Homeಮುಖಪುಟಏರ್ ಇಂಡಿಯಾ ಸಂಪೂರ್ಣ ಮಾರಾಟಕ್ಕೆ ಬಿಡ್‌ ಆಹ್ವಾನಿಸಿದ ಸರ್ಕಾರ...

ಏರ್ ಇಂಡಿಯಾ ಸಂಪೂರ್ಣ ಮಾರಾಟಕ್ಕೆ ಬಿಡ್‌ ಆಹ್ವಾನಿಸಿದ ಸರ್ಕಾರ…

- Advertisement -
- Advertisement -

ಏರ್ ಇಂಡಿಯಾದಲ್ಲಿನ ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಯೋಜಿಸಿದೆ ಎಂದು ಸರ್ಕಾರ ಘೋಷಿಸಿದೆ. ಈ ಮೊದಲು ತನ್ನ 76% ಪಾಲನ್ನು ಮಾರಾಟ ಮಾಡಲು ಸರ್ಕಾರ ಉದ್ದೇಶಿಸಿತ್ತು. ಆದರೆ 2018ರಿಂದ ಒಂದೇ ಒಂದು ಬಿಡ್ ಸಹ ಸೆಳೆಯಲು ವಿಫಲವಾದ ನಂತರ ತನ್ನ ಪೂರ್ಣ ಪಾಲನ್ನು ಮಾರಲು ಮುಂದಾಗಿದೆ.

ಸೋಮವಾರ ಬಿಡುಗಡೆಯಾದ ಏರ್ ಇಂಡಿಯಾ ಬಿಡ್‌ ಕುರಿತಾದ ದಾಖಲೆಯು, ಭಾರತವು ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳನ್ನು ನಿರ್ವಹಿಸುವ ವಾಹಕದಲ್ಲಿ 100% ಪಾಲನ್ನು ಮಾರಾಟ ಮಾಡಲಿದೆ ಎಂದು ಹೇಳಿದೆ. ಬಿಡ್‌ ಸಲ್ಲಿಕೆಗಳಿಗೆ ಮಾರ್ಚ್ 17 ರವರೆಗೆ ಅವಕಾಶವಿದ್ದು ಬಿಡ್‌ ಸಲ್ಲಿಸುವವರು ಇತರ ಹೊಣೆಗಾರಿಕೆಗಳೊಂದಿಗೆ ಸುಮಾರು 3.26 ಬಿಲಿಯನ್ ಡಾಲರ್‌ ಸಾಲವನ್ನು ತೀರಿಸಲು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.

2018 ರಲ್ಲಿ ಭಾರತವು ಏರ್ ಇಂಡಿಯಾದಲ್ಲಿ 76% ಪಾಲನ್ನು ಮಾರಾಟ ಮಾಡಲು ಮತ್ತು ಅದರ ಸಾಲದ ಸುಮಾರು 5.1 ಬಿಲಿಯನ್‌ ಡಾಲರ್‌ ‍ಸಾಲ ಒಪ್ಪಿಕೊಳ್ಳಲು ಆಹ್ವಾನಿಸಿತ್ತು. ಆದರೆ ಖರೀದಿಗೆ ಯಾರು ಸಹ ಮುಂದಾಗಿರಲಿಲ್ಲ.

ಮಹಾರಾಜ ಮ್ಯಾಸ್ಕಾಟ್‌ಗೆ ಹೆಸರುವಾಸಿಯಾದ ಏರ್ ಇಂಡಿಯಾ, ಭಾರತದ ಅತ್ಯಂತ ಲಾಭದಾಯಕ ಅಂತರರಾಷ್ಟ್ರೀಯ ಮತ್ತು ದೇಶೀಯ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಸ್ಲಾಟ್‌ಗಳನ್ನು ಹೊಂದಿದೆ, ಅದು ವಿಮಾನಯಾನ ಸಂಸ್ಥೆಗಳಿಗೆ ಪ್ರಮುಖವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...