Homeದಿಟನಾಗರಫ್ಯಾಕ್ಟ್‌ ಚೆಕ್‌: ಮೋದಿ ಸರ್ಕಾರ 100 ಕೋಟಿ ಲಸಿಕೆ ಉಚಿತವಾಗಿ ನೀಡಿದೆಯೇ?

ಫ್ಯಾಕ್ಟ್‌ ಚೆಕ್‌: ಮೋದಿ ಸರ್ಕಾರ 100 ಕೋಟಿ ಲಸಿಕೆ ಉಚಿತವಾಗಿ ನೀಡಿದೆಯೇ?

ಸರ್ಕಾರವು ತನ್ನ ನೀತಿಯನ್ನು ಬದಲಿಸಿದ್ದು ಮತ್ತು ಲಸಿಕೆಯನ್ನು ಮುಕ್ತಗೊಳಿಸಿದ್ದು ನಿಜ, ಆದರೆ ಖಾಸಗಿ ವಲಯವು ಅದಕ್ಕಾಗಿ ಶುಲ್ಕ ವಿಧಿಸುತ್ತಿತ್ತು.

- Advertisement -
- Advertisement -

ಅಕ್ಟೋಬರ್ 22ರಂದು (ಶುಕ್ರವಾರ) ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, “ದೇಶದ ನಾಗರಿಕರಿಗೆ 100 ಕೋಟಿ ಕೋವಿಡ್ -19 ಲಸಿಕೆ ನೀಡುವ ಮೂಲಕ ಭಾರತದ ದೊಡ್ಡ ಸಾಧನೆ ಮಾಡಿದೆ ಹಾಗೂ ಉಚಿತವಾಗಿ ಲಸಿಕೆ ನೀಡಲಾಗಿದೆ” ಎಂದು ಹೇಳಿದ್ದಾರೆ.

“ಒಂದು ರೂಪಾಯಿ ಪಡೆಯದೆ ದೇಶದ ನಾಗರಿಕರಿಗೆ ನೂರು ಕೋಟಿ ಡೋಸ್‌ಗಳನ್ನು ನೀಡಲಾಗಿದೆ” ಎಂದು ಮೋದಿ ತಿಳಿಸಿದ್ದಾರೆ. ಆದರೆ ಇದು ನಿಜವಲ್ಲ ಎಂದು ಕ್ವಿಂಟ್‌ ಜಾಲತಾಣ ವರದಿ ಮಾಡಿದೆ.

ಮಾರ್ಚ್‌ನಲ್ಲಿ ಭಾರತ ಸರ್ಕಾರ ಎಲ್ಲ ಹಿರಿಯ ನಾಗರಿಕರಿಗೆ ಎರಡನೇ ಹಂತದ ವ್ಯಾಕ್ಸಿನೇಷನ್‌ ಆರಂಭಿಸಿತು. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುವವರು ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿತ್ತು ಎಂಬುದನ್ನು ಕ್ವಿಂಟ್ ಉಲ್ಲೇಖಿಸಿದೆ.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಪಂಜಾಬ್‌ ಮುಖ್ಯಮಂತ್ರಿ ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ?

ಮೇ ತಿಂಗಳಲ್ಲಿ ಹೊಸ ಲಸಿಕೆ ನೀತಿಯನ್ನು ಘೋಷಿಸಿದಾಗ ಸೇವಾ ಶುಲ್ಕವು ತೀವ್ರವಾಗಿ ಏರಿಕೆ ಕಂಡಿತು. ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು ತಯಾರಕರಿಂದ ನೇರವಾಗಿ ಲಸಿಕೆಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಯಿತು. ಈ ಆಸ್ಪತ್ರೆಗಳಲ್ಲಿನ ಡೋಸ್‌‌ಗಳ ಶುಲ್ಕವು ಮತ್ತಷ್ಟು ಏರಿಕೆಯಾಯಿತು.

