Homeಮುಖಪುಟಬಳಕೆದಾರ ಬೆಳೆಗಾರನನ್ನು ಮರೆಯುವುದುಂಟೆ?

ಬಳಕೆದಾರ ಬೆಳೆಗಾರನನ್ನು ಮರೆಯುವುದುಂಟೆ?

- Advertisement -
- Advertisement -

ಹಿಂದೆಂದೂ ಕೇಳದ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ರೈತ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸಿ ಮೂದಲಿಸುವ ಸಂಪ್ರದಾಯ ನಾವು ಕಾಣುತ್ತಿದ್ದೇವೆ. ಇವರು ಹೊಲಕ್ಕೆ ಬೆಂಕಿಹಚ್ಚಿ ನಮ್ಮ ನಗರಗಳನ್ನು ಮಾಲಿನ್ಯಗೊಳಿಸುವ ಅಪರಾಧಿಗಳು, ಬೇಡದ ಭತ್ತ, ಗೋಧಿ ಬೆಳೆದು ಮಣ್ಣಿನ ಫಲವತ್ತತೆ ಮತ್ತು ನೀರನ್ನು ಹಾಳುಗೆಡವುವವರು, ಸೋಮಾರಿ ಸಮುದಾಯದವರು, ಸ್ವಂತ ಬುದ್ಧಿ ಇಲ್ಲದೆ ಇತರರು ಹೇಳಿದ ಹಾಗೆ ನಡೆದುಕೊಳ್ಳುತ್ತಿರುವವರು, ಹೀಗೆಲ್ಲಾ ಕಳೆದ ಒಂದು ವರ್ಷದಿಂದ ನಾವು ಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ನೇರವಾಗಿ ನಿಂದಿಸುವವರನ್ನು ಗಮನಿಸುತ್ತಿದ್ದೇವೆ. ನೇರವಾಗಿ ಏಕೆಂದರೆ, ನಾಗರಿಕರೆನ್ನುವ ಪ್ರಜ್ಞಾವಂತರೆನ್ನುವ ಈ ಸಮುದಾಯಕ್ಕೆ ನೇಗಿಲಯೋಗಿಯ ಬಗ್ಗೆ ಕಿಂಚಿತ್ತಾದರೂ, ಒಳಗಿಂದೊಳಗಾದರೂ ಗೌರವ ಇರಲಿಲ್ಲವೇ ಎಂಬ ಪ್ರಶ್ನೆ ಇತ್ತೀಚೆಗೆ ಏಳುತ್ತಿದೆ. ಅಷ್ಟೇ ಏಕೆ? ಒಟ್ಟಾರೆ ದುಡಿಯುವ ವರ್ಗದ ಬಗ್ಗೆ ’ಅದು ಅವನ ಕರ್ಮ’ ಎಂದೇ ಪರಿಗಣಿಸುವಂತೆ ಈ ವರ್ಗ ಬೆಳೆದಿದೆ.

ಶ್ರೇಣೀಕೃತವರ್ಗದಲ್ಲಿ ಬೆವರಿನ ಹನಿ ಹೆಚ್ಚಾದಂತೆಲ್ಲಾ ಬೈಗುಳ ಮತ್ತು ನಿಂದನೆಗೆ ಒಳಪಟ್ಟಿರುವುದನ್ನು ಗಮನಿಸಬಹುದು. ಇದನ್ನು `ascendancy of respect and descendancy of disrespect in the ladder’ ಎಂದು ಅಂಬೇಡ್ಕರ್ ಗಮನಿಸಿದ್ದರು. ಮಹಾತ್ಮ ಗಾಂಧಿ ರೈತನನ್ನು ಒಬ್ಬ ಖಗೋಳಶಾಸ್ತ್ರಜ್ಞ, ಜೀವಶಾಸ್ತ್ರಜ್ಞ, ಹವಾಮಾನತಜ್ಞ, ಆಹಾರತಜ್ಞ, ಪರಿಸರತಜ್ಞ, ಭೂವಿಜ್ಞಾನಿ ಎಂದೆಲ್ಲಾ ಬಣ್ಣಿಸಿದ್ದರು. ಡಾ.ರಿಚಾರಿಯಾ ಹೇಳುವಂತೆ ನಮ್ಮೊಳಗಿನ ಅತ್ಯಂತ ಪ್ರಜ್ಞಾವಂತ ತಳಿವಿಜ್ಞಾನದ ತಜ್ಞ ಎಂದರೆ ರೈತ ಎಂಬ ಮಾತು ಗಮನಾರ್ಹವಾದದ್ದು. ಆಯುರ್ವೇದ ವೈದ್ಯ ಹಾಗೂ ಗ್ರಂಥಕರ್ತ ಚರಕ ತನ್ನ ’ಚರಕ ಸಂಹಿತ’ದಲ್ಲಿ ಕೆಲವು ಔಷಧೀಯ ಸಸ್ಯಗಳ ಬಗ್ಗೆ ವಿವರಿಸತ್ತಾ, “ಇನ್ನೂ ಹೆಚ್ಚು ತಿಳಿಯಬೇಕಿದ್ದರೆ ಕುರಿ ಮೇಯಿಸುವವರನ್ನು ಕೇಳಿ” ಎನ್ನುತ್ತಾನೆ.

