Homeಮುಖಪುಟರಾಜಕೀಯ ಲಾಕ್‌ಡೌನ್‌ ಧಿಕ್ಕರಿಸಿ! ಕಾರ್ಮಿಕ ಮುಖಂಡ ಆರ್.ಮಾನಸಯ್ಯ ಕರೆ

ರಾಜಕೀಯ ಲಾಕ್‌ಡೌನ್‌ ಧಿಕ್ಕರಿಸಿ! ಕಾರ್ಮಿಕ ಮುಖಂಡ ಆರ್.ಮಾನಸಯ್ಯ ಕರೆ

ಲಾಕ್‌ಡೌನ್‌ನ ಪರಿಣಾಮಗಳು ಭಿನ್ನ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದಂತೆ ದೇಶದ ವಿವಿಧ ಕಡೆಗಳಿಂದ ಹಲವು ರೀತಿಯ ದನಿಗಳು ಮೇಲೇಳುತ್ತಿವೆ. ಟಿಯುಸಿಐ ಮುಖಂಡ ಆರ್.‌ಮಾನಸಯ್ಯನವರು ಬರೆದ ಅಂತಹ ಒಂದು ಬರಹ ಇಲ್ಲಿದೆ.

- Advertisement -

ಮೊಟ್ಟ ಮೊದಲನೆಯದಾಗಿ ನಾನು ದೈಹಿಕ ಅಂತರ ಕಾಯ್ದುಕೊಳ್ಳ ಬೇಕಾದ ಲಾಕ್‌ಡೌನ್‌ ಪರವಾಗಿದ್ದೇನೆ.ಆದರೆ ಪ್ರಜಾಪ್ರಭುತ್ವವನ್ನ ಹಂತ ಹಂತವಾಗಿ ಲಾಕ್ ಡೌನ್ ಮಾಡುವ, ಕೇಂದ್ರ ಸರಕಾರದ ನೀಚಾತಿನೀಚ ರಾಜಕೀಯ ದಬ್ಬಾಳಿಕೆ ವಿರುದ್ದ ಜನತೆ ಹಾಗೂ ರಾಜಕೀಯ ಪಕ್ಷಗಳು ಕೂಡಲೆ ಧ್ವನಿ ಎತ್ತಬೇಕೆಂದು ಮನವಿ ಮಾಡುತ್ತೇನೆ.

ಕೊರೊನಾ ಕಟ್ಟಿ ಹಾಕುಲು ಇದ್ದ ಆರಂಭದ ಎಲ್ಲ ಅವಕಾಶಗಳನ್ನು ಮೋದಿ ಸರಕಾರ ಬಳಸಿಕೊಳ್ಳಲಿಲ್ಲ. ಇದು ಸರಕಾರದ ಮೊದಲನೆಯ ದೇಶಘಾತುಕ ಕೆಲಸ.

ಎರಡನೆಯದಾಗಿ, ಈ ಭೇಮಾರಿಯನ್ನು ಎದುರಿಸಲು ವೈದ್ಯಕೀಯ ಹಾಗೂ ಆಡಳಿತಾತ್ಮಕ ಸಿದ್ದತೆಗಳು ಅತ್ಯಂತ ಕಳಪೆ ಹಾಗೂ ಯಾತಕ್ಕೂ ಸರಿ ಹೋಗದಂತವುಗಳು. ಇದು ಮೋದಿ ಸರಕಾರದ ಎರಡನೆಯ ದೇಶಘಾತುಕ ಕೆಲಸ.

