Homeಮುಖಪುಟನಕಲಿ ಶೈಕ್ಷಣಿಕ ದಾಖಲೆ ಪ್ರಕರಣದಲ್ಲಿ ಬಿಜೆಪಿ ಶಾಸಕನ ಬಂಧನ

ನಕಲಿ ಶೈಕ್ಷಣಿಕ ದಾಖಲೆ ಪ್ರಕರಣದಲ್ಲಿ ಬಿಜೆಪಿ ಶಾಸಕನ ಬಂಧನ

2015 ರಲ್ಲಿ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಪತ್ನಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದ ಬಿಜೆಪಿ ಶಾಸಕ ಪತ್ನಿಯ ನಕಲಿ ಶೈಕ್ಷಣಿಕ ದಾಖಲೆಯನ್ನು ನೀಡಿದ್ದರು.

- Advertisement -
- Advertisement -

ರಾಜಸ್ಥಾನದ ಬಿಜೆಪಿ ಶಾಸಕ ಅಮೃತ್‌ ಲಾಲ್ ಮೀನಾ ಅವರನ್ನು ನಕಲಿ ಶೈಕ್ಷಣಿಕ ದಾಖಲೆ ನೀಡಿದ ಕಾರಣಕ್ಕೆ ಪೊಲೀಸರು ಬಂಧಿಸಿದ್ದಾರೆ. ಜುಲೈ 23 ರ ವರೆಗೆ ಮೀನಾ ಅವರನ್ನು ನ್ಯಾಯಂಗ ಬಂಧನಕ್ಕೆ ನೀಡಿ ಜೈಪುರ ನ್ಯಾಯಾಲಯ ಆದೇಶ ನೀಡಿದೆ.

2015ರಲ್ಲಿ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಪತ್ನಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದ ಬಿಜೆಪಿ ಶಾಸಕ ನಕಲಿ ಶೈಕ್ಷಣಿಕ ದಾಖಲೆಯನ್ನು ನೀಡಿದ್ದರು. ಚುನಾವಣೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪತ್ನಿ ಶಾಂತಾ ದೇವಿಗೆ ಶಾಸಕ ಮೀನಾ ಗಾರ್ಡಿಯನ್‌ ಆಗಿ ಸಹಿ ಹಾಕಿದ್ದರು.

ಪತ್ನಿ ಶಾಂತಾದೇವಿ ಅವರು 5ನೇ ತರಗತಿಯನ್ನು ಓದಿದ್ದಾರೆ ಎಂದು ಮೀನಾ ದಾಖಲಾತಿ ನೀಡಿದ್ದಾಗಿ ವಿಚಾರಣೆಯ ವೇಳೆ ತಿಳಿದುಬಂದಿದೆ. ಶಾಂತಾ ದೇವಿ ಅವರು 5ನೇ ತರಗತಿ ಶಿಕ್ಷಣವನ್ನು ಪಡೆದಿಲ್ಲ. ನಕಲಿ ಶೈಕ್ಷಣಿಕ ದಾಖಲಾತಿ ನೀಡಿರುವುದು ತನಿಖೆಯಿಂದ ಕಂಡು ಬಂದಿದೆ. ಆ ಸಂಬಂಧ ಜೈಪುರ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್ ಶೀಟ್‌ ಕೂಡ ಸಲ್ಲಿಸಿದ್ದರು. ಪ್ರಕರಣದಲ್ಲಿ ಶಾಂತಾ ದೇವಿ ಅವರನ್ನು ಬಂಧಿಸಲಾಗಿತ್ತು. ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ಮಂಗಳವಾರ ಶಾಸಕ ಅಮೃತ್‌ ಲಾಲ್‌ ಮೀನಾ ಅವರು ಪೊಲೀಸರಿಗೆ ಶರಣಾಗಿದ್ದಾರೆ. ಅವರು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್‌ ವಜಾಗೊಳಿಸಿತ್ತು. ನಂತರ  ಸುಪ್ರೀಮ್‌ ಕೋರ್ಟ್‌ ಮೀನಾ ಅವರ ಬಂಧನಕ್ಕೆ 3 ವಾರಗಳ ತಡೆ ನಿಡಿ ಪೊಲೀಸರಿಗೆ ಶರಣಾಗುವಂತೆ ಆದೇಶ ನೀಡಿತ್ತು.

ಇದನ್ನೂ ಓದಿ: ಉತ್ತರಪ್ರದೇಶ: ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕನ ಬಂಧನ; ರಿಮ್ಯಾಂಡ್‌ಗೆ ಪಡೆದ ಪೊಲೀಸರು!

ಪ್ರಕರಣದ ತನಿಖೆ ನಡೆಸಿದ CB-CID ಶಾಂತಾ ದೇವಿ 5ನೇ ತರಗತಿ ಶಿಕ್ಷಣ ಪಡೆದಿಲ್ಲ ಎಂದು ಖಾತರಿ ಪಡಿಸಿದ್ದಲ್ಲದೇ ನ್ಯಾಯಲಯ ಅವರ ಚುನಾವಣಾ ಆಯ್ಕೆಯನ್ನು ರದ್ದುಗೊಳಿಸಿದೆ.

ಹಿಂದಿನ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ನಿಗದಿ ಪಡಿಸಿತ್ತು. ಜಿಲ್ಲಾ ಪರಿಷತ್‌  ಚುನಾವಣೆಗೆ 10ನೇ ತರಗತಿಯನ್ನು ಕಡ್ಡಾಯಗೊಳಿಸಿದ್ದರೆ, ಸರಪಂಚ್ ಅಥವಾ ಗ್ರಾಮ ಪಂಚಾಯತ್‌ ಚುನಾವಣೆಗಳಿಗೆ ಅಭ್ಯರ್ಥಿಗಳು 8 ನೇ ತರಗತಿ ಶಿಕ್ಷಣ ಪಡೆಯುವುದು ಕಡ್ಡಾಯವಾಗಿಸಿ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ ಸರ್‌ ಪಂಚ್‌ ಚುನಾವಣೆಗೆ ಸ್ಪರ್ಧಿಸಲು 5 ತರಗತಿ ಶಿಕ್ಷಣವನ್ನು ಮಾನದಂಡವಾಗಿ ನಿರ್ಧರಿಸಲಾಗಿತ್ತು.

2018 ರಲ್ಲಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಹಿಂದಿನ ಸರ್ಕಾರ ಜಾರಿಗೆ ತಂದಿರುವ ಶೈಕ್ಷಣಿಕ ವಿದ್ಯಾರ್ಹತೆ ಕಾನುನುಗಳನ್ನು ರದ್ದುಪಡಿಸಿ ಆದೇಶವನ್ನು ಹೊರಡಿಸಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಮೂವರು ಬಿಜೆಪಿ ಶಾಸಕರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...