HomeUncategorizedಮಯನ್ಮಾರ್‌ ವಲಸಿಗರಿಗೆ ಆಹಾರ-ಆಶ್ರಯ ಕೊಡಬೇಡಿ: ಮಣಿಪುರ ಸರ್ಕಾರದ ಆಘಾತಕಾರಿ ನಿಲುವು

ಮಯನ್ಮಾರ್‌ ವಲಸಿಗರಿಗೆ ಆಹಾರ-ಆಶ್ರಯ ಕೊಡಬೇಡಿ: ಮಣಿಪುರ ಸರ್ಕಾರದ ಆಘಾತಕಾರಿ ನಿಲುವು

- Advertisement -
- Advertisement -

ಮಯನ್ಮಾರ್‌ನಿಂದ ವಲಸೆ ಬರುವ ಜನರಿಗೆ ಆಹಾರ ಒದಗಿಸಬಾರದು ಮತ್ತು ಯಾವುದೇ ಶಿಬಿರಗಳನ್ನು ತೆರೆಯಬಾರದು ಎಂದು ಮಣಿಪುರ ಸರ್ಕಾರ 5 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿರುವ ಆಘಾತಕಾರಿ ಘಟನೆ ನಡೆದಿದೆ. ಕಳೆದ ಫೆಬ್ರವರಿ ತಿಂಗಳಿನಿಂದ ಮಯನ್ಮಾರ್‌ನಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮಿಲಿಟರಿ ಹಿಂಸಾಚಾರ ಭುಗಿಲೆದ್ದಿದೆ. ಹಾಗಾಗಿ ಅಲ್ಲಿನ ಜನರು ನೆರೆಯ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ.

ಈ ವಲಸೆಯನ್ನು ತಡೆಯಬೇಕು ಎಂದು ಹೇಳಿರುವ ಮಣಿಪುರದ ವಿಶೇಷ ಗೃಹ ಕಾರ್ಯದರ್ಶಿ ಹೆಚ್. ಜ್ಞಾನ ಪ್ರಕಾಶ್, ಈ ರೀತಿಯ ನಿರ್ದೇಶನಗಳನ್ನು ಗೌಪ್ಯ ಜ್ಞಾಪನ ಪತ್ರದ ಮೂಲಕ ನೀಡಿದ್ದಾರೆ. ಚಾಂಡೆಲ್, ತೆಂಗ್ನೌಪಾಲ್, ಕಮ್ಜಾಂಗ್, ಉಖ್ರುಲ್ ಮತ್ತು ಚುರಾಚಂದಪುರದ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದು, ಈ ಎಲ್ಲಾ ಜಿಲ್ಲೆಗಳು ಮಯನ್ಮಾರ್‌ನೊಂದಿಗೆ ಗಡಿಯನ್ನು ಹಂಚಿಕೊಂಡಿವೆ.

“ಮಯನ್ಮಾರ್‌ನಲ್ಲಿ ನಡೆಯುತ್ತಿರುವ ಘಟನೆಗಳ ಪರಿಣಾಮವಾಗಿ, ಆ ದೇಶದ ಪ್ರಜೆಗಳು ಮಣಿಪುರ ಸೇರಿದಂತೆ ಇತರೆ ಗಡಿ ರಾಜ್ಯಗಳ ಮೂಲಕ ಭಾರತವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ, ಈ ಕೆಳಗಿನ ಕ್ರಮಗಳನ್ನು ಅಗತ್ಯವಾಗಿ ತೆಗೆದುಕೊಳ್ಳಲು ನನಗೆ ನಿರ್ದೇಶಿಸಲಾಗಿದೆ” ಎಂದು ಜ್ಞಾಪನ ಪತ್ರದಲ್ಲಿ ತಿಳಿಸಲಾಗಿದೆ.

