಾರೆ. ಈಗ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣವಾಗುತ್ತಿರುವ ಕಪಾಲಬೆಟ್ಟವು ಇದಕ್ಕೂ ಮುಂಚೆ ಮುನೇಶ್ವರ ಬೆಟ್ಟವಾಗಿತ್ತೆಂದೂ, ಅಲ್ಲಿ ನಾಥ ಪರಂಪರೆಯ ಸಾಧುಗಳು ತಪಸ್ಸು ಮಾಡುತ್ತಿದ್ದರೆಂದೂ ಹಾಗೂ ಬೆಟ್ಟದ ಮೇಲೆ ಮುನೇಶ್ವರ ದೇವಸ್ಥಾನ ಕಟ್ಟುವವರೆಗೂ ವಿರಮಿಸುವುದಿಲ್ಲ ಎಂತಲೂ ಹೇಳಿದ್ದಾರೆ. ಪೌರತ್ವ ಕಾಯಿದೆಯನ್ನು ಉಲ್ಲೇಖಿಸಿ, ಹಿಂದೂಗಳಿಗೆ ಭಾರತವೊಂದೇ ದೇಶ, ಆ ಕಾರಣಕ್ಕಾಗಿಯೇ ಪೌರತ್ವ ತಿದ್ದುಪಡಿ ಕಾಯಿದೆಯನ್ನು ತರಲಾಗಿದೆ, ಕ್ರಿಶ್ಚಿಯನ್ನರು ಬೇಕಾದರೆ ಯೇಸು ಪ್ರತಿಮೆಯನ್ನು ಅಮೆರಿಕದಲ್ಲೋ, ಇಂಗ್ಲೆಂಡಿನಲ್ಲೋ ಸ್ಥಾಪಿಸಲಿ. ಇಲ್ಲಿ ಯೇಸು ಪ್ರತಿಮೆ ಸ್ಥಾಪಿಸುವುದು ದೇಶವಿರೋಧಿ ಚಟುವಟಿಕೆ ಎಂದು ಕಲ್ಲಡ್ಕ ಭಟ್ ಹೇಳಿದ್ದಾರೆ. ಅವರ ಕಾರ್ಯಕರ್ತರು ಹಂಚಿದ ಕರಪತ್ರದಲ್ಲಿ ಪ್ರತಿಮೆ ನಿರ್ಮಾಣವನ್ನು ಮತಾಂತರಕ್ಕೆ ಪಿತೂರಿ ಎಂದು ಕರೆಯಲಾಗಿದೆ.

ಏನಿದು ವಿವಾದ?

ಹಾರೋಬೆಲೆ ಎನ್ನುವುದು ರಾಮನಗರ ಜಿಲ್ಲೆಯ ಪುಟ್ಟ ಗ್ರಾಮ. ಸುಮಾರು 3,500 ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮದಲ್ಲಿ ಬಹುತೇಕರು ಕ್ರಿಶ್ಚಿಯನ್ನರು. ಈ ಹಳ್ಳಿಯಲ್ಲಿ ಕ್ರೈಸ್ತಮತದ ಇತಿಹಾಸ ಹದಿನೇಳನೇ ಶತಮಾನಕ್ಕೆ ಬೊಟ್ಟು ಮಾಡುತ್ತದೆ. ಅಲ್ಲಿಯ ಒಬ್ಬ ಗ್ರಾಮಸ್ಥ ಹೇಳುವಂತೆ ಈ ಹಳ್ಳಿಯಿಂದ 36 ಪಾದ್ರಿಗಳು ಮತ್ತು 112 ನನ್‍ಗಳು (ಕ್ರೈಸ್ತ ಸನ್ಯಾಸಿನಿ) ಆಗಿಹೋಗಿದ್ದಾರೆ. ಇದು ಕ್ರೈಸ್ತಮತದ ದೀರ್ಘ ಪರಂಪರೆಯನ್ನು ತೋರಿಸುತ್ತದೆ ಎಂದು ಅಲ್ಲಿನವರು ಹೇಳುತ್ತಾರೆ.

ಕಪಾಲಬೆಟ್ಟದ ಮೇಲೆ ಕ್ರಿಶ್ಚಿಯನ್ನರ ಆರಾಧನೆ ಪ್ರಾರಂಭವಾಗಿದ್ದು 1906ರಲ್ಲಿ. ಆ ವರ್ಷ ಬೆಟ್ಟದ ಮೇಲೆ ಶಿಲುಬೆ ಮತ್ತು ಶಿಲುಬೆಯ ಮಾರ್ಗವನ್ನು ಸ್ಥಾಪಿಸಲಾಗಿ, ಅದೇ ವರ್ಷ ಗುಡ್‍ಫ್ರೈಡೆಯಂದು ‘ಯೇಸು ಕ್ರಿಸ್ತನ ಪಾದಗಳು ಮತ್ತು ಪುನರುತ್ಥಾನ’ ಎಂಬ ನಾಟಕವನ್ನು ಪ್ರದರ್ಶನ ಮಾಡಲಾಯಿತು. ಅಂದಿನಿಂದ ಇಂದಿನವರಗೆ ಪ್ರತಿವರ್ಷ ಗುಡ್‍ಫ್ರೈಡೆ ಅಂದು ಇದೇ ನಾಟಕವನ್ನು ಆಡಲಾಗುತ್ತಿದೆ. ಸುತ್ತಲ ಗ್ರಾಮಸ್ಥರು ಆ ನಾಟಕವನ್ನು ನೋಡಲು ಬರುತ್ತಾರೆ ಹಾಗೂ ಆ ನಾಟಕ ಆಡದೇ ಇದ್ದರೆ ಏನೋ ಆಗಿಬಿಡುವುದು ಹಾಗೂ ಅಲ್ಲಿಯ ಶಿಲುಬೆಗೆ ಮುನಿ ಅರ್ಪಿಸುವುದು ಅದೃಷ್ಟ ತರುವುದು ಎಂದು ಅಲ್ಲಿಯ ಹಿಂದೂ ಜನರು ನಂಬಿದ್ದಾರೆ. ಆ ದಿನ ಹಳ್ಳಿಯಲ್ಲಿ ಜಾತ್ರೆಯ ವಾತಾವರಣ ಏರ್ಪಡುತ್ತದೆ.

ಇಲ್ಲಿ ಕ್ರೈಸ್ತರು ಮತ್ತು ಹಿಂದೂಗಳು ಸಾಮರಸ್ಯದಿಂದ ಇದ್ದಾರೆ. ಚರ್ಚು ನಡೆಸುವ ಶಾಲೆಯಲ್ಲಿ ಪಕ್ಕದ ಗ್ರಾಮಗಳ ಮಕ್ಕಳು ಓದುತ್ತಾರೆ. ಕಪಾಲಬೆಟ್ಟ ಹಿಂದಿನಿಂದಲೂ ಕ್ರೈಸ್ತರ ಸ್ಥಳವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಟಿವಿ ಮತ್ತು ಪತ್ರಿಕೆಗಳಲ್ಲಿ ಕಪಾಲ ಬೆಟ್ಟವೇ ಮುನೇಶ್ವರ ಬೆಟ್ಟ ಎಂಬ ಬಗ್ಗೆ ವರದಿ ಬಂದದ್ದನ್ನು ನೋಡಿ ಚಕಿತಗೊಂಡ ಗ್ರಾಮಸ್ಥರು ಹೇಳುವುದೇನೆಂದರೆ, ಮುನೇಶ್ವರ ಬೆಟ್ಟವೂ ಇದೆ. ಆದರೆ ಕಪಾಲಬೆಟ್ಟದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಹೊರಬೆಲೆ ಆಣೆಕಟ್ಟಿಗೆ ಹೊಂದಿಕೊಂಡಿದೆ. ಅಲ್ಲಿ ಒಂದು ದೇವಸ್ಥಾನ ಇತ್ತೆಂದೂ, ಆದರೆ 1970ರಲ್ಲಿ ಆಣೆಕಟ್ಟು ನಿರ್ಮಿಸುವಾಗ ಆ ದೇವಸ್ಥಾನ ಮುಳುಗಡೆಯಾಯಿತು ಎನ್ನುತ್ತಾರೆ.

