Homeಕರ್ನಾಟಕದರಿಯಾ ದೌಲತ್ ಸೇರಿ ಹಲವು ಸ್ಮಾರಕಗಳ ಪ್ರವೇಶಕ್ಕೆ ಕಠಿಣ ನಿಯಮಾವಳಿಗಳೇಕೆ..?

ದರಿಯಾ ದೌಲತ್ ಸೇರಿ ಹಲವು ಸ್ಮಾರಕಗಳ ಪ್ರವೇಶಕ್ಕೆ ಕಠಿಣ ನಿಯಮಾವಳಿಗಳೇಕೆ..?

- Advertisement -
- Advertisement -

ನಮ್ಮ ನಾಡಿನ ಒಂದಿಷ್ಟು ಚಿಲ್ಟು ಪಲ್ಟುಗಳು ಗಂಟಲು ಹರಿದರೂ ಹಝ್ರತ್ ಟಿಪ್ಪು ಸುಲ್ತಾನ್ ಎಂಬ ಆ ಭವ್ಯ ವ್ಯಕ್ತಿತ್ವಕ್ಕೆ ಕಿಂಚಿತ್ ಹಾನಿ ಮಾಡಲೂ ಸಾಧ್ಯವಿಲ್ಲ. ಅಮೆರಿಕಾದ ನಾಸಾ ಕೂಡಾ ಟಿಪ್ಪು ಸುಲ್ತಾನರ ಕ್ಷಿಪಣಿಯ ಪ್ರತಿಕೃತಿಯನ್ನು ಸಂರಕ್ಷಿಸಿಟ್ಟು ” Father of the Missile Technology ” ಎಂದು ಟಿಪ್ಪುವನ್ನು ಗೌರವಿಸುತ್ತದೆ. ಟಿಪ್ಪು ಜೀವನಪೂರ್ತಿ ಯಾವ ಬ್ರಿಟಿಷರ ವಿರುದ್ಧ ಹೋರಾಡಿದರೋ ಅದೇ ಬ್ರಿಟಿಷರು ಕೂಡಾ ಟಿಪ್ಪು ಸುಲ್ತಾನರ ಅಮೂಲ್ಯವಾದಂತಹ ಸಾಧನಗಳನ್ನು ಲಂಡನ್ ಮ್ಯೂಸಿಯಂನಲ್ಲಿಟ್ಟು ಸಂರಕ್ಷಿಸುತ್ತಾ ಬಂದಿದೆ. ಟಿಪ್ಪುವಿನಂತಹ ಮಹಾನ್ ವ್ಯಕ್ತಿತ್ವ ತಮ್ಮ ಶತ್ರುವಾಗಿದ್ದರು ಎಂಬುವುದೂ ಅವರ ಪಾಲಿಗೆ ಬಹಳ ಗೌರವದ ವಿಚಾರ. ಆದರೆ ಟಿಪ್ಪುವಿನ ಸ್ವಂತ ನಾಡಲ್ಲಿ ಏನಾಗುತ್ತಿದೆ..? ಟಿಪ್ಪು ಸುಲ್ತಾನರ ಪ್ರತಿಯೊಂದು ಕುರುಹುಗಳನ್ನೂ ನಾಶಗೊಳಿಸುವ ಕುಪ್ರಯತ್ನವನ್ನು ಟಿಪ್ಪುವಿನ ನಾಡಿನ ಜನರೇ ಮಾಡುತ್ತಿದ್ದಾರೆ.

ನಾನು ಟಿಪ್ಪು ಕುರಿತು ಬರೆದಾಗೆಲ್ಲಾ ನನ್ನ ಮಲಯಾಳಿ ಸ್ನೇಹಿತರು ”ನೀನು ಟಿಪ್ಪು ಕುರಿತು ಇಷ್ಟೆಲ್ಲಾ ಬರೆಯುತ್ತೀಯಲ್ವಾ ಮಾರಾಯ, ಕನಿಷ್ಟ ಟಿಪ್ಪು ಸುಲ್ತಾನರ ದರಿಯಾ ದೌಲತ್ ಅರಮನೆ ಪ್ರವೇಶವನ್ನಾದರೂ ಸುಗಮಗೊಳಿಸು ಮಾರಾಯ” ಎಂದು ನನ್ನನ್ನು ಕುಟುಕುತ್ತಿದ್ದರು.

ಮೊನ್ನೆ ಮೈಸೂರು ದಸರಾಕ್ಕೆ ಕುಟುಂಬ ಸಮೇತ ಹೋಗಿದ್ದವ ಟಿಪ್ಪು ಸುಲ್ತಾನರ ಬೇಸಿಗೆ ಅರಮನೆ ದರಿಯಾ ದೌಲತ್ ನೋಡಲೆಂದು ಹೋದೆವು. ನನಗಿದು ಸುಮಾರು ಆರು ವರ್ಷಗಳ ಬಳಿಕದ ದರಿಯಾ ದೌಲತ್ ಸಂದರ್ಶನ. ಹಿಂದೆಲ್ಲಾ ನಾವು ದುಡ್ಡು ಕೊಟ್ಟು ಟಿಕೆಟ್ ಖರೀದಿಸಿ ದರಿಯಾ ದೌಲತ್ ಅರಮನೆ ಪ್ರವೇಶಿಸುತ್ತಿದ್ದೆವು. ಮೊನ್ನೆ ಹೋಗಿ ಟಿಕೆಟ್ ಪಡೆಯುವುದು ಎಲ್ಲಿ ಎಂದು ಸೆಕ್ಯೂರಿಟಿಯವರಲ್ಲಿ ವಿಚಾರಿಸಿದೆ. ಸಾರ್..ಈಗ ಹಿಂದಿನಂತೆ ಟಿಕೆಟ್ ನೀಡುವ ವ್ಯವಸ್ಥೆಯಿಲ್ಲ. ಎಲ್ಲಾ ಆನ್ಲೈನ್ ಸಿಸ್ಟಮ್ ಎಂದರು. ಸರಿಯಪ್ಪಾ ಈಗೇನು ಮಾಡ್ಬೇಕು ಎಂದು ಕೇಳಿದೆ. ಆತ ಒಂದು ಕಬ್ಬಿಣದ ಸ್ಟ್ಯಾಂಡ್ ಪಕ್ಕಕ್ಕೆ ಕರಕೊಂಡು ಹೋದ. ಈ ಸ್ಕ್ಯಾನರ್‌ನಲ್ಲಿ ಸ್ಕ್ಯಾನ್ ಮಾಡಿ, ವೆಬ್‌ಸೈಟ್ ವಿಳಾಸ ಸಿಗುತ್ತೆ, ವೆಬ್‌ಸೈಟ್‌ಗೆ ಲಾಗಿನ್ ಆಗಿ, ಅದರಲ್ಲಿ ಬರುವ ಕಾಲಂಗಳಲ್ಲಿ ನಿಮ್ಮ ಆಧಾರ್ ನಂಬರ್, ಎಷ್ಟು ಮಂದಿಯಿದ್ದೀರಿ, ಯಾವೂರು, ಯಾವ ದೇಶ ಮತ್ತಿತರ ವಿವರಗಳನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಿ. ಕೊನೆಯಲ್ಲಿ ಪೇಮೆಂಟ್ ವಿವರಗಳಿರುತ್ತವೆ, ಅದರಲ್ಲಿ ಎಮೌಂಟ್ ಪೇ ಮಾಡಿದ ಬಳಿಕ ನೀವು ಒಳಪ್ರವೇಶಿಸಬಹುದು ಎಂದ.

ಉಸ್ಸಪ್ಪಾ.. ಇಷ್ಟೆಲ್ಲಾ ಮಾಡ್ಬೇಕಾ..?
ಹೌದು ಸರ್.. ಇದು ನಾವು ಮಾಡಿದ ನಿಯಮಾವಳಿಯಲ್ಲ. ಸರಕಾರವೇ ಮಾಡಿದ ನಿಯಮಾವಳಿಗಳು.
ಕಳೆದ ಬಾರಿ ಬಂದಾಗ ಹೀಗೆಲ್ಲಾ ಇರ್ಲಿಲ್ವಲ್ಲಾ..?
ಈ ರೀತಿಯ ನಿಯಮಗಳಾಗಿ ನಾಲ್ಕು ವರ್ಷಗಳಾಯಿತು..

ನಮ್ಮ ಜೊತೆಗಿದ್ದ ಸ್ನೇಹಿತ ಡಾ.ಅಂಕೇಶ್ ಮೌರ್ಯ ವೆಬ್‌ಸೈಟಿಗೆ ಹೋಗಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿದರು. ಆ ಮಧ್ಯೆ ಎರಡು ಬಾರಿ ಸರ್ವರ್ ಕನೆಕ್ಷನ್ ಅರ್ಧದಲ್ಲಿ ಕೈ ಕೊಟ್ಟಿತ್ತು. ಈ ಮಧ್ಯೆ ಈ ವೆಬ್‌ಸೈಟ್‌ಗೆ ಲಾಗಿನ್ ಆಗುವುದು, ವಿವರ ಭರ್ತಿ ಮಾಡುವುದೆಲ್ಲಾ ಗೊತ್ತಿಲ್ಲದ ಒಟ್ಟು ಏಳು ತಂಡಗಳು ನಮ್ಮ ಕಣ್ಮುಂದೆಯೇ ದರಿಯಾ ದೌಲತ್ ಅರಮನೆ ನೋಡಲಾಗದೇ ನಿರಾಶೆಯಿಂದ ಮರಳಿತು. ಅವರಲ್ಲಿ ಸ್ಮಾರ್ಟ್ ಫೋನ್ ಇಲ್ಲದ ವೃದ್ಧ ದಂಪತಿಗಳು, ಹಳ್ಳಿಗಳಿಂದ ಬಂದವರು, ಇಡೀ ದಿನ ಪ್ರಯಾಣ ಮಾಡಿ ಬಂದ ದೂರ ದೂರದ ಊರಿನ ಪ್ರವಾಸಿಗಳೆಲ್ಲಾ ಇದ್ದರು.

ಅತ್ತ ಜನಸಾಗರವೇ ಸೇರಿದ್ದ ಮೈಸೂರು ಒಡೆಯರ ಅರಮನೆ ಪ್ರವೇಶಿಸಲು ಇಂತಹ ಯಾವ ಕಠಿಣ ನಿಯಮಾವಳಿಗಳೂ ಇಲ್ಲ. ನೇರವಾಗಿ ದುಡ್ಡು ಪಾವತಿಸಿ ಟಿಕೆಟ್ ಪಡಕೊಂಡು ಸಲೀಸಾಗಿ ಪ್ರವೇಶಿಸಬಹುದಿತ್ತು. ಆದರೆ ಟಿಪ್ಪು ಸುಲ್ತಾನರ ಅರಮನೆ ಪ್ರವೇಶಕ್ಕೆ ಮಾತ್ರ ಇಷ್ಟೆಲ್ಲಾ ನಿಯಮಾವಳಿಗಳೇಕೆ..? ಇದು ಮಾತ್ರವಲ್ಲದೇ Archeological survey of India ದ ಅಡಿ ಬರುವ ರಾಜ್ಯದ ಸುಮಾರು 10 ಕ್ಕಿಂತ ಹೆಚ್ಚು ಪ್ರವಾಸಿ ತಾಣ ಸೇರಿ ಎಲ್ಲಾ ಕಡೆಗೂ ಈ ಕಠಿಣ ನಿಯಮಾವಳಿಗಳನ್ನು ರೂಪಿಸಿದ್ದಾರೆ. ಇಲ್ಲಿ ಕನಿಷ್ಠ ಪಕ್ಷ ವೆಬ್‌ಸೈಟ್ ಲಾಗಿನ್, ವಿವರಗಳನ್ನು ದಾಖಲಿಸುವುದು ಇವೆಲ್ಲಾ ತಿಳಿಯದ ಜನರಿಗೆ ಸಹಾಯ ಮಾಡಲು ಕನಿಷ್ಠ ಒಂದು ಕ್ಲರಿಕಲ್ ಸ್ಟಾಫ್ ಕೂಡಾ ಅಲ್ಲಿಲ್ಲ. ಅಲ್ಲಿರುವ ಸೆಕ್ಯೂರಿಟಿಗಳಿಗೆ ಪಾಪ ಅಷ್ಟು ಜ್ಞಾನವೂ ಇಲ್ಲ.

ಮಾನ್ಯ ಮುಖ್ಯಮಂತ್ರಿಗಳೆ ಟಿಪ್ಪು ಸುಲ್ತಾನರ ಸ್ಮಾರಕಗಳನ್ನು ಸಂರಕ್ಷಿಸುವುದು ನೀವು ಜಗತ್ತಿನಾದ್ಯಂತದ ಟಿಪ್ಪು ಅಭಿಮಾನಿಗಳಿಗೆ ಮಾಡಬಲ್ಲ ಬಹುದೊಡ್ಡ ಉಪಕಾರ. ಟಿಪ್ಪು ಸುಲ್ತಾನರ ದರಿಯಾ ದೌಲತ್ ಅರಮನೆ, ಹಲವು ದೇವಸ್ಥಾನಗಳೂ ಸೇರಿದಂತೆ ಹಲವು ಪ್ರವಾಸಿ ಐತಿಹಾಸಿಕ ತಾಣಗಳನ್ನು ನೋಡಲೆಂದು ದೂರದೂರದ ಊರುಗಳಿಂದ ಬರುವ ಹಳ್ಳಿಗರು, ಅಂತರ್ಜಾಲ ತಂತ್ರಜ್ಞಾನ ಕುರಿತ ಜ್ಞಾನವಿಲ್ಲದ ಜನರು ಪ್ರವೇಶ ಸಿಗದೇ ನಿರಾಶೆಯಿಂದ ಮರಳುವಂತಾಗಬಾರದು. ಈ ನಿಟ್ಟಿನಲ್ಲಿ ಶೀಘ್ರವೇ ಸೂಕ್ತ ಕ್ರಮ ಕೈಗೊಂಡು ಪ್ರವೇಶ ಸುಗಮಗೊಳಿಸಬೇಕೆಂದು ನಾಡ ಜನತೆಯ ಪರವಾಗಿ ವಿನಂತಿಸುತ್ತೇನೆ.

ಇದನ್ನೂ ಓದಿ: ಮೈಸೂರು: ದಸರಾ ಉತ್ಸವ ಉದ್ಘಾಟಿಸಿದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. Kannadigas don’t have a problem in preserving the monuments of tippu or any other rulers. That doesn’t mean that we have to hush up the truth of history. It was well known to the world that TIPPU was a VOILENT attrocious religious bigot,the number of crimes to his credit were in lakhs.

LEAVE A REPLY

Please enter your comment!
Please enter your name here

- Advertisment -

Must Read

ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ

0
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆ ಅಸಿಂಧುಗೊಳಿ, ಮರು ಚುನಾವಣೆ ನಡೆಸಲು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ. ಸಕಾರಣವಿಲ್ಲದೆ ತನ್ನ ನಾಮಪತ್ರ...