ಮೂರನೆಯದ್ದಾಗಿ, ಜನತಾ ಕಫ್ಯು೯ ಹಾಗೂ 21 ದಿನಗಳ ಕಾಲ ಲಾಕ್‌ಡೌನ್‌ ಘೋಷಣೆಗಿಂತ ಪೂವ೯ದಲ್ಲಿ ವಿವಿಧ ರಾಜ್ಯ ಸರಕಾರಗಳ ಜತೆ, ಸವ೯ಪಕ್ಷಗಳ ಜತೆ, ರೈತ ಕಾಮಿ೯ಕ ಹಾಗೂ ತಜ್ಞರೊಂದಿಗೆ ಸಮಾಲೋಚನೆ ನಡೆಸಲಿಲ್ಲ. ದೀಘ೯ಕಾಲದ ಲಾಕ್‌ಡೌನ್‌ ಎದುರಿಸಲು ಜನರ ಬಳಿ ಏನೇನಿದೆ -ಏನೇನಿರಬೇಕು ಹಾಗೂ ರಾಷ್ಟ್ರೀಯ ತುರ್ತು ಸೇವೆಗಳನ್ನು ಕೊಡ ಮಾಡಲು ಸರಕಾರದ ಬಳಿ  ಯಾವ ಸಿದ್ದತೆಗಳಿರಲಿಲ್ಲ. ಇದು ಸಂಘ ಪರಿವಾರ್‌ ಸರಕಾರದ ಮೂರನೆಯ ಅತೀ ದೊಡ್ಡ ದೇಶ ಘಾತುಕ ಕೆಲಸ.

ಇದಕ್ಕಿಂತ ಮಿಗಿಲಾದ ದ್ರೋಹ ಎಂದರೆ ಇಡೀ ಪರಿಸ್ಥಿಯನ್ನು  ದುರುಪಯೋಗಪಡಿಸಿಕೊಂಡು ವಿರೋಧಮುಕ್ತ ಸವಾ೯ಧಿಕಾರವನ್ನು ಚಲಾಯಿಸಿ, ತನ್ನ ಹಿಂದೂ ರಾಷ್ಟ್ರ ರಾಜಕಾರಣವನ್ನು ದೇಶಾದ್ಯಂತ ಕೊರೊನಾಗಿಂತ ಹೈ ಸ್ಪೀಡನಲ್ಲಿ ಹರಡುತ್ತಿರುವುದು. ಕಳೆದ ಒಂದುವರೆ ತಿಂಗಳಿಂದ 99% ಚಾನಲಗಳು ಹಾಗೂ 75% ಪತ್ರಿಕೆಗಳು ಹಾಗೂ 520000ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣದ ನಕಲಿ ಖಾತೆಗಳ ಮೂಲಕ ವಿರೋಧ ಪಕ್ಷಗಳು,ಪ್ರಜಾಪ್ರಭುತ್ವವಾದಿಗಳು, ಅಂಬೇಡ್ಕರ್ವಾದಿಗಳು, ಮುಸ್ಲೀಮರು, ಕಮ್ಯೂನಿಸ್ಟ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಅತೀ ದೊಡ್ಡ ದುಷ್ಪ್ರಚಾರ ಮಾಡುತ್ತಿರುವುದು.

ಈ ಪೈಕಿ ಅತ್ಯಂತ ಹೇಸಿಗೆ ಹಾಗೂ ನಿಲ೯ಜ್ಯದ ಕೆಲಸ ಎಂದರೆ, ಚಪ್ಪಾಳೆ-ಗಂಟೆ ಬಾರಿಸಲು, ಲೈಟ್ ಆಫ್ ಮಾಡಿ ದೀಪ ಹಚ್ಚಲು ಹಾಗೂ ಬಿಡಿಗಾಸಿನ ಬೆಲೆ ಇಲ್ಲದ ಸಪ್ತ ಸೂತ್ರ ಪ್ರಕಟಿಸಲು ದೇಶದ ಪ್ರಧಾನಿಯು ಸಂಪೂಣ೯ ಸೀಮಿತವಾಗಿ ಹೋಗಿದ್ದು!

ಯಾವ ತಯಾರಿ ಹಾಗೂ ಬಿಡಿಗಾಸಿನ ಸಹಾಯ ನೀಡದೆ ಮತ್ತೆ ಲಾಕ್‌ಡೌನ್‌ ವಿಸ್ತರಣೆ ಮಾಡಿದ್ದು ಅತ್ಯಂತ ರಾಜಕೀಯ ದ್ರೋಹವಾಗಿದೆ.

