Homeಕರೋನಾ ತಲ್ಲಣಡೆಲ್ಟಾ ಪ್ಲಸ್‌ ರೂಪಾಂತರಿಗೆ ಮಹಾರಾಷ್ಟ್ರದಲ್ಲಿ ಮೊದಲ ಸಾವು: ನಿರ್ಬಂಧಗಳ ಸಡಿಲಿಕೆಯಿಂದ ಹಿಂದೆ ಸರಿದ ಸರ್ಕಾರ

ಡೆಲ್ಟಾ ಪ್ಲಸ್‌ ರೂಪಾಂತರಿಗೆ ಮಹಾರಾಷ್ಟ್ರದಲ್ಲಿ ಮೊದಲ ಸಾವು: ನಿರ್ಬಂಧಗಳ ಸಡಿಲಿಕೆಯಿಂದ ಹಿಂದೆ ಸರಿದ ಸರ್ಕಾರ

- Advertisement -
- Advertisement -

ಕೊರೋನಾ ವೈರಸ್‌ನ ಡೆಲ್ಟಾ ರೂಪಾಂತರಿ ತಳಿಯು ದೇಶದಲ್ಲಿ ಆತಂಕವನ್ನು ಸೃಷ್ಟಿಸಿದ್ದು ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್‌ಗೆ ಮೊದಲ ಸಾವು ಸಂಭವಿಸಿದೆ. 80 ವರ್ಷ ವಯಸ್ಸಿನ ವೃದ್ಧೆಯೊಬ್ಬರು ರತ್ನಗಿರಿ ಜಿಲ್ಲೆಯಲ್ಲಿ ಡೆಲ್ಟಾ ಪ್ಲಸ್ ವೈರಸ್‌ ಸೋಂಕಿಗೆ ಮೃತಪಟ್ಟಿದ್ದಾರೆ. ಮೃತ ಮಹಿಳೆ ವಿವಿಧ ಖಾಯಿಲೆಗಳಿಂದ ನರಳುತ್ತಿದ್ದರು ಎಂದು ಆಸ್ಪತ್ರೆ ಹೇಳಿದೆ.

ಇದುವರೆಗೆ ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್‌ಗೆ ಸಂಬಂಧಿಸಿದ 21 ಪ್ರಕರಣಗಳು ದಾಖಲಾಗಿವೆ. ಹೊಸ ಕೊರೋನಾ ರೂಪಾಂತರಿ ತಳಿಯ ವೈರಸ್‌ಗೆ ಮೊದಲು ಸಾವು ಸಂಭವಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಅನ್‌ಲಾಕ್ ಪ್ರಕ್ರಿಯೆಗಳನ್ನು ನಿಧಾನಗೊಳಿಸಲು ಮುಂದಾಗಿದ್ದು ಕೆಲವು ನಿರ್ಬಂಧಗಳನ್ನು ಮುಂದುವರೆಸುವುದಾಗಿ ಹೇಳಿದೆ.

ಶಾಪಿಂಗ್ ಮಾಲ್‌ಗಳು, ಬಾರ್‌ಗಳನ್ನು ತೆರೆಯಲು ಅವಕಾಶವಿರುವುದಿಲ್ಲ. ಸಂಜೆ 4 ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶವನ್ನು ನೀಡಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಥಾಣೆ ಮತ್ತು ಪುಣೆ ನಗರಗಳಲ್ಲಿ ಕಠಿಣ ನಿರ್ಬಂಧಗಳು ಮುಂದುವರೆಯಲಿವೆ ಎಂದು ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೆ ಭಾರತದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್‌ಗೆ 3 ಜನರು ಮೃತಪಟ್ಟಿದ್ದು ಮಧ್ಯಪ್ರದೇಶದಲ್ಲಿ 2 ಮತ್ತು ಮಹಾರಾಷ್ಟ್ರದಲ್ಲಿ 1 ಸಾವು ಸಂಭವಿಸಿದೆ.

ಕರ್ನಾಟಕ ಸೇರಿದಂತೆ ಭಾರತದ ಇತರ ರಾಜ್ಯಗಳಲ್ಲೂ ಡೆಲ್ಟಾ ಪ್ಲಸ್ ಕರೊನಾ ರೂಪಾಂತರಿ ತಳಿಯ ವೈರಸ್ ಪತ್ತೆಯಾಗಿದ್ದು ವೈದ್ಯರು ಮತ್ತು ತಜ್ಞರು ಹೊಸ ಮಾದರಿಯ ರೂಪಾಂತರಿ ವೈರಸ್ ಕುರಿತು ಕಠಿಣ ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ.


