Homeಮುಖಪುಟದಿಶಾ ರವಿಯ ಜಾಮೀನು ಆದೇಶ: ದೇಶದ್ರೋಹದ ಬಗ್ಗೆ ನ್ಯಾಯಾಧೀಶರು ಹೇಳಿದ್ದೇನು?

ದಿಶಾ ರವಿಯ ಜಾಮೀನು ಆದೇಶ: ದೇಶದ್ರೋಹದ ಬಗ್ಗೆ ನ್ಯಾಯಾಧೀಶರು ಹೇಳಿದ್ದೇನು?

ಮಂಗಳೂರಿನ ವಕೀಲರಾದ ಪುನೀತ್‌ ಅಪ್ಪು ನ್ಯಾಯಾಲಯದ ಆದೇಶವನ್ನು ಅನುವಾದಿಸಿದ್ದಾರೆ. ನಾನುಗೌರಿ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.

- Advertisement -
- Advertisement -

ರೈತ ಹೋರಾಟಕ್ಕೆ ಬೆಂಬಲ‌ ಸೂಚಿಸಿದ ಕಾರಣಕ್ಕಾಗಿ ಪರಿಸರ ಕಾರ್ಯಕರ್ತೆ ದಿಶಾ ರವಿಯನ್ನು ದೇಶದ್ರೋಹವೆಸಗಿದ ಆರೋಪದಲ್ಲಿ ಬಂಧಿಸಲಾಯಿತು. ಆಕೆಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಜಾಮೀನು ನೀಡಿದೆ. ನ್ಯಾಯಾಧೀಶರಾದ ಧರ್ಮೇಂದ್ರ ರಾಣಾ ಹೇಳಿದ ಕೆಲವು ಮಾತುಗಳು ಬಹಳ ಮಹತ್ವದಾಗಿವೆ. ಮಂಗಳೂರಿನ ವಕೀಲರಾದ ಪುನೀತ್‌ ಅಪ್ಪು ನ್ಯಾಯಾಲಯದ ಆದೇಶವನ್ನು ಅನುವಾದಿಸಿದ್ದಾರೆ. ನಾನುಗೌರಿ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.

ದಿಶಾ ರವಿಯ ಮೇಲೆ ಆರೋಪಿಸಲಾದ ಅಪರಾಧಿಕ ಕಲಂಗಳ ವ್ಯಾಖ್ಯಾನ ಮತ್ತು ವಿವರಣೆ

124-ಎ. ರಾಜದ್ರೋಹ (Sedition):

ಯಾವನೇ ವ್ಯಕ್ತಿಯು ಆಡಿದ ಮಾತುಗಳಿಂದ ಅಥವಾ ಬರೆದ ಶಬ್ದಗಳಿಂದ ಅಥವಾ ಸಂಜ್ಞೆಗಳಿಂದ ಅಥವಾ ದೃಶ್ಯ ನಿರೂಪಣೆಯಿಂದ ಅಥವ ಅನ್ಯತಾ ಭಾರತದಲ್ಲಿ ವಿಧಿಪ್ರಕಾರವಾಗಿ ಸ್ಥಾಪಿತವಾದ ಸರ್ಕಾರದ ವಿರುದ್ಧ ದ್ವೇಷವನ್ನು ಅಥವಾ ತಿರಸ್ಕಾರವನ್ನು ಉಂಟು ಮಾಡಿದರೆ ಅಥವಾ ಉಂಟು ಮಾಡಲು ಪ್ರಯತ್ನಿಸಿದರೆ, ಅಥವಾ ಅವಿಶ್ವಾಸವನ್ನು ಉದ್ರೇಕಿಸಿದರೆ ಅಥವಾ ಉದ್ರೇಕಿಸಲು ಪ್ರಯತ್ನಿಸಿದರೆ, ಅವನು ಆಜೀವ ಕಾರಾವಾಸದಿಂದ ದಂಡಿತನಾಗತಕ್ಕದ್ದು ಮತ್ತು ಆ ದಂಡನೆಗೆ ಜುಲ್ಮಾನೆಯನ್ನು ಸೇರಿಸಬಹುದು ಅಥವಾ ಮೂರು ವರ್ಷಗಳ ಕಾರಾವಾಸದಿಂದ ದಂಡಿತನಾಗತಕ್ಕದ್ದು ಮತ್ತು ಆ ದಂಡನೆಗೆ ಜುಲ್ಮಾನೆಯನ್ನೂ ಸೇರಿಸಬಹುದು ಅಥವಾ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು

ವಿವರಣೆ-1 (Explanation-1):
“ಅವಿಶ್ವಾಸ” ಎಂಬ ಪದಾವಳಿಯು ರಾಜದ್ರೋಹವನ್ನು ಮತ್ತು ಎಲ್ಲ ದ್ವೇಷ ಭಾವನೆಗಳನ್ನು ಒಳಗೊಳ್ಳುತ್ತದೆ.

ವಿವರಣೆ-2 (Explanation-2):
ಸರ್ಕಾರವು ಕೈಕೊಂಡ ಕ್ರಮಗಳನ್ನು ದ್ವೇಷ, ತಿರಸ್ಕಾರ ಅಥವಾ ಅವಿಶ್ವಾಸ ಇವುಗಳನ್ನು ಉದ್ರೇಕಿಸದೆ ಅಥವಾ ಉದ್ರೇಕಿಸುವ ಪ್ರಯತ್ನ ಮಾಡದೆ ವಿಧಿಸಮ್ಮತ ಉಪಾಯಗಳಿಂದ ಬದಲಾಯಿಸುವಂತೆ ಮಾಡುವ ಉದ್ದೇಶದಿಂದ ಅವುಗಳನ್ನು ಕುರಿತು ಅಸಮ್ಮತಿಯನ್ನು ವ್ಯಕ್ತಪಡಿಸುವ ಟೀಕೆಗಳು ಈ ಪ್ರಕರಣದ ಮೇರೆಗೆ ಅಪರಾಧವಾಗುವುದಿಲ್ಲ.

ವಿವರಣೆ-3 (Explanation-3):
ದ್ವೇಷ, ತಿರಸ್ಕಾರ ಅಥವಾ ಅವಿಶ್ವಾಸ ಇವುಗಳನ್ನು ಉದ್ರೇಕಿಸದೆ ಅಥವಾ ಉದ್ರೇಕಿಸುವ ಪ್ರಯತ್ನ ಮಾಡದೆ, ಸರ್ಕಾರವು ಕೈಗೊಂಡ ಆಡಳಿತ ಕ್ರಮಗಳನ್ನು ಅಥವಾ ಇತರ ಯಾವುದೇ ಕ್ರಮವನ್ನು ಕುರಿತು ಅಸಮ್ಮತಿಯನ್ನು ವ್ಯಕ್ತಪಡಿಸುವ ಟೀಕೆಗಳು ಈ ಪ್ರಕರಣದ ಮೇರೆಗೆ ಅಪರಾಧವಾಗುವುದಿಲ್ಲ.

153-ಎ. ವಿವಿಧ ಗುಂಪುಗಳ ಮಧ್ಯೆ, ಮತ್ತು ಮೂಲವಂಶ, ಜನ್ಮಸ್ಥಳ, ನಿವಾಸ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ದ್ವೇಷವನ್ನು ಉಂಟು ಮಾಡುವುದು ಮತ್ತು ಸೌಹಾರ್ದತೆಗೆ ಬಾಧಕವಾಗುವ ಕೃತ್ಯಗಳನ್ನು ಮಾಡುವುದು (Promoting enmity between different groups on grounds of religion, race, place of birth, residence, language, etc., and doing acts prejudicial to maintenance, of harmony):

1) ಯಾವನೇ ವ್ಯಕ್ತಿಯು-
ಎ) ಆಡಿದ ಮಾತುಗಳಿಂದ ಇಲ್ಲವೆ ಬರೆದ ಶಬ್ದಗಳಿಂದ ಅಥವಾ ಸಂಜ್ಞೆಗಳಿಂದ ಅಥವಾ ದೃಶ್ಯ ನಿರೂಪಣೆಗಳಿಂದ ಅಥವಾ ಬೇರೆ ರೀತಿಯಲ್ಲಿ ಮತ, ಮೂಲ ವಂಶ, ಜನ್ಮ ಸ್ಥಳ, ನಿವಾಸ, ಭಾಷೆ, ಜಾತಿ ಅಥವಾ ಕೋಮು ಅಥವಾ ಇತರ ಯಾವುದೇ ಆಧಾರದ ಮೇಲೆ ವಿವಿಧ ಮತೀಯ, ಮೂಲವಂಶೀಯ, ಭಾಷಿಕ ಅಥವಾ ಪ್ರಾದೇಶಿಕ ಗುಂಪುಗಳ ನಡುವೆ ಅಥವಾ ಜಾತಿಗಳ ಅಥವಾ ಕೋಮುಗಳ ನಡುವ ಅಸೌಹಾರ್ದವನ್ನು ಅಥವಾ ವೈರ, ದ್ವೇಷ ಅಥವಾ ವೈಮನಸ್ಸಿನ ಭಾವನೆಗಳನ್ನು ಹೆಚ್ಚಿಸಿದರೆ ಅಥವಾ ಹೆಚ್ಚಿಸಲು ಪ್ರಯತ್ನಿಸಿದರೆ; ಅಥವಾ

ಬಿ) ವಿವಿಧ ಮತೀಯ, ಮೂಲವಂಶೀಯ; ಭಾಷಿಕ ಅಥವಾ ಪ್ರಾದೇಶಿಕ ಗುಂಪುಗಳ ನಡುವಣ ಅಥವಾ ಜಾತಿ ಅಥವಾ ಕೋಮುಗಳ ನಡುವಣ ಸೌಹಾರ್ದಕ್ಕೆ ಭಾಧಕವಾಗುವ ಯಾವುದೇ ಕೃತ್ಯವನ್ನು ಮಾಡಿದರೆ, ಮತ್ತು ಅದರಿಂದ ಸಾರ್ವಜನಿಕ ನೆಮ್ಮದಿಯು ಕದಡಿದರೆ ಅಥವಾ ಕದಡುವ ಸಂಭವವಿದ್ದರೆ; ಅಥವಾ

ಸಿ) ಯಾವುದೇ ಅಂಗ ಸಾಧನೆಯನ್ನು; ಚಲನವಲನವನ್ನು ಅಥವಾ ಕವಾಯತನ್ನು ಅಥವಾ ಅಂಥದೇ ಇತರ ಚಟುವಟಿಕೆಯನ್ನು, ಅಂಥ ಚಟುವಟಿಕೆಯಲ್ಲಿ ಭಾಗವಹಿಸುವವರು ಯಾವುದೇ ಮತೀಯ, ಮೂಲವಂಶೀಯ, ಭಾಷಿಕ ಅಥವಾ ಪ್ರಾದೇಶಿಕ ಗುಂಪಿನ ವಿರುದ್ಧ ಅಥವಾ ಜಾತಿಯ ಅಥವಾ ಕೋಮಿನ ವಿರುದ್ಧ ಆಪರಾಧಿಕ ಬಲವನ್ನು ಅಥವಾ ಹಿಂಸೆಯನ್ನು ಪ್ರಯೋಗಿಸತಕ್ಕುದು ಅಥವಾ ಪ್ರಯೋಗಿಸಲು ತರಬೇತಿ ಪಡೆಯತಕ್ಕುದು ಎಂಬ ಉದ್ದೇಶದಿಂದ ಅಥವಾ ಅಂಥ ಚಟುವಟಿಕೆಯಲ್ಲಿ ಭಾಗವಹಿಸುವವರು ಆಪರಾಧಿಕ ಬಲವನ್ನು ಅಥವಾ ಹಿಂಸೆಯನ್ನು ಪ್ರಯೋಗಿಸುವ ಅಥವಾ ಪ್ರಯೋಗಿಸಲು ತರಬೇತಿ ಪಡೆಯುವ ಸಂಭವವಿದೆಯೆಂದು ತಿಳಿದೂ ಸಂಘಟಿಸಿದರೆ ಅಥವಾ ಆಪರಾಧಿಕ ಬಲವನ್ನು ಅಥವಾ ಹಿಂಸೆಯನ್ನು ಪ್ರಯೋಗಿಸುವ ಉದ್ದೇಶದಿಂದ ಅಥವಾ ಅಂಥ ಚಟುವಟಿಕೆಯಲ್ಲಿ ಭಾಗವಹಿಸುವವರು ಆಪರಾಧಿಕ ಬಲವನ್ನು ಅಥವಾ ಹಿಂಸೆಯನ್ನು ಪ್ರಯೋಗಿಸುವ ಸಂಭವವಿದೆಯೆಂದು ತಿಳಿದೂ ಅಂಥ ಚಟುವಟಿಕೆಯಲ್ಲಿ ಭಾಗವಹಿಸಿದರೆ ಮತ್ತು ಅಂಥ ಚಟುವಟಿಕೆಯು ಯಾವುದೇ ಕಾರಣಕ್ಕಾಗಿ, ಅಂಥ ಮತೀಯ, ಮೂಲವಂಶೀಯ, ಭಾಷಿಕ ಅಥವಾ ಪ್ರಾದೇಶಿಕ ಗುಂಪಿನವರಲ್ಲಿ ಅಥವಾ ಜಾತಿ ಅಥವಾ ಕೋಮಿನ ಜನರಲ್ಲಿ ಭಯವನ್ನು ಅಥವಾ ಗಾಬರಿಯನ್ನು ಅಥವಾ ಅಭದ್ರತೆಯ ಭಾವನೆಯನ್ನು ಉಂಟುಮಾಡಿದರೆ, ಅಥವಾ ಉಂಟು ಮಾಡುವ ಸಂಭವವಿದ್ದರೆ-

ಅವನು ಮೂರು ವರ್ಷಗಳ ಅವಧಿಯವರೆಗಿನ ಕಾರಾವಾಸದಿಂದ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕುದು.

ಪೂಜಾಸ್ಥಳ ಮುಂತಾದ ಎಡೆಗಳಲ್ಲಿ ಮಾಡಲಾದ ಅಪರಾಧ (Offence committed in place of worship etc.):

2) ಯಾವನೇ ವ್ಯಕ್ತಿಯು ಯಾವುದೇ ಪೂಜಾಸ್ಥಳದಲ್ಲಿ ಅಥವಾ ಮತೀಯ ಪೂಜೆಯನ್ನು ಅಥವಾ ಮತೀಯ ಕರ್ಮಗಳನ್ನು ನಡೆಸುವುದರಲ್ಲಿ ನಿರತವಾದ ಯಾವುದೇ ಕೂಟದಲ್ಲಿ (1)ನೇ ಒಳಪ್ರಕರಣದಲ್ಲಿ ಉಲ್ಲೇಖಿಸಿದ ಅಪರಾಧವನ್ನು ಮಾಡಿದರೆ, ಅವನು ಐದು ವರ್ಷಗಳ ಅವಧಿಯವರೆಗಿನ ಕಾರಾವಾಸದಿಂದ ದಂಡಿತನಾಗತಕ್ಕುದು ಮತ್ತು ಜುಲ್ಮಾನೆಗೂ ಗುರಿಯಾಗತಕ್ಕುದು.

ಅರ್ಜಿದಾರಳು ಮತ್ತು ಸರಕಾರದ ಪರ ವಕೀಲರ ವಾದವಿವಾದಗಳನ್ನು ಆಲಿಸಿದ ನಂತರ ನ್ಯಾಯಾಧೀಶರು ತೀರ್ಪಿನಲ್ಲಿ‌ ಚರ್ಚಿಸಿದ ಅಂಶಗಳು:

ದಿಶಾ ರವಿಯವರ ಮೇಲಿದ್ದ ಪ್ರಮುಖ ಆರೋಪವೆಂದರೆ ಪ್ರತ್ಯೇಕತಾವಾದಿ (ಖಲಿಸ್ಥಾನಿ) ಸಂಘಟನೆಗೆ ನಿಕಟವರ್ತಿಯಾಗಿದ್ದ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ (ಪಿಜೆಎಫ್) ಜೊತೆಗೆ ಸಂಪರ್ಕದಲ್ಲಿದ್ದ ಕೆಲವರು (ಅನಿತಾ ಮತ್ತು ದಹಿವಾಲ್) ರೈತ ಹೋರಾಟದ ನೆಪದಲ್ಲಿ 11-01-2021 ರಂದು ತಮ್ಮ ಸಂಘಟನೆಯ ಜ಼ೂಮ್ ಮೀಟಿಂಗೊಂದನ್ನು ನಡೆಸಿದ್ದರು. ಅದರಲ್ಲಿ ನಿಕಿತಾ ಮತ್ತು ಶಂತನು ಭಾಗವಹಿಸಿದ್ದರು. ಇವರು ಹೋರಾಟದ ರೂಪುರೇಷೆಗಳನ್ನು ತಯಾರಿಸಲಾದ ಟೂಲ್ ಕಿಟ್ ತಯಾರಿಯಲ್ಲಿ ನೇರವಾಗಿ ಭಾಗಿಯಾಗಿದ್ದರು. ಜಾಮೀನು ಅರ್ಜಿದಾರ್ತಿ ದಿಶಾರವಿ ಈ ಟೂಲ್ ಕಿಟ್ ನ ಕೆಲವು ಅಂಶಗಳನ್ನು ಬರೆಯುವಲ್ಲಿ ಅವರಿಗೆ ಸಹಕರಿಸಿದ್ದರು ಎಂಬ ಆರೋಪದಲ್ಲಿ ದಿಶಾ ರವಿಯವರನ್ನು ಬಂಧಿಸಲಾಗಿತ್ತು. “ನೀವು ಚಂದಾ ಹಣವೆತ್ತಲು ಡಕಾಯಿತರ ಬಳಿ ಸಾಗುವಂತಿಲ್ಲ” ಎಂಬುದು ಸರಕಾರದ ಪರ ವಕೀಲರ ಪ್ರಮುಖ ವಾದವಾಗಿತ್ತು. ಅಂದರೆ ಈ ಅರ್ಜಿದಾರಳು ಸದ್ರಿ ಪಿ ಜೆ ಎಫ್ ಸಂಘಟನೆಯ ಜೊತೆ ಸೇರಿ ಪ್ರತ್ಯೇಕತಾವಾದಿಗಳಿಗೆ ಸಹಕರಿಸಿದ್ದರು ಎಂಬುದು ಪ್ರಮುಖ ಆರೋಪವಾಗಿದೆ.

ಪಿಜೆಎಫ್ ಒಂದು ನಿಷೇಧಿತ ಸಂಘಟನೆಯಾಗಿಲ್ಲ ಮತ್ತು ಧಲಿವಾಲ ಮತ್ತು ಅನಿತಾ ಲಾಲ್ ಎಂಬವರ ಮೇಲೆ ಯಾವುದೇ ಪೂರ್ವಾರೋಪಗಳೂ ಇರಲಿಲ್ಲ ಎಂಬುದನ್ನು ಸರಕಾರದ ಪರ ವಕೀಲರು ನ್ಯಾಯಾಲಯದಲ್ಲಿ ಒಪ್ಪಿದ್ದಾರೆ. ದಿಶಾ ರವಿ ಮತ್ತು ಧಲಿವಾಲ್ – ಅನಿತಾಲಾಲ್ ನಡುವೆ ನೇರ ಸಂಪರ್ಕವಿತ್ತು ಎಂಬುದನ್ನು ಸಾಬೀತು ಪಡಿಸಲು ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ. ಅರ್ಜಿದಾರ್ತಿ/ಆರೋಪಿ ದಿಶಾ ರವಿಯವರ 26-01-2021 ಹಿಂಸಾಚಾರಕ್ಕೆ ಕರೆ ನೀಡಿದುದನ್ನು ಸಾಬೀತು ಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ.

“ಒಬ್ಬ ವ್ಯಕ್ತಿಯು ಸಂಶಯಾಸ್ಪದ ವ್ಯಕ್ತಿಗಳ ಜೊತೆಗೆ ಸಂಪರ್ಕದಲ್ಲಿದ್ದ ಕೂಡಲೇ ಆ ವ್ಯಕ್ತಿಯ ಎಲ್ಲಾ ಚಲನವಲನಗಳನ್ನು ಸಂಶಯಿಸಬೇಕಾದುದಿಲ್ಲ. ಎಲ್ಲಿಯವರೆಗೆ ವ್ಯಕ್ತಿಯ ನಡೆಯು ಪ್ರಜ್ಞಾಪೂರ್ವಕವಾಗಿ ಕಾನೂನಿನ ನಾಲ್ಕು ಪರಿಧಿಗಳ ನಡುವೆ ನ್ಯಾಯಯುತವಾಗಿರುತ್ತದೋ ಅಲ್ಲಿಯವರೆಗೆ ಆತ ಸಂಶಯಾಸ್ಪದ ನಡವಳಿಕೆಗಳ ಜನರೊಂದಿಗೆ ಸಂಪರ್ಕದಲ್ಲಿದ್ದರೂ ಆತನ‌ ಮೇಲೆ‌ ಆ ಜನರ ಕಳಂಕವನ್ನು ಆರೋಪಿಸಲಾಗದು.

