ಅಕ್ರಮ ವಲಸಿಗರನ್ನು ಗಡೀಪಾರು ಮಾಡುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವುದೇ ತಪ್ಪು ಮಾಡಿಲ್ಲ ಎಂದು ಬಿಜೆಪಿ ಆಡಳಿತದ ಹರ್ಯಾಣ ಸಚಿವ ಅನಿಲ್ ವಿಜ್ ಗುರುವಾರ ಹೇಳಿದ್ದಾರೆ. ದೇಶವೊಂದು ತನ್ನ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸುವವರನ್ನು ಹೊರಹಾಕುವ ಎಲ್ಲಾ ಹಕ್ಕನ್ನು ಹೊಂದಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಭಾರತೀಯರ ಗಡಿಪಾರು
ತಮ್ಮ ಸರ್ಕಾರವು ಅಕ್ರಮ ವಲಸಿಗರ ಗಡಿಪಾಡು ಮಾಡುತ್ತದೆ ಎಂದು ಕಳೆದ ತಿಂಗಳು ಪ್ರಮಾಣವಚನ ಸ್ವೀಕರಿಸುವಾಗ ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧಾರ ಘೋಷಿಸಿದ್ದರು. ವಲಸಿಗರ ವಿರುದ್ಧದ ಅವರ ಕಠಿಣ ಕ್ರಮದ ಭಾಗವಾಗಿ ಅಮೆರಿಕದಲ್ಲಿ ಇರುವ ಭಾರತೀಯ ಅಕ್ರಮ ವಲಸೆಗಾರರ ಮೊದಲ ಬ್ಯಾಚ್ ಪಂಜಾಬ್‌ಗೆ ಬಂದಿಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬುಧವಾರ ಅಮೆರಿಕದ ಮಿಲಿಟರಿ ವಿಮಾನದಲ್ಲಿ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸುಮಾರು 104 ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರಿನ ನಂತರ ಸಚಿವ ಅನಿಲ್ ವಿಜ್ ಈ ಹೇಳಿಕೆ ನೀಡಿದ್ದಾರೆ.
“ವ್ಯಕ್ತಿಯೊಬ್ಬ ಅಕ್ರಮವಾಗಿ ಬೇರೆ ದೇಶಕ್ಕೆ ಹೋದರೆ, ಆ ರಾಷ್ಟ್ರವು ಅವರನ್ನು ಹೊರಹಾಕುವ ಎಲ್ಲ ಹಕ್ಕನ್ನು ಹೊಂದಿದೆ. ಈ ವಿಚಾರದಲ್ಲಿ ಟ್ರಂಪ್ ಯಾವುದೇ ತಪ್ಪು ಮಾಡಿಲ್ಲ” ಎಂದು ವಿಜ್ ಹೇಳಿದ್ದಾರೆ. ಪಂಜಾಬ್‌ನ ಎನ್‌ಆರ್‌ಐ ವ್ಯವಹಾರಗಳ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಗಡೀಪಾರು ಕುರಿತು ಅಮೆರಿಕ ಅಧ್ಯಕ್ಷರೊಂದಿಗೆ ಮಾತನಾಡಲು ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತೀಯರ ಗಡಿಪಾರು
“ಇದರಿಂದ ಒಂದು ನಿದರ್ಶನ ಪಡೆದುಕೊಳ್ಳಿ ಎಂದು ನಾನು ಸಲಹೆ ನೀಡುತ್ತೇನೆ. ಈ ದೇಶದಲ್ಲಿ ಲಕ್ಷಾಂತರ ಜನರು ಅಕ್ರಮವಾಗಿ ಇದ್ದಾರೆ… ಅವರು ಬೇರೆಡೆ ಜನಿಸಿದವರು, ಆದರೆ ನಾವು ಅವರಿಗೆ ಆಹಾರವನ್ನು ನೀಡುತ್ತಿದ್ದೇವೆ. ಅವರನ್ನು ಅವರವರ ದೇಶಗಳಿಗೆ ಹಿಂತಿರುಗಿಸಬೇಕು” ಎಂದು ಅವರು ಹೇಳಿದ್ದಾರೆ.
ಬುಧವಾರ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದ 104 ಭಾರತೀಯ ಅಕ್ರಮ ವಲಸೆಗಾರರಲ್ಲಿ ತಲಾ 33 ಜನರು ಹರಿಯಾಣ ಮತ್ತು ಗುಜರಾತ್‌ನವರಾಗಿದ್ದು, 30 ಜನರು ಪಂಜಾಬ್‌ನವರು. ತಲಾ ಮೂವರು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದವರು ಮತ್ತು ಇಬ್ಬರು ಚಂಡೀಗಢದವರು.
ಬುಧವಾರದಂದು ಪಂಜಾಬ್ ಸಚಿವ ಧಲಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಪ್ರವೇಶವನ್ನು ಕೋರಿದ್ದು, ಭಾರತೀಯರ ಗಡೀಪಾರು ಕುರಿತು ತಮ್ಮ “ಸ್ನೇಹಿತ” ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂಓದಿ: ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್ ನಕಾರ : ಸಿಎಂ ಸಿದ್ದರಾಮಯ್ಯ ನಿರಾಳ
ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್ ನಕಾರ : ಸಿಎಂ ಸಿದ್ದರಾಮಯ್ಯ ನಿರಾಳ


