Homeಕರ್ನಾಟಕಕುಸುಮಾ ವಿರುದ್ಧ ಪ್ರಚಾರಕ್ಕೆ 80 ಲಕ್ಷ ಬೇಡಿಕೆ ಇಟ್ಟ ಡಿ.ಕೆ.ರವಿ ತಾಯಿ?; ವಿಡಿಯೊ ವೈರಲ್

ಕುಸುಮಾ ವಿರುದ್ಧ ಪ್ರಚಾರಕ್ಕೆ 80 ಲಕ್ಷ ಬೇಡಿಕೆ ಇಟ್ಟ ಡಿ.ಕೆ.ರವಿ ತಾಯಿ?; ವಿಡಿಯೊ ವೈರಲ್

ಸದರಿ ವಿಡಿಯೊ ಹಳೆಯದೆಂದು ಹೇಳಲಾಗುತ್ತಿದೆ, ಆದರೆ ಇಲ್ಲಿನ ದಾಖಲಾಗಿರುವ ಮಾತುಗಳು ಚರ್ಚೆಗೆ ಗ್ರಾಸವಾಗಿವೆ.

- Advertisement -
- Advertisement -

ಆತ್ಮಹತ್ಯೆಗೆ ಶರಣಾದ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪನವರು ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬೆನ್ನಲ್ಲೇ ಸ್ಪೋಟಕ ಆರೋಪಗಳನ್ನು ಹೊತ್ತ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಬಿಜೆಪಿ ಪರ ಪ್ರಚಾರ ಮಾಡಲು ಮತ್ತು ಕುಸುಮಾ ವಿರುದ್ಧ ಮಾತನಾಡಲು ಡಿ.ಕೆ.ರವಿ ಅವರ ತಾಯಿ ಗೌರಮ್ಮನವರು 80 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ವಿಡಿಯೊ ಹಂಚಿಕೆಯಾಗುತ್ತಿದೆ. ಸದರಿ ವಿಡಿಯೊವನ್ನು ‘ಪೀಪಲ್‌ ಮೀಡಿಯಾ’ ಯೂಟ್ಯೂಬ್‌ ಚಾನೆಲ್‌ನಲ್ಲಿಯೂ ಪ್ರಕಟ ಮಾಡಲಾಗಿದೆ.

ಬಿಜೆಪಿ ಪರ ಪ್ರಚಾರ ಮಾಡುವಂತೆ ಹಾಗೂ ಕುಸುಮಾ ವಿರುದ್ಧ ಮಾತನಾಡುವಂತೆ ಇಬ್ಬರು ವ್ಯಕ್ತಿಗಳು ಕೇಳಿಕೊಳ್ಳುತ್ತಿರುವಾಗ ಡಿ.ಕೆ.ರವಿ ತಾಯಿ ಗೌರಮ್ಮ ಈ ರೀತಿ ಮಾತನಾಡಿದ್ದಾರೆಂದು ಆರೋಪಿಸಲಾಗಿದೆ. ಈ ವಿಡಿಯೊವನ್ನು ಸೆರೆ ಹಿಡಿದಿರುವವರು ಯಾರೆಂದು ಪತ್ತೆಯಾಗಿಲ್ಲ. ಇಬ್ಬರು ಪುರುಷರು ಈ ವಿಡಿಯೊದಲ್ಲಿ ಮಾತನಾಡಿದ್ದಾರೆ. ಇದು ಹಳೆಯ ವಿಡಿಯೊವೆಂದೂ ಹೇಳಲಾಗುತ್ತಿದೆ. ಆದರೆ ಚುನಾವಣೆ ಹೊತ್ತಿನಲ್ಲಿ ವೈರಲ್ ಆಗುತ್ತಿದೆ.

ಸಂಭಾಷಣೆಯಲ್ಲಿ ಏನಿದೆ?

ಮಹಿಳೆ: ಏನ್ ಮಾಡೋಕೆ ಮಾಡಿದ್ದೀರಪ್ಪ?

ಪುರುಷ 1: ಕುಸುಮಾ ವಿರುದ್ಧ ಕ್ಯಾನ್ವಾಸ್ ಮಾಡುತ್ತಿದ್ದೇವೆ. ನೀವು ಬಂದು ನಮ್ಮ ಪಕ್ಷಕ್ಕೆ ವೋಟ್ ಮಾಡುವಂತೆ ಸೆಂಟಿಮೆಂಟ್‌ನಲ್ಲಿ ಮಾತನಾಡಬೇಕು. ನಮ್ಮದೇ ಚಾನೆಲ್ ಬರುತ್ತದೆ. ಟಿವಿಯವರು ಹೇಳಿಕೊಡುತ್ತಾರೆ. ಅವರು ಹೇಳಿದಂತೆ ಅತ್ತು, ನೋವುಗಳನ್ನು ಹೇಳಿಕೊಂಡು, ಕುಸುಮಾ ಬಗ್ಗೆ ಕೆಟ್ಟದ್ದಾಗಿ ಮಾತನಾಡಬೇಕು. ನೀವು ಮಾತನಾಡಿದರೆ ಜನ ಕನ್ವಿನ್ಸ್‌ ಆಗ್ತಾರೆ.

ಮಹಿಳೆ: ನೀವು ಹೇಳಿದಂತೆ ಮಾಡಿದಾಗ ತಾನೇ, ನಾವು ಮಾಡೋದು?

ಪುರುಷ 1: ನೀವು ಬಾಯಿ ಬಿಟ್ಟು ಹೇಳಿ. ನೀವು ಹೇಳಿದಂತೆ ಮಾಡೋಣ.

ಮಹಿಳೆ: ಅವತ್ತೇ ಹೇಳಿದೆವಲ್ಲ.

ಪುರುಷ 1: ಈಗ ಸಡನ್ನಾಗಿ ರಿಜಿಸ್ಟ್ರೇಷನ್ ಮಾಡಿಸೋದು ಕಷ್ಟವಾಗುತ್ತದೆ.

ಮಹಿಳೆ: ಎಲ್ಲಾ ಒಂದೇ ದಿನಕ್ಕೆ ಆಗುತ್ತದೆ.

ಪುರುಷ 1: ಈಗ ನಾವು ಒಂದು ಮನೆ ನೋಡಬೇಕು.

ಮಹಿಳೆ: ಮೂರು ದಿನದಿಂದ ನೀವು ಮಾಡಿದ್ದು ಅದೇ ಕೆಲಸ ತಾನೇ?

ಪುರುಷ 1: ಅಣ್ಣನವರ ಹತ್ತಿರ ಒಂದು ಸಲ ಕೇಳಿಬಿಡೋಣ, ಏನ್ ಹೇಳ್ತಾರೆ…

(ಮಧ್ಯದಲ್ಲಿ ಮತ್ತೊಬ್ಬ ವ್ಯಕ್ತಿ ಮಾತನಾಡುತ್ತಾರೆ)

ಪುರುಷ 2: ಅಷ್ಟರಲ್ಲಿ ಮಾಡ್ತೀವಿ, ಇಲ್ಲ ಅಂತ ಹೇಳೋಲ್ಲ. ಆಗಲಿಲ್ಲ ಅಂದ್ರೆ ದುಡ್ಡು ಕೊಟ್ಟಿರುತ್ತೇವಲ್ಲ. ರಿಟರ್ನ್ ಮಾಡಿ, ಆಮೇಲೆ ರಿಜಿಸ್ಟರ್‌ ಮಾಡಿಸಿಕೊಳ್ಳಿ ಅಷ್ಟೇ. ಅಷ್ಟರೊಳಗೆ ಆದ್ರೆ ಮಾಡಿಸೋಣ, ತೊಂದರೆ ಇಲ್ಲ.

ಮಹಿಳೆ: ಹದಿನಾರನೇ ತಾರೀಖಿನೊಳಗೆ ಆದ್ರೆ ಮಾಡಿ, ಆಗಲಿಲ್ಲ ಅಂದ್ರೆ ಮನೆಗೆ ಆಗುವಷ್ಟು ಅಮೌಂಟ್‌ ತಲುಪಿಸಿ.

ಪುರುಷ 1: ಅಮೌಂಟ್ ಅಂದ್ರೆ ಎಷ್ಟು ಕೊಡಬೇಕು ಅಂತ ನೀವು ಹೇಳಬೇಕಲ್ಲವಾ?

ಮಹಿಳೆ: ನಿಮಗೆ ಹೇಳಬೇಕೇ ನಾವು? ನಿಮಗೆ ಗೊತ್ತಾಲ್ಲವಾ?

ಪುರುಷ 1: ನಾವು ಅಮೌಂಟ್ ತಲುಪಿಸಬೇಕಲ್ಲ, ಅದಕ್ಕೆ. ಎಷ್ಟು ಲಕ್ಷ ಅಂತ ಹೇಳಿಬಿಟ್ರೆ…

ಮಹಿಳೆ: ಮನೆಗೆಯೇ ನಲವತ್ತು, ಐವತ್ತು ಆಗುತ್ತದೆ. ಸೈಟ್‌ಗೆ ನಲವತ್ತು ಆಗುತ್ತದೆ. ಕಟ್ಟೋಕೆ ನಲವತ್ತು, ಐವತ್ತು ಬೇಕಾಗುತ್ತದೆ. ನಾವು ಹೆಂಗೆ ಮಾಡ್ತೀವಿ, ಹಂಗೆಲ್ಲ ಇರುತ್ತದೆ. ಗೊತ್ತಗದೆ ಏನಿಲ್ಲ.

ಪುರುಷ 1: ನಾಮಿನೇಷನ್ ಆಗುವುದಕ್ಕಿಂತ ಮುಂಚೆ ನಾವು ನಲವತ್ತು ಲಕ್ಷ ನೀಡಬೇಕು.

ಮಹಿಳೆ: ಏನ್ ಮಾಡಬೇಕು ಮಾಡಿ. ನೀವು ಹೇಳಿದ ದಿನ ರೆಡಿಯಾಗಿ ನಾನು ಬರ್ತಿನಿ.

ಪುರುಷ 1: ನೀವು ಬಿಜೆಪಿ ಪಕ್ಷಕ್ಕೆ ಮಾತ್ರ ಮಾಡಬೇಕು, ಪಕ್ಷೇತರರಿಗೆ, ಇನ್ಯಾರಿಗೂ ಮಾಡುವಂತಿಲ್ಲ. ನಿಮ್ಮ ಪಾಸ್‌ಬುಕ್ ಕೊಡಿ. ನಾವೀಗ ಟೋಕನ್ ಅಡ್ವನ್ಸ್‌ ಅಂತ ಕೊಟ್ಟಿರುತ್ತೇವೆ. ನಿಮ್ಮ ಅಕೌಂಟಿಗೆ ಡೈರೆಕ್ಟಾಗಿ ಹಣ ಹಾಕುತ್ತೇವೆ.

(ಹಣ ಎಣಿಸಿ ಕೊಡುತ್ತಿರುವುದು ವಿಡಿಯೊದಲ್ಲಿ ಬ್ಲರ್‌ ಆಗಿದೆ.)

ಪುರುಷ 1: 25,000 ಇದೆ. ಇದನ್ನು ಅಡ್ವಾನ್ಸ್ ಅಂತ ಕೊಟ್ಟಿರುತ್ತೇವೆ.

ಪುರುಷ 2: ನೀವು ಮತ್ತೆ ಇನ್ಯಾರಿಗೂ ಒಪ್ಪಿಕೊಳ್ಳಬಾರದು ಅಷ್ಟೆ.

ಮಹಿಳೆ: ಜಾಸ್ತಿ ಕೊಡಿ ಅಂತಾನೂ ನಾನು ಕೇಳಲ್ಲ. ಒಂದು ಮನೆಗೆ, ಒಂದು ಸೈಟಿಗೆ ಏನಾಗುತ್ತದೆ, ಅಷ್ಟು ಕೊಟ್ಟುಬಿಡಿ ಸಾಕು.

ಪುರುಷ 1: ನೀವು ಆದಷ್ಟು ಕುಸುಮಾ ಅವರ ಇಮೇಜ್ ಡ್ಯಾಮೇಜ್ ಆಗುವಂತೆ ಸ್ಟೇಟ್‌ಮೆಂಟ್ ಕೊಡಬೇಕು. ಆಮೇಲೆ ನಾವು ಕ್ಲಿಯರ್ ಮಾಡುತ್ತೇವೆ.

ಮಹಿಳೆ: ಅದನ್ನೇ ನಾನು ಮಾಡೋದು. ನೀವು ನಮಗೆ ಮಾಡಿ, ನಾನು ನಿಮಗೆ ಮಾಡ್ತೀನಿ ಅಷ್ಟೇ….

ಪುರುಷ 1: ನೀವು ಈಗ ಏನ್ ಹೇಳಿದ್ದೀರೋ ಅದನ್ನು ಮಾಡೋಕೆ ನಾವು ಒಪ್ಪಿಕೊಂಡಿದ್ದೇವೆ. ಕ್ಲಿಯರ್‌ ಮಾಡಿ ಕೊಡುತ್ತೇವೆ. ನಿಮ್ಮ ಪಾಸ್‌ಬುಕ್‌ಗೆ ಹಣ ಟ್ರಾನ್ಸ್‌ಫರ್‌ ಮಾಡ್ತೀವಿ. ನಾವು ಹೇಳೋ ಥರ ನೀವು ಅವರ ವಿರುದ್ಧವಾಗಿ ಸ್ಟೇಟ್‌ಮೆಂಟ್ ಕೊಡಬೇಕು.

ಮಹಿಳೆ 1: ನೋಡಪ್ಪ 40 ಮತ್ತು 40 ಕೊಡಿ.

ಪುರುಷ 1: ಅಂದ್ರೆ 40 ಲಕ್ಷ.

ಮಹಿಳೆ: ಸೈಟಿಗೆ 40, ಕಟ್ಟೋಕೆ 40.

ಪುರುಷ 2: 80 ಪೂರ್ತಿ ಈಗಲೇ ಹಾಕಬೇಕಾ? 40 ಈಗ ಹಾಕಿ, ಇನ್ನುಳಿದ 40 ಆಮೇಲೆ ಹಾಕಬಹುದಾ? ಎಲೆಕ್ಷನ್ ಆದಮೇಲೆ ಹಾಕ್ಬೋದಾ?

