Homeಅಂಕಣಗಳುಅಚ್ಛೇ ದಿನ್ ಮರೆಯಿರಿ: ಭಯೋತ್ಪಾದನೆ, ಪಾಕ್, ಮುಸ್ಲಿಮರ ಬಗ್ಗೆ ಭೀತರಾಗಿರಿ.. - ಮೋದಿಯ ಹೊಸ ಮಂತ್ರ

ಅಚ್ಛೇ ದಿನ್ ಮರೆಯಿರಿ: ಭಯೋತ್ಪಾದನೆ, ಪಾಕ್, ಮುಸ್ಲಿಮರ ಬಗ್ಗೆ ಭೀತರಾಗಿರಿ.. – ಮೋದಿಯ ಹೊಸ ಮಂತ್ರ

- Advertisement -
- Advertisement -

ಮೋದಿ ತನ್ನ ಸಾಧನೆ ಇಟ್ಟುಕೊಂಡು ಮತದಾರರ ಬಳಿ ಹೋಗುತ್ತಿಲ್ಲ. ಬದಲಿಗೆ ಗಡಿಯಲ್ಲಿನ ಭಯೋತ್ಪಾದನೆ ಮತ್ತು ದೇಶದೊಳಗಿನ ಮುಸ್ಲಿಮರ ‘ಗುಮ್ಮ’ ತೋರಿಸುತ್ತಿದ್ದಾರೆ. ಅವರ ಪ್ರಕಾರ ಇದು ನಿಜವಾದ ಯುದ್ಧವಂತೆ……

                                                -ಶೇಖರ್ ಗುಪ್ತಾ

ಅಧಿಕಾರದಲ್ಲಿರುವ ವ್ಯಕ್ತಿ ಮರು ಆಯ್ಕೆಗಾಗಿ ಮತದಾರರನ್ನು ಸಹಜವಾಗಿ ಕೇಳಬೇಕಾದ ಮುಖ್ಯ ಪ್ರಶ್ನೆ: ‘ನನಗೆ ವೋಟ್ ಮಾಡಿ ಗೆಲ್ಲಿಸಿದ ಸಂದರ್ಭಕ್ಕಿಂತ ಈಗ ನೀವು ಇನ್ನೂ ಹೆಚ್ಚಿನ ಸೌಖ್ಯದಲ್ಲಿದ್ದೀರಿ ತಾನೇ?’… ಆದರೆ ಮೋದಿಯ ವರಸೆ ಹೀಗಿದೆ: “ನನ್ನನ್ನು ಗೆಲ್ಲಿಸಿದ ನಂತರ ನಿಮಗೆ ಹೆಚ್ಚಿನ ಸುರಕ್ಷತಾ ಭಾವ ಬಂದಿದೆಯಲ್ಲವೇ?’…

ಇದಕ್ಕೆ ಉತ್ತರ ‘ಹೌದು’ ಎಂದಾದರೆ ಮತ್ತೆ ನೀವು ಅಸುರಕ್ಷತೆಯ ಬಗ್ಗೆ ದೂಸರಾ ಮಾತೇ ಎತ್ತುವ ಹಾಗಿಲ್ಲ. ಉತ್ತರ ‘ಇಲ್ಲ’ ಎಂದಾದರೆ, ಮತ್ತೇಕೆ ನಿಮ್ಮನ್ನು ಮರು ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಏಳುತ್ತದೆ. ಆದರೆ ಮೋದಿ ಜಗತ್ತಿನಲ್ಲಿ ಮೂರನೆಯ ಸಾಧ್ಯತೆಯನ್ನೂ ಸೃಷ್ಟಿಸಬಹುದು. ‘ಹಿಂದಿಗಿಂತ, ಮುಖ್ಯವಾಗಿ, 2008ರ ಮುಂಬೈ ದಾಳಿಯ ಸಂದರ್ಭಕ್ಕಿಂತ ಈಗ ನೀವು ಹೆಚ್ಚು ಅಸುರಕ್ಷಿತರೇ?’ ಎಂಬ ಪ್ರಶ್ನೆಯನ್ನು ಹಾಕಲಾಗುತ್ತದೆ. ಒಬ್ಬ ಸಾಂಪ್ರದಾಯಿಕ ಅಥವಾ ಸಹಜ ವೃತ್ತಿ ರಾಜಕಾರಣಿ ತನ್ನ ಸಾಧನೆ ಇಟ್ಟುಕೊಂಡು ಮತದಾರರ ಬಳಿ ಹೋಗುತ್ತಾನೆ. ಆದರೆ ‘ಜಾಣ’ನಾದವನು ತನ್ನ ವಿರೋಧಿಗಳ ವಿಷಯ ಇಟ್ಟುಕೊಂಡು ವೋಟು ಬೇಡುತ್ತಾನೆ. ಈ ವಿಷಯದಲ್ಲಿ ಮೋದಿ ‘ಜಾಣ’ನಲ್ಲದೇ ಇನ್ನೇನು?

ನೀವು ವಿವರ ತೆಗೆದು ವಾದಿಸಬಹುದು, ಆದರೆ ಈ ಐದು ವರ್ಷಗಳಲ್ಲಿ ಕಾಶ್ಮೀರ ಹೊರತುಪಡಿಸಿ ದೇಶದ ಇತರ ಭಾಗಗಳಲ್ಲಿ ದೊಡ್ಡ ಭಯೋತ್ಪಾದನಾ ಕೃತ್ಯ ನಡೆದಿಲ್ಲ ಎಂಬುದನ್ನು ಈ ಸರ್ಕಾರ ಮುಂದೆ ಮಾಡುತ್ತದೆ. ಅಂತರಾಷ್ಟ್ರೀಯ ಗಡಿಯಿಂದ ಹಲವು ಮೈಲುಗಳ ದೂರದ ಗುರುದಾಸಪುರ ಮತ್ತು ಪಠಾನಕೋಟ್‍ನಲ್ಲಿ ಎರಡು ವಿಫಲ ದಾಳಿ ನಡೆದದ್ದು ಬಿಟ್ಟರೆ ಬೇರೆಲ್ಲೂ ಅಂತಹ ದಾಳಿ ನಡೆದಿಲ್ಲ. ಯುಪಿಎ ಅವಧಿಯ ದಿನಗಳು ತುಂಬ ಸುರಕ್ಷಿತವಾಗಿದ್ದವು ಎಂಬುದೂ ಸತ್ಯವಲ್ಲ. ಕಾಶ್ಮೀರ ಆಗಲೂ ಸಾಪೇಕ್ಷವಾಗಿ ಶಾಂತವಾಗಿರಲಿಲ್ಲ. ಕಾಂಗ್ರೆಸ್ ಕೂಡ ಇದನ್ನು ಮರೆತಿತ್ತು.

ಮೋದಿ ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ತನ್ನ ಸಾಧನೆ ಇಟ್ಟುಕೊಂಡು ತಮ್ಮ ಪ್ರಚಾರವನ್ನು ಕಟ್ಟುತ್ತಿಲ್ಲ. ಆದರೆ ಅವರು ಇನ್ನಷ್ಟು ಅಭದ್ರತೆಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಜೈಷ್, ಲಷ್ಕರ್, ಐಎಸ್‍ಐಗಳೆಂಬ ಗುಮ್ಮಗಳನ್ನು ಅವರು ಮುಂದು ಮಾಡಿ ಮತ ಪಡೆಯಲು ಹೊರಟಿದ್ದಾರೆ.

2014ರ ಚುನಾವಣೆಯನ್ನು ಮೋದಿ ಭರವಸೆಗಳ ಆಧಾರದಲ್ಲಿ ಗೆದ್ದರು. 5 ವರ್ಷಗಳ ನಂತರ ಅವರು ಪಾಕಿಸ್ತಾನದ ಕಪ್ಪು ಭಯೋತ್ಪಾದನೆಯ ಭೀತಿಯ ಆಧಾರದಲ್ಲಿ ಮತ್ತೊಂದು ಅವಧಿಗೆ ತಮ್ಮನ್ನು ಆಯ್ಕೆ ಮಾಡಲು ಕೇಳುತ್ತಿದ್ದಾರೆ. ಅದಕ್ಕೇ ಆತ ಮತ್ತೆ ಮತ್ತೆ ಹೇಳುತ್ತಿರುವುದು: ಕೇವಲ ಭಯೋತ್ಪಾದಕರು ಮತ್ತು ಪಾಕಿಸ್ತಾನಿಯರು ತಮ್ಮನ್ನು ಸೋಲಿಸಲು ಬಯಸಿದ್ದಾರೆಂದು! ಅದೇ ಉಸಿರಿನಲ್ಲಿ ಅವರು, ಸೇನಾ ಕಾರ್ಯಾಚರಣೆಗಳ ಯಶಸ್ಸಿನ ಬಗ್ಗೆ ಕೇಳಿದ ವಿದೋಧ ಪಕ್ಷಗಳನ್ನು ಮೂದಲಿಸುತ್ತ, ಸೇನೆಯ ಮನೋಸ್ಥೈರ್ಯವನ್ನು ಕುಂದಿಸುತ್ತಿದ್ದಾರೆ ಎಂದೂ ಅಪಾದಿಸುತ್ತಾರೆ.