ಸರ್ಕಾರವು ತನ್ನ ಲಸಿಕೆ ನೀತಿಗೆ ಮತ್ತೊಂದು ಬದಲಾವಣೆಯನ್ನು ಜೂನ್ 2021ರಲ್ಲಿ ತಂದಿತು (ಎರಡನೇ ಅಲೆ ಆರಂಭವಾದ ಸ್ವಲ್ಪ ಸಮಯದ ನಂತರ). “75 ಪ್ರತಿಶತ ಲಸಿಕೆ ಉಚಿತವಾಗಿ ಕೇಂದ್ರ ಸರ್ಕಾರ ನೀಡಲಿದೆ. 25 ಪ್ರತಿಶತ ಡೋಸ್‌ಗಳನ್ನು ಖಾಸಗಿಯಲ್ಲಿ ಖರೀದಿಸಿ, ಪಡೆದುಕೊಳ್ಳಬೇಕಾಗುತ್ತದೆ” ಎಂದು ಮೋದಿ ಹೇಳಿದ್ದರು.

ಅಂದರೆ ಇದರ ಅರ್ಥ ಕೆಲವು ಲಸಿಕಾ ಡೋಸ್‌ಗಳು ಉಚಿತವಾಗಿದ್ದವು, ಕೆಲವು ಖರೀದಿಸಬೇಕಾಗಿತ್ತು ಎಂಬುದಲ್ಲವೇ?

“ಕೋವಿಡ್ -19 ಲಸಿಕಾ ಕಾರ್ಯಕ್ರಮಕ್ಕಾಗಿ 75 ಪ್ರತಿಶತ ಲಸಿಕೆಗಳನ್ನು ಕೇಂದ್ರದಿಂದ ಸಂಗ್ರಹಿಸಲಾಗುವುದು. ಖಾಸಗಿ ವಲಯವು 25 ಪ್ರತಿಶತ ಲಸಿಕೆಗಳನ್ನು ಖರೀದಿಸುವುದನ್ನು ಮುಂದುವರಿಸಬಹುದು” ಎಂದು ಪ್ರಧಾನಿ ಮೋದಿಯವರು ಜೂನ್ 7ರಂದು ಘೋಷಿಸಿದ್ದರು

ಖಾಸಗಿ ವಲಯದಿಂದ ಖರೀದಿಸಿದ ಲಸಿಕೆಗಳಿಗೆ, ಪ್ರತಿ ಡೋಸ್‌ ಸೇವಾ ಶುಲ್ಕವಾಗಿ 150 ರೂ. ನಿಗದಿಪಡಿಸಲಾಯಿತು.  ಹಾಗಾಗಿ, ಭಾರತದಲ್ಲಿ ಕೋವಿಶೀಲ್ಡ್ ಬೆಲೆ ರೂ. 780, ಕೋವಾಕ್ಸಿನ್ ರೂ. 1,410, ಸ್ಪುಟ್ನಿಕ್ ವಿ ಲಸಿಕೆಗೆ ರೂ.1,145 ನಿಗದಿಪಡಿಸಲಾಯಿತು.

ಜೂನ್ 21 ರಿಂದ ಕೇಂದ್ರವು ಎಲ್ಲರಿಗೂ ಉಚಿತ ಲಸಿಕೆಯನ್ನು ನೀಡುವುದಾಗಿ ಘೋಷಿಸಿತು. ಇದಕ್ಕೂ ಮೊದಲು, 18-45 ವರ್ಷ ವಯಸ್ಸಿನವರು ಲಸಿಕೆಯನ್ನು ಪಡೆಯಲು ಹಣ ಪಾವತಿಸಬೇಕಾಗಿತ್ತು. ಆದರೆ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಇದು ಉಚಿತವಾಗಿತ್ತು.

ಇದರ ಅರ್ಥವೇನೆಂದರೆ, ಸರ್ಕಾರವು ತನ್ನ ಲಸಿಕೆ ನೀತಿಯಲ್ಲಿ ಬದಲಾವಣೆಗಳನ್ನು ಮಾಡಿದೆ ಮತ್ತು ಉಚಿತ ಲಸಿಕೆಯನ್ನು ನೀಡುವುದಾಗಿಯೂ ಘೋಷಿಸಿದೆ.  ಆದರೆ ಎಲ್ಲಾ 100 ಕೋಟಿ ಡೋಸ್‌ಗಳನ್ನು ಉಚಿತವಾಗಿ ನೀಡಲಾಗಿದೆಯೆಂದು ಹೇಳುವುದು ಸುಳ್ಳಾಗಿದೆ.