2006 ರಲ್ಲಿ ಅಲ್ಲಿಯ ಕ್ರೈಸ್ತರು, ಶಿಲುಬೆಯನ್ನು ಸ್ಥಾಪಿಸಿ, ನಾಟಕ ಶುರು ಮಾಡಿ ನೂರು ವರ್ಷವಾಗಿದೆ. ಹಾಗಾಗಿ ಇಲ್ಲಿ ದೊಡ್ಡದಾಗಿ ಏನಾದರೂ ಮಾಡಬೇಕು ಎಂದು ನಿರ್ಣಯಿಸಿದರು. ಆಗ ಸ್ಥಳೀಯ ಶಾಸಕರಾಗಿದ್ದ ಡಿಕೆ ಶಿವಕುಮಾರ್ ಸಂಪರ್ಕಿಸಿ ಸಹಾಯ ಕೋರಿದರು. ಅವರು ಏಸುವಿನ ಪ್ರತಿಮೆಯನ್ನು ಸ್ಥಾಪಿಸಬೇಕೆಂದಿದ್ದ ಸ್ಥಳವು ಸರಕಾರಿ ಗೋಮಾಳದ್ದು ಎಂದು ಅರಿತ ಶಿವಕುಮಾರ್, ಅಲ್ಲಿ ಏನಾದರೂ ನಿರ್ಮಿಸಬೇಕಾದರೆ ಆ ಸ್ಥಳವನ್ನು ಕಾನೂನಾತ್ಮಕವಾಗಿ ಪಡೆಯಬೇಕಾಗುತ್ತದೆ. ಹಾಗಾಗಿ ಅದನ್ನು ಪಡೆಯಲು ಅರ್ಜಿ ಹಾಕಿ ಎಂದು ಸಲಹೆ ನೀಡಿದರು. ಅದರನುಗುಣವಾಗಿ, ಅರ್ಜಿ ಹಾಕಲಾಗಿ, ಅದಕ್ಕೆ ಸರಕಾರವು ಒಂದು ಸರ್ವೆ ನಡೆಸಿ, ಅಲ್ಲಿ ಅಗತ್ಯಕ್ಕೆ ತಕ್ಕಷ್ಟು ಗೋಮಾಳ ಇದೆಯೋ ಇಲ್ಲವೋ ಎಂದು ಅಭ್ಯಸಿಸಿ ಹಾಗೂ ಕ್ಯಾಬಿನೆಟ್‍ನಲ್ಲಿ ಪರುಸ್ಕøತಗೊಂಡು ಪ್ರತಿಮೆ ಸ್ಥಾಪಿಸಲು ಆ ಸ್ಥಳವನ್ನು ವರ್ಗಾಂತರ ಮಾಡಬಹುದು ಎಂದು 2018 ರಲ್ಲಿ ಅನುಮತಿ ನೀಡಲಾಯಿತು. ಆದರೆ ಆ ವರ್ಗಾವಣೆಗೆ ಸುಮಾರು ಇಪ್ಪತ್ತೆರಡು ಲಕ್ಷ ಶುಲ್ಕ ವಿಧಿಸಬೇಕಾಗಿತ್ತಾದುದರಿಂದ ಸ್ಥಳೀಯರು ಅಷ್ಟರಲ್ಲಿ ಒಂದು ಟ್ರಸ್ಟ್ (ಹಾರೋಬೆಲೆ ಕಪಾಲ ಬೆಟ್ಟ ಡೆವೆಲಪ್‍ಮೆಂಟ್ ಟ್ರಸ್ಟ್) ರಚಿಸಲಾಗಿತ್ತು. ಈ ಶುಲ್ಕದಿಂದ ವಿನಾಯಿತಿ ನೀಡಬೇಕು ಎಂದು ಇನ್ನೊಂದು ಅರ್ಜಿ ಹಾಕಿದರು. ಅದಕ್ಕೆ 10 ಲಕ್ಷ 85 ಸಾವಿರ ಕಟ್ಟಲೇಬೇಕೆಂದು ಜಿಲ್ಲಾಧಿಕಾರಿಯಿಂದ ಆದೇಶ ಬಂತು. ಆಗ ಟ್ರಸ್ಟಿನ ಜನರು ಡಿಕೆ ಶಿವಕುಮಾರ್ ಬಳಿ ಮತ್ತೆ ಸಹಾಯ ಯಾಚಿಸಿದ್ದಾರೆ. ಸಹಾಯ ಮಾಡುವೆ ಎಂದು ಶಿವಕುಮಾರ್ ಒಪ್ಪಿಕೊಂಡಿದ್ದರು ಎಂದು ಹೇಳಲಾಗುತ್ತಿದ್ದು, ಆದರೆ ಅಷ್ಟರಲ್ಲಿ ಅವರ ಬಂಧನವಾಯಿತು. ಹಾಗಾಗಿ ಟ್ರಸ್ಟಿನವರು ದೇಣಿಗೆ ಎತ್ತಿ ತಾವೇ ದುಡ್ಡನ್ನು ಹೊಂದಿಸಿದ್ದಾರೆ. ಡಿಕೆ ಶಿವಕುಮಾರ ಬಿಡುಗಡೆಯಾದ ನಂತರ ತಮ್ಮ ಕೃತಜ್ಞನೆಯನ್ನು ಸಲ್ಲಿಸಲು ಟ್ರಸ್ಟಿನವರು ಹೋಗಿದ್ದಾರೆ. ಆಗ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುವೆ ಹಾಗೂ ಅವರಿಗೆ ಧನಸಹಾಯ ಮಾಡುವೆ ಎಂದು ಶಿವಕುಮಾರ್ ಹೇಳಿದಾಗ, ಪ್ರತಿಮೆಯ ಶಂಕುಸ್ಥಾಪನೆಗೆ ಟ್ರಸ್ಟಿನವರು ಆಹ್ವಾನಿಸಲಾಗಿ, ಶಂಕುಸ್ಥಾಪನೆಯ ದಿನ ಡಿಕೆ ಶಿವಕುಮಾರ್ ಟ್ರಸ್ಟಿಗೆ ಧನಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಇದು ಟ್ರಸ್ಟ್ ಮತ್ತು ಡಿಕೆ ಶಿವಕುಮಾರ ಅವರ ಸಂಬಂಧ ಹಾಗೂ ಜಾಗೆಯ ಹಸ್ತಾಂತರದ ಪ್ರಕ್ರಿಯೆ.

ಗೋಮಾಳ ಜಮೀನಿನ ಮೇಲೆ ನಿರ್ಮಾಣ ಎಂದು ಬಿಜೆಪಿ ಆರೋಪ

ಹಾರೋಬೆಲೆ ಕಪಾಲ ಬೆಟ್ಟ ಟ್ರಸ್ಟ್‍ಗೆ ಕಾನೂನುಬಾಹಿರವಾಗಿ ಗೋಮಾಳ ಜಮೀನನ್ನು ನೀಡಲಾಗಿದೆ ಹಾಗೂ ಯೇಸು ಪ್ರತಿಮೆ ಆ ಕಾರಣಕ್ಕಾಗಿ ನಿರ್ಮಿಸಬಾರದು ಎಂದು ಬಿಜೆಪಿ ಆರೋಪಿಸಿದೆ. ಅಲ್ಲಿಯ 1,828 ಜಾನುವಾರುಗಳಿಗೆ 548 ಎಕರೆ ಜಮೀನು ಗೋಮಾಳಕ್ಕೆ ಮೀಸಲಿಡಬೇಕಾಗಿತ್ತು ಆದರೆ ಅಲ್ಲಿರುವುದು ಕೇವಲ 209 ಎಕರೆ ಎಂದು ಬಿಜೆಪಿ ಹೇಳಿದೆ. ಸರಕಾರದ ಆದೇಶದಲ್ಲಿ ಸರ್ವೇ ಸಂಖ್ಯೆ 283 ಅನುಗುಣವಾಗಿ ಇರುವ 209 ಎಕರೆ ಜಮೀನಿನೊಂದಿಗೆ ಅದರ ಹೊರತಾಗಿ ಹಾರೋಬೆಲೆ ಗ್ರಾಮದ ಸುತ್ತ ಒಟ್ಟು 1,219 ಎಕರೆ ಜಮೀನು ಗೋಮಾಳಕ್ಕೆ ಮೀಸಲಿಡಲಾಗಿದೆ ಎಂದಿದೆ. ಇದರೊಂದಿಗೆ ಕಪಾಲಬೆಟ್ಟದಲ್ಲಿ ಟ್ರಸ್ಟಿನವರು ಅಕ್ರಮವಾಗಿ ರಸ್ತೆ ನಿರ್ಮಿಸಿದ್ದಾರೆ ಎಂತಲೂ ಆರೋಪಿಸಿದ್ದಾರೆ. ಈ ಬೆಟ್ಟ ಕಾವೇರಿ 5ನೇ ಹಂತಕ್ಕೆ ಅತೀ ಎತ್ತರದ ಪ್ರದೇಶವಾಗಿದೆ ಹಾಗಾಗಿ ಅಲ್ಲಿ ಇಲಾಖೆಯವರು 2017-18ರಲ್ಲಿ ಪಂಪ್‍ಹೌಸ್ ನಿರ್ಮಿಸಿದ್ದಾರೆ. ಆ ಪಂಪ್‍ಹೌಸ್ ನಿರ್ಮಾಣಕ್ಕಾಗಿಯೇ ರಸ್ತೆ ಮತ್ತು ವಿದ್ಯುತ್ ಸ್ಥಾಪಿಸಲಾಗಿದೆ.

ಇರಲಿ, ಈಗ ಅಲ್ಲಿ ಇರುವುದೇನು?

ಟ್ರಸ್ಟಿನವರು ಶಂಕುಸ್ಥಾಪನೆ ಮಾಡಿ, ಹತ್ತಡಿಯ ಏಸು ಪ್ರತಿಮೆಯನ್ನು ಅಲ್ಲಿ ಸ್ಥಾಪಿಸಿದ್ದಾರೆ. ಈಗ ದೇಣಿಗೆ ಎತ್ತಿ ಹಣ ಸಂಗ್ರಹಿಸಿ ದೊಡ್ಡ ಪ್ರತಿಮೆ ನಿರ್ಮಿಸಬೇಕೆನ್ನುವುದು ಅವರ ಮಹತ್ವಾಕಾಂಕ್ಷೆ. ಅವರ ನೂರಡಿ ಎತ್ತರದ ಪ್ರತಿಮೆ ನಿರ್ಮಿಸಲಾಗುವುದು, ಅಥವಾ ಎಷ್ಟು ದಿನಗಳಲ್ಲಿ ಅದರ ನಿರ್ಮಾಣ ಶುರುವಾಗುವುದು ಎನ್ನುವುದಕ್ಕೆ ಟ್ರಸ್ಟಿನವರ ಬಳಿಯೇ ಸ್ಪಷ್ಟ ಉತ್ತರಗಳಿಲ್ಲ.

ಹಾಗಿದ್ದರೆ ಏಕೀ ವಿವಾದ? ನಿಜವಾಗಿಯೂ ಏನಾದರೂ ವಿವಾದವಿದೆಯೇ?

ಸುಮಾರು ನೂರು ವರ್ಷಗಳಿಂದ ಆಚರಿಸುತ್ತಿರುವ ಚರ್ಚಿನ ಆಚರಣೆಗಳಲ್ಲಿ ಹಿಂದೂಗಳು ಭಾಗವಹಿಸುತ್ತ ಬಂದಿದ್ದು, ಕ್ರಿಶ್ಚಿಯನ್ನರ ಸಂಖ್ಯೆಯೂ ಅತ್ಯಂತ ಕಡಿಮೆ ಇದ್ದು ಗಲಭೆ, ವಿವಾದ ಆಗುವ ಅವಕಾಶವೇ ಇಲ್ಲಿ ಕಾಣುತ್ತಿಲ್ಲ ಹಾಗೂ ಸಂಘಪರಿವಾರದ ಈ ಹೋರಾಟ ಡಿಕೆ ಶಿವಕುಮಾರ್ ಅವರ ವಿರುದ್ಧವೂ ಅಲ್ಲ ಎನ್ನುವುದೂ ಸ್ಪಷ್ಟ. ಕಲ್ಲಡ್ಕ ಭಟ್ ಅವರ ಆರೋಪಗಳ ಬಗ್ಗೆ ಶಿವಕುಮಾರ್ ಬಳಿ ಕೇಳಿದಾಗ ಅವರಿಗೆ ಕಲ್ಲಡ್ಕ ಭಟ್ ಯಾರೂ ಎಂದು ತಿಳಿದಿಲ್ಲವೆಂದೂ, ಯಾರೂ ಬೇಕಾದರೂ ಆ ಸ್ಥಳವನ್ನು ಭೇಟಿ ಮಾಡಬಹುದು ಹಾಗೂ ಪ್ರತಿಮೆ ನಿರ್ಮಿಸುವ ನಿರ್ಣಯ ತನ್ನದಲ್ಲ, ಸ್ಥಳೀಯರದ್ದು ಎಂದು ಹೇಳಿದ್ದಾರೆ.

ಕರ್ನಾಟಕದ ಬಹುತೇಕ ಭಾಗಗಳಲ್ಲಿ ತಮ್ಮ ಉಪಸ್ಥಿತಿಯನ್ನು ಗಟ್ಟಿಗೊಳಿಸಿ, ತಮ್ಮ ಸಿದ್ಧಾಂತವನ್ನು ಹರಿಬಿಟ್ಟಿರುವ ಸಂಘಪರಿವಾರಕ್ಕೆ ಹಳೇ ಮೈಸೂರು ಪ್ರಾಂತ್ಯದಲ್ಲಿ ನೆಲೆಯೂರಲು ಇನ್ನೂ ಸಾಧ್ಯವಾಗಿಲ್ಲ. ಹಾಗಾಗಿ, ಈ ಕೇಸ್ ಅವರಿಗೇ ಎಷ್ಟೇ ದುರ್ಬಲವೆನಿಸಿದರೂ, ಒಕ್ಕಲಿಗರನ್ನು ಹಿಂದೂಗಳ ಹೆಸರಿನಲ್ಲಿ ಧ್ರುವೀಕರಿಸಲು ಒಳ್ಳೆಯ ಅವಕಾಶ ಎಂದು ಕಂಡುಕೊಂಡಿದ್ದಾರೆ. ಈ ಒಂದು ಪ್ರದೇಶ ಮತ್ತು ಈ ಒಂದು ಸಮುದಾಯ ತಮ್ಮ ತೆಕ್ಕೆಗೆ ಬಂದರೆ ಕರ್ನಾಟಕದಲ್ಲಿ ತಮ್ಮನ್ನು ಯಾರೂ ಮೀರಿಸಲಾರರು ಎನ್ನುವುದು ಅವರ ಎಣಿಕೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಈ ಪ್ರಕರಣದಲ್ಲಿ ಯಾವುದೇ ಅವ್ಯವಹಾರ ಕಂಡುಬಂದಿದ್ದರೆ ತನಿಖೆ ಮಾಡಿಸಿ, ನಡೆಯುತ್ತಿರುವ ಕಾಮಗಾರಿಗೆ ಸುಲಭವಾಗಿ ತಡೆಯೊಡ್ಡಬಹುದು. ಅದನ್ನು ಬಿಟ್ಟು ಬಿಜೆಪಿ ಮತ್ತು ಸಂಘಪರಿವಾರ ಜಾಥಾ ಮಾಡುವ, ಆಂದೋಲನ ಕಟ್ಟುವ ಪ್ರಯತ್ನ ನಡೆಸಿದೆ.