2014ರ ಆಶಾವಾದ ಮತ್ತು 2019ರ ಭೀತಿ- ಈ ಶಿಫ್ಟ್‍ ಗೆ ಕಾರಣವೇನು?

ಮೋದಿ-ಶಾ ಜೋಡಿ ಯಾವುದನ್ನು ನಾವು ‘ಪುಟ್ಟಾಪೂರಾ ಪಾಲಿಟಿಕ್ಸ್’ ( ಕಂಪ್ಲೀಟ್ ಪಾಲಿಟಿಕ್ಸ್) ಎನ್ನುತ್ತವೆಯೋ ಅದರಲ್ಲಿ ನಂಬಿಕೆ ಇಟ್ಟಿದೆ. ಅಂದರೆ ಇದು ರಾಜಕಾರಣವೇ ಮನರಂಜನೆ, ಹುಚ್ಚು ಮತ್ತು 24 ಗಂಟೆಗಳ ಗೀಳು… ಹೀಗಾದಾಗ ರಾಜಕೀಯದ ಹೊರತಾಗಿ ಇಲ್ಲಿ ಬೇರೆ ಯಾವುದಕ್ಕೂ ಜಾಗವೇ ಇಲ್ಲ. ನಿಮ್ಮ ಸಾಧನೆಗಳ ಆಧಾರದಲ್ಲಿ ಹೋದರೆ ಅದು ಅಪಾಯಕಾರಿ. ಏಕೆಂದರೆ, ನೀವು ಮಾಡುವ ಕ್ಲೇಮುಗಳನ್ನು ಜನ ತಮ್ಮ ರಿಯಾಲಿಟಿಯೊಂದಿಗೆ ಇಟ್ಟು ಚೆಕ್ ಮಾಡುತ್ತಾರೆ. ನೀವು ಉದ್ಯೋಗ ಕುರಿತ ಎಲ್ಲ ದತ್ತಾಂಶಗಳನ್ನು ಮುಚ್ಚಿಡಬಹುದು, ಜಿಡಿಪಿ ಲೆಕ್ಕವನ್ನು ಫಿಕ್ಸ್ ಮಾಡಬಹುದು. ಆದರೆ, ನಿಮಗೆ ಹೇಗೆ ಅನಿಸುತ್ತಿದೆ, ಸೌಖ್ಯವೇ ಅಂತ ಕೇಳಿದ ಕೂಡಲೇ ಜನರು ರಿಯಾಲಿಟಿ ಚೆಕ್‍ಗೆ ಇಳಿಯುತ್ತಾರೆ. ನಿಮ್ಮ ಉಜ್ವಲಾ, ಮುದ್ರಾ, ರೈತರಿಗೆ ನೇರ ಹಣ, ಶೌಚಾಲಯ ಯೋಜನೆಗಳ ಫಲಾನುಭವಿಗಳಿರಬಹುದು. ಆದರೆ ಇದೆಲ್ಲದರಿಂದ ಹೊರಗುಳಿದ ಒಂದು ದೊಡ್ಡ ಜನಸಮೂಹವೇ ಇರುತ್ತದೆ. ಇದು ಎಷ್ಟು ಅಪಾಯಕಾರಿ ಎಂದು ತಿಳಿಯಲು, 2004ರ ಶೈನಿಂಗ್ ಇಂಡಿಯಾ ಬಗ್ಗೆ ಅದ್ವಾನಿಗೆ ಕೇಳಿ ನೋಡಿ.

ಮೋದಿಯ ಈಗಿನ ಭಾಷಣಗಳಂತೆ ಮುಂದೆಯೂ ಭಯೋತ್ಪಾದನೆ, ಪಾಕಿಸ್ತಾನ, ರಾಷ್ಟ್ರೀಯ ಸುರಕ್ಷತೆಯ ಕುರಿತಾದ ಭಾಷಣಗಳೇ ಇರುತ್ತವೆ. ಉದ್ಯೋಗ, ಅಭಿವೃದ್ಧಿ, ರೈತರ ಸಂಕಷ್ಟಗಳ ಬಗ್ಗೆ ಅವರು ಮಾತನಾಡಲ್ಲ. ತಮ್ಮನ್ನು ಡಿಫೆಂಡ್ ಮಾಡಿಕೊಳ್ಳುವ ಬದಲು, ವಿರೋಧಿಗಳ ಮೇಲೆ ಹರಿ ಹಾಯುವುದನ್ನೇ ಅವರು ಮುಂದುವರೆಸಲಿದ್ದಾರೆ.

