Homeಕರ್ನಾಟಕಬೆಂಗಳೂರಿನಲ್ಲಿ 'ಡಿಜಿಟಲ್ ಅರೆಸ್ಟ್' ಪ್ರಕರಣ; ಸೈಬರ್ ವಂಚಕರಿಂದ ₹1.24 ಕೋಟಿ ಕಳೆದುಕೊಂಡ ವೃದ್ಧೆ

ಬೆಂಗಳೂರಿನಲ್ಲಿ ‘ಡಿಜಿಟಲ್ ಅರೆಸ್ಟ್’ ಪ್ರಕರಣ; ಸೈಬರ್ ವಂಚಕರಿಂದ ₹1.24 ಕೋಟಿ ಕಳೆದುಕೊಂಡ ವೃದ್ಧೆ

- Advertisement -
- Advertisement -

ಬೆಂಗಳೂರಿನ 83 ವರ್ಷದ ಮಹಿಳೆಯೊಬ್ಬರಿಗೆ ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ವಂಚಕರು 1.24 ಕೋಟಿ ರೂಪಾಯಿ ವಂಚಿಸಿದ್ದಾರೆ. ವಂಚಕರ ಚಟುವಟಿಕೆಗಳ ಬಗ್ಗೆ ಅನುಮಾನಗೊಂಡ ಸಂತ್ರಸ್ತೆ, ನಗರದ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಕ್ಟೋಬರ್ ಮತ್ತು ನವೆಂಬರ್ ನಡುವೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಹಿಳೆಯ ದೂರಿನ ಪ್ರಕಾರ, ವಂಚಕರು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಮತ್ತು ಮುಂಬೈ ಪೊಲೀಸ್ ಅಧಿಕಾರಿಗಳಂತೆ ವರ್ತಿಇಸಿದ್ದಾರೆ. ಆಕೆಯ ಫೋನ್ ನಂಬರ್ ಒಂದರ ಮೂಲಕ ಕಾನೂನು ಬಾಹಿರ ಚಟುವಟಿಕೆಗಳು ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾಳೆ ಎಂದು ಆರೋಪಿಸಿ ಆಕೆಯನ್ನು ಬೆದರಿಸಿದ್ದರು.

ಆಕೆಯ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿಕೊಂಡು, ವಂಚಕರು ಅವರನ್ನು ‘ಡಿಜಿಟಲ್‌ ಅರೆಸ್ಟ್‌’ ಮಾಡಿದ್ದಾರೆ. ಆಕೆಯ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸಿದರು. ಮಹಿಳೆ ತನ್ನ ವಿರುದ್ಧದ ಆರೋಪಗಳನ್ನು ನಂಬಿ, ಹೀಗೆ ಒಟ್ಟು ₹1.24 ಕೋಟಿಗಳನ್ನು ಬಹು ಕಂತುಗಳಲ್ಲಿ ವರ್ಗಾಯಿಸಿದ್ದಾರೆ.

ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಸಲ್ಲಿಸಲಾದ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಅಕ್ಟೋಬರ್ 15 ರಿಂದ ನವೆಂಬರ್ 4 ರ ನಡುವೆ ವಂಚನೆ ಮಾಡಲಾಗಿದೆ.

ಎಫ್‌ಐಆರ್‌ನಲ್ಲಿ ಮಹಿಳೆಯು ವಂಚಕರಿಗೆ ಮಾಡಿದ ನಾಲ್ಕು ಪ್ರತ್ಯೇಕ ವಹಿವಾಟುಗಳನ್ನು ವಿವರಿಸಲಾಗಿದೆ. ಅಕ್ಟೋಬರ್ 23 ರಂದು ಖಾತೆಯಿಂದ ₹32 ಲಕ್ಷ, ಎರಡು ದಿನಗಳ ನಂತರ ಪ್ರತ್ಯೇಕ ಖಾತೆಯಿಂದ ₹50 ಲಕ್ಷ, ಅಕ್ಟೋಬರ್ 29 ರಂದು ₹32 ಲಕ್ಷ ಮತ್ತು ಅಕ್ಟೋಬರ್ 31 ರಂದು ₹10 ಲಕ್ಷ ಕಳುಹಿಸಿದ್ದಾರೆ.

ಹಣವನ್ನು ವರ್ಗಾವಣೆ ಮಾಡಿದ ನಂತರ ಎಲ್ಲ ಸಂವಹನಗಳನ್ನು ಕಡಿತಗೊಳಿಸಿದ ನಂತರವೇ ಮಹಿಳೆಗೆ ತಾನು ಆನ್‌ಲೈನ್ ವಂಚನೆಗೆ ಬಲಿಯಾಗಿದ್ದೇನೆ ಎಂದು ಅರಿತುಕೊಂಡಿದ್ದಾರೆ. ಪಿರ್ಯಾದಿದಾರರು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ಅಧಿಕಾರಿಗಳು ಎಲ್ಲ ರೀತಿಯ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಮನಾರ್ಹವಾಗಿ, ಅಂತಹುದೇ ಘಟನೆಯೊಂದು ಇತ್ತೀಚೆಗೆ ವರದಿಯಾಗಿದೆ, ಅಲ್ಲಿ ಇನ್ನೊಬ್ಬ ಹಿರಿಯ ವ್ಯಕ್ತಿಯಿಂದ ‘ಡಿಜಿಟಲ್‌ ಅರೆಸ್ಟ್‌’ ಮೂಲಕ ₹10 ಲಕ್ಷ ವಂಚಿಸಿದ್ದರು.

ಇದನ್ನೂ ಓದಿ; 21 ನಕಲಿ ವಿಶ್ವವಿದ್ಯಾಲಯಗಳನ್ನು ಪಟ್ಟಿ ಮಾಡಿದ ಕೇಂದ್ರ ಸರ್ಕಾರ; ಅಗ್ರ ಸ್ಥಾನದಲ್ಲಿ ದೆಹಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಂಯಮ ಮುಗಿದಿದೆ’: ಟ್ರಂಪ್ ಬೆದರಿಕೆಗೆ ಜಗ್ಗದ ಇರಾನ್; ಪ್ರದೇಶವನ್ನು ಮೀರಿ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ ಐಆರ್‌ಜಿಸಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ನೀಡಿದ್ದ ಗಡುವು ಕೆಲವೇ ಗಂಟೆಗಳು ಬಾಕಿ ಇರುವಾಗ, ಟ್ರಂಪ್ ಬೆದರಿಕೆಯನ್ನು ಧಿಕ್ಕರಿಸಿದ ಇರಾನ್ "ಸಂಯಮ ಮುಗಿದಿದೆ" ಎಂದು ಹೇಳಿದೆ ಮತ್ತು ಅದು ಈಗ ಈ ಪ್ರದೇಶದಲ್ಲಿನ...

ಒಡಿಶಾ| ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣ; ಬುಡಕಟ್ಟು ಜನಾಂಗ – ಪೊಲೀಸರ ನಡುವೆ ಘರ್ಷಣೆ

ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಸಿಜಿಮಾಲಿ ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣದ ಬಗ್ಗೆ ಮಂಗಳವಾರ (ಏಪ್ರಿಲ್ 7) ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗಿನ ಘರ್ಷಣೆಯಲ್ಲಿ 40 ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 50 ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ...

ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಅನುಮತಿಸಿದ್ದ ತೀರ್ಪು ತಪ್ಪು : 9 ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ ಪೀಠದ ಮುಂದೆ ಕೇಂದ್ರ ಸರ್ಕಾರ ಹೇಳಿಕೆ-ವರದಿ

ಶಬರಿಮಲೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿದ 2018ರ ತೀರ್ಪು ತಪ್ಪಾಗಿದೆ ಮತ್ತು ಅದನ್ನು ತಪ್ಪು ಕಾನೂನು ಎಂದು ಘೋಷಿಸಲು ಅರ್ಹವಾಗಿದೆ ಎಂಬುವುದಾಗಿ ಕೇಂದ್ರ...

ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ‘ಲವ್ ಜಿಹಾದ್’ ಹೇಳಿಕೆ; ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಚುನಾವಣಾ ಆಯೋಗ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ ಅಥವಾ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗದ ಗೆಲುವು ರಾಜ್ಯದಲ್ಲಿ "ಲವ್ ಜಿಹಾದ್" ಘಟನೆಗಳಿಗೆ ಕಾರಣವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಪಿ ಕೆ ಕೃಷ್ಣದಾಸ್ ನೀಡಿದ ಹೇಳಿಕೆಯ...

ಮಣಿಪುರ: ಇಬ್ಬರು ಮಕ್ಕಳ ಹತ್ಯೆ ಖಂಡಿಸಿ ಇಂಫಾಲ್ ಕಣಿವೆಯಲ್ಲಿ ಪ್ರತಿಭಟನೆ; 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

ಮಣಿಪುರ: ಕಣಿವೆಯ ಐದು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಬ್ರಾಡ್‌ಬ್ಯಾಂಡ್, ವಿಎಸ್‌ಎಟಿಗಳು ಮತ್ತು ವಿಪಿಎನ್ ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು ಮಣಿಪುರ ಸರ್ಕಾರ ಮಂಗಳವಾರ ಆದೇಶಿಸಿದೆ. ಗೃಹ ಇಲಾಖೆಯ ಅಧಿಕೃತ...

ಶ್ರೀನಗರದಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐವರ ಬಂಧನ; ಅಂತರರಾಜ್ಯ ಎಲ್‌ಇಟಿ ಮಾಡ್ಯೂಲ್ ಪತ್ತೆ 

ಶ್ರೀನಗರ: ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಶ್ರೀನಗರದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಅಂತರರಾಜ್ಯ ಮಾಡ್ಯೂಲ್ ಅನ್ನು ಭೇದಿಸಿದ್ದು, ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐದು...

ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿ ಬಳಿ ಗುಂಡಿನ ದಾಳಿ: ಮೂವರು ಸಾವು

ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ಕಾನ್ಸುಲೇಟ್ ಕಟ್ಟಡದ ಬಳಿ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ, ಅಧಿಕಾರಿಗಳು ಆ ಪ್ರದೇಶವನ್ನು...

ತೆಲಂಗಾಣ ಸಿಎಂ ರೆಡ್ಡಿ ವಿರುದ್ಧ ಪಿಣರಾಯಿ ವಿಜಯನ್ ವಾಗ್ದಾಳಿ; ತೀವ್ರ ಸ್ವರೂಪ ಪಡೆದುಕೊಂಡ ವಾಕ್ಸಮರ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ (ಏ.7) ವಾಗ್ದಾಳಿ ನಡೆಸಿದ್ದಾರೆ. ಇಬ್ಬರು ನಾಯಕರ ನಡುವಿನ ಮಾತಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಣ್ಣೂರಿನಲ್ಲಿ ನಡೆದ ಪತ್ರಿಕಾ ಸಂವಾದ...

ಹಿಮಂತ ಬಿಸ್ವಾ ಶರ್ಮಾ ಪತ್ನಿಯ ವಿರುದ್ಧ ‘ಹಲವು ಪಾಸ್‌ಪೋರ್ಟ್‌’ ಹೊಂದಿರುವ ಆರೋಪ : ಪವನ್ ಖೇರಾ ಮನೆಯಲ್ಲಿ ಶೋಧ ನಡೆಸಿದ ಅಸ್ಸಾಂ ಪೊಲೀಸರು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ಮನೆಯಲ್ಲಿ ಶೋಧ...

ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೇಂದ್ರದ ಹಣವನ್ನು ಪಕ್ಷದ ಚಟುವಟಿಕೆಗಳಿಗೆ ಬಳಸಿಕೊಂಡಿದೆ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕೇಂದ್ರ ನಿಧಿಯ ದುರುಪಯೋಗ ಮತ್ತು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ತೀವ್ರ ಕುಸಿತವಾಗಿದೆ ಎಂದು...