ಮಹಿಳೆ: ಎಲೆಕ್ಷನ್ ಆದಮೇಲೆ ಹಾಕ್ತೀನಿ ಅನ್ನೋದು ಆಗೋ ಕೆಲ್ಸನಾ?

ಪುರುಷ 2: ಸರಿಯಮ್ಮ ಆಯ್ತು.

ಪುರುಷ 1: ಸರಿಯಮ್ಮ ಆಯ್ತು. ಇನ್ನೆರಡು ದಿನಗಳಲ್ಲಿ ನಿಮ್ಮ ಅಕೌಂಟಿಗೆ ಹಣ ಜಮಾ ಮಾಡಿಸಿ, ಆಮೇಲೆ ಟಿವಿಯವರನ್ನು ಕರೆದುಕೊಂಡು ಬಂದು ನಿಮ್ಮಿಂದ ಮಾತನಾಡಿಸುತ್ತೇವೆ. ಬೇರೆ ಚಾನೆಲ್‌ನವರು ಇಂಟರ್‌ವ್ಯೂಗೆ ಕಳಿಸಿದಾಗ ನಾವೇ ಕಾರು ಕಳಿಸುತ್ತೇವೆ. ನಾವು ಏನು ಬರೆದುಕೊಡುತ್ತೇವೆಯೋ ಅದನ್ನು ನೀವು ಟಿವಿಯವರಿಗೆ ಹೇಳಿ.

ಮಹಿಳೆ: ಅದನ್ನು ನೀವು ಏನು ಹೇಳಿಕೊಡುವುದು ಬೇಕಿಲ್ಲ ಅಂತ ನಾನು ಹೇಳುತ್ತಿದ್ದೇನೆಲ್ಲವೇ? ಅಮ್ಮ ಹೆಂಗ್ ಮಾತನಾಡ್ತಾರೆ ಅನ್ನೋದನ್ನು ಆವಾಗಾದರೂ ನೋಡಿಕೊಳ್ಳಿ. ಸರಿಯೇ? ಎಲ್ಲವನ್ನೂ ನನ್ನ ಅಕೌಂಟಿಗೆ ಹಾಕಬೇಡಿ. (ಇನ್ನೊಬ್ಬರ) ಅಕೌಂಟ್ ನಂಬರ್‌ ಕೂಡ ಕೊಡುತ್ತೇನೆ. ಇಬ್ಬರ ಅಕೌಂಟಿಗೂ ಹಾಕ್ಬಿಡಿ.

ಪುರುಷ 2: ಸರಿಯಮ್ಮ.

ಪುರುಷ 1: ಪಾಸ್‌ಬುಕ್ ಕೊಡಿ, ಫೋಟೋ ತೆಗೆದುಕೊಳ್ತೀನಿ. ಬ್ಯಾಂಕ್‌ನಿಂದ ಆರ್‌ಟಿಜಿಎಸ್‌ ಮಾಡಿಬಿಟ್ಟು ನಿಮಗೆ ಫೋನ್ ಮಾಡ್ತೀವಿ.

ಮಹಿಳೆ: ಇದ್ದರೆ 40* 50 ಸೈಟ್‌ನೇ ಕೊಟ್ಟುಬಿಡಿ. ಮಿಕ್ಕಿದ್ದು ಅಕೌಂಟಿಗೆ ಹಾಕಿಬಿಡಿ.

ಪುರುಷ 1: ನಾವು ಅಮೌಂಟ್ ಕೊಟ್ಟಾದ ಮೇಲೆ ನಾವು ಕರೆದಲ್ಲಿಗೆ ನೀವು ಕ್ಯಾನ್ವಸ್‌ಗೆ ಬರಬೇಕಮ್ಮ.

ಮಹಿಳೆ: ಸೌಲಭ್ಯ ಮಾಡಿ, ಇವತ್ತೇ ಕರೆದುಕೊಂಡು ಹೋಗಿ, ನನಗೇನು?

ಪುರುಷ 1: ಹೊರಗಡೆ ಏನೂ ಗೊತ್ತಾಗಬಾರದಮ್ಮ. ದುಡ್ಡು ಇಸ್ಕೊಂಡು ಸೊಸೆ ವಿರುದ್ಧ ಹೀಗೆ ಮಾತನಾಡುತ್ತಿದ್ದಾರೆಂದು.

ಮಹಿಳೆ: ಏನೂ ಗೊತ್ತಾಗಲ್ಲ.

-ಹೀಗೆ ಮಾತನಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ ಅವರ ವಿರುದ್ಧ ಕುಸುಮಾ ಸ್ಪರ್ಧಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...