Homeಅಂತರಾಷ್ಟ್ರೀಯದಾವೂದ್, ಹಫೀಜ್ ಹೆಸರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದ ಪಾಕ್!

ದಾವೂದ್, ಹಫೀಜ್ ಹೆಸರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದ ಪಾಕ್!

1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಇಬ್ರಾಹಿಂ ʼಭಯೋತ್ಪಾದಕʼ ಎಂದು ಪಾಕಿಸ್ತಾನ ಒಪ್ಪಿಕೊಂಡಿರುವುದು ಇದೇ ಮೊದಲು.

- Advertisement -

ಕಣ್ಮರೆಯಾಗಿರುವ ದರೋಡೆಕೋರ ದಾವೂದ್ ಇಬ್ರಾಹಿಂ, ಲಷ್ಕರ್-ಎ-ತೈಬಾ ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ಇನ್ನೂ ಕೆಲವು ತಾಲಿಬಾನ್ ನಾಯಕರ ಹೆಸರನ್ನು ಪಾಕಿಸ್ತಾನವು ಭಯೋತ್ಪಾದಕರ ಪಟ್ಟಿಗೆ ಸೇರಿಸಿ, ಆಸ್ತಿ ಜಪ್ತಿ, ಶಸ್ತ್ರಾಸ್ತ್ರ ನಿರ್ಬಂಧ ಮತ್ತು ಪ್ರಯಾಣ ನಿಷೇಧವನ್ನು ವಿಧಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ.

1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಇಬ್ರಾಹಿಂ ʼಭಯೋತ್ಪಾದಕʼ ಎಂದು ಪಾಕಿಸ್ತಾನ ಒಪ್ಪಿಕೊಂಡಿರುವುದು ಇದೇ ಮೊದಲು.

ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಗೆ ಸಂಬಂಧಿಸಿದಂತೆ ತನ್ನ ಬದ್ಧತೆಯನ್ನು ತೋರಿಸುವ ಪ್ರಯತ್ನದಲ್ಲಿ ಪಾಕಿಸ್ತಾನ ಈ ನಿರ್ಧಾರ ತೆಗೆದುಕೊಂಡಿದೆ.

ತನ್ನ ಹೆಸರನ್ನು “ಕಪ್ಪು ಪಟ್ಟಿ” ಗೆ ಸೇರಿಸುವುದನ್ನು ತಡೆಯಲು 27 ಅಂಶಗಳ ಕ್ರಿಯಾ ಯೋಜನೆಯೊಂದಿಗೆ ಸಂಪೂರ್ಣ ಅನುಸರಣೆ ಸಾಧಿಸಲು ಪಾಕ್ ಫೆಬ್ರವರಿಯಲ್ಲಿ ಸಮಯವನ್ನು ನೀಡಿತ್ತು.

ಈ ವಿಷಯದ ಬಗ್ಗೆ ಎರಡು ಅಧಿಸೂಚನೆಗಳನ್ನು ಆಗಸ್ಟ್ 18 ರಂದು ಪಾಕಿಸ್ತಾನ ಸರ್ಕಾರ ಹೊರಡಿಸಿದೆ. ಇದು, ನಿಷೇಧಿತ ಗುಂಪು ಮತ್ತು ವ್ಯಕ್ತಿಗಳ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಆದೇಶಿಸಿವೆ. ಹಣಕಾಸು ಸಂಸ್ಥೆಗಳ ಮೂಲಕ ಹಣದ ವರ್ಗಾವಣೆ ವ್ಯವಹಾರವನ್ನು ನಿಷೇಧಿಸಲಾಗಿದೆ ಎಂದು ದಿ ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ.

ಜೈಶ್-ಎ-ಮೊಹಮ್ಮದ್‌ ಸಂಘಟನೆಯ ಮೊಹಮ್ಮದ್ ಮಸೂದ್ ಅಜರ್, ಮುಲ್ಲಾ ಫಜ್ಲುಲ್ಲಾ ಮತ್ತು ಜಾಕಿಯೂರ್ ರೆಹಮಾನ್ ಲಖ್ವಿ ಸೇರಿದಂತೆ ಇತರರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಆದೇಶ ಎಲ್‌ಇಟಿ, ಜೈಶ್-ಎ-ಮೊಹಮ್ಮದ್ ಸೇರಿದಂತೆ ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಿದೆ.

ಇದರ ನಡುವೆ ಪಾಕಿಸ್ತಾನವು ಇಬ್ರಾಹಿಂನ ಕೊನೆಯ ಭೇಟಿಯ ಕೆಲವು ವಿಳಾಸಗಳನ್ನು ಪಟ್ಟಿ ಮಾಡಿ, ಐದು ಪಾಸ್‌ಪೋರ್ಟ್‌ಗಳನ್ನು ಹೊಂದಿದೆ ಎಂದು ಉಲ್ಲೇಖಿಸಿದೆ.

ಆದಾಗ್ಯೂ, ಅವೆಲ್ಲವನ್ನೂ ದುರುಪಯೋಗದ ಅಡಿಯಲ್ಲಿ ಟ್ಯಾಗ್ ಮಾಡಿ, ಇಬ್ರಾಹಿಂನ ವಿಳಾಸ ಮತ್ತು ಆತನ ಇತರ ಆಸ್ತಿಗಳನ್ನು ಕರಾಚಿಯಲ್ಲಿ ಪಟ್ಟಿ ಮಾಡಲಾಗಿದೆ.

ವಿಶ್ವಸಂಸ್ಥೆಯು ಮೇ ತಿಂಗಳಲ್ಲಿ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು. ಇದು, ಪ್ರಯಾಣ ನಿಷೇಧ, ಆಸ್ತಿಗಳ ಜಪ್ತಿ ಮತ್ತು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಬಂಧವನ್ನು ಹೇರಿತ್ತು.

ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಸದಸ್ಯತ್ವ ಹೊಂದಿರುವ ಭಾರತವು, ಆರ್ಥಿಕ ಅಪರಾಧಗಳನ್ನು ತಡೆಯುವಲ್ಲಿ ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಾಕಿಸ್ತಾನಕ್ಕೆ ಪದೇ ಪದೇ ಹೇಳಿತ್ತು.


ಇದನ್ನೂ ಓದಿ: ಅಚ್ಛೇ ದಿನ್ ಮರೆಯಿರಿ: ಭಯೋತ್ಪಾದನೆ, ಪಾಕ್, ಮುಸ್ಲಿಮರ ಬಗ್ಗೆ ಭೀತರಾಗಿರಿ.. – ಮೋದಿಯ ಹೊಸ ಮಂತ್ರ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial