Homeಅಂಕಣಗಳುದೊಡ್ಡ ಗೌಡರ ಜೊತೆ ಹೀಗೊಂದು ಕಾಲ್ಪನಿಕ ಸಂದರ್ಶನ

ದೊಡ್ಡ ಗೌಡರ ಜೊತೆ ಹೀಗೊಂದು ಕಾಲ್ಪನಿಕ ಸಂದರ್ಶನ

- Advertisement -
- Advertisement -

| ಥೂತ್ತೇರಿ |

ನಮ್ಮ ಮಾಜಿ ಪ್ರಧಾನಿಗಳಾದ ದೇವೇಗೌಡರು ಎಡೂರಪ್ಪನ ಸರಕಾರ ಬೀಳಲು ಬಿಡುವುದಿಲ್ಲ ಎಂಬಂತಹ ಮಾತನಾಡಿದಂದಿನಿಂದ ಸರಿಯಾಗಿ ನಿದ್ರೆಯೇ ಬಾರದಾಗಿದೆಯಲ್ಲಾ. ಗೌಡರ ಮಾತು ನಿಜವೋ, ಕನಸೋ ಇದರ ಮರ್ಮವೇನೆಂದು ತಿಳಿದುಕೊಳ್ಳಲು ಅವರಿಗೇ ಫೋನ್ ಮಾಡಿದರೆ ಹೇಗೆ ಎಂದು ಯೋಚಿಸಿ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: ಸಿದ್ದಲಿಂಗೇಶಾ ಎಡೆಯೂರು ಸಿದ್ದಲಿಂಗೇಶಾ ಶ್ರೀ ಎಡೆಯೂರು ಸಿದ್ದಲಿಂ….. “ಹಲೋ….”
“ನಮಸ್ಕಾರ ಸಾರ್ ನಾನು ಯಾಹೂ.”
“ಏನ್ಹೇಳಿ ಯಾಹು ಅವುರೆ.”
“ಒಂದೆರಡು ಮಾತಿವೆ ಸಾರ್.”
“ಅದರಿಂದೇನು ಪ್ರಯೋಜನ.”
“ಪತ್ರಿಕೆಗೆ ಬರೀಬೇಕು ಸಾರ್.”
“ಗೌರಿ ಸಿಸ್ಟರ್ ಪತ್ರಿಕೆ ನಿಂತೋಗಲಿಲ್ಲವ.”
“ಇಲ್ಲ ಸಾರ್, ನ್ಯಾಯಪಥ ಅಂತ ಶುರುಮಾಡಿದ್ದೀವಿ.”
“ಹೌದಾ ಒಂದು ಕಳಿಸಿಕೊಡಿ.”
“ಆಯ್ತು ಸಾರ್, ಎಡೂರಪ್ಪನಿಗೆ ಬೆಂಬಲ ಘೋಷಣೆ ಮಾಡಿದ್ರಲ್ಲ ಸಾ.”
“ಯಾಕೆ ಅನ್ನೋ ವಿವರ ಹೇಳಿದ್ದೀನಿ.”
“ಅದು ಕೋಮುವಾದಿ ಪಾರ್ಟಿ ನೀವು ಜಾತ್ಯತೀತ ಜನತಾದಳ ಅಲ್ಲವ ಸಾರ್.”
“ಅದು ಸರಿ, ಈಗ ಚುನಾವಣೆ ಬಂದ್ರೇ ತಡಕಳೋ ಶಕ್ತಿಯಿಲ್ಲ.”
“ಹಾಗಿದ್ರೆ ಕಾಂಗ್ರೆಸ್‍ಗೆ ಸಪೋರ್ಟ್ ಮಾಡಿ ಮಲ್ಲಿಕಾರ್ಜುನ ಖರ್ಗೆನ ಮುಖ್ಯಮಂತ್ರಿ ಮಾಡಬಹುದಿತ್ತಲ್ಲ ಸಾರ್.”
