Homeಅಂತರಾಷ್ಟ್ರೀಯಮಲೇಷ್ಯಾ: ಸಾಮೂಹಿಕ ವ್ಯಾಕ್ಸಿನೇಷನ್‌ ಕೇಂದ್ರದ 204 ಸಿಬ್ಬಂದಿಗೆ ಕೊರೊನಾ!

ಮಲೇಷ್ಯಾ: ಸಾಮೂಹಿಕ ವ್ಯಾಕ್ಸಿನೇಷನ್‌ ಕೇಂದ್ರದ 204 ಸಿಬ್ಬಂದಿಗೆ ಕೊರೊನಾ!

- Advertisement -
- Advertisement -

ಮಲೇಷ್ಯಾದ ಸಾಮೂಹಿಕ ವ್ಯಾಕ್ಸಿನೇಷನ್‌ ಕೇಂದ್ರದ 200 ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಮತ್ತು ಸ್ವಯಂ ಸೇವಕರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಮಂಗಳವಾರದಂದು ಅಧಿಕಾರಿಗಳು ಪ್ರಸ್ತುತ ವ್ಯಾಕ್ಸಿನೇಷನ್‌ ಕೇಂದ್ರವನ್ನು ಮುಚ್ಚಿದ್ದಾರೆ.

ಮಲೇಷ್ಯಾದ ಮಧ್ಯ ಸೆಲಂಗೂರ್‌ ರಾಜ್ಯದಲ್ಲಿರುವ ಈ ಕೇಂದ್ರದಲ್ಲಿ ಆರಂಭದಲ್ಲಿ ಇಬ್ಬರು ಸ್ವಯಂಸೇವಕರು ವೈರಸ್‌ಗೆ ತುತ್ತಾಗಿದ್ದರು. ಇದಾದ ನಂತರ 204 ಸಿಬ್ಬಂದಿ ಸಹ ಕೊರೊನಾ ಪಾಸಿಟಿವ್ ಆಗಿದ್ದಾರೆ.

ವ್ಯಾಕ್ಸಿನೇಷನ್‌ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ 453 ಸಿಬ್ಬಂದಿಗಳನ್ನು ಪರೀಕ್ಷಿಸಲು ಈಗಾಗಲೇ ಆದೇಶಿಸಲಾಗಿದೆ ಎಂದು ದೇಶದ ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ವಿಜ್ಞಾನ ಸಚಿವ ಖೈರಿ ಜಮಾಲುದ್ದೀನ್ ಹೇಳಿದ್ದಾರೆ. ಪ್ರಸ್ತುತ ಕೊರೊನಾ ಪಾಸಿಟಿವ್‌‌ ಆಗಿರುವ 204 ಜನರು ತಮ್ಮ ದೇಹದಲ್ಲಿ ಕಡಿಮೆ ಪ್ರಮಾಣದ ವೈರಸ್ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೇರಳ: ದೇಶದ ಮೊದಲ ಕೊರೊನಾ ಸೋಂಕಿತೆಯಾಗಿದ್ದ ವಿದ್ಯಾರ್ಥಿನಿಗೆ ಮತ್ತೆ ಸೋಂಕು

ವ್ಯಾಕ್ಸಿನೇಷನ್‌ ಕೇಂದ್ರವನ್ನು ಸರ್ಕಾರವು ತ್ವರಿತವಾಗಿ ಮುಚ್ಚಿದೆ ಎಂದು ಖೈರಿ ಒತ್ತಿ ಹೇಳಿದ್ದು, ಅಲ್ಲಿ ಸೋಂಕು ಹೇಗೆ ಬಂದಿದೆ ಎಂದು ಕಂಡು ಹಿಡಿಯುವುದು ಕಷ್ಟ ಎಂದು ಹೇಳಿದ್ದಾರೆ. ಶುಕ್ರವಾರದಿಂದ ಕೇಂದ್ರದಲ್ಲಿ ಲಸಿಕೆ ಹಾಕಿದ ಯಾವುದೆ ಜನರಲ್ಲಿ ರೋಗಲಕ್ಷಣಗಳು ಕಂಡುಬಂದರೆ 10 ದಿನಗಳವರೆಗೆ ತಮ್ಮನ್ನು ಕ್ವಾರೈಂಟೈನ್ ಮಾಡಿಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ನೈರ್ಮಲ್ಯೀಕರಣಕ್ಕಾಗಿ ವ್ಯಾಕ್ಸಿನೇಷನ್‌ ಕೇಂದ್ರವನ್ನು ಮುಚ್ಚಲಾಗಿದ್ದು, ಅದರ ಎಲ್ಲಾ ಸಿಬ್ಬಂದಿಗಳನ್ನು ಪ್ರತ್ಯೇಕಿಸಲಾಗುತ್ತಿದೆ. ಬುಧವಾರದಿಂದ ಕೆಲಸ ಪ್ರಾರಂಭಿಸಲು ವೈದ್ಯಕೀಯ ಕಾರ್ಯಕರ್ತರ ಹೊಸ ತಂಡ ಕೇಂದ್ರವನ್ನು ಸೇರಲಿದೆ ಎಂದು ಸಚಿವರು ಹೇಳಿದ್ದಾರೆ.

ಜೂನ್ 1 ರಿಂದ ಕಟ್ಟುನಿಟ್ಟಾದ ಲಾಕ್‌ಡೌನ್‌ ಹೊರತಾಗಿಯೂ, ಮಲೇಷ್ಯಾದಲ್ಲಿ ಸಾಂಕ್ರಾಮಿಕ ರೋಗದ ಪರಿಸ್ಥಿತಿ ಹದಗೆಟ್ಟಿದೆ. ದೇಶದಲ್ಲಿ ಒಟ್ಟು 8,44,000 ಪ್ರಕರಣಗಳು ದೃಡಪಟ್ಟಿದ್ದು, 6,200 ಕ್ಕೂ ಹೆಚ್ಚು ಸಾವುಗಳಾಗಿದೆ. ಆದರೆ ವ್ಯಾಕ್ಸಿನೇಷನ್ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಲಾಗಿದ್ದು, ಇದುವರೆಗೆ ಜನಸಂಖ್ಯೆ ಸುಮಾರು 11% ಜನರಿಗೆ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ: ‘ಬ್ಯಾಂಕಿಂಗ್‌ ಪರೀಕ್ಷೆ: ಕನ್ನಡಿಗರಿಗೆ ದ್ರೋಹ ಬಗೆದ ಮೋದಿ ಸರ್ಕಾರ’ – ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪುಲ್ವಾಮದಲ್ಲಿ ಹತರಾದ ಯೋಧರ ಪತ್ನಿಯರ ಮಂಗಳಸೂತ್ರ ಕಸಿದವರು ಯಾರು? : ಡಿಂಪಲ್ ಯಾದವ್

0
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ತಾಯಂದಿರು, ಸಹೋದರಿಯರ 'ಮಂಗಳಸೂತ್ರ' ಕಿತ್ತುಕೊಳ್ಳಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ತಿರುಗೇಟು ನೀಡಿದ್ದು, "ಪುಲ್ವಾಮ ದಾಳಿಯಲ್ಲಿ ಹತರಾದ ಸೈನಿಕರ...