ಮಂಗಳೂರಿನಲ್ಲಿ ದೊಡ್ಡ ದೊಡ್ಡ ಕೈಗಾಗರಿಕೆಗಳು ಇವೆ. ಆದರೆ ಅಲ್ಲಿ ವರ್ಷದಿಂದ ವರ್ಷಕ್ಕೆ ಉದ್ಯೋಗಗಳು ಇಳಿಯುತ್ತಿವೆ. ಕೈಗಾರಿಗಕೆಗಳು, ಬಂದರು ಮತ್ತು ವಿಮಾನ ನಿಲ್ದಾಣಗಳು ಖಾಸಗೀಕರಕ್ಕೆ ಒಳಗಾಗಿದೆ. ಮಂಗಳೂರು ವಿಮಾನ ನಿಲ್ದಾಣ ಅದಾನಿ ವಶದಲ್ಲಿದೆ, ಅದರ ಬಗ್ಗೆ ನಮ್ಮ ಯುವಜನರು ಮಾತನಾಡಬೇಕಿತ್ತು. ಆದರೆ ಭಾವನಾತ್ಮಕವಾಗಿ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಹೆಸರು ಇಡಬೇಕು ಎಂದು ಹೋರಾಟ ಮಾಡಲಾಗುತ್ತಿದೆ ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ಗುರುವಾರ ಹೇಳಿದರು. ಅದಾನಿ ವಶದಲ್ಲಿರುವ
‘ಸಂಯುಕ್ತ ಹೋರಾಟ-ಕರ್ನಾಟಕ’ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ದಲ್ಲಿ ಗುರುವಾರ ‘ಉದ್ಯೋಗ ಮತ್ತು ಬಜೆಟ್’ ಎಂಬ ವಿಚಾರದ ಬಗ್ಗೆ ಮುನೀರ್ ಕಾಟಿಪಳ್ಳ ಮಾತನಾಡುತ್ತಿದ್ದರು.
“ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡುವುದು ಬಿಟ್ಟು ಉದ್ಯೋಗದ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತಿದೆ. ಇರುವ 80% ಉದ್ಯೋಗಗಳು ಕೂಡಾ ಗುತ್ತಿಗೆ ಆಧಾರದ ಉದ್ಯೋಗಗಳಾಗಿದ್ದು, ಜೊತೆಗೆ ಸ್ಥಳೀಯರಿಗೆ ಉದ್ಯೊಗ ನೀಡುತ್ತಿಲ್ಲ. ಕೈಗಾರಿಕೆಗಳಲ್ಲಿ ಯುನಿಯನ್‌ಗಳ ಶಕ್ತಿ ಕೂಡಾ ಕಡಿಮೆ ಮಾಡಲಾಗಿದೆ. ಹೊಸ ಉದ್ಯೋಗಗಳಾದ ಸ್ವಿಗ್ಗಿ, ಜೊಮೆಟೊ ರೀತಿಯ ಉದ್ಯೋಗಗಳು ಸೃಷ್ಟಿಯಾದರೂ ವೇತನ ತೀರಾ ಕಡಿಮೆ ನೀಡಲಾಗುತ್ತಿದೆ” ಎಂದು ಅವರು ಹೇಳಿದರು.
ದೊಡ್ಡ ಕಂಪೆನಿಗಳು ಮಾಡುವ ಚಿಲ್ಲರೆ ವ್ಯಾಪಾರದಿಂದಾಗಿ ಸ್ವಯಂ ಉದ್ಯೋಗಗಳು ಇಲ್ಲಾದಾಗಿದೆ. ಕಾರ್ಮಿಕ ಸಂಘಗಳು ಕಟ್ಟಲು ಅವಕಾಶವಿಲ್ಲ. ಯುವಜನರ ಇಡೀ ಜೀವನ ಅಭದ್ರತೆಯಲ್ಲಿ ಕಳಯುವಂತೆ ಆಗಿದೆ ಎಂದು ಅವರು ಹೇಳಿದರು.
“ದೊಡ್ಡ ಕಂಪೆನಿಗಳಲ್ಲಿ ಉದ್ಯೋಗ ಎಂಬ ಕಾರಣಕ್ಕೆ ಯುವಜನರಿಗೆ ಮದುವೆಯಾಗುತ್ತಿದೆ ಎಂಬ ಲಾಭವೊಂದನ್ನು ಬಿಟ್ಟು ಬೇರೇನೂ ಆಗುತ್ತಿಲ್ಲ. ಆದರೆ ಅವರ ವೇತನಗಳು 15 ಸಾವಿರ ಕೂಡಾ ಇರುವುದಿಲ್ಲ. ವಿಮಾನ ನಿಲ್ದಾಣ ಮತ್ತು ಬಂದರಿನಲ್ಲಿ ಕೆಲಸ ಮಾಡುವ ಯುವಜನರು ಅಲ್ಲಿ ಕೆಲಸ ಮಾಡಿ ಹೊರಗಡೆ ಕೂಡಾ ಹತ್ತು ಗಂಟೆಯ ವರೆಗೆ ಕೆಲಸ ಮಡುತ್ತಿದ್ದಾರೆ. ಆದರೆ, ಅವರ ಆರೋಗ್ಯದ ಬಗ್ಗೆ ಯಾರು ಹೊಣೆ?” ಎಂದು ಮುನೀರ್ ಕಾಟಿಪಳ್ಳ ಅವರು ಕೇಳಿದರು.
