Homeಮುಖಪುಟಹೆಲಿಕಾಪ್ಟರ್ ಅಪಘಾತದ ತೀವ್ರತೆಯಿಂದಾಗಿ ಮೃತದೇಹಗಳನ್ನು ಗುರುತಿಸುವುದು ಕಷ್ಟ: ವಾಯುಪಡೆ ಮೂಲಗಳು

ಹೆಲಿಕಾಪ್ಟರ್ ಅಪಘಾತದ ತೀವ್ರತೆಯಿಂದಾಗಿ ಮೃತದೇಹಗಳನ್ನು ಗುರುತಿಸುವುದು ಕಷ್ಟ: ವಾಯುಪಡೆ ಮೂಲಗಳು

- Advertisement -
- Advertisement -

ಬುಧವಾರ ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ CDS ಜನರಲ್ ಬಿಪಿನ್ ರಾವತ್ ಮತ್ತು ಇತರ 12 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಯಿಂದಾಗಿ ಎಲ್ಲಾ ದೇಹಗಳನ್ನು ಗುರುತಿಸುವುದು ಕಷ್ಟಕರವಾಗಿದೆ ಎಂದು ಗುರುವಾರ ಭಾರತೀಯ ವಾಯುಪಡೆ ಹೇಳಿಕೆ ನೀಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

“ಅಪಘಾತದ ತೀವ್ರಯಿಂದಾಗಿ ಮೃತಶರೀರಗಳನ್ನು ಗುರುತಿಸುವುದು ಕಷ್ಟಕರವಾಗಿದೆ. ಮೃತರ ಪ್ರೀತಿಪಾತ್ರರ ಭಾವನೆಗಳನ್ನು ಪರಿಗಣಿಸಿ ಮೃತ ಶರೀರದ ಗುರುತಿಸುವಿಕೆಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಸರ್ಕಾರದ ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಅವರ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್ ಎಲ್ಎಸ್ ಲಿಡರ್ ಸೇರಿದಂತೆ ನಾಲ್ಕು ಮೃತದೇಹಗಳನ್ನು ಮಾತ್ರ ಸರಿಯಾಗಿ ಗುರುತಿಸಲಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:Fact Check: ಬಿಪಿನ್ ರಾವತ್‌ರವರ ಹೆಲಿಕಾಪ್ಟರ್ ಪತನ ಎಂದು ಹಳೆಯ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ

ಮೃತರ ಕುಟುಂಬದ ಸದಸ್ಯರು ದೆಹಲಿಗೆ ಆಗಮಿಸುತ್ತಿದ್ದು, ಅಲ್ಲಿ ಮೃತದೇಹಗಳನ್ನು ಗುರುತಿಸಲು ಅವರನ್ನು ಕೇಳಲಾಗುತ್ತದೆ. ಮೃತದೇಹವನ್ನು ಸರಿಯಾಗಿ ಗುರುತಿಸಲು ವೈಜ್ಞಾನಿಕ ಕ್ರಮಗಳ ಜೊತೆಗೆ, ಕುಟುಂಬ ಸದಸ್ಯರ ಸಹಾಯವನ್ನು ತೆಗೆದುಕೊಳ್ಳಲಾಗುವುದು. ಸಕಾರಾತ್ಮಕ ಗುರುತಿನ ನಂತರವೇ ಮೃತದೇಹವನ್ನು ಸಂಬಂಧಿಕರಿಗೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ಹೇಳಿದೆ.

“ಸಕಾರಾತ್ಮಕ ಗುರುತಿನ ಪ್ರಕ್ರಿಯೆಯು ಪೂರ್ಣಗೊಂಡ ನಂತರ ನಿಕಟ ಸಂಬಂಧಿಗಳೊಂದಿಗೆ ಸಮಾಲೋಚಿಸಿ ಎಲ್ಲಾ ಸಿಬ್ಬಂದಿಗೆ ಮಿಲಿಟರಿ ವಿಧಿಗಳನ್ನು ಖಚಿತಪಡಿಸಿಕೊಳ್ಳಲಾಗುವುದು” ಎಂದು ಅವರು ಹೇಳಿದ್ದಾರೆ.

ವಾಯು ಕಾರ್ಯಾಚರಣೆಗೆ ಹವಾಮಾನವು ಸೂಕ್ತವಲ್ಲದ ಕಾರಣ ಅಪಘಾತದ ಸ್ಥಳದಲ್ಲಿ ಪತ್ತೆಯಾದ ಎಲ್ಲಾ ಮೃತದೇಹಗಳನ್ನು ವೆಲ್ಲಿಂಗ್ಟನ್‌ನಿಂದ ಸುಲೂರಿಗೆ ರಸ್ತೆಯ ಮೂಲಕ ಸ್ಥಳಾಂತರಿಸಲಾಗಿದೆ. ಸೂಲೂರಿನಿಂದ ಎಲ್ಲರ ಮೃಹದೇಹಗಳನ್ನು ವಾಯುಪಡೆಯ ಮೂಲಕ ದೆಹಲಿಗೆ ತರಲಾಗುವುದು.

ಇದನ್ನೂ ಓದಿ:ಹೆಲಿಕ್ಯಾಪ್ಟರ್ ಪತನ: ಜನರಲ್ ಬಿಪಿನ್ ರಾವತ್ ದುರ್ಮರಣ

“ಎಲ್ಲಾ 13 ಮೃತದೇಹಗಳನ್ನು ಭಾರತೀಯ ವಾಯುಪಡೆಯ C-130J ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನದಲ್ಲಿ ಸೂಲೂರಿನಿಂದ ದೆಹಲಿಗೆ ತರಲಾಗುತ್ತಿದೆ” ಎಂದು ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ಜನರು ಸೂಲೂರು ವಾಯುಪಡೆಯ ನೆಲೆಯಿಂದ ವೆಲ್ಲಿಂಗ್ಟನ್‌ಗೆ ತೆರಳುತ್ತಿದ್ದಾಗ Mi5V17 ಹೆಲಿಕಾಪ್ಟರ್‌ನಲ್ಲಿ ಅಪಘಾತಕ್ಕೀಡಾಗಿದ್ದರು.

ನಾಳೆ ದೆಹಲಿಯಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಜನರಲ್ ರಾವತ್ ಅವರ ಅಂತ್ಯಕ್ರಿಯೆ ನಡೆಯಲಿದೆ.

ಘಟನೆಯಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದು, ತೀವ್ರ ಸುಟ್ಟಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪಿದ ಇತರರೆಂದರೆ ಜನರಲ್ ರಾವತ್ ಅವರ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್‌ ಲಖ್ಬಿಂದರ್ ಸಿಂಗ್ ಲಿಡರ್, ಸಿಬ್ಬಂದಿ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್ ಪಿಎಸ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕೆ ಸಿಂಗ್, ಜೂನಿಯರ್ ವಾರಂಟ್ ಅಧಿಕಾರಿ ರಾಣಾ ಪ್ರತಾಪ್ ದಾಸ್, ಜೂನಿಯರ್ ವಾರಂಟ್ ಅಧಿಕಾರಿ ಪ್ರದೀಪ್ ಎ, ಹವಾಲ್ದಾರ್ ಸತ್ಪಾಲ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಮತ್ತು ಲ್ಯಾನ್ಸ್ ನಾಯಕ್ ಸಾಯಿ ತೇಜಾ.

ಇದನ್ನೂ ಓದಿ:ಬಿಪಿನ್ ರಾವತ್‌ರವರ ಮೃತದೇಹ ಇಂದು ದೆಹಲಿಗೆ: ನಾಳೆ ಅಂತ್ಯಕ್ರಿಯೆ ಸಾಧ್ಯತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹುಬ್ಬಳ್ಳಿ ವಿದ್ಯಾರ್ಥಿನಿ ಹತ್ಯೆ ಪ್ರಕರಣ: ‘ಲವ್ ಜಿಹಾದ್’ ಆರೋಪ ನಿರಾಕರಿಸಿದ ಸರ್ಕಾರ; ಆರೋಪಿ ಬಂಧನ

0
ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್‌ನಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಮಗಳ ಹತ್ಯೆ ಪ್ರಕರಣಕ್ಕೆ ಬಿಜೆಪಿ ಸೇರಿದಂತೆ ಸಂಘಪರಿವಾರದ ಬೆಂಬಲಿಗರು 'ಲವ್ ಜಿಹಾದ್' ಆರೋಪ ಮಾಡುತ್ತಿದ್ದು, ರಾಜ್ಯ ಗೃಹ ಇಲಾಖೆ ಇದನ್ನು ನಿರಾಕರಿಸಿದ್ದು, ಕೊಲೆ ಆರೋಪಿಯನ್ನು ವಶಕ್ಕೆ...