ಸಾಮಾನ್ಯವಾಗಿ ಗ್ರಾಮಾಂತರದ ಉತ್ಪಾದಕ ಮತ್ತು ನಗರದ ಗ್ರಾಹಕ ಎನ್ನುವುದಾಗಿ ಹೇಳುವುದುಂಟು. ಆದರೆ ನೀವು ನಿಜವಾಗಿಯೂ ಆರೋಗ್ಯವಂತರಾಗಿ ಬದುಕಬೇಕಿದ್ದರೆ ನಿಮಗೆ ಒಬ್ಬ ರೈತ ಸ್ನೇಹಿತನಾಗಿರಬೇಕು ಎಂದು ಪರಿಗಣಿಸುತ್ತಾರೆ. ಇದು ಕೇವಲ ಹೊಲ-ಗದ್ದೆಗಳ ನೈಜ ಪರಿಸ್ಥಿತಿಯ ಅರಿವಷ್ಟೇ ಅಲ್ಲ, ತನ್ನ ಅನ್ನದ ಹಿಂದಿನ ದುಡಿದ ಕೈಗಳ ಪರಿಚಯ ಮತ್ತು ಆತ್ಮೀಯತೆ, ನಮ್ಮನ್ನು ಭೌತಿಕವಾಗಿ ಸದೃಢಗೊಳಿಸುವುದಲ್ಲದೆ, ಮಾನಸಿಕವಾಗಿಯೂ ಮತ್ತು ಆಧ್ಯಾತ್ಮಿಕವಾಗಿಯೂ ಕೂಡಾ ಗಟ್ಟಿಗೊಳಿಸಬಲ್ಲುದು. ಬುದ್ಧನ ಕರುಣೆ ಮತ್ತು ಮೈತ್ರಿಗೆ ಈ ಪ್ರಕ್ರಿಯೆಯಿಂದ ಅವಕಾಶವುಂಟು. ಅಮೆರಿಕದಲ್ಲಿ ಇತ್ತೀಚೆಗೆ ಪ್ರತಿಯೊಂದು ನಗರಗಳಲ್ಲಿಯೂ ರೈತರ ಮಾರುಕಟ್ಟೆಗಳಿವೆ. ವಾಷಿಂಗ್‌ಟನ್‌ನಲ್ಲಿ ಹೌಸ್ ಆಫ್ ಕಾಂಗ್ರೆಸ್ ಮತ್ತು ವೈಟ್ ಹೌಸ್ ಅಕ್ಕಪಕ್ಕದಲ್ಲಿಯೇ ರೈತರ ಮಾರುಕಟ್ಟೆಗಳನ್ನು ಗಮನಿಸಬಹುದು. ಇಡೀ ದೇಶದಲ್ಲಿ ಬಂಡವಾಳಶಾಹಿ ವಾಲ್‌ಮಾರ್ಟ್‌ನಂತಹ ದೈತ್ಯ ಸಗಟು ವ್ಯಾಪಾರಿಗಳಿದ್ದರೂ ಸಮುದಾಯ ರೈತರನ್ನು ಬೆಂಬಲಿಸಿ ನೇರವಾಗಿ ರೈತರೊಂದಿಗೆ ಮಾತುಕತೆಯಾಡಿ ತಮಗೆ ಬೇಕಾದ ಹಣ್ಣುಹಂಪಲನ್ನು ಅವರಿಂದ ಕೊಂಡುಕೊಳ್ಳುವುದನ್ನು ಗಮನಿಸಬೇಕಾಗಿರುವಂತದ್ದು. ನಮ್ಮಲ್ಲಿ ರೈತನಿಂದ ಅತ್ಯಂತ ಕಮ್ಮಿ ಬೆಲೆಯಲ್ಲಿ ಹೇಗಾದರೂ ಕೊಂಡು, ಹೆಚ್ಚು ಲಾಭಗಳಿಸುವ ಆಹಾರ ಉದ್ಯಮಗಳೇ ಹೆಚ್ಚು. ಕಡಿಮೆ ಬೆಲೆಯಲ್ಲಿ ಕೊಳ್ಳುವುದೇ ಲಾಭಕ್ಕೆ ಮೂಲ ಆಧಾರ. ಇದೇ ಹೊಸ ಕಾನೂನುಗಳನ್ನು ಸೃಷ್ಟಿಸಿರುವುದಕ್ಕೆ ಇರುವ ಮೂಲ ಉದ್ದೇಶ. ಇದನ್ನು ಇನ್ನೊಂದು ರೀತಿಯಲ್ಲಿ produce heap, sell cheap ಎನ್ನಲಾಗಿದೆ.

ಬ್ರಾಂಡೆಡ್ ಆಹಾರ ಜಗತ್ತಿನಲ್ಲಿ ಬ್ರಾಂಡ್ ವಾಷಿಂಗ್ ಮುಖ್ಯವಾಗುತ್ತದೆ ಹೊರತು, ಜನರ ಸಾಮಾನ್ಯ ಒಳಿತಿನ ಹಿಂದೆ ಮುಂದೆ ಗಮನಿಸುವುದಿಲ್ಲ. ಒಂದು ತೆಂಗಿನ ಎಣ್ಣೆಯ ಬ್ರಾಂಡ್‌ನ ಮೌಲ್ಯ ಭಾರತದಲ್ಲಿ ಇಡೀ ತೆಂಗಿನ ಉದ್ಯಮಕ್ಕಿಂತ ಹೆಚ್ಚಾಗಿರುವುದನ್ನು ಗಮನಿಸಿದರೆ ಇದರ ಅರಿವು ಉಂಟಾಗಬಹುದು. ಅಥವಾ ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮೌಲ್ಯಭರಿತ ಬ್ರಾಂಡ್ ಆರೋಗ್ಯಕ್ಕೆ ಮಾರಕವಾದ ಒಂದು ಲಘುಪೇಯ ಎನ್ನುವುದು ನಮ್ಮಕಾಲದ ವಾಸ್ತವ. ಅದಕ್ಕೆ ಬರುವ ಸಕ್ಕರೆ ರೈತನ ಕಬ್ಬಿನದಲ್ಲ, ಅದು ಮೆಕ್ಕೆ ಜೋಳ ಹಾಗೂ ಕೃತಕವಾಗಿ ರಾಸಾಯನಿಕಗಳ ಬಳಕೆಯಿಂದ ತಯಾರಾದ ಸಕ್ಕರೆ.

ನಾವು ಬಳಸುವ ಹಾಲು, ನಾವು ಬಳಸುವ ಬ್ರಾಂಡ್ ಮೂಲಕವೇ ತಿಳಿದಿರುತ್ತದೆಯೇ ಹೊರತು ಅದು ಯಾವ ಜಾತಿಯ ಹಸುವಿನಿಂದ ಬಂತು, ಎಮ್ಮೆಯದೋ ಹಸುವಿನದೋ, ವಿದೇಶೀ ತಳಿಯೋ ಅಥವಾ ಸ್ಥಳೀಯ ತಳಿಯೋ, ಒಂದೂ ತಿಳಿಯದು. ನಮ್ಮದೇ ತಳಿಗಳಾದ ಮಲೆನಾಡು ಗಿಡ್ಡ, ಹಳಿಕರ್, ಅಮೃತ್ ಮಹಲ್ ಹೆಸರನ್ನು ನಾವು ಎಲ್ಲಿಯೂ ಗಮನಿಸುವುದಿಲ್ಲ. ಹಾಗಾಗಿ ಗುಣಕ್ಕಿಂತ ಗಾತ್ರವೇ ಹೆಚ್ಚು ಮುಖ್ಯವಾಗಿದೆ. ರೈತ ಸಮುದಾಯಕ್ಕಿಂತ ಬ್ರಾಂಡ್ ಮುಖ್ಯವಾಗಿವೆ. ಅದಕ್ಕಾಗಿಯೇ ಕೆಲವರು ಹೇಳುವುದು ‘we are going from self-reliance to total Reliance.’

ಈ ಹಿನ್ನೆಲೆಯಲ್ಲಿ ರೈತ ಹೋರಾಟ ಮತ್ತು ಈಗ ಜಾರಿಯಾಗಿರುವ ಕರಾಳ ಕೃಷಿ ಕಾಯ್ದೆಗಳು ವಜಾ ಆಗಬೇಕಿರುವ ಪ್ರಾಮುಖ್ಯತೆಯನ್ನು ನಾವು ಅರಿಯಬಹುದಾಗಿದೆ. ಮುಂದಿನ ದಿನಗಳಲ್ಲಿ ಬಳಕೆದಾರ ರೈತನ ಜೊತೆಗೆ ನೇರ ಸಂಬಂಧ ಹೊಂದಿ ಎಲ್ಲರ ಸಾಮಾನ್ಯ ಒಳಿತಿನ ಕಡೆಗೆ ಹೆಜ್ಜೆ ಹಾಕುವುದಕ್ಕೆ ಸಾಧ್ಯವಿದೆ.