ಮೋದಿ ಸರಕಾರದ ದುರಾಡಳಿತದಿಂದ ಮೊದಲೆ ಮೂಲೆಗುಂಪಾಗಿದ್ದ ದೇಶದ ಆಥಿ೯ಕತೆ, ಸಂಸದೀಯ ಪ್ರಜಾಪ್ರಭುತ್ವ ಹಾಗೂ ವಿಶಾಲ ಜನವಗ೯ಗಳ ಜೀವನವು ಇನ್ನಷ್ಟು ದರಿದ್ರ ಹಾಗೂ ದಾರುಣ ಹಂತ ತಲುಪಲು ತಾನು ಕಾರಣವಲ್ಲ ಎಂದು ಸಮಥಿ೯ಸಿಕೊಳ್ಳಲು ಎಲ್ಲ ಬಗೆಯ ತಯಾರಿ ನಡೆದಿದೆ.

ಒಟ್ಟಾರೆ, ಕೊರೊನಾ ಹೆಸರಲ್ಲಿ ಅತೀ ದೊಡ್ಡ ರಾಜಕೀಯ ದಿಗ್ಭಂದನ ನಮ್ಮ ದೇಶದಲ್ಲಿ ಬಿಗಿಗೊಳ್ಳುತ್ತಿದೆ. ದೇಶದ ನಾಲ್ಲು ಮೂಲೆಗಳು ಪೊಲೀಸ್ ರಾಜ್ಯವಾಗಿ ಹೋಗಿವೆ.ಪ್ರತಿಪಕ್ಷ -ಪ್ರತಿರೋಧ-ಪ್ರತಿಕ್ರಿಯೆ -ಪ್ರತಿಭಟನೆ-ಪ್ರಶ್ನಿಸುವಿಕೆ-ಜಾತ್ಯತೀತತೆ-ಸಮಾನತೆ-ಸ್ವಾತಂತ್ರ್ಯ -ನ್ಯಾಯಾಪೇಕ್ಷೆ ಎಲ್ಲವೂ ಲಾಕ್ ಡೌನ್ ಆಗಿವೆ!
ಭೇಮಾರಿ ಹೆಸರಲ್ಲಿ ಮನುವಾದ ಹಾಗೂ ಕಾಪೊ೯ರೇಟ್ ಸವಾ೯ಧಿಕಾರ ಹದ್ದುಬಸ್ತು ಮೀರಿ ಹರಡುತ್ತದೆ.
ಈ ದೇಶ ಹಿಂದೆದೂ ಕಂಡರಿಯದ ರೀತಿಯಲ್ಲಿ ಮೋಸಕ್ಕೊಳಗಾಗಿದೆ !
ಕೂಡಲೆ ಇದರ ವಿರುದ್ದ ಮುಂಬೈ ಗುಳೆ ಕಾಮಿ೯ಕರಂತೆ  ಮೈಸೂರು ಸಂತ್ರಸ್ತರಂತೆ ಬೀದಿಗಿಳಿಯದಿದ್ದರೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಅಂತಿಮ ಯಾತ್ರೆಗೂ ನಮಗೆ ದಿಗ್ಬಂಧನ ಬೀಳಲಿದೆ !
ಆನಂದ ತೆಲತುಂಬ್ಡೆಯ ಬಂಧನವಾಯಿತು! ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದಂದೆ ಅವರ ಮುಂಬೈ ನಿವಾಸ ರಾಜಗ್ರುಹದ ಮೇಲೆ ನಿನ್ನೆ ನೀಲಿ ಬಾವುಟ ಇಳಿಸಿ  ಕಪ್ಪು ಬಾವುಟ ಹಾರಾಡಿತು!
ಇವೆಲ್ಲ ಭಾರತದ ಜನಪರ ರಾಜಕೀಯದ ಪ್ರಳಯದ ಸಂಕೇತಗಳು.
ಬನ್ನಿ! ದೈಹಿಕ ಅಂತರ ಕಾಯ್ದುಕೊಂಡೆ ಬೀದಿಗಿಳಿಯೋಣ! ಬಿಜೆಪಿ ಸವಾ೯ಧಿಕಾರದ ವಿರುದ್ದ ನಮಗಾಗಿ ನಾವು ಹೋರಾಡೋಣ!


ಇದನ್ನು ಓದಿ: ಪ್ರೊ. ಆನಂದ್ ತೇಲ್ತುಂಬ್ಡೆ ನರೇಂದ್ರ ಮೋದಿ ಸರ್ಕಾರಕ್ಕೆ ಏಕೆ ಅಪಾಯಕಾರಿಯಾದರು?

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial