ಡೈವಿಂಗ್‌ಗಾಗಿ ವಿಶ್ವದ ಅತ್ಯಂತ ಆಳವಾದ ಈಜುಕೊಳವು ದುಬೈಯಲ್ಲಿ ತೆರೆಯಲ್ಪಟ್ಟಿದೆ. ಈ ಈಜುಕೊಳದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹರ್ಷಗೊಂಡಿದ್ದಾರೆ. ದುಬೈನ ಎನ್ಎಎಸ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿರುವ “ಡೀಪ್ ಡೈವ್ ದುಬೈ” 196 ಅಡಿ 10 ಇಂಚುಗಳಷ್ಟು (60.02 ಮೀಟರ್) ಆಳವನ್ನು ಹೊಂದಿದೆ. ಈಜುಕೊಳವು ಜೂನ್ 27 ರಂದು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ.
ಈ ಹಿಂದೆ, ವಿಶ್ವದ ಆಳವಾದ ಈಜುಕೊಳವೆಂಬ ದಾಖಲೆಯು ಪೋಲೆಂಡ್‌ನ ಡೀಪ್‌ಸ್ಪಾಟ್ ಹೊಂದಿದ್ದು, ಅದು 45 ಮೀಟರ್‌ಗಿಂತ ಹೆಚ್ಚು ಆಳವನ್ನು ಹೊಂದಿದೆ.
ಇದನ್ನೂ ಓದಿ: ದುಬೈನಿಂದ ಬಂದ ಮುಸ್ಲಿಂ ಹುಡುಗರು ಕೊರೊನಾ ಟೆಸ್ಟ್ ಮಾಡಿಸಿಲ್ಲ ಎಂದು ಸುಳ್ಳು ಹರಡಿದ ಪಬ್ಲಿಕ್ ಟಿವಿ
ದುಬೈನ ರಾಜಕುಮಾರ ಹಮ್ದಾನ್ ಬಿನ್ ಮೊಹಮ್ಮದ್ ಜುಲೈ 7 ರಂದು ‘ಡೀಪ್ ಡೈವ್ ದುಬೈ’ ಅನ್ನು ಉದ್ಘಾಟಿಸಿ, ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
An entire world awaits you at Deep Dive Dubai the world’s deepest pool, with a depth of 60 meters (196 feet) #Dubai pic.twitter.com/GCQwxlW18N
— Hamdan bin Mohammed (@HamdanMohammed) July 7, 2021
ಜೂನ್ ತಿಂಗಳ ಆರಂಭದಲ್ಲಿ ‘ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಈಜುಕೊಳದ ಆಳವನ್ನು ಪರಿಶೀಲಿಸಿದೆ. ವೆಬ್‌ಸೈಟ್ ಪ್ರಕಾರ, 60.02 ಮೀಟರ್ ಆಳದ, ಕಾಂಕ್ರೀಟ್‌ನಲ್ಲಿ ರಚನೆ ಮಾಡಿರುವ ಈ ಕೊಳವು ವಿವಿಧ ಹಂತಗಳಲ್ಲಿ ವಿಭಿನ್ನ ಅನುಭವಗಳನ್ನು ಒದಗಿಸುತ್ತದೆ. ಈ ಮೊದಲು ಇದನ್ನು ಖಾಸಗಿ ಬಳಕೆಗಾಗಿ ಬಳಸಲಾಗಿದ್ದರೂ, ಜುಲೈನಿಂದ ಅದನ್ನು ಸಾರ್ವಜನಿಕರಿಗೆ ತೆರೆಯಲಾಗಿದೆ.
ಇದನ್ನೂ ಓದಿ: ಸಿನಿಮಾಟೋಗ್ರಾಫ್ ಕಾಯ್ದೆಯ ತಿದ್ದುಪಡಿ; ಸಿನಿಮಾ ತಯಾರಕರ ಮೇಲೆ ತೂಗಲಿರುವ ಹೊಸ ಕತ್ತಿ