ಇದನ್ನೂ ಓದಿ : ನೆರೆಹೊರೆ ನಿವಾಸಿಗಳಿಗೆ ಬೆದರಿಕೆ ಆರೋಪ: ನಟಿ ಪಾಯಲ್ ರೋಹ್ಟಗಿ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎನ್‌ಡಿಎ ಸೇರಿದರೆ ಪ್ರಧಾನಿ ಮೋದಿಯಿಂದ ಕೇರಳಕ್ಕೆ ದೊಡ್ಡ ಪ್ಯಾಕೇಜ್: ಪಿಣರಾಯಿ ವಿಜಯನ್‌ಗೆ ಆಫರ್ ಕೊಟ್ಟ ಅಠಾವಳೆ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಜೆಪಿ ನೇತೃತ್ವದ ಎನ್‌ಡಿಎ ಸೇರಬೇಕೆಂದು ಕೇಂದ್ರ ರಾಜ್ಯ ಸಚಿವ ರಾಮದಾಸ್ ಬಂಡು ಅಠಾವಳೆ ಬುಧವಾರ ಸಲಹೆ ನೀಡಿದ್ದಾರೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ...

ಸದನದಲ್ಲೇ ನೀಲಿ ಚಿತ್ರ ನೋಡಿ ರಾಜ್ಯದ ಮಾನ ಕಳೆದವರು ಯಾವ ಪಕ್ಷದವರು? ಬಿಜೆಪಿಗೆ ಹರಿಪ್ರಸಾದ್ ತಿರುಗೇಟು

ಸದನದ ಶಿಸ್ತು, ಘನತೆ, ಗೌರವದ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಕಿಂಚಿತ್ತಾದರೂ ನೈತಿಕತೆ ಇದೆಯೇ? ಎಂದು ವಿಧಾನಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ. ಗುರುವಾರ (ಜ.22) ವಿಶೇಷ ಅಧಿವೇಶನದ ವೇಳೆ...

ಆಂಧ್ರದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧ?

ಕಳೆದ ತಿಂಗಳು ಆಸ್ಟ್ರೇಲಿಯಾ ಜಾರಿಗೆ ತಂದಂತೆಯೇ, 16 ವರ್ಷದೊಳಗಿನ ಮಕ್ಕಳಿಗಾಗಿ ಸರ್ಕಾರವು ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ಯೋಜಿಸುತ್ತಿದೆ ಎಂದು ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್ ಬಹಿರಂಗಪಡಿಸಿದ್ದಾರೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ...

ಜಾರ್ಖಂಡ್| ಚೈಬಾಸಾ ಎನ್‌ಕೌಂಟರ್‌; ಕುಖ್ಯಾತ ಮಾವೋವಾದಿ ನಾಯಕ ‘ಅನಲ್ ದಾ’ ಸೇರಿ 8 ನಕ್ಸಲರ ಹತ್ಯೆ

ಜಾರ್ಖಂಡ್ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಿದೆ. ಚೈಬಾಸಾ ಜಿಲ್ಲೆಯಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ, ಭದ್ರತಾ ಪಡೆಗಳು 8 ನಕ್ಸಲರನ್ನು ಕೊಂದಿವೆ....

‘ಕರ್ನಾಟಕವನ್ನು ಎಲ್ಲಾ ರೀತಿಯಲ್ಲಿ ಕಡೆಗಣಿಸುತ್ತಿದ್ದ ಬಿಜೆಪಿ ಈಗ ರಾಜ್ಯಪಾಲರ ಮೂಲಕವೇ ಕನ್ನಡಿಗರನ್ನು ಅವಮಾನಿಸಿದೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಬಿಜೆಪಿ ಕನ್ನಡಿಗರನ್ನು ಅವಮಾನಿಸುವ ಪ್ರಕ್ರಿಯೆ ಮುಂದುವರೆದಿದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.  2026 ಜನವರಿ 22ರ, ಗುರುವಾರ ಸದನದಲ್ಲಿ ನಡೆದ ಬೆಳವಣಿಗೆಗಳ ಕುರಿತು ತಮ್ಮ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಖರ್ಗೆ, ‘ಸರ್ಕಾರದ ಭಾಷಣವನ್ನು...

ಭೋಜಶಾಲಾ-ಕಮಾಲ್ ಮೌಲಾ ಮಸೀದಿ ವಿವಾದ : ವಸಂತ ಪಂಚಮಿ ಪೂಜೆ, ಜುಮಾ ನಮಾಜ್ ಶಾಂತಿಯುತವಾಗಿ ನಡೆಸಲು ಸುಪ್ರೀಂ ಆದೇಶ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಭೋಜ ಶಾಲಾ-ಕಮಾಲ್ ಮೌಲಾ ಸಂಕೀರ್ಣದಲ್ಲಿ ವಸಂತ ಪಂಚಮಿ ಪೂಜೆ ಮತ್ತು ಶುಕ್ರವಾರದ ಜುಮಾ ನಮಾಝ್ ಎರಡನ್ನೂ ಶಾಂತಿಯುತವಾಗಿ ನಡೆಸುವಂತೆ ನೋಡಿಕೊಳ್ಳಲು ಸುಪ್ರೀಂ ಕೋರ್ಟ್ ಗುರುವಾರ (ಜ.22) ನಿರ್ದೇಶನಗಳನ್ನು ನೀಡಿದೆ. ಭೋಜ...

ಜಮ್ಮು-ಕಾಶ್ಮೀರ| 200 ಅಡಿ ಆಳದ ಕಂದಕಕ್ಕೆ ಉರುಳಿದ ವಾಹನ; 10 ಜನ ಸೇನಾ ಸಿಬ್ಬಂದಿ ಸಾವು

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾ ಪ್ರದೇಶದಲ್ಲಿ 200 ಅಡಿ ಆಳದ ಕಂದಕಕ್ಕೆ ವಾಹನ ಉರುಳಿ 10 ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಒಟ್ಟು 17 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸೇನಾ...

ಉತ್ತರ ಪ್ರದೇಶ ಮರ್ಯಾದೆಗೇಡು ಹತ್ಯೆ; ಅಂತರ್ಧರ್ಮೀಯ ಜೋಡಿಯನ್ನು ಕೊಂದ ಯುವತಿ ಸಹೋದರರು

ಉತ್ತರ ಪ್ರದೇಶದ ಮೊರಾದಾಬಾದ್‌ನ ಕಾಡಿನಲ್ಲಿ ಅಂತರ್ಧರ್ಮೀಯ ಜೋಡಿಯ ಶವ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆಕೆಯ ಸಹೋದರರು ಮರ್ಯಾದೆಗೇಡು ಹತ್ಯೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯನ್ನು 19 ವರ್ಷದ ಕಾಜಲ್ ಎಂದು ಗುರುತಿಸಲಾಗಿದ್ದು, ಮೃತ...

ತೀವ್ರ ವಿರೋಧದ ನಂತರ ಇಸ್ಲಾಮೋಫೋಬಿಕ್ ಹೇಳಿಕೆ ಹಿಂಪಡೆದು, ಕ್ಷಮೆಯಾಚಿಸಿದ ಕೇರಳದ ಸಿಪಿಐ(ಎಂ) ಸಚಿವ ಸಾಜಿ ಚೆರಿಯನ್

ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮುಸ್ಲಿಂ ವಿಜೇತರ ಬಗ್ಗೆ ತಮ್ಮ ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದ್ದ ಸಿಪಿಐ(ಎಂ) ಹಿರಿಯ ನಾಯಕ ಮತ್ತು ಕೇರಳ ಸಚಿವ ಸಾಜಿ ಚೆರಿಯನ್ ಬುಧವಾರ ತಮ್ಮ ಹೇಳಿಕೆಯನ್ನು  ಹಿಂತೆಗೆದುಕೊಂಡಿದ್ದಾರೆ. ಪಕ್ಷ,...

ರಾಜ್ಯಪಾಲರಿಂದ ಸಂವಿಧಾನದ ವಿಧಿಗಳ ಉಲ್ಲಂಘನೆ; ಜನಪ್ರತಿನಿಧಿಗಳ ಸಭೆಯನ್ನು ಅವಮಾನಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

"ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿದ್ದಾರೆ. ಅವರ ಈ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ. ಇದನ್ನು ನಾವು ಖಂಡಿಸುತ್ತೇವೆ. ಈ...