Homeಕರೋನಾ ತಲ್ಲಣಬಡಜನರ ಕೈಗೆ ನೇರ ನಗದು ನೀಡುವುದರಿಂದ ಮಾತ್ರ ಕುಸಿದಿರುವ ಆರ್ಥಿಕತೆ ಮೇಲೆತ್ತಲು ಸಾಧ್ಯ: ಆದರೆ ಸರ್ಕಾರಗಳು...

ಬಡಜನರ ಕೈಗೆ ನೇರ ನಗದು ನೀಡುವುದರಿಂದ ಮಾತ್ರ ಕುಸಿದಿರುವ ಆರ್ಥಿಕತೆ ಮೇಲೆತ್ತಲು ಸಾಧ್ಯ: ಆದರೆ ಸರ್ಕಾರಗಳು ಮಾಡುತ್ತಿರುವುದೇನು?

- Advertisement -
- Advertisement -

‘ಈಗ ಬಡತನ ರೇಖೆಗಿಂತ ಕೆಳಗೆ ಹೊಸದಾಗಿ ಸೇರಿರುವ ಜನರು ವಾಸ್ತವವಾಗಿ ಸಾಂಕ್ರಾಮಿಕಕ್ಕೆ ಮೊದಲು ಬಡತನ ರೇಖೆಗಿಂತ ಮೇಲಿದ್ದ ಜನರು. ಅವರು ಸಾಮಾನ್ಯ ಸ್ಥಿತಿಗೆ ಬರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಎನ್‍ಡಿಟಿವಿಗೆ ಗುರುವಾರ ನೀಡಿದ ಸಂದರ್ಶನದಲ್ಲಿ ಅವರು, “ಕೌಶಲ್ಯರಹಿತ ಕಾರ್ಮಿಕರು ಕೆಲಸ ಮಾಡುವ ಹೋಟೆಲ್‌ಗಳು, ಉತ್ಪಾದನೆ ಮತ್ತು ನಿರ್ಮಾಣ ವಲಯ ತ್ವರಿತವಾಗಿ ಪುನರುಜ್ಜೀವನಗೊಂಡರೆ, ಪರಿಸ್ಥಿತಿ ಸುಧಾರಿಸಬಹುದು” ಎಂದಿದ್ದಾರೆ.

ದೇಶದಲ್ಲಿ ಹಲವಾರು ಪ್ರಗತಿಪರ ಸಂಘಟನೆಗಳು-ನಮ್ಮ ರಾಜ್ಯದ ಕರ್ನಾಟಕ ಜನಶಕ್ತಿ ಸಂಘಟನೆಯೂ ಸೇರಿ- ಇದೇ ರೀತಿ ಆಗ್ರಹಿಸುತ್ತ ಬಂದಿವೆ. ಸರ್ಕಾರಗಳ ಕಿವಿಗಳಿಗೆ ಇದು ತಲುಪುತ್ತಿಲ್ಲ ಅಥವಾ ತಲುಪಿದರೂ ಅವು ತಮ್ಮದೇ ಸ್ವ ಹಿತಾಸಕ್ತಿಯ ಕಾರಣಕ್ಕೆ ಇದನ್ನು ಕೇಳಿಸಿ ಕೊಳ್ಳುತ್ತಿಲ್ಲ ಎಂಬುದು ಕಳೆದ ವರ್ಷದಿಂದ ಸಾಬೀತಾಗುತ್ತಲೇ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿದ ಆರ್ಥಿಕ ಪ್ಯಾಕೇಜ್‍ಗಳು ಬಡವರನ್ನು ಭಾಗಶಃ ತಲುಪಿವೆ ಅಷ್ಟೇ.

ಸಾಂಕ್ರಾಮಿಕ ರೋಗದಿಂದಾಗಿ ಬಡತನಕ್ಕೆ ಇಳಿದ ಜನರಿಗೆ ಸಹಾಯ ಮಾಡಲು ನರೇಗಾ ಯೋಜನೆಯಡಿ ಸರ್ಕಾರ ದೊಡ್ಡ ಪ್ರಮಾಣದಲ್ಲಿ ನೇರ ಹಣ ಪಾವತಿ ಮಾಡಬೇಕೆಂದು ಹೇಳಿರುವ ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ದೊಡ್ಡ ಪ್ರಮಾಣದ ನೇರ ನಗದು ವರ್ಗಾವಣೆ ಬಗ್ಗೆ ಸರ್ಕಾರ ಆಸಕ್ತಿ ಹೊಂದಿಲ್ಲ ಎಂಬುದನ್ನು ಅದು ಈಗಾಗಲೇ ಸೂಚಿಸಿದೆ, ಜನರು ಹಣವನ್ನು ಬ್ಯಾಂಕ್ ಖಾತೆಗಳಲ್ಲಿ ಮಾತ್ರ ಇಡುತ್ತಾರೆ ಮತ್ತು ಅದನ್ನು ಖರ್ಚು ಮಾಡುವುದಿಲ್ಲ ಎಂದು ಸರ್ಕಾರ ಭಾವಿಸಿದೆ ಎಂದು ಟೀಕಿಸಿದ್ದಾರೆ.

“ಈ ಸಮಯದಲ್ಲಿ ನಮಗೆ ನೇರ ನಗದು ವರ್ಗಾವಣೆ ಬೇಕು ಎಂದು ಹೇಳುವವರ ದೃಷ್ಟಿಕೋನವನ್ನು ನಾನು ಅನುಮೋದಿಸುತ್ತೇನೆ. ಆದರೆ ಎಲ್ಲಾ ನಗದು ವರ್ಗಾವಣೆಯು ಹೆಚ್ಚಿನ ಬ್ಯಾಂಕ್ ಠೇವಣಿಗಳಿಗೆ ಮಾತ್ರ ಕಾರಣವಾಗುತ್ತದೆ ಮತ್ತು ಹೆಚ್ಚಿನ ಬಳಕೆಯ ಖರ್ಚು ಸಂಭವಿಸುವುದಿಲ್ಲ. ಇದು ನಮಗೆ ಅಗತ್ಯವಿಲ್ಲ” ಎಂದು ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್ ಈ ವಾರದ ಆರಂಭದಲ್ಲಿ ಹೇಳಿದ್ದಾರೆ. ಅಂದರೆ ಇದರರ್ಥ ಸರ್ಕಾರಕ್ಕೆ ನೇರ ವರ್ಗಾವಣೆ ಮಾಡಲು ಮನಸ್ಸಿಲ್ಲ. ಅದು ಪ್ಯಾಕೇಜ್‍ಗಳ ಮೂಲಕ ಭ್ರಷ್ಟಾಚಾರವನ್ನು ವಿಕೇಂದ್ರಿಕರಣ ಮಾಡುತ್ತಿದೆ ಅಥವಾ ದೊಡ್ಡ ಅಂಕಿಸಂಖ್ಯೆ ತೋರಿಸಿ ಜನರನ್ನು ಮರಳು ಮಾಡುತ್ತಿದೆ ಅಲ್ಲವೇ? ಕಳೆದ ವರ್ಷದ ಪ್ಯಾಕೇಜ್‍ಗಳ ಪರಿಣಾಮಗಳು ಕಣ್ಣ ಮುಂದೆಯೇ ಇವೆಯಲ್ಲ?

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಚಿಂತಕ, ಸಾಮಾಜಿಕ ಹೋರಾಟಗಾರ ಬಂಜಗೆರೆ ಜಯಪ್ರಕಾಶ್‍, ‘ನರೇಗಾ ಕೆಲಸದ ದಿನಗಳನ್ನು ಹೆಚ್ಚಿಸುವುದು ಪರಿಣಾಮಕಾರಿ. ಆದರೆ ಇದು ರಾಜ್ಯದ ಬಹುಪಾಲು ಜನರನ್ನು ತಲುಪಲಾರದು. ಇಲ್ಲಿ ಟೇಲರ್‌ಗಳು, ಕ್ಷೌರಿಕರು, ಬಜ್ಜಿ-ಪಕೋಡಾ, ಸೊಪ್ಪು-ತರಕಾರಿ ಮಾರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ತಿಂಗಳಿಗೆ 5 ಸಾವಿರ ರೂ. ಹಾಕಿದರೆ ಸರ್ಕಾರಕ್ಕೇನೂ ಹೊರೆ ಆಗಲಾರದು. ಉದ್ಯಮಿಗಳ ಸಾವಿರಾರು ಕೋಟಿ ರೂ ಸಾಲವನ್ನು ಮನ್ನಾ ಮಾಡಿರುವಾಗ ಇದೇನೂ ದೊಡ್ಡ ಹೊರೆಯಲ್ಲ, ಬದಲಿಗೆ ಅದು ಸಾಂವಿಧಾನಿಕ ಬದ್ಧತೆ’ ಎಂದು ಅಭಿಪ್ರಾಯಪಟ್ಟರು.

ಬಡತನವನ್ನು ಕಡಿಮೆ ಮಾಡುವ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಅಭಿಜಿತ್ ಬ್ಯಾನರ್ಜಿ, ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಅಡಿಯಲ್ಲಿ ವಾರ್ಷಿಕ ಕೆಲಸದ ದಿನಗಳನ್ನು 100 ದಿನಗಳಿಂದ 150 ದಿನಗಳವರೆಗೆ ಹೆಚ್ಚಿಸಲು ಸೂಚಿಸುತ್ತಾರೆ.

ದುರ್ಬಲ ಕುಟುಂಬಗಳಿಗೆ ನೇರ ನಗದು ಹಸ್ತಾಂತರಿಸುವ ಬದಲು ಕಠಿಣವಾದ ವ್ಯವಹಾರಗಳಿಗೆ ಸಾಲವನ್ನು ಕೇಂದ್ರೀಕರಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಬಡ ಗ್ರಾಮೀಣ ಪ್ರದೇಶಗಳನ್ನು ಆವರಿಸಿರುವ ವಿನಾಶಕಾರಿ ಎರಡನೇ ಅಲೆಯು ಹೆಚ್ಚಿನ ಪ್ರಮಾಣದ ಸಾವುಗಳ ಮೂಲಕ ಹೊಸ ಅನಾಹುತಕ್ಕೆ ಕಾರಣವಾಗಬಹುದು ಎಂಬ ಆತಂಕಗಳಿವೆ.

‘ಎಲ್ಲಿಯವರೆಗೆ ಗ್ರಾಹಕರು ಹೊರಹೋಗಲು ಮತ್ತು ಸಂವಹನ ನಡೆಸಲು ಭಯ ಪಡುತ್ತಾರೋ  ಅಲ್ಲಿವರೆಗೆ ನೀವು ಏನೇ ಮಾಡಿದರೂ ಹೆಚ್ಚಿನ ಬಳಕೆ, ಹೆಚ್ಚಿನ ಬೇಡಿಕೆ ಮತ್ತು ಹೆಚ್ಚಿನ ಆರ್ಥಿಕ ಚಟುವಟಿಕೆ ಅಸಾಧ್ಯ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳುತ್ತಾರೆ.

ಜನರನ್ನು ಮನೆಯಲ್ಲಿ ಲಾಕ್‍ ಮಾಡಿದರೂ ಕೂಡ ನಿಗದಿತ ಅನುಮತಿಯ ಅವಧಿಯಲ್ಲಿ ಹೊರ ಬಂದು ತಮಗೆ ತೀರಾ ಅಗತ್ಯ ವಸ್ತುಗಳನ್ನು ಖರೀದಿಸುತ್ತಾರೆ ಎಂಬ ಪರಿಜ್ಞಾನವಿಲ್ಲದೇ ನೀತಿ ಆಯೋಗದ ಉಪಾಧ್ಯಕ್ಷ  ರಾಜೀವ್ ಕುಮಾರ್ ಮಾತನಾಡುತ್ತಿದ್ದಾರೆ. ಅವರ ಒಟ್ಟೂ ಉದ್ದೇಶ ನರೇಗಾಕ್ಕೆ ಹೆಚ್ಚು ಹಣ ನೀಡುವುದನ್ನು ಮತ್ತು ಜನರಿಗೆ ನೇರ ನಗದು ವರ್ಗಾವಣೆ ಮಾಡುವುದನ್ನು ವಿರೋಧಿಸುವ ಧಾಟಿಯಲ್ಲಿಯೇ ಇದೆ.

ಈ ಬಗ್ಗೆ ನಾನುಗೌರಿ. ಕಾಂ ಗೆ ಪ್ರತಿಕ್ರಿಯೆ ನೀಡಿದ ಜನಶಕ್ತಿ ಸಂಘಟನೆಯ ಸಂಚಾಲಕಿ ಮಲ್ಲಿಗೆ ಸಿರಿಮನೆ, ‘ನೀತಿ ಆಯೋಗ ಎಂಬುದೇ ಬ್ರಾಹ್ಮಣಶಾಹಿ ಆಲೋಚನೆಯಲ್ಲಿ ಮುಳುಗಿದೆ. ಬೆವರಿನ ಬೆಲೆ ಗೊತ್ತಿಲ್ಲದ, ಉದ್ಯಮಿಗಳ ಆರಾಧನೆ ಮಾಡುವ ಜನರೇ ಅಲ್ಲಿ ತುಂಬಿದ್ದಾರೆ. ಅಭಿಜಿತ್ ಬ್ಯಾನರ್ಜಿ, ಅಮರ್ತ್ಯಾ ಸೇನ್‍, ರಘುರಾಮ ರಾಜನ್‍ ತರಹದವರ ಜನಪರ ಆರ್ಥಿಕ ನಿಲುವುಗಳನ್ನು ನಮ್ಮ ಜನಶಕ್ತಿಯೂ ಬೆಂಬಲಿಸುತ್ತದೆ. ಸರ್ಕಾರದ ಮಾನದಂಡಗಳ ಪ್ರಕಾರವೇ ಒಂದು ಕುಟುಂಬಕ್ಕೆ ಕನಿಷ್ಠ ಮಾಸಿಕ 18 ಸಾವಿರ ರೂ. ಬೇಕು. ಇವರು ಅಷ್ಟು ಕೊಡುವುದು ಬೇಕಿಲ್ಲ. ಕುಟುಂಬದಲ್ಲಿ ದುಡಿಯುವ ಒಬ್ಬರಿಗೆ ಕನಿಷ್ಠ 5 ಸಾವಿರ ರೂ. ಮಾಸಿಕ ನಗದು ನೀಡಲಿ. ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿ  ಕೋವಿಡ್‍ನಿಂದ ಮೃತನಾಗಿದ್ದರೆ ಆ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಕೂಡಲೇ ಒದಗಿಸಲಿ. ಎನ್‍ಪಿಎಗೆ (ವಸೂಲಾಗದ ಉದ್ಯಮಿಗಳ ಸಾಲ) ಹೋಲಿಸಿದರೆ ಇದೇನೂ ದೊಡ್ಡ ಮೊತ್ತವಲ್ಲ. ಇದನ್ನು ಮಾಡುವುದು ಸರ್ಕಾರಗಳ ಸಾಂವಿದಾನಿಕ ಬದ್ಧತೆ. ಸಾಮಾನ್ಯ ಜನರ ಕೈಗೆ ಬರುವ ನೇರ ನಗದು ಮರಳಿ ಮಾರುಕಟ್ಟೆಗೇ ಬರುತ್ತದೆ. ಇದರಿಂದ ಕುಸಿದ ಆರ್ಥಿಕತೆ ಚಿಗುರುತ್ತದೆ. ಎನ್‍ಪಿಎ ಗಿರಾಕಿಗಳು ದೇಶ ಬಿಟ್ಟು ಓಡಿ ಹೋಗಿ ಅಲ್ಲಿ ತಮ್ಮ ಅಕ್ರಮ ಸಂಪತ್ತನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಜನರ ಕೈಗೆ ನಗದು ನೀಡಿ ನೋಡಿ, ಅವರು ಅದನ್ನು ಇಲ್ಲೇ ಹಾಕುತ್ತಾರೆ, ನಮ್ಮ ಆರ್ಥಿಕತೆಯನ್ನು ಕೆಳಗಿನಿಂದ ಮೇಲಕ್ಕೆ ಎತ್ತುತ್ತಾರೆ’ ಎಂದು ವಿವರಿಸಿದರು.

