Homeಮುಖಪುಟನಮ್ಮ ರಾಷ್ಟ್ರ ಧ್ವಜದ ವಿನ್ಯಾಸಕಾರ್ತಿ ಸುರಯ್ಯಾ ತಯ್ಯ್‌ಬ್‌ಜಿ: ಭಾರತೀಯರೆಲ್ಲಾ ತಿಳಿಯಬೇಕಾದ ವಾಸ್ತವ

ನಮ್ಮ ರಾಷ್ಟ್ರ ಧ್ವಜದ ವಿನ್ಯಾಸಕಾರ್ತಿ ಸುರಯ್ಯಾ ತಯ್ಯ್‌ಬ್‌ಜಿ: ಭಾರತೀಯರೆಲ್ಲಾ ತಿಳಿಯಬೇಕಾದ ವಾಸ್ತವ

ಸ್ವಾತಂತ್ರ್ಯ ಹೋರಾಟಗಾರ ಪಿಂಗಾಳಿ ವೆಂಕಯ್ಯ ಎಂಬವರು ಸ್ವರಾಜ್ಯ ಧ್ವಜವನ್ನು ಮೊದಲು ವಿನ್ಯಾಸಗೊಳಿಸಿದ್ದರು. ಅದರಲ್ಲಿ ಈಗಿರುವ ಅಶೋಕ ಚಕ್ರದ ಬದಲಿಗೆ ಚರಕವಿತ್ತು.

- Advertisement -
- Advertisement -

ಇತ್ತೀಚೆಗೆ ಆರೆಸ್ಸೆಸ್ ಸಂಘಟನೆಯ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ ಭಟ್ಟ “ಕೇಸರಿ ನಮ್ಮ ಅಸಲಿ ರಾಷ್ಟ್ರಧ್ವಜ, ಮತ್ತೆ ಮುಸ್ಲಿಮರು ಗಲಾಟೆ ಮಾಡಿದ್ದಕ್ಕೆ ಒಂದು ಹಸಿರು ಬಟ್ಟೆಯ ತುಂಡನ್ನು ಅದಕ್ಕೆ ಜೋಡಿಸಿದ್ದು” ಎಂದು  ಮಾತನಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಅಲ್ಲಿದ್ದ 90% ಮಂದಿ ಕುರುಡಾಗಿ ನಂಬಿರುತ್ತಾರೆ.ಯಾಕೆಂದರೆ ಆತನ ಭಾಷಣ ಆಲಿಸಲು ಹೋಗುವವರೆಲ್ಲಾ ಯೋಚಿಸಿ ಪರಾಮರ್ಶಿಸುವ ಗುಣ ಉಳ್ಳವರಲ್ಲ. ಇನ್ನು ಮಾಧ್ಯಮಗಳು ಸಹ ಅದನ್ನೆ ಪ್ರಸಾರ ಮಾಡುತ್ತಿವೆ. ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರ ಧ್ವಜದ ಮತ್ತು ರಾಷ್ಟ್ರೀಯ ಲಾಂಛನ ವಿನ್ಯಾಸದ ನಿಜವಾದ ಕತೆಯನ್ನು ಹೆಚ್ಚೆಚ್ಚು ಪ್ರಚಾರ ಮಾಡಬೇಕಾದುದು ಕಾಲದ ಜರೂರು ಕೂಡಾ.

ರಾಷ್ಟ್ರ ಧ್ವಜದ ಬಣ್ಣಗಳು ಯಾವುದೇ ಧರ್ಮ ಜಾತಿ ಪಂಗಡವನ್ನು ಸಂಕೇತಿಸುವುದಿಲ್ಲ.ಕೇಸರಿ ಹಿಂದೂ ಅಲ್ಲ, ಹಸಿರು ಮುಸ್ಲಿಂ ಕೂಡಾ ಅಲ್ಲ. ಬದಲಿಗೆ;

  • ಕೇಸರಿ ತ್ಯಾಗದ ಸಂಕೇತ.
  • ಬಿಳಿ ಶಾಂತಿಯ ಸಂಕೇತ.
  • ಹಸಿರು ಸಮೃದ್ಧಿಯ ಸಂಕೇತ.

