Homeಮುಖಪುಟ'ಸರ್ವಾಧಿಕಾರವು ಉತ್ತುಂಗದಲ್ಲಿದೆ ’: ಬಲವಂತವಾಗಿ ದೆಹಲಿಗೆ ಕಳಿಸಿದ್ದಕ್ಕೆ ಚಂದ್ರಶೇಖರ್ ಆಜಾದ್ ಕಿಡಿ

‘ಸರ್ವಾಧಿಕಾರವು ಉತ್ತುಂಗದಲ್ಲಿದೆ ’: ಬಲವಂತವಾಗಿ ದೆಹಲಿಗೆ ಕಳಿಸಿದ್ದಕ್ಕೆ ಚಂದ್ರಶೇಖರ್ ಆಜಾದ್ ಕಿಡಿ

- Advertisement -
- Advertisement -

ಭೀಮ್ ಆರ್ಮಿಯ ಮುಖಂಡ ಚಂದ್ರಶೇಖರ್‌ ಅಜಾದ್‌ರವರನ್ನು ನಿನ್ನೆ ಸಂಜೆ ಬಂಧಿಸಿದ್ದ ಹೈದರಾಬಾದ್‌ ಪೊಲೀಸರು ಇಂದು ಬಲವಂತವಾಗಿ ಅವರನ್ನು ದೆಹಲಿಗೆ ಕಳಿಸಿದ್ದಾರೆ.

ಅವರು ನಿನ್ನೆ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಹೈದರಾಬಾದ್‌ನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ಎಸ್) ವಿದ್ಯಾರ್ಥಿಗಳು ಆಯೋಜಿಸಿದ್ದ ರ್‍ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದ್ದಾಗ ಮೆಹದಿಪಟ್ನಂನ ಫಂಕ್ಷನ್ ಹಾಲ್ ಕ್ರಿಸ್ಟಲ್ ಗಾರ್ಡನ್‌ ಬಳಿ ಅವರನ್ನು ಪೊಲೀಸರು ಬಂಧಿಸಿದ್ದರು.

ಆಜಾದ್‌‌ರವರನ್ನು ಮೊದಲು ಹಬೀಬ್ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಹಬೀಬ್ ನಗರ ಠಾಣೆಯಲ್ಲಿ ಜನಸಮೂಹ ಸೇರಲು ಪ್ರಾರಂಭಿಸಿದ ನಂತರ ಬಲ್ಲಾರಂ ಪೊಲೀಸ್ ಠಾಣೆಗೆ ಸ್ಥಳಾಂತರಿಸಿದ್ದರು. ಅವರೊಂದಿಗೆ ಬಂಧಿತರಾದ ಎಲ್ಲರನ್ನೂ ಗೋಶಮಹಲ್ ಕ್ರೀಡಾಂಗಣಕ್ಕೆ ಕರೆದೊಯ್ಯಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಅಜಾದ್‌

“ತೆಲಂಗಾಣದಲ್ಲಿ ಸರ್ವಾಧಿಕಾರವು ಉತ್ತುಂಗದಲ್ಲಿದೆ. ಪ್ರತಿಭಟಿಸುವ ಜನರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಪೊಲೀಸರು ಮೊದಲು ನಮ್ಮ ಜನರಿಗೆ ಲಾಠಿಗಳಿಂದ ಹೊಡೆದರು, ನಂತರ ನನ್ನನ್ನು ಬಂಧಿಸಲಾಯಿತು. ಈಗ ನನ್ನನ್ನು ಬಲವಂತವಾಗಿ ವಿಮಾನ ನಿಲ್ದಾಣಕ್ಕೆ ಕರೆತಂದು, ದೆಹಲಿಗೆ ಕಳುಹಿಸಲಾಗಿದೆ. ತೆಲಂಗಾಣದ ಮುಖ್ಯಮಂತ್ರಿಗಳೇ ನೆನಪಿಡಿ, ಬಹುಜನ ಸಮಾಜ ಈ ಅವಮಾನವನ್ನು ಎಂದಿಗೂ ಮರೆಯುವುದಿಲ್ಲ. ನಾನು ಶೀಘ್ರದಲ್ಲೇ ಹೈದರಾಬಾದ್‌ಗೆ ಹಿಂತಿರುಗಲಿದ್ದೇನೆ ”ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

71 ನೇ ಗಣರಾಜ್ಯೋತ್ಸವದಂದು ಟಿಐಎಸ್ಎಸ್ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರತಿಭಟನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಜಾದ್ ಹೈದರಾಬಾದ್‌ನಲ್ಲಿದ್ದರು. ಆದಾದ ನಂತರ ಅವರು ಕರ್ನಾಟಕದ ಕಲಬುರಗಿ, ಉಡುಪಿ, ಬೆಂಗಳೂರು ಸೇರಿದಂತೆ ಹಲವು ಕಡೆ ಕಾರ್ಯಕ್ರಮಗಳಿಗೆ ಭಾಗವಹಿಸಲು ಒಪ್ಪಿಕೊಂಡಿದ್ದರು.

ಸಿಎಎ ವಿರೋಧಿ ಮತ್ತು ಎನ್‌ಆರ್‌ಸಿ ಪ್ರತಿಭಟನೆಗೆ ಮುಂಚಿತವಾಗಿ ಆಜಾದ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಅನುಮತಿಯಿಲ್ಲದೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂಬ ನೆಪವೊಡ್ಡಿ ಬಂಧಿಸಲಾಗಿದೆ. ಅಜಾದ್‌ ಬಂಧನವನ್ನು ಬಹುತೇಕರು ಖಂಡಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಷ್ಟ್ರ ರಾಜಧಾನಿಯ ದರಿಯಗಂಜ್ ಪ್ರದೇಶದಲ್ಲಿ ಜನಸಮೂಹವನ್ನು ಪ್ರಚೋದಿಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ನಂತರ ಚಂದ್ರಶೇಖರ್ ಆಜಾದ್ ಅವರನ್ನು ಜನವರಿ 16 ರಂದು ದೆಹಲಿಯ ತಿಹಾರ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಿಮ್ಮ ತಾಳ್ಮೆ ಭೀಮ ವಾದದ ನಡೆ ಸಂವಿಧಾನದ ಹಕ್ಕಿಗಾಗಿ ನಿರಂತರ ಹೋರಾಟಕ್ಕಿಳಿಯುವ ಜೈ ಭೀಮ್ ವಂದನೆಗಳು
    ಬಿಜೆಪಿಯ ಸೆಂಟ್ರಲ್ ಗೌರ್ನಮೆಂಟ್ ರವರಿಗೆ ಅಧಿಕಾರದ ಮದವೇರಿ ಜನಸಾಮಾನ್ಯರನ್ನು ನಿರಂತರವಾಗಿ ಸ್ವತಂತ್ರ ಬಂದು 71ನೇ ಗಣರಾಜ್ಯೋತ್ಸವದಲ್ಲಿ
    ಮುಂದುವರೆದಿದ್ದರೂ ಸಹ ಕೋಮುವಾದಕ್ಕೆ ಜನಸಾಮಾನ್ಯರ ಸಂವಿಧಾನದ ಹಕ್ಕುಗಳನ್ನು ದೇಶವನ್ನು ಬಲಿ ಕೊಡುವುದರಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿದೆ ಎಂದರೆ ತಪ್ಪಾಗಲಾರದು ಜೈಭೀಮ್ ಜೈಭೀಮ್

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಪ್ರಧಾನಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿಯಾದ...

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...