ನೂರಾರು ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಅವರ ತಾಯ್ನಾಡಿಗೆ ಗಡೀಪಾರು ಮಾಡುವ ಬದಲು, ಅನಿರ್ದಿಷ್ಟ ಅವಧಿಗೆ ಭಾರತದ ಬಂಧನ ಶಿಬಿರಗಳಲ್ಲಿ ಇರಿಸುವ ಉದ್ದೇಶವೇನು ಎಂದು ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಬಾಂಗ್ಲಾದೇಶಿ ವಲಸಿಗರ ಗಡೀಪಾರು
“ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದ ವ್ಯಕ್ತಿಯನ್ನು ಆಪಾದಿತ ಅಪರಾಧಕ್ಕೆ ಶಿಕ್ಷೆಗೊಳಗಾದ ನಂತರ, ಅವರು ಭಾರತದ ಪ್ರಜೆಯಲ್ಲ ಎಂದು ದೃಢಪಟ್ಟಿಲ್ಲವೇ ಎಂದು ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳಿಂದ ನಾವು ತಿಳಿದುಕೊಳ್ಳಲು ಬಯಸುತ್ತೇವೆ” ಎಂದು ಸುಪ್ರೀಂಕೋರ್ಟ್ ಹೇಳಿದೆ. ಬಾಂಗ್ಲಾದೇಶಿ ವಲಸಿಗರ ಗಡೀಪಾರು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನೂರಾರು ಅಕ್ರಮ ವಲಸಿಗರನ್ನು ಅನಿರ್ದಿಷ್ಟ ಅವಧಿಗೆ ಬಂಧನ ಶಿಬಿರಗಳಲ್ಲಿ ಇರಿಸುವುದರ ಉದ್ದೇಶವೇನು? ಈ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರಿಸಬೇಕಾಗಿದೆ” ಎಂದು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನೊಳಗೊಂಡ ಇಬ್ಬರು ನ್ಯಾಯಾಧೀಶರ ಪೀಠ ಹೇಳಿದೆ.
2013ರ ಪ್ರಕರಣವೊಂದನ್ನು ಪರಿಗಣಿಸುವಾಗ ಈ ಅಭಿಪ್ರಾಯವನ್ನು ಸುಪ್ರಿಂಕೋರ್ಟ್ ಹೇಳಿದೆ. ಅರ್ಜಿಯ ವಿಚಾರಣೆಯ ಸಮಯದಲ್ಲಿ, ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರನ್ನು 1946 ರ ವಿದೇಶಿಯರ ಕಾಯ್ದೆಯಡಿಯಲ್ಲಿ ಬಂಧಿಸಿ ಶಿಕ್ಷೆ ವಿಧಿಸಿದ್ದರೆ, ಶಿಕ್ಷೆಯ ಅವಧಿಯ ನಂತರ ಅವರನ್ನು ತಕ್ಷಣವೇ ಅವರ ತಾಯ್ನಾಡಿಗೆ ಗಡೀಪಾರು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಪೀಠವು ತನ್ನ ಆದೇಶದಲ್ಲಿ ಸುಮಾರು 850 ಅಕ್ರಮ ವಲಸಿಗರನ್ನು ಸುಧಾರಣಾ ಗೃಹಗಳಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದು, ನಿಖರವಾದ ಅಂಕಿಅಂಶಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿದೆ.
“ವಿದೇಶಿಯರ ಕಾಯ್ದೆಯಡಿಯಲ್ಲಿ ಶಿಕ್ಷೆ ಅನುಭವಿಸಿದ ನಂತರ ಮತ್ತು ಸಂಪೂರ್ಣ ಶಿಕ್ಷೆಯನ್ನು ಅನುಭವಿಸಿದ ನಂತರ ಇಲ್ಲಿಯವರೆಗೆ ಎಷ್ಟು ಅಕ್ರಮ ವಲಸಿಗರು ವಿವಿಧ ಬಂಧನ ಶಿಬಿರಗಳು / ಸುಧಾರಣಾ ಗೃಹಗಳಲ್ಲಿದ್ದಾರೆ?” ಎಂದು ನ್ಯಾಯಪೀಠ ಕೇಂದ್ರ ಸರ್ಕಾರವನ್ನು ಕೇಳಿದೆ.
ಇದನ್ನೂಓದಿ: ಏಕರೂಪದ ಟೋಲ್ ನೀತಿ: ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರಿಗೆ ಪರಿಹಾರ ನೀಡಲು ಕೇಂದ್ರದ ಹೊಸ ಯೋಜನೆ
ಏಕರೂಪದ ಟೋಲ್ ನೀತಿ: ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರಿಗೆ ಪರಿಹಾರ ನೀಡಲು ಕೇಂದ್ರದ ಹೊಸ ಯೋಜನೆ


