Homeಮುಖಪುಟಸಿಎಎ ಪರ ರ್‍ಯಾಲಿಯಲ್ಲಿ ಹಿಂದು ಕಾರ್ಯಕರ್ತರ ಹತ್ಯೆಗೆ ಸಂಚು ಆರೋಪದಲ್ಲಿ 6 ಜನರ ಬಂಧನ

ಸಿಎಎ ಪರ ರ್‍ಯಾಲಿಯಲ್ಲಿ ಹಿಂದು ಕಾರ್ಯಕರ್ತರ ಹತ್ಯೆಗೆ ಸಂಚು ಆರೋಪದಲ್ಲಿ 6 ಜನರ ಬಂಧನ

- Advertisement -
- Advertisement -

ಸಿಎಎ ಪರ ರ್‍ಯಾಲಿ ನಡೆಸಿದ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ವರುಣ್ ಭೂಪಾಲಂ ಮೇಲೆ ಕೊಲೆಯತ್ನ ಮತ್ತು  ಹಿಂದೂಪರ ಕಾರ್ಯಕರ್ತರನ್ನು ಹತ್ಯೆಗೈಯ್ಯುವ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಆರು ಜನರನ್ನು ಬಂಧಿಸಲಾಗಿದ್ದು ಅವರು ಎಸ್‌ಡಿಪಿಐ ಕಾರ್ಯಕರ್ತರು ಎಂದು ಕಮಿಷನರ್‌ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸಿಎಎ ಪರ ರ್‍ಯಾಲಿಯಲ್ಲಿಯೇ ಎಸ್‌ಡಿಪಿಐ ಕಾರ್ಯಕರ್ತರು ಹಿಂದೂ ನಾಯಕರನ್ನು ಮುಖ್ಯವಾಗಿ ಸಂಸದ ತೇಜಸ್ವಿ ಸೂರ್ಯ, ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆಯವರನ್ನು ಕೊಲ್ಲಲು ಯೋಜಿಸಿದ್ದರು. ಆದರೆ ರ್‍ಯಾಲಿಯಲ್ಲಿ ಭಾರೀ ಪೊಲೀಸ್ ಉಪಸ್ಥಿತಿಯಿಂದ ಅದು ಸಾಧ್ಯವಾಗಲಿಲ್ಲ. ಆದರೆ ಅದೇ ಕೋಪದಲ್ಲಿ ರ್‍ಯಾಲಿ ಮುಗಿಸಿ ಮನೆಗೆ ಹೊರಟಿದ್ದ ವರುಣ್ ಭೂಪಾಲಂ ಮೇಲೆ ಹಲ್ಲೆ ನಡೆಸಿದರು ಎಂದು ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಬಂಧಿತರನ್ನು ಮೊಹಮ್ಮದ್ ಇರ್ಫಾನ್(33), ಸನಾವುಲ್ಲಾ ಶೆರಿಫ್ (28), ಸೈಯದ್ ಸಿದ್ದೀಕ್, ಸಯ್ಯದ್ ಅಕ್ಬರ್ (30), ಅಕ್ಬರ್ ಬಾಷಾ(27), ಸಾದಿಕ್ ಉಲ್ ಅಮೀನ್ (39) ಎಂದು ಗುರುತಿಸಲಾಗಿದೆ.

