ಎಷ್ಟು ಜನ ಬಡವರು ನಿಮ್ಮ ಮನೆ ಹತ್ರ ಬಂದಿದ್ದಾರೆ ಸದಾನಂದಗೌಡರೇ? ಎಷ್ಟು ಜನರ ನೋವಿಗೆ ನೀವು ಸ್ಪಂದಿಸಿದ್ದೀರಿ? ಬನ್ನಿ ನಮ್ಮ ಮನೆ ಹತ್ತಿರ ನೋಡಿ ಎಷ್ಟು ಜನ ಹಸಿದುಕೊಂಡು ಬರುತ್ತಾರೆ ಅಂತ. ಇಲ್ಲ ನಿಮ್ಮ ಕೇಂದ್ರದ ಗೂಢಚಾರರನ್ನು ಕಳಿಸಿ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನವೀಯತೆ ಎಂಬುದು ಸದಾನಂದಗೌಡರಿಗೆ ಎಲ್ಲಿ ಗೊತ್ತಿದೆ. ನಮ್ಮಲ್ಲಿ ನೂರು ದಿನದ ನಾಟಕ, ಇನ್ನೂರು ದಿನದ ನಾಟಕ ಎಂದು ಹೇಳುತ್ತಾರೆ. ಹೌದು ನೀವು ಬಂದಿರುವುದೇ ನಾಟಕ ಆಡುವ ಕಡೆಯಿಂದ. ಕಲಾವಿದರ ಬಗ್ಗೆ ನಾನು ಅಗೌರವ ತೋರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ನಾನು ವಿಕ್ಸು, ಗ್ಲಿಸರಿನ್ ಹಚ್ಚಿಕೊಂಡು ಅಳುವುದಿಲ್ಲ. ಬಡವರ ಕಣ್ಣೀರು ನೋಡಿದೊಡನೆಯೇ ನನಗೂ ಕಣ್ಣೀರು ಸುರಿಸುತ್ತೇನೆ. ನಮ್ಮ ಹೃದಯದ ನೋವನ್ನು ಅಳುವಿನ ಮೂಲಕ ಹೊರಹಾಕುತ್ತೇನೆ. ಇದು ಡ್ರಾಮ ಕಣ್ಣೀರು ಅಲ್ಲ. ನಮ್ಮದು ಭಾವನಾತ್ಮಕ ಜೀವನ. ಅದು ನಮ್ಮ ಕುಟುಂಬದಿಂದಲೇ ಬಂದಿರುವ ರೂಢಿ. ಅದನ್ನು ನಮ್ಮ ಕುಟುಂಬದ ಪೆಟೇಂಟ್ ಎಂದೇ ಹೇಳುತ್ತೇನೆ ಎಂದು ಭಾವುಕರಾಗಿ ಎಚ್‌ಡಿಕೆ ಮಾತನಾಡಿದ್ದಾರೆ.
ಸದಾನಂದಗೌಡರ ಥರ ಎಲ್ಲದಕ್ಕೂ ನಾನು ಹಲ್ಲುಬಿಟ್ಟುಕೊಂಡು ನಿಂತುಕೊಳ್ಳುವವನಲ್ಲ ನಾನು. ಅವರಿಂದ ಪಾಠ ಕಲಿಯಬೇಕಾಗಿಲ್ಲ. ಪ್ರವಾಹದಲ್ಲಿ 22 ಜಿಲ್ಲೆಗಳು ಸಂಕಷ್ಟದಿಂದ ಇವೆ. ದೇವೇಗೌಡರ, ಕುಮಾರಸ್ವಾಮಿಯವರ ಕಣ್ಣೀರಿನಿಂದ ಇನ್ನುಳಿದ ಜಿಲ್ಲೆಗಳು ಮುಳಗದಿರಲಿ ಎಂದು ಅಪಹಾಸ್ಯ ಮಾಡಿದ್ದಾರೆ. ಅವರು ಎಷ್ಟು ಕಡೆ ಹೋಗಿ ಜನರ ಕಷ್ಟ ಕೇಳಿದ್ದಾರೆ? ನಿಮ್ಮ ಯೋಗ್ಯತೆಗೆ
ದೀಪಾವಳಿ ಹಬ್ಬ, ಗಣೇಶನ ಹಬ್ಬ ಮಾಡದೇ ಪರದಾಡುತ್ತಿದ್ದಾರೆ. ನಾನು ಹೋಗಿದ್ದೇನೆ. ಲಿಂಗಾಯಿತ ಸಮಾಜದ ಒಂದೂವರೆ ತಿಂಗಳ ಮಗು, ವಿಧವೆ ತಾಯಿ ಸಂಕಷ್ಟದಿಂದ ಇದ್ದರು. ನಾನು 2 ಲಕ್ಷ ದುಡ್ಡು ಕೊಟ್ಟು ಬಂದಿದ್ದೇನೆ.
ಸದಾನಂದಗೌಡರು ಈ ಮೊದಲು “ಗ್ಲಿಸರಿನ್ ಮತ್ತು ವಿಕ್ಸ್ ಹಂಚಿಕೊಂಡು ಮಾಜಿ ಪ್ರಧಾನಿ ಮತ್ತು ಕುಮಾರಸ್ವಾಮಿ. ಇದು ಅವರ ಕುಟುಂಬದ ಹುಟ್ಟು ಗುಣ. ಇ ಬಗ್ಗೆ ಅವರ ಜೊತೆ ಇದ್ದ ಜಮೀರ್ ಚೆನ್ನಾಗಿ ಹೇಳಿದ್ದಾರೆ. ಅದು ವಿಕ್ಸ್ ಕಣ್ಣೀರು, ಜನ ಇದನ್ನೆಲ್ಲಾ ನೋಡಿ ನೋಡಿ ಬೇಸತ್ತು ಹೋಗಿದ್ದಾರೆ. ಕಣ್ಣೀರ ಪ್ರವಾಹ ಡೇಂಜರಸ್ ಪ್ರವಾಹ. ಎಷ್ಟು ದಿನ ನಾಟಕ ಮಾಡುತ್ತಾರೆ. ಹಿಂದೆ ನೂರು ದಿನ, ಇನ್ನೂರು ದಿನ ನಾಟಕ ನೋಡುತ್ತಿದ್ದರು. ಈಗ ಅವರ ನಾಟಕ ನಡೆಯುವುದಿಲ್ಲ. ದೇವೇಗೌಡರು ನಂತರ ಕುಮಾರಸ್ವಾಮಿ ಮುಂದೆ ನಿಖಿಲ್ ಕೂಡ ಇದೇ ಮಾಡುತ್ತಾರೆಯೇ?” ಎಂದು ಪ್ರಶ್ನಿಸಿದ್ದರು.