ಸ್ವಾತಂತ್ರ್ಯ ಹೋರಾಟಗಾರ ಪಿಂಗಾಳಿ ವೆಂಕಯ್ಯ ಎಂಬವರು ಸ್ವರಾಜ್ಯ ಧ್ವಜವನ್ನು ಮೊದಲು ವಿನ್ಯಾಸಗೊಳಿಸಿದ್ದರು. ಅದರ ಬಣ್ಣ ಈಗಿನ ರಾಷ್ಟ್ರಧ್ವಜದ ಬಣ್ಣವನ್ನು ಹೋಲುತ್ತಿತ್ತು. ಈಗಿರುವ ಅಶೋಕ ಚಕ್ರದ ಬದಲಿಗೆ ಚರಕವಿತ್ತು. ಅದನ್ನೇ ರಾಷ್ಟ್ರಧ್ಚಜ ಮಾಡುವ ಬಗ್ಗೆ ಆಗಿನ ಅನೇಕ ಮುಖಂಡರ ಒಲವಿತ್ತು. ಆದರೆ ಅದಕ್ಕೆ ಭಿನ್ನಮತ ಬಂದಾಗ ಡಾ. ಬಾಬು ರಾಜೇಂದ್ರ ಪ್ರಸಾದರ ನೇತೃತ್ವದಲ್ಲಿ ಫ್ಲ್ಯಾಗ್ ಕಮಿಟಿಯೊಂದನ್ನು ರೂಪಿಸಲಾಯಿತು.

ಈ ಸಮಿತಿಯಲ್ಲಿ ನಾಗರಿಕ ಸೇವಾ ಪರೀಕ್ಷೆ ಉತ್ತೀರ್ಣರಾಗಿದ್ದ ಬದ್ರುದ್ದೀನ್ ತಯ್ಯ್‌ಬ್‌ಜಿ ಅವರೂ ಸದಸ್ಯರಾಗಿದ್ದರು. ಬದ್ರುದ್ದೀನ್ ತಯ್ಯ‌ಬ್‌ಜಿ ಅವರಿಗೆ ದೇಶ ವಿಭಜನೆಯ ಕಾರ್ಯಾಚರಣೆ ನಡೆಯುತ್ತಿದ್ದಾಗ ನೀವು ಪಾಕಿಸ್ತಾನಕ್ಕೆ ಬರಬೇಕೆಂದೂ, ನಿಮಗೆ ಪಾಕಿಸ್ತಾನದಲ್ಲಿ ಉನ್ನತವಾದ ಸ್ಥಾನಮಾನ ನೀಡಲಾಗುವುದೆಂದೂ ಮುಸ್ಲಿಮ್ ಲೀಗಿನ ಮುಖಂಡರು ಆಹ್ವಾನ ನೀಡಿದ್ದರು. ಅದಕ್ಕೆ ಬದ್ರುದ್ದೀನ್ ತಯ್ಯ್‌ಬ್‌ಜಿ ಅವರು ಮುಸ್ಲಿಂ ಲೀಗ್ ಮುಖಂಡರಿಗೆ ತನ್ನ ನಿಲುವನ್ನು ಸ್ಪಷ್ಟವಾಗಿ ವಿವರಿಸುವ ಪತ್ರದ ಮೂಲಕ ಉತ್ತರ ನೀಡಿದರು. ಅದರ ಸಾರಾಂಶ ಹೀಗಿದೆ.

ಬದ್ರುದ್ದೀನ್ ತಯ್ಯ್‌ಬ್‌ಜಿ ಮತ್ತು ಸುರಯ್ಯಾ ತಯ್ಯ್‌ಬ್‌ಜಿ

“ಪಾಕಿಸ್ತಾನದ ಜೊತೆಗೆ ಬಂದರೆ ನನಗೆ ನೀವು ಉನ್ನತ ಸ್ಥಾನಮಾನವೇನೋ ನೀಡಬಹುದು. ಆದರೆ ನಾನು ಧರ್ಮಾಧಾರಿತ ರಾಷ್ಟ್ರದಲ್ಲಿ ಇರಬಯಸುವುದಿಲ್ಲ. ಅಲ್ಲದೆ ನಾನು ಮುಸ್ಲಿಂ ‌ಲೀಗ್‌ನ ಸಿದ್ಧಾಂತವನ್ನು ಒಪ್ಪುವುದಿಲ್ಲ. ನಾನು ಯಾವುದೇ ಕಾರಣಕ್ಕೂ ನನ್ನ ಮಾತೃಭೂಮಿ ತೊರೆದು ಬರಲಾರೆ. ಇನ್ನು ಮನವೊಲಿಸುವ ಪ್ರಯತ್ನ ಮುಂದುವರಿಸದಿರಿ”

