Homeಮುಖಪುಟದುಬೈನಿಂದ ಬಂದ ಮುಸ್ಲಿಂ ಹುಡುಗರು ಕೊರೊನಾ ಟೆಸ್ಟ್‌ ಮಾಡಿಸಿಲ್ಲ ಎಂದು ಸುಳ್ಳು ಹರಡಿದ ಪಬ್ಲಿಕ್‌ ಟಿವಿ

ದುಬೈನಿಂದ ಬಂದ ಮುಸ್ಲಿಂ ಹುಡುಗರು ಕೊರೊನಾ ಟೆಸ್ಟ್‌ ಮಾಡಿಸಿಲ್ಲ ಎಂದು ಸುಳ್ಳು ಹರಡಿದ ಪಬ್ಲಿಕ್‌ ಟಿವಿ

- Advertisement -
- Advertisement -

ನಮ್ಮ ಧರ್ಮದಲ್ಲಿ ಕೊರೊನಾ ಪರೀಕ್ಷೆಗೆ ಅವಕಾಶವಿಲ್ಲ, ಹಾಗಾಗಿ ಕೊರೊನಾ ಟೆಸ್ಟ್ ಮಾಡಿಸೊಲ್ಲ ಎನ್ನುತ್ತಿದ್ದಾರೆ ನಾಲ್ವರು ಯುವಕರು. ದುಬೈನಿಂದ ಭಟ್ಕಳಕ್ಕೆ ಬಂದಿದ್ದ ನಾಲ್ವರು ಯುವಕರ ಧಿಮಾಕು ಎಂದು ಮಾರ್ಚ್ 14 ರಂದು ಕನ್ನಡದ ಪಬ್ಲಿಕ್ ಟಿವಿ ವರದಿ ಮಾಡಿದೆ. ವಿಡಿಯೋ ನೋಡಿ

ಭಟ್ಕಳದ ಸ್ಥಳೀಯನೊಬ್ಬ ಈ ಸುದ್ದಿ ನೀಡಿರುವುದಾಗಿ ಚಾನೆಲ್‌ನ ನಿರೂಪಕರು ವರದಿ ಮಾಡುತ್ತಾ ಬೇಜವಾಬ್ದಾರಿ ಮುಸ್ಲಿಮರು ಎಂದು ಧರ್ಮವನ್ನು ಎಳೆದುತಂದಿದ್ದಾರೆ.

ಇದನ್ನು ಆಧರಿಸಿ ಬಿಜೆಪಿ ವೆಬ್‌ಸೈಟ್ ಆದ ಒಪಿ ಇಂಡಿಯಾ ನಾಲ್ವರು ಮುಸ್ಲಿಮರು ಕೊರೊನಾ ಟೆಸ್ಟ್ ಮಾಡಿಸಿಕೊಂಡಿಲ್ಲ ಎಂದು ಬರೆದಿದೆ. ಮೈ ನೇಷನ್ ಕೂಡ ಇದನ್ನೇ ವರದಿ ಮಾಡಿದೆ.

ಆದರೆ ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ ಎಂದು ಆಲ್ಟ್‌ ನ್ಯೂಸ್ ಫ್ಯಾಕ್ಟ್ ಚೆಕ್ ನಡೆಸಿದಾಗ ಕಂಡುಬಂದಿದೆ. ಮೊದಲನೇಯದಾಗಿ ಕಾರವಾರದ ಆರೋಗ್ಯ ಅಧಿಕಾರಿಗಳು ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳಿಲ್ಲ ಎಂದಿದ್ದಾರೆ. ಅಲ್ಲದೇ ಭಟ್ಕಳದ ಡಿವೈಎಸ್‌ಪಿ ಮತ್ತು ಎಸಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ.

ವಿಡಿಯೋ ನೋಡಿ

ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಆ ನಾಲ್ವರು ಯುವಕರು ಯಾವುದೇ ತೊಂದರೆ ಇಲ್ಲದೆ ಕೊರೊನಾ ವೈರಸ್ ಪರೀಕ್ಷೆಗೆ ಸಹಕರಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಸಿಸ್ಟೆಂಟ್ ಕಮಿಷನರ್ ಎಸ್.ಭರತ್ “ಧರ್ಮದ ಕಾರಣಕ್ಕೆ ಪರೀಕ್ಷೆಗೆ ಒಳಪಡುವುದಿಲ್ಲ ಎಂದು ಯಾರು ಹೇಳಿಲ್ಲ. ಟಿವಿಯವರು ಪ್ರಸಾರ ಮಾಡಿರುವುದು ಸುಳ್ಳು ಸುದ್ದಿ” ಎಂದಿದ್ದಾರೆ.

ಅಲ್ಲಿಗೆ ಕೇವಲ ಸ್ಥಳೀಯನೊಬ್ಬ ಕೊಟ್ಟ ತಪ್ಪು ಸಂದೇಶವನ್ನಿಟ್ಟುಕೊಂಡು ದೊಡ್ಡ ಸುಳ್ಳು ಸುದ್ದಿ ಹರಡಲಾಗಿದೆ. ಅದಕ್ಕೆ ಧರ್ಮದ ಆಯಾಮವನ್ನು ತರಲಾಗಿದೆ. ಈ ಮೂರು ಚಾನೆಲ್‌ಗಳು ಈ ರೀತಿ ಧರ್ಮದ ಕುರಿತು ಸುಳ್ಳು ಹರಡುತ್ತಿರುವುದು ಸಹ ಮೊದಲೇನಲ್ಲ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಟಿಪ್ಪು ಸುಲ್ತಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎಂಬುವುದು ಸುಳ್ಳು

0
"ಜಿಹಾದಿ ಶಾರುಖ್ ಖಾನ್‌ನ ಭಾರೀ ಬಜೆಟ್‌ನಿಂದ ತಯಾರಾದ ದೇಶದ್ರೋಹಿ, ಮತಾಂಧ ತಿಪ್ಪೆ ಸುಲ್ತಾನನ ನಕಲಿ ಚರಿತ್ರೆ ಬರುತ್ತಿದೆ. ಇಂತಹ ದೇಶದ್ರೋಹಿಯ ಸಿನಿಮಾವನ್ನು ಬಹಿಷ್ಕರಿಸಲು ಶೇರ್ ಮಾಡಿ" ಎಂದು ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ...