ಶುಕ್ರವಾರ (ಸೆ.27) ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ 79ನೇ ಅಧಿವೇಶನದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾತು ಆರಂಭಿಸುತ್ತಿದ್ದಂತೆ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಎದ್ದು ಹೊರ ನಡೆದಿದ್ದಾರೆ.
ಇರಾನ್, ಕುವೈತ್, ಸೌದಿ ಅರೇಬಿಯಾ, ಪಾಕಿಸ್ತಾನ, ಟರ್ಕಿ ಸೇರಿದಂತೆ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಎದ್ದು ಹೋಗಿದ್ದಾರೆ. ಈ ಮೂಲಕ ಗಾಝಾ ಮತ್ತು ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣವನ್ನು ಪ್ರತಿಭಟಿಸಿದ್ದಾರೆ.
“ಯಾರನ್ನೂ ಹಿಂದೆ ಉಳಿಯಲು ಬಿಡುವುದಿಲ್ಲ: ಶಾಂತಿ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಿಗೆ ಸೇರಿ ಕಾರ್ಯನಿರ್ವಹಿಸುವುದು” ಎಂಬ ಘೋಷ ವಾಕ್ಯದಲ್ಲಿ ಈ ಬಾರಿಯ ಅಧಿವೇಶನ ಆಯೋಜಿಸಲಾಗಿತ್ತು.
My favorite part of Netanyahu's UN speech was watching all these delegates walk out!!! https://t.co/N98mPDXpAC
— Medea Benjamin (@medeabenjamin) September 27, 2024
ಇದಕ್ಕೂ ಮುನ್ನ ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಬಳಿ ನೆತನ್ಯಾಹು ಪ್ರತಭಟನೆ ಎದುರಿಸಿದ್ದರು. ಗಾಝಾ ಆಕ್ರಮಣವನ್ನು ಖಂಡಿಸಿ ಗುಂಪೊಂದು ಪ್ರತಿಭಟನೆ ನಡೆಸಿದೆ.
ದಾಳಿ ಮುಂದುವರೆಸುವುದಾಗಿ ಹೇಳಿದ ನೆತನ್ಯಾಹು
ಪ್ರತಿಭಟನೆಗಳ ನಡುವೆಯೂ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ನೆತನ್ಯಾಹು, ಗಾಝಾ ಮತ್ತು ಲೆಬನಾನ್‌ಲ್ಲಿ ನಡೆಸುತ್ತಿರುವ ಆಕ್ರಮಣವನ್ನು ಸಮರ್ಥಿಸಿಕೊಂಡಿದ್ದಾರೆ. ಗಾಝಾದಲ್ಲಿ ಹಮಾಸ್ ಮತ್ತು ಲೆಬನಾನ್‌ನಲ್ಲಿ ಹೆಜ್ಬುಲ್ಲಾ ವಿರುದ್ದ ಸಂಪೂರ್ಣ ಜಯ ಸಾಧಿಸುವವರೆಗೆ ದಾಳಿ ಮುಂದುವರೆಸುವುದಾಗಿ ಹೇಳಿದ್ದಾರೆ.
ಗಾಝಾ ಬಳಿಕ ಲೆಬನಾನ್ ಮೇಲೆ ದಾಳಿ
ಕಳೆದ ಒಂದು ವರ್ಷದ ಅವಧಿಯಲ್ಲಿ ಗಾಝಾ ಮೇಲೆ ದಾಳಿ ನಡೆಸಿ 40 ಸಾವಿರಕ್ಕೂ ಅಧಿಕ ಜನರನ್ನು ಹತ್ಯೆ ಮಾಡಿದ್ದಲ್ಲದೆ, ಗಾಝಾ ನಗರವನ್ನು ಜನವಾಸಕ್ಕೆ ಯೋಗ್ಯವಲ್ಲದ ರೀತಿ ಮಾರ್ಪಡಿಸಿದ ಇಸ್ರೇಲ್, ಈಗ ಲೆಬನಾನ್ ಮೇಲೆ ಆಕ್ರಮಣ ಪ್ರಾರಂಭಿಸಿದೆ. ಕಳೆದ ಒಂದು ವಾರದ ಅವಧಿಯಲ್ಲಿ 700ರಷ್ಟು ಜನರನ್ನು ಹತ್ಯೆ ಮಾಡಿದೆ.
ಇದನ್ನೂ ಓದಿ : ಹೆಜ್ಬುಲ್ಲಾ ಹೆಸರೇಳಿಕೊಂಡು ಜನವಸತಿ ಪ್ರದೇಶಗಳ ಮೇಲೆ ಇಸ್ರೇಲ್ ದಾಳಿ : ಸಂಕಷ್ಟಕ್ಕೆ ಸಿಲುಕಿದ ಲೆಬನಾನ್ ನಾಗರಿಕರು



Awesome 👍