ಫ್ಯ್ಲಾಗ್ ಕಮಿಟಿ ಧ್ವಜದ ವಿನ್ಯಾಸಗಳನ್ನು ಮತ್ತು ರಾಷ್ಟ್ರೀಯ ಲಾಂಛನದ ವಿನ್ಯಾಸಗಳನ್ನು ತಯಾರಿಸಿ ಕಳುಹಿಸುವಂತೆ ಎಲ್ಲಾ ಶಾಲೆಗಳಿಗೆ ಪತ್ರಗಳನ್ನು ಕಳುಹಿಸಿತು. ಜವಾಹರ್‌ಲಾಲ್ ನೆಹರೂ ಅವರು ಬದ್ರುದ್ದೀನ್ ತಯ್ಯ್‌ಬ್‌ಜಿ ಅವರನ್ನು ಕರೆದು,“ಬದ್ರ್.. ನೀವಿದರಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕು. ಮತ್ತು ವಿನ್ಯಾಸದಲ್ಲಿ ನಿಮ್ಮ ಪ್ರಮುಖ ಪಾತ್ರವನ್ನು ನಾನು ನಿರೀಕ್ಷಿಸುತ್ತೇನೆ” ಎಂದು ಹೇಳಿದ್ದರು.

ಬದ್ರುದ್ದೀನ್ ತಯ್ಯ‌ಬ್‌ಜಿಯವರ ಪತ್ನಿ ಸುರಯ್ಯಾ ತಯ್ಯ್‌ಬ್‌ಜಿ ಆ ಕಾಲದ ಪ್ರಸಿದ್ಧ ಲೇಖಕಿಯಾಗಿದ್ದರು. ಧ್ವಜ ವಿನ್ಯಾಸ ಮತ್ತು ಲಾಂಛನ ವಿನ್ಯಾಸ ಕಾರ್ಯದಲ್ಲಿ ಅವರು ಗಂಭೀರವಾಗಿ ತೊಡಗಿಸಿಕೊಂಡರು. ಅವರು ಕೇಸರಿ ಬಿಳಿ ಹಸಿರು ಮತ್ತು ಮಧ್ಯೆ ಕಪ್ಪು ಬಣ್ಣದ ಅಶೋಕ ಚಕ್ರವಿರುವ ವಿನ್ಯಾಸವನ್ನು ತಯಾರಿಸಿ ಕಳುಹಿಸಿದರು. ಮತ್ತು ನಾಲ್ಕು ಸಿಂಹಗಳ ಮುಖವನ್ನು ರಾಷ್ಟ್ರೀಯ ಲಾಂಛನದ ಆಯ್ಕೆಗೆ ಕಳುಹಿಸಿದರು.

ಅದಾಗಲೇ ನೂರಾರು ಧ್ವಜ ವಿನ್ಯಾಸಗಳು ಮತ್ತು‌ ಲಾಂಛನ ವಿನ್ಯಾಸಗಳು ಆಯ್ಕೆ ಕೋರಿ ಬಂದಿತ್ತು.
ಹೆಚ್ಚಿನವುಗಳಲ್ಲಿ ಬ್ರಿಟಿಷ್ ಧ್ವಜ ಮತ್ತು‌ ಲಾಂಛನದ ಪ್ರಭಾವ ಎದ್ದು ಕಾಣುತ್ತಿದ್ದವು. ಅವುಗಳನ್ನೆಲ್ಲಾ ಫ್ಲ್ಯಾಗ್ ಕಮಿಟಿ ತಿರಸ್ಕರಿಸಿತು. ಕೊನೆಯ ಸುತ್ತಿಗೆ ಕೆಲವನ್ನು ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ ಸುರಯ್ಯಾ ತಯ್ಯ್‌ಬ್‌ಜಿ ವಿನ್ಯಾಸಗೊಳಿಸಿದ ಧ್ವಜ ಸರ್ವಾನುಮತದ ಆಯ್ಕೆಯಾಯಿತು. ಗಾಂಧೀಜಿಯವರು ಅದರಲ್ಲೊಂದು ಪುಟ್ಟ ಬದಲಾವಣೆ ಮಾಡಿದರು. ಸುರಯ್ಯಾ ಅವರ ವಿನ್ಯಾಸದಲ್ಲಿ ಅಶೋಕ ಚಕ್ರವು ಕಪ್ಪು ಬಣ್ಣದಲ್ಲಿತ್ತು, ಗಾಂಧೀಜಿ ಅದಕ್ಕೆ ನೀಲಿ ಬಣ್ಣ ಕೊಡುವಂತೆ ಸಲಹೆ ನೀಡಿದರು.