ಕೆ.ಸಿ. ರಘು

ಕೆ. ಸಿ. ರಘು
ಆಹಾರ ತಜ್ಞರು


ಇದನ್ನೂ ಓದಿ: ಮೊದಲು ನಿರ್ಲಕ್ಷಿಸುತ್ತಾರೆ, ನಂತರ ನಗುತ್ತಾರೆ, ಕುಸ್ತಿಗೆ ಬರುತ್ತಾರೆ, ನೀನು ಗೆಲ್ಲುತ್ತೀಯ: ರೈತ ಹೋರಾಟದ ಪಾಠ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ; ಬಂಗಾಳದಲ್ಲಿ ಮಾತ್ರ ಎರಡು ಹಂತದ ಮತದಾನ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ...

ಫ್ಲಿಪ್‌ಕಾರ್ಟ್‌ನಿಂದ 1 ರೂ.ಗೆ ಹಾಲು ಮಾರಾಟ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಮುಲ್‌ ಆಗ್ರಹ

ಫ್ಲಿಪ್‌ಕಾರ್ಟ್‌ ಸಂಸ್ಥೆಯು ಆನ್‌ಲೈನ್‌ ಮೂಲಕ 1 ರೂ.ಗೆ ಲೀಟರ್‌ ಹಾಲನ್ನು ಮಾರಾಟ ಮಾಡಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ, ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ...

“ಮಕ್ಕಳ ಹಂತಕನನ್ನು ಹುಡುಕಿ ಹತ್ಯೆ ಮಾಡುತ್ತೇವೆ” : ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂಬ ಇಸ್ರೇಲ್ ಸ್ಪಷ್ಟನೆ ಬೆನ್ನಲ್ಲೆ ಐಆರ್‌ಜಿಸಿ ಹೇಳಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿರುವುದಾಗಿ ವರದಿಯಾಗಿದೆ. ನೆತನ್ಯಾಹು ಅವರ ಹತ್ಯೆಯ ವದಂತಿಗಳನ್ನು ಇಸ್ರೇಲ್ ನಿರಾಕರಿಸಿದ ಬೆನ್ನಲ್ಲೇ, ಐಆರ್‌ಜಿಸಿ ಈ...

ಮಹಾರಾಷ್ಟ್ರ| ಇಫ್ತಾರ್ ಕೂಟಕ್ಕೆ ಸೇರಿದ್ದ ಮುಸ್ಲಿಮರ ಮೇಲೆ ಹಿಂದುತ್ವವಾದಿ ಗುಂಪಿನಿಂದ ದಾಳಿ

ರಂಜಾನ್‌ ಮಾಸದ ಉಪವಾಸ ಮುರಿಯಲು ನೆರೆದಿದ್ದ ಜನರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಫ್ತಾರ್ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಸುಮಾರು 100 ಕ್ಕೂ ಹೆಚ್ಚು...

ಆಸ್ಕರ್‌ ಅಂತಿಮ ಪಟ್ಟಿಗೆ ಆಯ್ಕೆಯಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ ಮತ್ತು ಆಕೆಯ ಸಂಬಂಧಿಕರನ್ನು ಇಸ್ರೇಲಿ ಸೈನಿಕರು ಭೀಕರವಾಗಿ ಹತ್ಯೆ ಮಾಡಿದ ಕಥೆಯನ್ನು ಹೇಳುವ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರವು 2026ರ ಆಸ್ಕರ್...

ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮನೆಯಲ್ಲಿ ಸವರ್ಣಿಯರಿಂದ ಹಲ್ಲೆ; ಬಂದೂಕಿನಿಂದ ಬೆದರಿಕೆ

ಮಾರ್ಚ್ 10 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರದ ತೀವ್ರ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 24 ಗಂಟೆಗಳ ಒಳಗೆ ಎಫ್‌ಐಆರ್...

’70 ಲಕ್ಷ ಬಂಗಾಳಿ ಮುಸ್ಲಿಮರನ್ನು ಹೊರದಬ್ಬಲು ಸಾಧ್ಯವಿಲ್ಲ..ಅವರೇ ದೇಶ ಬಿಡುವಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆ’: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸುಮಾರು 70 ಲಕ್ಷ 'ಬಂಗಾಳಿ ಮುಸ್ಲಿಮರ'ನ್ನು ಭಾರತದಿಂದ ಹೊರಹಾಕುವುದು 'ಮಾನವೀಯವಾಗಿ ಸಾಧ್ಯವಿಲ್ಲ'. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು. ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ...

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...