“ಅಲ್ಲಿನ ಅಹಿಂದ ನಾಯಕರು ಅದಿಕ್ಕೆಲ್ಲ ಅವಕಾಶ ಕೊಡಲ್ಲ.”
“ಸಾರ್ ನಿಮ್ಮ ಮಾತಿನಿಂದ ಕರ್ನಾಟಕದ ಸಾಮಾನ್ಯ ಜನರ ಪ್ರಜ್ಞೆ ದಂಗುಬಡುದೋಗ್ಯದೆ ಸಾರ್.”
“ಯಾವ ಮಾತಿನಿಂದರೀ.”
“ಅದೇ ಎಡೂರಪ್ಪನ ಸರಕಾರಕ್ಕೆ ಸಪೋರ್ಟ್ ಮಾಡದ್ರ ಬಗ್ಗೆ.”
“ಅಯ್ಯೋ ರಾಮ ಆಗ್ಲೆ ಹೇಳಿದೆನಲ್ರೀ.”
“ಅದು ಸರಿ ಸರ್. ಕುಮಾರಣ್ಣ ಬಿಜೆಪಿ ಜೊತೆ ಸರಕಾರ ಮಾಡದೇ ಆದ್ರೆ ನನ್ನ ಹೆಣದ ಮೇಲೆ ಮಾಡಬೇಕು ಅಂದಿದ್ರಿ.”
“ಹೌದು ಹೇಳಿದ್ದೆ.”
“ನಾವೆಲ್ಲ ಹೆದರಿ ಪದ್ಮನಾಭನಗರದ ನಿಮ್ಮ ಮನೆ ಹತ್ರಕೆ ಓಡಿ ಬಂದಾಗ ನೀವು ದೆಹಲಿಯಿಂದ ಬಂದಿದ್ದ ಅಂಥೋನಿ, ಸಿಂಧ್ಯಾ, ಎಂ.ಪಿ.ಪ್ರಕಾಶ್, ಮಿರಾಜುದ್ದೀನ್, ಡಿ.ಮಂಜುನಾಥ ಇವರನ್ನ ಕೂರಿಸಿಕೊಂಡು ಅದೇ ಹೆಣದ ಮಾತೇಳತ ಇದ್ರಿ. ಅವುರು ನಿಜ ಅನ್ನಕಂಡು ಗಾಬರಿಯಾಗಿದ್ರು.”
“ನಿಜ ಅಲವೇನ್ರೀ.”
“ನಿಜ ಸಾರ್. ಆದ್ರು ಕುಮಾರಣ್ಣ ಎಡೂರಪ್ಪನ ಜೊತೆ ಸೇರಿಕೊಂಡು ಸರಕಾರ ಮಾಡೇಬುಟ್ರು.”
“ಎಲ್ಲವೂ ನಮ್ಮ ಕೈಮೀರಿ ಹೋಯ್ತಲ್ರೀ ಆಗ.”
“ಆದ್ರು ತಾವು ಕೆಲವೇ ದಿನದಲ್ಲಿ ಕುಮಾರಣ್ಣನ ಜೊತೆ ಸೇರಿಕಂಡ್ರಿ ಸಾರ್.”
“ಯಾಕೆ ಅಂದ್ರೆ, ಕುಮಾರಣ್ಣನ್ನ ಮುಗಸೋದಕ್ಕೆ ದುಷ್ಟ ಚತುಷ್ಟಯರುಗಳು ಕಾಯ್ತಾಯಿದ್ರು. ಅವರಿಂದ ಕುಮಾರಸ್ವಾಮಿನ ಉಳಿಸಿಕೊಬೇಕಾಗಿತ್ತು.”
“ಸರಿ ಸಾರ್, ತಂದೆಯಾದವನ ಕರ್ತವ್ಯ ಅದು. ಅದೇ ಟೈಮಲ್ಲಿ ಸಂಸತ್ತಲ್ಲಿ ನೀವು ಉತ್ತರ ಕೊಡ್ತ ನಾನಿಲ್ಲದ ಸಮಯದಲ್ಲಿ ನನ್ನ ಮಗನನ್ನ ಆರಿಸಿಕೊಂಡೋಗಿ ಸರಕಾರ ಮಾಡಿದ್ರು ಅಂದ್ರಿ ಸಂಸತ್ತು ಅದನ್ನ ನಂಬಿತ್ತು.”