‘ಭಯೋತ್ಪಾದನೆ’ ಶಬ್ದದ ಜೊತೆಗೊಂದು ಇಲ್ಲಿ ಉಪಶಬ್ದವೂ ಇದೆ-‘ಮುಸ್ಲಿಮರು’.  2014ರಲ್ಲಿ ಗೆದ್ದ ನಂತರ ಕ್ಯಾಬಿನೆಟ್ ಸೇರಿದಂತೆ ಯಾವ ಸಾಂವಿಧಾನಿಕ ಸಂಸ್ಥೆಗಳಲ್ಲೂ ಮುಸ್ಲಿಮರಿಗೆ ಪ್ರಾತಿನಿಧ್ಯ ಇಲ್ಲದಂತೆ ನೋಡಿಕೊಂಡರು. ದೇಶದಲ್ಲಿ ಶೇ 14ರಷ್ಟು ಇರುವ ಮುಸ್ಲಿಮರಿಗೆ ಕೇವಲ 7 ಸೀಟು ನೀಡಿ, ಶೇ. 20ರಷ್ಟಿರುವ ಉತ್ತರ ಪ್ರದೇಶದಲ್ಲಿ ಒಂದೂ ಸೀಟು ನೀಡದೇ ಭಾರಿ ದಿಗ್ವಿಜಯ ಸಾಧಿಸಿದ್ದರು. ಈ ತಂತ್ರ ಎಷ್ಟು ಯಶಸ್ವಿಯಾಗಿತ್ತು ಎಂದರೆ, ಈಗಲೂ ಕಾಂಗ್ರೆಸ್ ತನ್ನನ್ನು ಮುಸ್ಲಿಮರ  ಹಿತೈಷಿ ಎಂದು ಬಿಡುತ್ತಾರೇನೋ ಎಂಬ ಭಯದಲ್ಲಿ ಮುಸ್ಲಿಮರಿಗೆ ಟಿಕೆಟು ಕೊಡಲು ಹಿಂಜರಿಯುತ್ತಿದೆ.

ಈಗಲೂ ಅದನ್ನೇ ಮೋದಿ ಮುದುವರೆಸಿದ್ದಾರೆ. ಭಯೋತ್ಪಾದಕರು, ಪಾಕಿಸ್ತಾನಿಯರು ಮತ್ತು ಮುಸ್ಲಿಮರನ್ನು ಗುಮ್ಮನಂತೆ ತೋರಿಸುವುದು, ಭಯೋತ್ಪಾದಕರು, ಪಾಕಿಗಳು ಮತ್ತು ವಿರೋಧ ಪಕ್ಷಗಳು ತಮ್ಮನ್ನು ಸೋಲಿಸಲು ಬಯಸಿವೆ ಎಂದು ಭಾಷಣ ಮಾಡುವುದು. ಮುಸ್ಲಿಮರು ಓಟು ಹಾಕದಿದ್ದರೂ ಪರವಾಗಿಲ್ಲ, ಈ ಕಾರಣಕ್ಕಾಗಿ ಹಿಂದೂಗಳು ಧ್ರುವೀಕರಣ ಆಗುತ್ತಾರೆ ಎಂಬ ಲೆಕ್ಕಾಚಾರ ಇದರ ಹಿಂದಿದೆ.

ಇಲ್ಲಿನ ಮುಸ್ಲಿಮರ ವಿರುದ್ಧ ನೇರ ದಾಳಿ ಮಾಡಿದರೆ ವರ್ಕೌಟ್ ಆಗುವುದಿಲ್ಲ ಎಂದು ಅರಿತಿರುವ ಮೋದಿ, ಪಾಕಿಸ್ತಾನ, ಬಾಂಗ್ಲಾ ಮುಸ್ಲಿಮರನ್ನು ವೈರಿಗಳು ಎಂನಂತೆ ಚಿತ್ರಿಸುವ ತಂತ್ರಕ್ಕೆ ಶರಣಾಗಿದ್ದಾರೆ.

 (ಕೃಪೆ: ದಿ ಪ್ರಿಂಟ್)

ಅನುವಾದ: ಮಲ್ಲನಗೌಡರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ ಪರ ಪ್ರತಿಭಟನೆ: ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಬಂಧನ

0
ಪ್ಯಾಲೆಸ್ತೀನ್‌ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಅಚಿಂತ್ಯ ಶಿವಲಿಂಗಂ ಅವರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಪ್ರಿನ್ಸ್ ಟನ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿದ್ಯಾರ್ಥಿಗಳ ನೇತೃತ್ವದ ಪ್ಯಾಲೆಸ್ತೀನ್‌ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಭಾರತೀಯ ಮೂಲದ...