ದತ್ತಾಂಶ ಕುರಿತ ಆನ್‌ಲೈನ್‌ ಪ್ರಕಟಣೆಯಾದ ‘ಅವರ್‌‌ ವರ್ಡ್ ಇನ್‌ ಡೇಟಾ’ದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಜೂನ್‌ ವರೆಗೆ ನೀಡಲಾದ ಒಟ್ಟು ಲಸಿಕೆಯ ಪ್ರಮಾಣ 27.4 ಕೋಟಿಯಾಗಿದೆ. ಇದು ಖಾಸಗಿ ಹಾಗೂ ಸರ್ಕಾರಿ ಎರಡೂ ಕ್ಷೇತ್ರಗಳಿಂದಲೂ ನೀಡಲಾದ ಲಸಿಕೆಯ ಒಟ್ಟು ಅಂಕಿ-ಅಂಶವಾಗಿದೆ.  ಮೇ 1ರಂದು ಎಲ್ಲರಿಗೂ ಲಸಿಕೆ ಕಾರ್ಯಕ್ರಮವನ್ನು ಆರಂಭಿಸಿದ್ದನ್ನು ಗಮನಿಸಬೇಕಾಗುತ್ತದೆ.

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, 50 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ಮಧುಮೇಹ, ರಕ್ತದೊತ್ತಡ, ಹೃದಯಸಂಬಂಧಿ ಕಾಯಿಲೆಗಳು ಇರುವವರಿಗೆ ಲಸಿಕೆಗಳನ್ನು ಹಾಕಲಾಗಿತ್ತು. ಎರಡನೇ ಹಂತದಲ್ಲಿ, 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ರೋಗಿಗಳೆಲ್ಲರಿಗೂ ಲಸಿಕೆ ಹಾಕಲಾಯಿತು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರ ಪ್ರಕಾರ, ಖಾಸಗಿ ಆಸ್ಪತ್ರೆಗಳು ಮೇ 1ರಿಂದ ದೇಶದಲ್ಲಿ ಶೇ.6ರಷ್ಟು ಕೋವಿಡ್‌ ಲಸಿಕೆಗಳನ್ನು ನೀಡಿವೆ. ಕೇಂದ್ರದ ಸಾಪ್ತಾಹಿಕದಲ್ಲಿ ಕೋವಿಡ್ ಮಾಹಿತಿ ನೀಡುವಾಗ ಭೂಷಣ್ ಅವರು, “ಮೇ 1ರಿಂದ ಸೆಪ್ಟೆಂಬರ್ 22ರವರೆಗೆ ಸುಮಾರು 6 ಪ್ರತಿಶತ ಡೋಸ್‌ಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ, ಉಳಿದವುಗಳನ್ನು ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ ನೀಡಲಾಗಿದೆ” ಎಂದಿದ್ದಾರೆ.

ಜುಲೈ 20 ರಂದು ರಾಜ್ಯಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ಪ್ರತಿಕ್ರಿಯೆಯ ಪ್ರಕಾರ, “ಖಾಸಗಿ ವಲಯದಲ್ಲಿ ಮೇ 1ರಿಂದ ಜುಲೈ 15ರ ನಡುವೆ ಸುಮಾರು 7 ಪ್ರತಿಶತ ಲಸಿಕೆಗಳನ್ನು ನೀಡಲಾಗಿದೆ.” ಹೀಗಾಗಿ ಮೋದಿಯವರು ನೀಡಿದ ಮಾಹಿತಿ ಅರ್ಧಸತ್ಯದಿಂದ ಕೂಡಿದೆ.

(ಮಾಹಿತಿ ಕೃಪೆ: ದಿ ಕ್ವಿಂಟ್‌)


ಇದನ್ನೂ ಓದಿರಿ: 68 ಕೋಟಿ ಜನರಿಗೆ ಒಂದು ಡೋಸ್ ಲಸಿಕೆ ಕೂಡಾ ನೀಡಿಲ್ಲ, ಯಾವ ಸಾಧನೆಗೆ ಸಂಭ್ರಮಾಚರಣೆ?- ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನೇ ಅನುಮಾನ ಪಟ್ಟು ದೇಶದ ಸೈನಿಕರ ಬಗ್ಗೆ ನೇ ಅನುಮಾನ ದಿಂದ ನೋಡಿ ದವರು ನೀವು ಇನ್ನು ಇದನ್ನೂ ಸಹ ಈ ರೀತಿ ನೋಡೋದ್ರಲ್ಲಿ ಅನುಮಾನ ಇಲ್ಲಾ ಬಿಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...