“ಸಂಸತ್ತಲ್ಲಿ ಸುಳ್ಳು ಹೇಳಕ್ಕಾಗತ್ತೇನ್ರೀ.”
“ಹೇಳಬವುದು ಸಾರ್, ಈಗ ಇಡೀ ಬಿಜೆಪಿಗಳು ಸಂಸತ್ತಲ್ಲಿ ಬರೀ ಅದ್ನೇ ಹೇಳ್ತಾ ಅವುರೆ.”
“ಅವುರ ವಿಷಯ ಬಿಡಿ, ವಾಸ್ತವಾಂಶವನ್ನ ನಾನು ಹೇಳಿದೆ.”
“ಹೇಳಿದ್ರಿ, ಅದರಂಗೇ ನಡಕಂಡ್ರಿ ಸಾರ್, ಇಪ್ಪತ್ತು ತಿಂಗಳ ನಂತರ ಎಡೂರಪ್ಪನಿಗೆ ಅವಕಾಶ ಕೊಡಲಿಲ್ಲ. ಅಕಾಲಿಕ ಚುನಾವಣೆ ಬಂತು.”
“ಆ ಇತಿಹಾಸ ಎಲ್ಲ ಈಗೇಕೆ.”
“ಈಗೇಕೆ ಅಂದ್ರೇ, ಅಂದು ನೀವು ಬಿಜೆಪಿ ಜೊತೆ ಕುಮಾರಣ್ಣ ಸರಕಾರ ಮಾಡಕ್ಕೆ ಹೋದಾಗ ನಡಕೊಂಡ ಪ್ರಹಸನ ಡ್ರಾಮ ಅನ್ನದು, ಈಗಿನ ನಿಮ್ಮ ಹೇಳಿಕೆಯಿಂದ ಸಾಬೀತಾಗಿದೆಯಂತೆ.”
“ಯಾವ ಬೋಸುಡಿಮಗ ಅಂಗಂದೋನು.”
“ನಿಮ್ಮ ಪಾರ್ಟಿಯವರೆ ಅಂಗಂದ್ರು ಸಾ.”
“ಅದ್ಯಾವನು ಕರಕಂಡು ಬನ್ರಿ ಇಲ್ಲಿ.”
“ಬಿಜೆಪಿಗೆ ಸಪೋರ್ಟ್ ಅಂದ ನೀವು ಐದು ಕ್ಷೇತ್ರಕ್ಕೆ ಯಾಕೆ ಸಾರ್ ಕ್ಯಾಂಡೇಟಾಕ್ತಿರಿ.”
“ನಮ್ಮ ಶಕ್ತಿ ಇರ ಅಷ್ಟು.”
“ಐದರಲ್ಲಿ ಕಾಂಗ್ರೆಸ್ ಸೋಲಿಸಿ ಬಿಜೆಪಿಗೆ ಸಹಾಯ ಮಾಡದಕಿಂತ, 15 ಕ್ಷೇತ್ರಕ್ಕೂ ಅಭ್ಯರ್ಥಿ ನಿಲ್ಲಸದೇ ಇರದು ವಳ್ಳೆದಲವ.”
“ನಮ್ಮದು ಪ್ರಾದೇಶಿಕ ಪಾರ್ಟಿ, ನಮಗೆ ಕೆಲವು ಇತಿಮಿತಿಗಳಿರದರಿಂದ ಹಾಗೆ ಮಾಡಕ್ಕೆ ಬರಲ್ಲ.”
“ಐದು ಕ್ಷೇತ್ರದ ಚುನಾವಣೆ ಖರ್ಚು ಬಿಜೆಪಿ ಕೊಡ್ತದ ಸಾರ್.”
“ಅವುರ್ಯಾಕ್ ಕೊಡ್ತರ್ರೀ.”
“ಐದರಲ್ಲಿ ಕಾಂಗ್ರೆಸ್ ಸೋಲಸಬೇಕಲ್ಲವ ಅದಕ್ಕೆ.”
“ಅಷ್ಟು ಬಡತನ ನನ್ನ ಪಾರ್ಟಿಗೆ ಬಂದಿಲ್ಲ.”

ಥೂತ್ತೇರಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...