‘ರಾಜ್ಯದಲ್ಲಿ 7 ಸಾವಿರ ಕೋಟಿ ರೂ. ಹಣವನ್ನು ಬಿಪಿಎಲ್‍ ಕುಟುಂಬಗಳಿಗೆ ನೇರ ವರ್ಗಾಯಿಸಬೇಕು. ಇದೇನೂ ದೊಡ್ಡ ಹೊರೆಯಾ? ಈಗಾಗಲೇ ಅನ್ನಭಾಗ್ಯ ಯೋಜನೆ ಇದೆಯಲ್ಲ, ಅದರಲ್ಲಿ ಕನಿಷ್ಠ 10 ಕೆ.ಜಿ. ಅಕ್ಕಿಯನ್ನಾದರೂ ಕೊಡಬೇಕು. ಇದೆಲ್ಲ ಸರ್ಕಾರದ ಪ್ರಾಥಮಿಕ ಕರ್ತವ್ಯ. ಅತಂತ್ರವಾದ ಕುಟುಂಬಗಳಿಗೆ ಕನಿಷ್ಠ 5 ಸಾವಿರ ರೂ ನೇರ ನಗದು ನೀಡಬೇಕು. ಆಗ ಅವರ ಖರೀದಿ ಶಕ್ತಿಯೂ ಹೆಚ್ಚಾಗುತ್ತದೆ, ಅದರಿಂದ ಒಟ್ಟೂ ಆರ್ಥಿಕತೆ ಬಲಗೊಳ್ಳುತ್ತದೆ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಕೆ.ಎಲ್‍ ಅಶೋಕ್‍.

‘ಭಾರತದಂತಹ ಬಡ ದೇಶಗಳಿಗಿಂತ ಭಿನ್ನವಾಗಿ, ಸಾಂಕ್ರಾಮಿಕ ಪರಿಣಾಮಗಳನ್ನು ನಿವಾರಿಸಲು ಅಮೆರಿಕ, ಬ್ರಿಟನ್‍ ಮತ್ತು ಯುರೋಪಿಯನ್‍ ಒಕ್ಕೂಟದ  ಶ್ರೀಮಂತ ಸರ್ಕಾರಗಳು  ಕೂಡ ಬೃಹತ್ ಪ್ರಮಾಣದಲ್ಲಿ ಸಾಲ ಪಡೆದು, ಸಾಂಕ್ರಾಮಿಕದಿಂದ ನಿರುದ್ಯೋಗಿ ಆದವರಿಗೆ  ನಗದು ಪಾವತಿಸುತ್ತಿವೆ ಎಂದು ಬ್ಯಾನರ್ಜಿ ಹೇಳುತ್ತಾರೆ. ಸಾಂಕ್ರಾಮಿಕ ರೋಗದ ಆರಂಭದ ಮೊದಲಿಗಿಂತ ಈಗ ಜಾಗತಿಕವಾಗಿ ಸುಮಾರು 100 ಮಿಲಿಯನ್ ಜನರು ತೀವ್ರ ಬಡತನದಲ್ಲಿ ಬದುಕುತ್ತಿದ್ದಾರೆ ಎಂದು ಅವರು ಅಂದಾಜಿಸಿದ್ದಾರೆ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಲಾಕ್‌ಡೌನ್ ಮೂಲಕ  ಆರ್ಥಿಕತೆಯನ್ನು ವಿನಾಶ  ಮಾಡುತ್ತಿವೆ. ಸದ್ಯ ಸಾಂಕ್ರಾಮಿಕ ಇನ್ನಷ್ಟು ಹೆಚ್ಚಿದೆ ಮತ್ತು ಸಾವಿನ ಸಂಖ್ಯೆ ಉಲ್ಬಣಗೊಂಡಿದೆ ಎನ್ನುವ ಬ್ಯಾನರ್ಜಿ, ಭಾರತದಲ್ಲಿ ಮೊದಲ ಲಾಕ್‌ಡೌನ್ ಕಾರಣಕ್ಕೆ ದೇಶದ ಜಿಡಿಪಿಯ ಕಾಲು ಭಾಗ ಕುಸಿದಿತ್ತು ಎನ್ನುತ್ತಾರೆ.

ತಜ್ಞರ ಮಾತುಗಳನ್ನೂ ಕೇಳದ, ತಳಮಟ್ಟದಲ್ಲಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತರ ಬೇಡಿಕೆಗಳನ್ನೂ ಪರಿಗಣಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕುಸಿದಿರುವ ಆರ್ಥಿಕತೆ ಯಾವ ರೀತಿ ಮೇಲೆತ್ತುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಲಕ್ಷದ್ವೀಪ: ಕೇಂದ್ರದಿಂದ ಜೈವಿಕ ಅಸ್ತ್ರ ಬಳಕೆ ಆರೋಪ, ನಿರ್ಮಾಪಕಿ ವಿರುದ್ಧ ದೇಶದ್ರೋಹ ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...