Homeಮುಖಪುಟನೇಪಾಳದ ಪ್ರಧಾನಿಯಾಗಿ 5ನೇ ಬಾರಿ ಶೇರ್ ಬಹದ್ದೂರ್ ದೇವುಬಾ ನೇಮಕ

ನೇಪಾಳದ ಪ್ರಧಾನಿಯಾಗಿ 5ನೇ ಬಾರಿ ಶೇರ್ ಬಹದ್ದೂರ್ ದೇವುಬಾ ನೇಮಕ

- Advertisement -
- Advertisement -

ಶೇರ್ ಬಹದ್ದೂರ್ ದೇವುಬಾ ಅವರನ್ನು ನೇಪಾಳದ ಮುಂದಿನ ಪ್ರಧಾನಿಯಾಗಿ ಮಂಗಳವಾರ ನೇಮಿಸಲಾಗಿದೆ. ನೂತನ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ನೇಪಾಳಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಸಂವಿಧಾನದ 76 (5) ನೇ ವಿಧಿಗೆ ಅನುಗುಣವಾಗಿ ನೇಪಾಳದ ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರು ದೇವುಬಾ ಅವರನ್ನು ನೇಮಕ ಮಾಡಿದ್ದಾರೆ.

ಸಾಂವಿಧಾನಿಕ ನಿಬಂಧನೆಯ ಪ್ರಕಾರ, ಶೇರ್ ಬಹದ್ದೂರ್ ದೇವುಬಾ ಅವರಿಗೆ ಸಂಸತ್ತಿನ ಉಳಿದ ಅವಧಿಗೆ ಪ್ರಧಾನ ಮಂತ್ರಿಯಾಗಿ ಮುಂದುವರೆಯಲು, ತಮ್ಮ ಬಹುಮತವನ್ನು ಸಾಬೀತುಪಡಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.

ನೇಪಾಳದ ಹಂಗಾಮಿ ಪ್ರಧಾನಿಯಾಗಿದ್ದ ಕೆಪಿ ಶರ್ಮಾ ಒಲಿ ಅವರು ಸಂಸತ್ತನ್ನು ವಿಸರ್ಜಿಸುವ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆಯೊಡ್ಡಿತ್ತು. ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರನ್ನು ಪುನಃ ಪ್ರಧಾನ ಮಂತ್ರಿಯಾಗಿ ನೇಮಿಸಬೇಕು ಎಂದು ಆದೇಶ ಹೊರಡಿಸಿತ್ತು.

ಇದನ್ನೂ ಓದಿ: ರಾಜಕೀಯಕ್ಕೆ ಬರುವುದಿಲ್ಲ ಎಂದ ಸೂಪರ್ ಸ್ಟಾರ್ ರಜನಿಕಾಂತ್‌!: ಆರ್‌ಎಂಎಂ ವಿಸರ್ಜನೆ

ಹಂಗಾಮಿ ಪ್ರಧಾನಿ ಒಲಿ ವಿರುದ್ಧ ಹೋರಾಡಲು ರೂಪುಗೊಂಡಿದ್ದ ಮೈತ್ರಿಕೂಟದಿಂದ ಸಿಪಿಎನ್-ಯುಎಂಎಲ್‌ ಪ್ರತಿಸ್ಪರ್ಧಿ ಬಣವು ಬೇರ್ಪಟ್ಟಿರುವುದರಿಂದ ದೇವುಬಾ ಅವರಿಗೆ ಬಹುಮತದ ಕೊರತೆಯಿದೆ.

74 ವರ್ಷದ ದೇವುಬಾ ಅವರು ನೇಪಾಳದಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸುವುದು ಇದು ಐದನೇ ಬಾರಿ. ಜೂನ್ 2017 ರಿಂದ ಫೆಬ್ರವರಿ 2018, ಜೂನ್ 2004 ರಿಂದ ಫೆಬ್ರವರಿ 2005, ಜುಲೈ 2001 ರಿಂದ ಅಕ್ಟೋಬರ್ 2002 ಮತ್ತು ಸೆಪ್ಟೆಂಬರ್ 1995 ರಿಂದ ಮಾರ್ಚ್ 1997 ರ ವರೆಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು.

ಸಂಸತ್ತು ಅನ್ನು ವಿಸರ್ಜಿಸುವ ಒಲಿಯವರ ಮೇ 21 ರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿತು ಮತ್ತು ದೇವುಬಾ ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಕ ಮಾಡಲು ಆದೇಶಿಸಿತ್ತು. ಪ್ರಧಾನಮಂತ್ರಿ ಹುದ್ದೆಯಲ್ಲಿ ಕೆಪಿ ಶರ್ಮಾ ಒಲಿ ಮುಂದುವರೆಯುವುದು ಅಸಂವಿಧಾನಿಕ ಎಂದು ಮುಖ್ಯ ನ್ಯಾಯಮೂರ್ತಿ ಕೋಲೆಂದ್ರ ಸಂಶೀರ್‌ ರಾಣಾ ನೇತೃತ್ವದ ಐದು ಸದಸ್ಯರ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ.

ಹೊಸ ಸರ್ಕಾರವನ್ನು ರಚಿಸುವ ದೇವುಬಾ ಅವರ ಹೇಳಿಕೆಯನ್ನು ತಿರಸ್ಕರಿಸುವ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರ ನಿರ್ಧಾರವು ಅಸಂವಿಧಾನಿಕ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.


ಇದನ್ನೂ ಓದಿ: ಉತ್ತರ ಪ್ರದೇಶ ಜನಸಂಖ್ಯಾ ಮಸೂದೆ: ‘ಒನ್-ಚೈಲ್ಡ್‌‌’ ನೀತಿಯನ್ನು ತೆಗೆದು ಹಾಕುವಂತೆ ವಿಹೆಚ್‌‌ಪಿ ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...