ರಾಷ್ಟ್ರೀಯ ಲಾಂಛನಕ್ಕೆ ಹುಲಿ, ಚಿರತೆ, ಕರಡಿ, ಹಂಸ ಮುಂತಾದ ಪ್ರಾಣಿ ಪಕ್ಷಿಗಳ ವಿನ್ಯಾಸವಿರುವವುಗಳು ಕೂಡಾ ಸುರಯ್ಯಾ ತಯ್ಯ್‌ಬ್‌ಜಿ ಅವರ ವಿನ್ಯಾಸದ ಜೊತೆಗೆ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿತ್ತು. ಅಂತಿಮವಾಗಿ ಸುರಯ್ಯಾ ತಯ್ಯಬ್‌ಜಿ ಅವರು ವಿನ್ಯಾಸಗೊಳಿಸಿದ ನಾಲ್ಕು ಸಿಂಹಗಳು ರಾಷ್ಟ್ರೀಯ ಲಾಂಛನವಾಗಿ ಆಯ್ಕೆಗೊಂಡಿತು. ಭಾರತ ಸರಕಾರದ ಯಾವುದೇ ಪತ್ರದಲ್ಲಿರುವ ಮತ್ತು ಧ್ವಜ ಸ್ಥಂಭದ ಬುಡದಲ್ಲಿ ನಾಲ್ಕು‌ ಸಿಂಹಗಳ ಚಿಹ್ನೆ ಸುರಯ್ಯಾ ತಯ್ಯ್‌ಬ್‌ಜಿ ಅವರು ವಿನ್ಯಾಸಗೊಳಿಸಿದ್ದು. 1947ರಲ್ಲಿ ಇದನ್ನು ಭಾರತ ಸರಕಾರ ಆಯ್ಕೆ ಮಾಡುವಾಗ ಸುರಯ್ಯಾರಿಗಿನ್ನೂ ಇಪ್ಪತ್ತೆಂಟು ವರ್ಷ ವಯಸ್ಸು.

ಇದು ಆಗಿನ ಮುಸ್ಲಿಮರ ರಾಷ್ಟ್ರೀಯತೆ, ಮುಸ್ಲಿಮರ ದೇಶಪ್ರೇಮವನ್ನು ತೋರಿಸುತ್ತದೆ. ಈ ದೇಶ ಕಟ್ಟಲು ನಮ್ಮ ಹಿರಿಯರು ಕೊಟ್ಟ ಕೊಡುಗೆ, ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ.

(ಆಧಾರ : ದಿ ವೈರ್‌ನಲ್ಲಿ ಸುರಯ್ಯಾ- ಬದ್ರುದ್ದೀನ್ ದಂಪತಿಗಳ ಪುತ್ರಿ ಲೈಲಾ ತಯ್ಯ್‌ಬ್‌ಜಿ 2018ರಲ್ಲಿ ಬರೆದ ಲೇಖನ)

ಇದನ್ನೂ ಓದಿ: ಭಾರತದ ಮೂರು ಬಣ್ಣಗಳು; ತ್ರಿವರ್ಣ ಧ್ವಜ ತಯಾರಕರ ನಲಿವು-ನೋವುಗಳು: ಪ್ರೊ. ಜಿ ಎನ್ ದೇವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...