ಮಣಿಪುರಕ್ಕೆ ಪ್ರವೇಶಿಸಲು/ಆಶ್ರಯಿಸಲು ಪ್ರಯತ್ನಿಸುವ ಜನರನ್ನು ದೂರವಿಡಬೇಕೆಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಆದರೆ ವಲಸಿಗರಿಗೆ ಗಂಭೀರವಾದ ಗಾಯಗಳಿದ್ದಲ್ಲಿ, ಮಾನವೀಯ ಪರಿಗಣನೆಯ ಮೇಲೆ ವೈದ್ಯಕೀಯ ಚಿಕಿತ್ಸೆ ನೀಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮಯನ್ಮಾರ್ ತುರ್ತುಪರಿಸ್ಥಿತಿ: ಮಿಲಿಟರಿ ಪಡೆಯ ಗುಂಡೇಟಿಗೆ 50 ಪ್ರತಿಭಟನಾಕಾರರು ಬಲಿ

ಮಣಿಪುರ ಹೊರತಾಗಿ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶಗಳೂ ಕೂಡ ಮಯನ್ಮಾರ್‌ನೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ನೆರೆಯ ದೇಶದ 500 ಕ್ಕೂ ಹೆಚ್ಚು ಪ್ರಜೆಗಳು ಈಗಾಗಲೇ ಮಿಜೋರಾಂಗೆ ಕಾಲಿಟ್ಟಿದ್ದಾರೆ.

ಇತ್ತೀಚೆಗೆ ಮಿಜೋರಾಂ ಸರ್ಕಾರವು, “ಮಯನ್ಮಾರ್ ನಿರಾಶ್ರಿತರ ಬಿಕ್ಕಟ್ಟನ್ನು ಮಾನವೀಯ ಆಧಾರದ ಮೇಲೆ ಪರಿಗಣಿಸಲು ಮತ್ತು ವಲಸೆ ಬರುವ ಜನರಿಗೆ ಭಾರತಕ್ಕೆ ಪ್ರವೇಶಿಸಲು ಅವಕಾಶ ನೀಡುವಂತೆ ಕೋರಿ” ಕೇಂದ್ರಕ್ಕೆ ಪತ್ರ ಬರೆದಿತ್ತು. ಆದರೆ ಮಯನ್ಮಾರ್‌ನಿಂದ ಒಳಹರಿವು ತಡೆಯಲು ಕೇಂದ್ರ ಸರ್ಕಾರ ಅಸ್ಸಾಂ ರೈಫಲ್ಸ್‌ಗೆ ನಿರ್ದೇಶನ ನೀಡಿತ್ತು.

ಭಾರತವು ಮಯನ್ಮಾರ್‌ನೊಂದಿಗೆ 1,643 ಕಿ.ಮೀ ಭೂ ಗಡಿಯನ್ನು ಹಂಚಿಕೊಂಡಿದೆ. ಮಯನ್ಮಾರ್‌ನ ಚಿನ್ ಸಮುದಾಯ ಮತ್ತು ಭಾರತದ ಮಿಜೋಸ್ ಸಮುದಾಯ ಒಂದೇ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಚಿನ್ ಜನರು ಮಯನ್ಮಾರ್‌ನ ಚಿನ್ ರಾಜ್ಯದಲ್ಲಿ ನೆಲೆಸಿದ್ದಾರೆ. ಇದು ಮಿಜೋರಾಂನೊಂದಿಗೆ 404 ಕಿ.ಮೀ ಗಡಿಯನ್ನು ಹಂಚಿಕೊಂಡಿದೆ.

ಮಯನ್ಮಾರ್‌‌ನಲ್ಲಿ ಆಡಳಿತವನ್ನು ಸೇನೆಯು ಕ್ಷಿಪ್ರಕ್ರಾಂತಿ ಮೂಲಕ ವಶಕ್ಕೆ ಪಡೆದುಕೊಂಡಿದ್ದು, ಇದನ್ನು ವಿರೋಧಿಸಿ ಸಾವಿರಾರು ಪ್ರತಿಭಟನಾಕಾರರು ಮಯನ್ಮಾರ್‌‌ನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಫೆ.1ರಿಂದಲೂ ಇಲ್ಲಿನ ಸೇನಾದಂಗೆ ವಿರುದ್ಧ ಜನರು ತೀವ್ರವಾಗಿ ಪ್ರತಿಭಟಿಸುತ್ತಿದ್ದಾರೆ. ಇದನ್ನು ಹತ್ತಿಕ್ಕಲು ಸೇನಾಡಳಿತವು ಯತ್ನಿಸುತ್ತಿದೆ. ಈ ಗಲಭೆಯಲ್ಲಿ ಈವರೆಗೆ ಸುಮಾರು 380ಕ್ಕೂ ಹೆಚ್ಚು ಪ್ರತಿಭಟನಕಾರರು ಹತರಾಗಿದ್ದಾರೆ.


ಇದನ್ನೂ ಓದಿ: ಮಯನ್ಮಾರ್‌ ಸೇನಾ ಕ್ರಾಂತಿ- ಭಾರಿ ಹಿಂಸಾಚಾರದ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುರುತು ಬಹಿರಂಗ ಆರೋಪ; ಜೆಫ್ರಿ ಎಪ್ಸ್ಟೀನ್ ಸಂತ್ರಸ್ತರಿಂದ ಗೂಗಲ್‌ ವಿರುದ್ಧ ಮೊಕದ್ದಮೆ

ಜೆಫ್ರಿ ಎಪ್ಸ್ಟೀನ್ ಸಂತ್ರಸ್ತರು ಗೂಗಲ್ ವಿರುದ್ಧ ಯುಎಸ್ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಅದರ ಸರ್ಚ್ ಇಂಜಿನ್ ಮತ್ತು ಎಐ ಪರಿಕರಗಳಲ್ಲಿ ತಮ್ಮ ಹೆಸರುಗಳು, ಇಮೇಲ್‌ಗಳು ಮತ್ತು ಫೋನ್ ಸಂಖ್ಯೆಗಳನ್ನು ಪ್ರಸಾರ ಮಾಡುತ್ತಿವೆ...

ಬೆಂಗಳೂರು : ತರಗತಿ ಕೊಠಡಿಯಲ್ಲೇ ಮುಸ್ಲಿಂ ವಿದ್ಯಾರ್ಥಿಗೆ ‘ಟೆರರಿಸ್ಟ್’ ಎಂದು ನಿಂದಿಸಿದ ಪ್ರಾಧ್ಯಾಪಕ!

ಪ್ರಾಧ್ಯಾಪಕರೊಬ್ಬರು ತರಗತಿ ಕೊಠಡಿಯಲ್ಲೇ ಮುಸ್ಲಿಂ ವಿದ್ಯಾರ್ಥಿಯನ್ನು 'ಟೆರರಿಸ್ಟ್' ಎಂದು ನಿಂದಿಸಿದ ಘಟನೆ ಬೆಂಗಳೂರಿನ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ...

ನೇಪಾಳ : ಹೊಸ ಪ್ರಧಾನಿ ಅಧಿಕಾರ ಸ್ವೀಕರಿಸಿದ ಮರುದಿನವೇ ಮಾಜಿ ಪ್ರಧಾನಿಯ ಬಂಧನ!

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ (ಬಾಲೆನ್ ಶಾ) ಪ್ರಮಾಣವಚನ ಸ್ವೀಕರಿಸಿದ ಮರುದಿನವೇ (ಮಾ.28, ಶನಿವಾರ), ಮಾಜಿ ಪ್ರಧಾನಿ ಕೆ. ಪಿ. ಶರ್ಮಾ ಓಲಿ ಅವರ ಬಂಧನವಾಗಿದೆ. ಸೆಪ್ಟೆಂಬರ್ 2025ರಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ...

‘ಕರ್ನಾಟಕ ಸರ್ಕಾರ ಸಾಮಾಜಿಕ ನ್ಯಾಯ ನಿರಾಕರಿಸುತ್ತಿದೆ’: ವಿಶೇಷ ಸಚಿವ ಸಂಪುಟ ಸಭೆ ಮುಂದೂಡಿಕೆಗೆ ಹೋರಾಟಗಾರರ ಖಂಡನೆ

ಕಳೆದ 35 ವರ್ಷಗಳಿಂದ ಒಳಮೀಸಲಾತಿಗಾಗಿ ಆಗ್ರಹಿಸಿ ನಡೆಯುತ್ತಿದ್ದ ಹೋರಾಟಕ್ಕೆ ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಯಾಗುವ ಭರವಸೆಯನ್ನು ಒಳಮೀಸಲಾತಿ ಹೋರಾಟಗಾರರು ಹೊಂದಿದ್ದರು.  ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ಸರ್ಕಾರ ಎರಡು ವರ್ಷಗಳಿಂದ ನಿರಂತರವಾಗಿ...

ನೇಪಾಳದ ನೂತನ ಪ್ರಧಾನಿಯಾಗಿ 35ವರ್ಷದ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ

ಕಠ್ಮಂಡು: 'ಬಾಲೆನ್' ಎಂದು ಪ್ರೀತಿಯಿಂದ ಕರೆಯಲ್ಪಡುವ ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು, ಹಿಮಾಲಯನ್ ರಾಷ್ಟ್ರದಲ್ಲಿ ಉನ್ನತ ಕಾರ್ಯಕಾರಿ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ನಾಯಕರಾಗಿ ಬಾಲೆನ್...

ಶಿವನ ಅವತಾರ ಎಂದು ಹೇಳಿಕೊಳ್ಳುತ್ತಿದ್ದ ಋುಷಿಕೇಶ್ ವೈದ್ಯ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ: ಎಫ್‌ಐಆರ್ ನಂತರ ದೇವಮಾನವ ಪರಾರಿ

ವಸಾಯಿ: ಶಿವನ ಅವತಾರ ಎಂದು ಹೇಳಿಕೊಂಡು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸ್ವಯಂ ಘೋಷಿತ ದೇವಮಾನವ ಋಷಿಕೇಶ್ ವೈದ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆ ವಸಾಯಿ-ವಿರಾರ್ ಪ್ರದೇಶ...

ಜ್ಯೋತಿಷಿ ಅಶೋಕ್ ಖರತ್ ಲೈಂಗಿಕ ದೌರ್ಜನ್ಯ; ಸಂತ್ರಸ್ತರ ವಿಡಿಯೋ ಪ್ರಸಾರ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್: ದೇವೇಂದ್ರ ಫಡ್ನವೀಸ್

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರಿಂದ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರ ಅಶ್ಲೀಲ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ...

ಕ್ಷಿಪಣಿಗಳ ಮೇಲೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಧನ್ಯವಾದ ಸಂದೇಶ ಬರೆದ ಇರಾನ್

ಯುನೈಟೆಡ್ ಸ್ಟೇಟ್ಸ್-ಇಸ್ರೇಲ್ ವಿರುದ್ಧದ ಯುದ್ಧದ ಮಧ್ಯೆ ಇರಾನ್‌ನೊಂದಿಗೆ ಒಗ್ಗಟ್ಟನ್ನು ತೋರಿಸಿದ ರಾಷ್ಟ್ರಗಳಿಗೆ ಇರಾನ್‌ ತನ್ನ ಕ್ಷಿಪಣಿಗಳು ಕೃತಜ್ಞತಾ ಸಂದೇಶ ಬರೆದಿದೆ. ಕ್ಷಿಪಣಿಗಳ ಮೇಲೆ ಬರೆಯಲಾದ ಸಂದೇಶಗಲ್ಲಿ "ಭಾರತದ ಜನರಿಗೆ ಧನ್ಯವಾದಗಳು" ಎಂದು ಕಂಡುಬಂದಿದೆ. ಜೊತೆಗೆ,...

ಬಿಜೆಪಿಗೆ ಉಳಿದೆಲ್ಲಾ ಪಕ್ಷಗಳಿಗಿಂತ 10 ಪಟ್ಟು ಹೆಚ್ಚು ದೇಣಿಗೆ: ವರದಿ

2024–25ರ ಆರ್ಥಿಕ ವರ್ಷದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ( ಬಿಜೆಪಿ ) ಇತರ ಎಲ್ಲಾ ರಾಷ್ಟ್ರೀಯ ಪಕ್ಷಗಳು ಒಟ್ಟು ಸೇರಿಸಿ ಪಡೆದ ದೇಣಿಗೆಗಿಂತ ಸುಮಾರು ಹತ್ತು ಪಟ್ಟು ಹೆಚ್ಚು ದೇಣಿಗೆ ಪಡೆದಿದೆ...

ವಿಶಾಖಪಟ್ಟಣ| ಕುಡಿದ ಮತ್ತಿನಲ್ಲಿ ಎಪಿಎಸ್‌ಆರ್‌ಟಿಸಿ ಬಸ್‌ ಅಪಹರಿಸಿದ ವ್ಯಕ್ತಿ

ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಎಪಿಎಸ್‌ಆರ್‌ಟಿಸಿ ಬಸ್ಸನ್ನು ಅಪಹರಿಸಿ ಸುಮಾರು ಒಂದು ಕಿಲೋಮೀಟರ್ ಅಜಾಗರೂಕತೆಯಿಂದ ಚಲಾಯಿಸಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ ಆಘಾತಕಾರಿ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ. ಪ್ರತ್ಯಕ್ಷ್ಯದರ್ಶಿಗಳ ಪ್ರಕಾರ, ಮಾರ್ಚ್ 26 ರ ಗುರುವಾರ ಬಸ್...