Homeಮುಖಪುಟಗುಜರಾತ್‌: ನಮಾಝ್‌ ಮಾಡುತ್ತಿದ್ದಾಗ ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ಪ್ರಕರಣ: ಹಾಸ್ಟೆಲ್‌ ಬಿಟ್ಟು ತೆರಳುವಂತೆ ಸಂತ್ರಸ್ತರಿಗೆ...

ಗುಜರಾತ್‌: ನಮಾಝ್‌ ಮಾಡುತ್ತಿದ್ದಾಗ ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ ಪ್ರಕರಣ: ಹಾಸ್ಟೆಲ್‌ ಬಿಟ್ಟು ತೆರಳುವಂತೆ ಸಂತ್ರಸ್ತರಿಗೆ ಸೂಚನೆ

- Advertisement -
- Advertisement -

ಗುಜರಾತ್‌ ವಿವಿಯ ಹಾಸ್ಟೆಲ್‌ನಲ್ಲಿದ್ದ 7 ವಿದೇಶಿ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ ಬಿಟ್ಟು ತೆರಳಲು ಸೂಚಿಸಲಾಗಿದೆ. ಇತ್ತೀಚೆಗೆ ಹಾಸ್ಟೆಲ್‌ನಲ್ಲಿ ರಂಝಾನ್‌ ಹಿನ್ನೆಲೆ ನಮಾಝ್‌ ಮಾಡುವಾಗ ವಿದ್ಯಾರ್ಥಿಗಳ ಮೇಲೆ ಬಲಪಂಥೀಯ ಗುಂಪೊಂದು ದಾಳಿ ನಡೆಸಿತ್ತು. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು, ಭಾರತದಲ್ಲಿ ವಿದೇಶಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಯನ್ನು ಹುಟ್ಟು ಹಾಕಿತ್ತು.

ಇದೀಗ ಅಫ್ಘಾನಿಸ್ತಾನದ ಆರು ಮತ್ತು ಪೂರ್ವ ಆಫ್ರಿಕಾದ ಓರ್ವ ವಿದ್ಯಾರ್ಥಿಯನ್ನು ಗುಜರಾತ್ ವಿಶ್ವವಿದ್ಯಾನಿಲಯದ ಹಾಸ್ಟೆಲ್ ಕೊಠಡಿಯಿಂದ ನಿರ್ಗಮಿಸುವಂತೆ ಸೂಚಿಸಲಾಗಿದೆ. ಮಾರ್ಚ್ 16ರ ದಾಳಿಯ ಕೆಲವು ದಿನಗಳ ನಂತರ ಅಪ್ಘಾನ್‌ ಮತ್ತು ಗ್ಯಾಂಬಿಯನ್ ನಿಯೋಗವು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿತ್ತು ಮತ್ತು ವಿದ್ಯಾರ್ಥಿಗಳ ಸುರಕ್ಷತಾ ಕ್ರಮಗಳ ಕುರಿತು ಗುಜರಾತ್‌ ವಿವಿಯ ಉಪಕುಲಪತಿಗಳೊಂದಿಗೆ ಸಭೆ ನಡೆಸಿತ್ತು.

ಪಿಟಿಐ ಜೊತೆ ಮಾತನಾಡಿದ ವಿಶ್ವವಿದ್ಯಾನಿಲಯದ ಉಪಕುಲಪತಿ ನೀರ್ಜಾ ಗುಪ್ತಾ, ಅಫ್ಘಾನಿಸ್ತಾನದ ಆರು ಮತ್ತು ಪೂರ್ವ ಆಫ್ರಿಕಾದ ಒಬ್ಬ ವಿದ್ಯಾರ್ಥಿಗೆ ತಮ್ಮ ಹಾಸ್ಟೆಲ್ ಕೊಠಡಿಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇವರು ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಕೆಲ ಆಡಳಿತಾತ್ಮಕ ಕಾರ್ಯ ಬಾಕಿ ಇರುವುದರಿಂದ ವಸತಿ ನಿಲಯದಲ್ಲೇ ಉಳಿದುಕೊಂಡಿದ್ದಾರೆ. ಅವರು ಇನ್ನೂ ಇಲ್ಲಿ ಉಳಿದುಕೊಳ್ಳುವ ಅಗತ್ಯವಿಲ್ಲದಿರುವುದರಿಂದ ಅವರಿಗೆ ತಾಯ್ನಾಡಿಗೆ ಮರಳಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

ನಾವು ಅಗತ್ಯವಿರುವ ದಾಖಲೆಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಅವರು ಈಗ ಸುರಕ್ಷಿತವಾಗಿ ತಮ್ಮ ದೇಶಗಳಿಗೆ ಮರಳಬಹುದು. ನಮ್ಮ ಹಾಸ್ಟೆಲ್‌ನಲ್ಲಿ ಯಾವುದೇ ಹಳೆಯ ವಿದ್ಯಾರ್ಥಿಗಳನ್ನು ಇರಿಸಿಕೊಳ್ಳಲು ನಾವು ಬಯಸುವುದಿಲ್ಲ. ನಾವು ಆಯಾ ದೇಶಗಳ ರಾಯಾಭಾರಿಗಳಿಗೆ ತಿಳಿಸಿದ್ದೇವೆ ಮತ್ತು ಅವರು ಈ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಖಾಲಿ ಮಾಡುವಂತೆ ಸೂಚಿಸಿದ್ದಾರೆ ಎಂದು ಉಪಕುಲಪತಿ ಹೇಳಿದ್ದಾರೆ.

ಗುಜರಾತ್ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ಗೆ ಮಾ.16ರಂದು ನುಗ್ಗಿದ ಗುಂಪೊಂದು ನಮಾಝ್‌ ಮಾಡಿದ್ದಕ್ಕಾಗಿ ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನದ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಶ್ರೀಲಂಕಾ, ತಜಕಿಸ್ತಾನ, ಆಫ್ರಿಕಾ ದೇಶದ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದರು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಂಜಾನ್ ಸಮಯದಲ್ಲಿ ರಾತ್ರಿ ತರಾವೀಹ್ ನಮಾಝ್‌ ಮಾಡಲು ನಾವು ಜಮಾಯಿಸಿದ್ದೆವು. ದೊಣ್ಣೆಗಳು ಮತ್ತು ಚಾಕುಗಳೊಂದಿಗೆ ಶಸ್ತ್ರಸಜ್ಜಿತವಾದ ಗುಂಪೊಂದು ಹಾಸ್ಟೆಲ್‌ಗೆ ನುಗ್ಗಿ ನಮ್ಮ ಮೇಲೆ ದಾಳಿ ಮಾಡಿ  ಕೊಠಡಿಗಳನ್ನು ಧ್ವಂಸಗೊಳಿಸಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಘಟನೆಗೆ ಸಂಬಂಧಿಸಿ ಐವರನ್ನು ಪೊಲೀಸರು ಬಂಧಿಸಿದ್ದರು.

ಇದನ್ನು ಓದಿ: ಕೇಜ್ರಿವಾಲ್‌ ಬಂಧನ ಬಿಜೆಪಿಯ ಶವಪೆಟ್ಟಿಗೆಗಿರುವ ಕೊನೆಯ ಮೊಳೆ: ಎಎಪಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್‌

0
ಪ.ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ...