ಬಿಜೆಪಿ ಮೈತ್ರಿ ಪಕ್ಷವಾದ ಎನ್‌ಸಿಪಿಯ ನಾಯಕ ಅಜಿತ್ ಪವಾರ್ ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ, ಬೇನಾಮಿ ಆಸ್ತಿ ವಹಿವಾಟು ತಡೆ ಮೇಲ್ಮನವಿ ನ್ಯಾಯಮಂಡಳಿಯು ಅಜಿತ್ ಪವಾರ್ ಮತ್ತು ಅವರ ಕುಟುಂಬದ ವಿರುದ್ಧದ ಬೇನಾಮಿ ಆಸ್ತಿ ಮಾಲೀಕತ್ವದ ಆರೋಪವನ್ನು ಶುಕ್ರವಾರ ವಜಾಗೊಳಿಸಿದೆ ಎಂದು ವರದಿಯಾಗಿದೆ. ಉಪ ಮುಖ್ಯಮಂತ್ರಿಯಾದ
ನ್ಯಾಯಾಲಯದ ತೀರ್ಪಿನ ನಂತರ, ಆದಾಯ ತೆರಿಗೆ ಇಲಾಖೆಯು 2021 ರ ಬೇನಾಮಿ ವಹಿವಾಟು ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ 1,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅಜಿತ್ ಕುಮಾರ್ ಅವರಿಗೆ ಬಿಡುಗಡೆ ಮಾಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇತ್ತೀಚೆಗೆ ಚುನಾಯಿತರಾದ ಮಹಾಯುತಿ ಸರ್ಕಾರದ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ ಒಂದು ದಿನದ ನಂತರ ಇದು ನಡೆದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಾಕಷ್ಟು ಪುರಾವೆಗಳ ಆಧಾರದ ಮೇಲೆ ಅಜಿತ್ ಪವಾರ್ ಮತ್ತು ಅವರ ಕುಟುಂಬಕ್ಕೆ ಬೇನಾಮಿ ಮಾಲೀಕತ್ವದ ಅಡಿಯಲ್ಲಿ ಆಸ್ತಿಗಳನ್ನು ಲಿಂಕ್ ಮಾಡಿದ 2021 ರ ಪ್ರಕರಣವನ್ನು ನ್ಯಾಯಮಂಡಳಿ ವಜಾಗೊಳಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಉಪ ಮುಖ್ಯಮಂತ್ರಿಯಾದ
ಆದಾಯ ತೆರಿಗೆ ಇಲಾಖೆಯು ಅಕ್ಟೋಬರ್ 7, 2021 ರಂದು ಅಜಿತ್ ಕುಮಾರ್ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಸತಾರಾದಲ್ಲಿನ ಸಕ್ಕರೆ ಕಾರ್ಖಾನೆ, ದೆಹಲಿಯ ಫ್ಲಾಟ್, ಗೋವಾದ ರೆಸಾರ್ಟ್ ಮತ್ತು ಮಹಾರಾಷ್ಟ್ರದಾದ್ಯಂತ ಹಲವಾರು ಭೂಮಿ ಸೇರಿದಂತೆ ಹಲವು ಆಸ್ತಿಗಳು ಸೇರಿತ್ತು.
ಆದಾಯ ಇಲಾಖೆ ದಾಳಿ ನಡೆಯುವ ವೇಳೆ, ಅಜಿತ್ ಪವಾರ್ ಅವರು ಅವಿಭಜಿತ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಭಾಗವಾಗಿದ್ದರು. ಈ ವೇಳೆ ಜೂನ್ 2022ರಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿತ್ತು. ಈ ವೇಳೆ ಅಜಿತ್ ಪವಾರ್ ಅವರು ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು. ಸರ್ಕಾರ ಪತನದ ನಂತರ ಅವರು ಪಕ್ಷವನ್ನು ಒಡೆದು ಜುಲೈ 2023 ರಿಂದ ಶಿಂಧೆ ನೇತೃತ್ವದ ಶಿವಸೇನೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಮುಂದುವರೆದಿದ್ದರು. ಈ ಸರ್ಕಾರಕ್ಕೆ ಬಿಜೆಪಿ ಕೂಡಾ ಸೇರಿದ್ದು, ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿದ್ದರು.
ಶುಕ್ರವಾರ ನ್ಯಾಯಪೀಠವು ಬೇನಾಮಿ ವ್ಯವಹಾರದ ಪ್ರತಿಪಾದನೆಯನ್ನು ತಿರಸ್ಕರಿಸಿ, ಆರೋಪಗಳಿಗೆ ಸಾಕಷ್ಟು ಪುರಾವೆಗಳ ಕೊರತೆಯಿದೆ ಎಂದು ಹೇಳಿದೆ. “ಅಜಿತ್ ಪವಾರ್, [ಪತ್ನಿ] ಸುನೇತ್ರಾ ಪವಾರ್ ಮತ್ತು [ಮಗ] ಪಾರ್ಥ್ ಪವಾರ್ ಬೇನಾಮಿ ಆಸ್ತಿಗಳನ್ನು ಸಂಗ್ರಹಿಸಲು ಹಣವನ್ನು ವರ್ಗಾಯಿಸಿಲ್ಲ” ಎಂದು ನ್ಯಾಯಪೀಠ ತೀರ್ಪು ನೀಡಿದೆ. ಎಲ್ಲಾ ಆಸ್ತಿ ವಹಿವಾಟುಗಳನ್ನು ಕಾನೂನುಬದ್ಧವಾಗಿ ನಡೆಸಲಾಗಿದೆ ಮತ್ತು ದಾಖಲೆಗಳಲ್ಲಿ ಯಾವುದೇ ಅಕ್ರಮಗಳಿಲ್ಲ ಎಂದು ಅಜಿತ್ ಪವಾರ್ ಅವರ ಕಾನೂನು ಸಲಹೆಗಾರರು ವಾದಿಸಿದ್ದರು.