“ಭೂಸ್ವಾಧಿನ ಮಾಡುವಾಗ ಎಸ್‌ಇಝೆಡ್ ಪರವಾಗಿ ಇದ್ದ ಬಜರಂಗದಳ, ಭಾವನಾತ್ಮಕ ವಿಚಾರದಲ್ಲಿ ಮಾತ್ರ ಪ್ರತಿಭಟನೆ ಮಾಡುತ್ತಿದೆ. ಭಾವನಾತ್ಮಕ ವಿಚಾರವಾಗಿ ಪ್ರತಿಭಟನೆ ಮಡುವವರು ಉದ್ಯೊಗದ ಬಗ್ಗೆ ಪ್ರತಿಭಟನೆ ಮಾಡುತ್ತಿಲ್ಲ. ಧರ್ಮ ಎಂಬ ಅಫೀಮನ್ನು ನೀಡಲಾಗಿದೆ. ಉದ್ಯೋಗದ ಬಗ್ಗೆ ಮಾತಾನಾಡದ ಸೂಲಿಬೆಲೆ ಮುಸ್ಲಿಮರ ಹೆಣ್ಣುಗಳನ್ನು ಮದುವೆ ಆಗಿ ಎಂದು ದ್ವೆಷ ಭಾಷಣ ಮಾಡುತ್ತಿದ್ದಾರೆ” ಎಂದು ಹೇಳಿದರು.
“ವಿದೇಶಗಳಲ್ಲಿ ಉದ್ಯೋಗ ನಷ್ಟ ಹೊಂದಿದ ಯುವಕರಿಗೆ ಮರು ಜೀವನ ಕಟ್ಟಿಕೊಳ್ಳಲು ಸರ್ಕಾರ ನೆರವಾಗುತ್ತಿಲ್ಲ. ಕೇರಳದಲ್ಲಿ ಇಂತಹ ಯುವಕರಿಗೆ ಸರ್ಕಾರ ನೆರವು ನೀಡುತ್ತಿದೆ. ಬಜೆಟ್‌ನಲ್ಲಿ ಖಾಸಗಿ ಕಂಪೆನಿಗೆ ಸಾವಿರಾರು ಕೋಟಿ ರೂ. ಸಬ್ಸಿಡಿ ನೀಡುವ ಸರ್ಕಾರ, ಅವರು ಎಷ್ಟು ಖಾಯಂ ಉದ್ಯೋಗ ಎಷ್ಟು ಕೊಡುತ್ತಿದ್ದಾರೆ? ಎಷ್ಟು ವೇತನ ನೀಡುತ್ತಾರೆ ಎಂಬ ಬಗ್ಗೆ ಹೇಳುವುದಿಲ್ಲ” ಎಂದು ಹೇಳಿದರು.
ಸಾರ್ವಜನಿಕ ಆರೋಗ್ಯದ ಬಗ್ಗೆ ಕಾಳಜಿಯಿಲ್ಲದ ಸರ್ಕಾರವನ್ನು ಕಾರ್ಪೋರೇಟ್ ಪರವಾದ ಸರ್ಕಾರ ಎಂದೇ ಹೇಳಬೇಕು: ಜನಪರ ವೈದ್ಯ ಡಾ. ಅನಿಲ್ ಕುಮಾರ್ ಅವುಲಪ್ಪ

ಕಾರ್ಯಕ್ರಮದಲ್ಲಿ ‘ಜನಾರೋಗ್ಯ ಮತ್ತು ಬಜೆಟ್’ ಎಂಬ ವಿಚಾರದ ಬಗ್ಗೆ ಮಾತನಾಡಿದ ಖ್ಯಾತ ಜನಪರ ವೈದ್ಯರಾದ ಡಾ. ಅನಿಲ್ ಕುಮಾರ್ ಅವುಲಪ್ಪ, ಸ್ವಾತಂತ್ಯ್ರ ಬಂದು 78 ವರ್ಷಗಳಾದರೂ ಸಹಜ ಪ್ರಕ್ರಿಯೆಯಾದ ಗರ್ಭದಾರಣೆಯ ಸಮಯದಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
“ಸ್ವಾತಂತ್ರ ನಂತರ ಕೂಡಾ ಕಾಯಿಲೆಗೆ ಬಲಿಯಾಗುವುದು ಹೆಚ್ಚಾಗಿದೆ. 70 ದಶಕಗಳ ಹೊತ್ತಿಗೆ ಸಾಂಕ್ರಮಿಕ ಕಾಯಿಲೆಗೆ ಬಲಿಯಾಗುತ್ತಿದ್ದರೆ, 90ರ ನಂತರ ಸಾಂಕ್ರಾಮಿಕವಲ್ಲದ ಕಾಯಿಲೆಗೆ ಬಲಿಯಾದರು. ಆದರೆ ಈಗ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗೆ ಬಲಿಯಾಗುತ್ತಿದ್ದೇವೆ. ಬ್ರಿಟೀಷರ ಕಾಲದಿಂದಲೂ ಟಿಬಿ ಮುಕ್ತ ಎಂದು ಹೇಳುವ ನಾವು ಈಗಲೂ ಅದನ್ನೆ ಹೇಳುತ್ತಲೆ ಇದ್ದೇವೆ” ಎಂದು ಹೇಳಿದರು.
“ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟಾಂಡರ್ಡ್ ಪ್ರಕಾರ ಆರೋಗ್ಯಕ್ಕೆ ಬಜೆಟ್‌ನ 8% ಮೀಸಲಿಡಬೇಕಿದೆ. ಆದರೆ ನಮ್ಮ ಸರ್ಕಾರ ಕೇವಲ 4% ಅಷ್ಟೆ ಇದೆ. ರಾಜ್ಯದ ಜಿಡಿಪಿಯಲ್ಲಿ 2.5%ರಷ್ಟು ಆರೋಗ್ಯಕ್ಕೆ ಖರ್ಚು ಮಾಡಬೇಕು ಎಂದು ಅದೇ ನಿಯಮ ಹೇಳುತ್ತದೆ. ಆದರೆ ರಾಜ್ಯ ಸರ್ಕಾರ ಯಾವತ್ತೂ ಕೂಡಾ 0.6% ಕ್ಕಿ ಹೆಚ್ಚು ಖರ್ಚು ಮಾಡಿಲ್ಲ. ಕೇಂದ್ರೆ ಸರ್ಕಾರ ತನ್ನ ಭಾರತದ ಜಿಡಿಪಿಯಲ್ಲಿ 1.97% ಮಾತ್ರ ಖರ್ಚು ಮಾಡುತ್ತಿದೆ” ಎಂದು ಅವರು ಹೇಳಿದರು. ಅದಾನಿ ವಶದಲ್ಲಿರುವ
“ಮೂಲಭೂತವಾಗಿ ಜನರ ಆರೋಗ್ಯಕ್ಕಾಗಿ ವೈದ್ಯಕೀಯ ಸಂಸ್ಥೆಗಳು ಬೇಕಾಗುತ್ತದೆ. ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಗುಲ್ಬರ್ಗಾ ವಿಭಾಗಗಳಿವೆ. 2022ರ ವರೆಗೆ ರಾಜ್ಯದ ಗುಲ್ಬರ್ಗಾ ಹೊರತು ಪಡಿಸಿ ರಾಜ್ಯದ ಇತರ ಕಡೆಗಳಲ್ಲಿ ಹೆಚ್ಚೆ ಸಂಸ್ಥೆಗಳು ಇವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪ ಆರೋಗ್ಯ ಕೇಂದ್ರಗಳು ಹೆಚ್ಚಿದ್ದರೂ, ಸಮುದಾಯ ಕೇಂದ್ರಗಳು ರಾಜ್ಯದಾದ್ಯಂತ ಕಡಿಮೆಯಿವೆ. ಅದಾಗ್ಯೂ, ಈ ಎಲ್ಲಾ ಸಂಸ್ಥೆಗಳಿಗೆ ಬೇಕಾದ ಮಾನವ ಸಂಪನ್ಮೂಲಗಳು ಕಡಿಮೆಯಿದೆ.” ಎಂದು ಅವರು ಹೇಳಿದರು.
“ಹುದ್ದೆಗಳು ಖಾಲಿಯಿದ್ದರೂ ಅದಕ್ಕೆ ಸರ್ಕಾರ ನೇಮಿಸುತ್ತಿಲ್ಲ. ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಬಜೆಟ್‌ನಲ್ಲಿ ಯಾವುದೇ ರೀತಿಯ ಘೋಷಣೆಗಳನ್ನು ಮಾಡಿಲ್ಲ. ಸಾರ್ವಜನಿಕ ವೈದ್ಯಕೀಯ ಸಂಸ್ಥೆಗಳ ಹುದ್ದೆಗಳನ್ನು ಭರ್ತಿ ಮಾಡಲು ಬೇಕಾಗುವ ಅನುದಾನ ಘೋಷಿಸದ ಯಾವುದೇ ಸರ್ಕಾರ ಕಾರ್ಪೋರೇಟ್ ಪರವಾದ ಸರ್ಕಾರ ಎಂದೇ ಹೇಳಬೇಕಿದೆ” ಎಂದು ಅವರು ಹೇಳಿದರು.