ಈ ಆರು ಜನರು ಸಹ ಡಿಸೆಂಬರ್ 22 ರಂದು ಟೌನ್‌ಹಾಲ್‌ ಮುಂದೆ ನಡೆದ ಸಿಎಎ ಪರ ಪ್ರತಿಭಟನೆಗೆ ತೆರಳಿದ್ದರು. ಕೇಸರಿ ಬಟ್ಟೆಗಳನ್ನು ಧರಿಸಿದ್ದ ಇವರು ಕಲ್ಲು ಎಸೆದ ಅವ್ಯವಸ್ಥೆ ಸೃಷ್ಟಿಸಿ ಗಲಭೆ ಎದ್ದಾಗ ಹಿಂದೂ ಮುಖಂಡರನ್ನು ಕೊಲ್ಲುವುದಾಗಿ ಸಂಚು ರೂಪಿಸಿದ್ದರು. ಆಧರೆ ಭಾರೀ ಭದ್ರತೆಯ ಕಾರಣಕ್ಕಾಗಿ ಕಲ್ಲು ಎಸೆಯಲು ಸಾಧ್ಯವಾಗಿಲ್ಲ. ಹಾಗಾಗಿ ಸಂಚು ವಿಫಲಗೊಂಡಿದೆ ಎಂದು ಭಾಸ್ಕರ್‌ ರಾವ್‌ ತಿಳಿಸಿದ್ದಾರೆ.

ಅವರ ಯೋಜನೆ ವಿಫಲವಾದ ಕಾರಣ, ರ್‍ಯಾಲಿಯಲ್ಲಿ ಭಾಗವಹಿಸಿದ ಯಾವುದೇ ಹಿಂದೂ ಕಾರ್ಯಕರ್ತರನ್ನು ಕೊಲ್ಲಲು ಗ್ಯಾಂಗ್ ಬಯಸಿದೆ. ಆಗ ಬೌನ್ಸ್ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವರುಣ್ ಭೂಪಾಲಂ ಅವರನ್ನು ಹಿಂಬಾಲಿಸಿದರು. ಅವರು ಕಲಾಸಿಪಾಳ್ಯದ ಬಳಿ ಆತನ ಮೇಲೆ ಹಲ್ಲೆ ನಡೆದು ಬಿಡದಿ ಕಡೆಗೆ ಓಡಿಹೋದರು. ನಂತರ ಅವರಲ್ಲಿ ಇಬ್ಬರು ಆ ವ್ಯಕ್ತಿ ನಿಜವಾಗಿಯೂ ಸತ್ತಿದ್ದಾನೆಯೇ ಎಂದು ನೋಡಲು ಹಿಂದಿರುಗಿ ಬಂದಿದ್ದರು. ಆದರೆ ಆ ಹೊತ್ತಿಗೆ ವರುಣ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಮತ್ತು ನಂತರ ಆತ ಬದುಕುಳಿದ ಎಂದು ರಾವ್ ಹೇಳಿದರು.

ನಾವು ಟೌನ್ ಹಾಲ್‌ ದಾರಿಯಲ್ಲಿ 700 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು ಅಪರಾಧಿಗಳನ್ನು ಪತ್ತೆ ಹಚ್ಚಲು ದೃಶ್ಯಾವಳಿಗಳನ್ನು ವಿಶ್ಲೇಷಿಸಿದ್ದೇವೆ” ಎಂದು ರಾವ್ ಹೇಳಿದರು.

“ಎಲ್ಲಾ ಆರೋಪಿಗಳು ಎಸ್‌ಡಿಪಿಐ ಜೊತೆ ಸಂಬಂಧ ಹೊಂದಿದ್ದಾರೆ ಮತ್ತು ಅವರಿಗೆ ಪ್ರತಿ ತಿಂಗಳು ರೂ. 10,000 ಬರುತ್ತಿತ್ತು. ಅವರಿಗೆ ಯಾರು ಹಣಕಾಸು ಒದಗಿಸಿದ್ದಾರೆ ಎಂಬ ಬಗ್ಗೆ ನಾವು ಈಗ ತನಿಖೆ ನಡೆಸುತ್ತೇವೆ. ಈ ಪ್ರಕರಣವನ್ನು ಕೇಂದ್ರ ಅಪರಾಧ ಶಾಖೆಯ ಆಂಟಿ ಟೆರರ್ ಸ್ಕ್ವಾಡ್ ತನಿಖೆ ನಡೆಸಲಿದೆ” ಎಂದು ಅವರು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...