ಬಾಬಾಬುಡನ್‍ಗಿರಿಯಲ್ಲೂ ಇದೇ ರೀತಿ ಮಾಡಲಾಗಿತ್ತು. ಬಾಬಾಬುಡನ್‍ರ ಅಸ್ತಿತ್ವ ಅಲ್ಲಗಳೆಯಲಾಗದ್ದರಿಂದ, ನಾಗೇನಹಳ್ಳಿಯ ಹತ್ತಿರವಿರುವ ದರ್ಗಾ ಬಾಬಾಬುಡನ್ ದರ್ಗಾ ಎಂದೂ, ಗಿರಿಯ ಮೇಲಿನ ದರ್ಗಾವನ್ನು ತಮಗೆ ಬಿಟ್ಟುಕೊಡಬೇಕೆಂದೂ ಸಂಘಪರಿವಾರ ಪ್ರತಿಪಾದಿಸಿತ್ತು. ಅದೇ ರೀತಿ ಇಲ್ಲಿಯೂ ಬೇರೊಂದು ಜಾಗವನ್ನು ಮುನೇಶ್ವರ ಬೆಟ್ಟ ಎಂದು ಕರೆದಿರುವುದು, ಸ್ವತಃ ಕಲ್ಲಡ್ಕ ಭಟ್ಟರೇ ದಯಮಾಡಿಸಿರುವುದು ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದಕ್ಕೆ ಸೂಚನೆಯಾಗಿದೆ.

ಬಾಬಾಬುಡನ್‍ಗಿರಿ ಪರಿಸರದಂತೆಯೇ ಇಲ್ಲಿಯೂ ಸ್ಥಳೀಯ ಜನರು ಅತ್ಯಂತ ಸೌಹಾರ್ದದಿಂದ ಬದುಕುತ್ತಿದ್ದಾರೆ. ಆದರೆ ದೂರದಿಂದ ಜನರನ್ನು ತಂದು ನಂತರ ಸ್ಥಳೀಯರ ಮನದಲ್ಲೂ ಸಂಶಯ ಹಾಗೂ ವಿಷ ಬಿತ್ತುವುದರಲ್ಲಿ ಸಂಶಯವಿಲ್ಲ ಎನಿಸುತ್ತದೆ.

ದೇಶಾದ್ಯಂತ ಅಯೋಧ್ಯಾ ವಿವಾದವನ್ನು ಹುಟ್ಟುಹಾಕುವ ಸಂಘಪರಿವಾರದ ಪ್ರಯತ್ನಕ್ಕೆ ಇಂತಹ ನೂರಾರು ಬೆಟ್ಟಗಳು ದೊರೆಯುವುದರಿಂದ ಅವರ ಕೆಲಸವೂ ಸಲೀಸು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...