26-01-2021ರ ಹಿಂಸಾಚಾರದಲ್ಲಿ ಅರ್ಜಿದಾರ್ತಿ ಮತ್ತು ಪಿಜೆಎಫ್ ಸಂಘಟನೆಯ ಕೈವಾಡದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳೂ ಈ ನ್ಯಾಯಾಲಯದ‌ ಮುಂದೆ ಸಲ್ಲಿಸಲಾಗಿಲ್ಲ. ಅರ್ಜಿದಾರ್ತಿಯ ಒಂದು ಶಾಸನವನ್ನು ವಿರೋಧಿಸುವ ಸಮಾನ ವೇದಿಕೆಯನ್ನು ಸಂಘಟಿಸಿದವರ ಜೊತೆಗೆ ಸೇರಿದ್ದಳು ಎಂಬ ಏಕೈಕ ಕಾರಣಕ್ಕೆ ಕೇವಲ ‘ಊಹಾಪೋಹಗಳ’ ಆಧಾರದಲ್ಲಿ ಆಕೆ ಹಿಂಸಾಚಾರಕ್ಕೆ ಕರೆ ನೀಡಿದ್ದಳು ಮತ್ತು ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸಿದ್ದಳು ಎಂದು ಆರೋಪಿಸುವುದು ಸಾಧುವಾದುದಲ್ಲ” ಎಂಬುದು ನ್ಯಾಯಾಲಯದ ಸ್ಪಷ್ಟ ಅಭಿಮತವಾಗಿದೆ.
ಕೇವಲ ದೇಶದ ಯೋಜನೆಗಳಿಗೆ ಭಿನ್ನಮತ ವ್ಯಕ್ತಪಡಿಸಿದರೆಂಬ ಕಾರಣಕ್ಕೆ ಪ್ರಜೆಗಳನ್ನು ಬಂಧಿಸಿ ಜೈಲಿಗೆ ತಳ್ಳುವಂತಿಲ್ಲ.

ಅಭಿವ್ಯಕ್ತಿ ಸ್ವಾತಂತ್ರ್ಯವು ಜಾಗತಿಕ ಒಮ್ಮತವನ್ನು ಅಪೇಕ್ಷಿಸುವ ಸ್ವಾತಂತ್ರ್ಯವನ್ನೂ ಒಳಗೊಂಡಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯವು ಭೌಗೋಳಿಕ ರೇಖೆಗಳಿಂದ ಬಂಧಿಯಾಗಿಲ್ಲ.
ಯಾವುದೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳು ಸರಕಾರದ ಪ್ರಜ್ಞಾಪಾಲಕರು ಕೇವಲ ದೇಶದ ಯೋಜನೆಗಳಿಗೆ ಭಿನ್ನಮತ ವ್ಯಕ್ತಪಡಿಸಿದರೆಂಬ ಕಾರಣಕ್ಕೆ ಪ್ರಜೆಗಳನ್ನು ಬಂಧಿಸಿ ಜೈಲಿಗೆ ತಳ್ಳುವಂತಿಲ್ಲ
ಸರಕಾರದ ಘಾಸಿಗೊಂಡ ದುರಭಿಮಾನವನ್ನು ತಣಿಸಲು ‘ದೇಶದ್ರೋಹ’ ಪ್ರಕರಣ ದಾಖಲಿಸುವುದು ಸರಿಯಾದ‌ ಕ್ರಮವಲ್ಲ

‘ಅನೋ ಭದ್ರಾಃ ಕೃತವೋ ಯಂತು ವಿಶ್ವತಃ ‘ -ನಮ್ಮ ಐದುಸಾವಿರ ವರ್ಷಗಳ ಇತಿಹಾಸದಲ್ಲಿ ಋಗ್ವೇದದ ವೇದವಾಕ್ಯದಂತೆ ಈ ದೇಶವು ಎಲ್ಲಾ ರೀತಿಯ ಭಿನ್ನ ಚಿಂತನೆಗಳನ್ನು ಸ್ವೀಕರಿಸಿದೆ
ವಾಟ್ಸಾಪ್ ಗ್ರೂಪ್ ಗಳನ್ನು ರಚಿಸಿ ಟೂಲ್ ಕಿಟ್ ದಾಖಲೆಯ ಸಂಪಾದನೆ ಮಾಡಿರುವುದನ್ನು ಅಪರಾಧವೆಂದು ಹೇಳಲು ಸಾಧ್ಯವಿಲ್ಲ.


ಇದನ್ನೂ ಓದಿ: ನೂರರ ನೋಟ: ಸಾಕಿನ್ನು ನಿರಂಕುಶಪ್ರಭುತ್ವ ರೈತರ ಬೇಡಿಕೆಗಳನ್ನು ಪೂರೈಸಿ, ಗೌರವಿಸಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...