‘ದಿ ನ್ಯೂಸ್ ಮಿನಿಟ್’ ಸುದ್ದಿ ಸಂಸ್ಥೆಯ ಸಂಸ್ಥಾಪಕಿ ಧನ್ಯಾ ರಾಜೇಂದ್ರನ್ ಮತ್ತು ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್ ವಿರುದ್ಧದ ಅವಹೇಳನಕಾರಿ ಯೂಟ್ಯೂಬ್ ವಿಡಿಯೋಗಳು ಮತ್ತು ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅವರು ಧನ್ಯಾ ರಾಜೇಂದ್ರನ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಿದ್ದಾರೆ.
This was a big relief. And don’t be mistaken, we will fight each time https://t.co/ITSOLAFnHK
— Dhanya Rajendran (@dhanyarajendran) July 22, 2024
ಮಾಧ್ಯಮ ಸಂಸ್ಥೆಗಳಾದ ಕರ್ಮ ನ್ಯೂಸ್, ಜನ್ಮಭೂಮಿ, ಜನಂ ಟಿವಿ ಮತ್ತು ನ್ಯೂಸ್ ಇಂಡಿಯಾ ಮಲಯಾಳಂನ ಲೇಖನಗಳು ಮತ್ತು ವಿಡಿಯೋಗಳು ಧನ್ಯಾ ರಾಜೇಂದ್ರನ್ ಅವರು “ಭಾರತದಲ್ಲಿ ನಾಗರಿಕ ಸಂಘರ್ಷವನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಜಾರ್ಜ್ ಸೊರೊಸ್‌ನ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ದೇಶ ವಿರೋಧಿ ಚಟುವಟಿಕೆಗಳ ಬಗ್ಗೆ ಕೇಂದ್ರ ಏಜೆನ್ಸಿಗಳಿಗೆ ಮಾಹಿತಿ ಸಿಕ್ಕಿದೆ. ‘ಕಟ್ಟಿಂಗ್ ಸೌತ್-2023’ ಎಂಬ ಅವರ ಕಾರ್ಯಕ್ರಮ ಭಾರತವನ್ನು ವಿಭಜಿಸುವ ಉದ್ದೇಶ ಹೊಂದಿದೆ” ಎಂದು ಆರೋಪಿಸಿತ್ತು.
ಕಳೆದ ವರ್ಷ ಮಾರ್ಚ್ 25 ರಂದು ರಾಜೇಂದ್ರನ್ ಅವರು ಸ್ವತಂತ್ರ ಮಾಧ್ಯಮ ವಾಹಿನಿಗಳೊಂದಿಗೆ “ಕಟಿಂಗ್ ಸೌತ್ 2023” ಎಂಬ ಶೀರ್ಷಿಕೆಯ ಸಮಾವೇಶವನ್ನು ಆಯೋಜಿಸಿದ ನಂತರ ಅವರ ವಿರುದ್ದ ಆರೋಪಗಳನ್ನು ಮಾಡಲಾಗಿತ್ತು.
ರೂ. 2 ಕೋಟಿ ಮಾನನಷ್ಟ ಪರಿಹಾರ, ಕಡ್ಡಾಯ ತಡೆಯಾಜ್ಞೆ ಮತ್ತು ಕರ್ಮ ನ್ಯೂಸ್ ಕ್ಷಮೆಯಾಚಿಸುವಂತೆ ಕೋರಿ ಧನ್ಯಾ ರಾಜೇಂದ್ರನ್ ಮತ್ತು ಡಿಜಿಪಬ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್ ವಿಚಾರಣೆ ನಡೆಸಿದ್ದು, ಧನ್ಯಾ ರಾಜೇಂದ್ರನ್ ವಿರುದ್ಧದ ಅವಹೇಳನಕಾರಿ ವಿಡಿಯೋ, ಪೋಸ್ಟ್‌ಗಳನ್ನು ತೆಗೆದು ಹಾಕಲು ಆದೇಶಿಸಿದೆ.
2023ರಲ್ಲಿ, ನ್ಯೂಸ್‌ಲಾಂಡ್ರಿ ಮತ್ತು ಕನ್‌ಫ್ಲೂಯೆನ್ಸ್ ಮೀಡಿಯಾ ಕೂಡ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು. ‘ಕಟಿಂಗ್ ಸೌತ್- 2023’ ಎಂಬ ಹೆಸರು ವಿಭಜಿಸುವ ಉದ್ದೇಶವನ್ನು ಸೂಚಿಸುವುದಿಲ್ಲ. ಬದಲಾಗಿ, ಕಟಿಂಗ್ ಸೌತ್ ಎಂಬ ಹೆಸರು “ಕಟಿಂಗ್ ಚಾಯ್” ಮತ್ತು “ಕಟಿಂಗ್ ಎಡ್ಜ್” ಪದಗಳ ನಾಟಕವನ್ನು ಆಧರಿಸಿದೆ ಎಂದಿತ್ತು.
ಇದನ್ನೂ ಓದಿ : ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ


