Homeಕರ್ನಾಟಕಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ PTCL ಕಾಯ್ದೆ ಬಗ್ಗೆ ನಿಮಗೆ ಗೊತ್ತೆ?

ಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ PTCL ಕಾಯ್ದೆ ಬಗ್ಗೆ ನಿಮಗೆ ಗೊತ್ತೆ?

ಮಂಚೇಗೌಡ ಎಂಬುವವರು 1982/83ರಲ್ಲಿ ಈ ಕಾಯ್ದೆ ಸಂವಿಧಾನ ಬದ್ಧವಾಗಿಲ್ಲ ಎಂದು ವಾದಿಸಿ ತನ್ನ ಕ್ರಯ ಊರ್ಜಿತಗೊಳಿಸಿ ಎಂದು ಮನವಿ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ಅರ್ಜಿ ವಜಾಗೊಳಿಸಿದೆ.

- Advertisement -
- Advertisement -

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ತಮ್ಮ ನೆಲದ ಹಕ್ಕಿಗಾಗಿ 183ದಿನಗಳಿಂದ PTCL ಕಾಯ್ದೆ ಸಮರ್ಪಕವಾಗಿ ಜಾರಿಗೆ ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿದೆ. ಇದುವರೆಗೂ ಈ ವಿಷಯ ಕುರಿತು ಸರ್ಕಾರ ದ ಜೊತೆ ಅಂದಿನಿಂದ ಇಂದಿನ ವರೆಗೂ ಯಾವ ಮಂತ್ರಿ ಶಾಸಕರು ಭೇಟಿ ನೀಡಿಲ್ಲ ಎಂಬುದು ದುರಂತ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೋಷಿತ ಜನರ ಜೀವನ ನಿರ್ವಹಣೆಗೆ ಇದ್ದ ಜಮೀನುಗಳನ್ನ ಕೆಲವು ಮುಂದುವರೆದ ಜಾತಿ ಜನ ಆಸೆ ಆಮಿಷಗಳನ್ನು ತೋರಿಸಿ, ಬಗ್ಗದಿದ್ದರೆ ದೌರ್ಜನ್ಯವೆಸಗಿ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಇದರಿಂದ ಶೋಷಿತರು ಇದ್ದ ಭೂಮಿ ಕಳೆದುಕೊಂಡು ಭೂ ಹೀನರಾಗಿದ್ದಾರೆ. ಇದನ್ನು ಮನಗಂಡ ಅಂದಿನ ಮಂತ್ರಿ ಶ್ರೀ ಬಸವಲಿಂಗಪ್ಪ ಮತ್ತು ರಾಜ್ಯ ಸರ್ಕಾರ 1978 ತಾ 18/12/1978ರಲ್ಲಿ ಸಂವಿಧಾನ ದ ಆರ್ಟಿಕಲ್ 31ಸಿ ಮತ್ತು 46ರ ರೀತ್ಯ (ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಭೂ ಪರೆಬಾರೆ) ಕಾಯ್ದೆ ಜಾರಿಗೆ ತಂತು. ಈ ಕಾಯ್ದೆಯು 1979ರ ಜನವರಿಯಿಂದ ಜಾರಿಗೆ ತಯಾರಾಗಿದೆ.

ರಾಜ್ಯದ ಪರಿಶಿಷ್ಟ ಜಾತಿ ವರ್ಗಗಳ ಜನರು ಸರ್ಕಾರಿ ಸಾಗುವಳಿದಾರರ ಭೂಮಿ ಹಾಗೂ ಇನಾಂ ಮಂಜೂರು ಭೂಮಿಗಳನ್ನು ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡಿದ್ದರೂ ಅಂತಹ ಭೂಮಿ ಮಂಜೂರುದಾರರು ಅಥವ ಅವರ ವಾರಸುದಾರರು ಸಂಬಂಧಿಸಿದ ಎ ಸಿ (ಉಪ ವಿಭಾಗ ಅಧಿಕಾರಿಗಳಿಗೆ) ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಈ ಕಾಯ್ದೆ ಪ್ರಕಾರ ತಮ್ಮ ಭೂಮಿಯನ್ನು ವಾಪಸ್ ಪಡೆದು ಕೊಳ್ಳುವ ಹಕ್ಕು ಕೊಡಲಾಗಿದೆ.

ಈ ಕಾಯ್ದೆ ಇದ್ದಾಗ್ಯೂ ರಾಜ್ಯದಲ್ಲಿ ಸಾವಿರಾರು ಎಕರೆ ಭೂಮಿಯನ್ನ ಪರಬಾರೆ ಮಾಡಲಾಗಿದೆ. ಒಂದು ಅಂದಾಜಿನಿನಂತೆ ಹತ್ತು ಸಾವಿರ ಎಕರೆ ಭೂಮಿ ಮಾರಾಟಗೊಂಡಿದೆ. ಇದುವರೆಗೂ ಸಂಬಂಧ ಸಲ್ಲಿಸಿದ್ದ 1150 ಪ್ರಕರಣಗಳು ಇತ್ಯರ್ಥಗೊಂಡು ಮಾರಿದ್ದ ಭೂಮಿ ವಾಪಸ್ ಪಡೆಯಲಾಗಿದೆ.

ನಗರಪ್ರದೇಶಗಳ ಅಂದರೆ ಬೆಂಗಳೂರು ಸುತ್ತಮುತ್ತ ಹಾಗೂ ಜಿಲ್ಲಾ ಕೇಂದ್ರಗಳ ಸುತ್ತ ಬೆಲೆ ಬಾಳುವ ದಲಿತರ ಜಮೀನು ಗಳನ್ನ ಪುಸಲಾಯಿಸಿ ಒಂದಷ್ಟು ಹೆಚ್ಚು ಹಣ ನೀಡಿ ಖರೀದಿಸಿರುವ ಭೂ ಮಾಫಿಯ ರಾಜಕಾರಣಿಗಳು, ಬಂಡವಾಳಿಗರು ಈ ಕಾಯ್ದೆ ಪ್ರಕಾರ ವಾಪಸ್ ಜಮೀನು ಪಡೆದುಕೊಳ್ಳುವ ಆಲೋಚನೆ ಮಾಡದಂತೆ ದಲಿತರಿಗೆ ಕೆಲವು ಪುಡಾರಿಗಳ ಬೆದರಿಕೆ ಮತ್ತು ಕೆಲವು ಸ್ವಯಂ ಘೋಷಿತವಾದ ದಲಿತ ಸಂಘಟನೆಗಳ ಮುಖಂಡರ ಮೂಲಕ ತಪ್ಪು ಸಂದೇಶ ನೀಡುತ್ತಿದ್ದಾರೆ. ತರಾತುರಿಯಲ್ಲಿ ಕಂದಾಯ ಇಲಾಖೆ ಎ ಸಿ, ಡಿ ಸಿ ಗಳ ಜೊತೆ ಶಾಮೀಲಾಗಿ ಈ PTCL ಕಾಯ್ದೆಯನ್ನ ಹಣದ ಹಗ್ಗದಿಂದ ಬಂಧಿಸಿದ್ದಾರೆ.

ಮಂಚೇಗೌಡ ಎಂಬುವವರು 1982/83ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಈ ಕಾಯ್ದೆ ಸಂವಿಧಾನ ಬದ್ಧವಾಗಿಲ್ಲ ಎಂದು ವಾದಿಸಿ ತನ್ನ ಕ್ರಯ ಊರ್ಜಿತಗೊಳಿಸಿ ಎಂದು ಮನವಿ ಮಾಡಿದ್ದರು. ಅವರು 1963ರ ಲಿಮಿಟೇಷನ್ ಕಾಯ್ದೆಗೆ ಒಳಗಾಗಿದೆ ಎಂದು ವಾದಿಸಿದ್ದರು. ಆದರೆ ಸುಪ್ರೀಂಕೋರ್ಟ್ ಇದನ್ನ ತಿರಸ್ಕಾರ ಮಾಡಿ PTCL ಕಾಯ್ದೆ 1963 ಕಾಯ್ದೆಗೆ ಒಳಪಡುವುದಿಲ್ಲ ಎಂದಿದೆ.

ಈ ಕಾಯ್ದೆ ಮೊದಲು 1984 ನಂತರ 2ನೇ ಬಾರಿ 1992 ಮುಂದುವರೆದು 2012ರ ಸುತ್ತೋಲೆಗಳ ಮೂಲಕ ಆದೇಶ ಹೊರಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಡಿ ಸಿ, ಎ ಸಿ ಗಳು ಮೂಲ ಮಂಜೂರುದಾರರಿಗೆ ಭೂಮಿಯನ್ನ ಪುನರ್ ಸ್ಥಾಪಿಸಲು ನಿಯಮ ರೂಪಿಸಿದೆ. ಹೀಗಿರುವಾಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡಿ ಸಿ, ಎ ಸಿ ಅಧಿಕಾರಿಗಳು ಇದನ್ನ ಮನೆಗಾಣದೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡ ಹಟ್ಟಿ ಗ್ರಾಮದ ಸರ್ವೆ ನಂ 24ಮತ್ತು 24/ಎ ವಿಷಯ ಅಂದರೆ ಖರೀದಿದಾರ ನೆಕ್ಕುಂಟಿ ರಾಜಲಕ್ಷ್ಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 28/10/2017ರಂದು ಚೆಂದಿಲಾಲ್ ಕೇಸ್ ಬಿಹಾರದ ಜನರಲ್ ಕೇಸ್ ಅನ್ನು ಉದಾಹರಣೆ ನೀಡಿ ಇದು 25ವರ್ಷದ ಹಿಂದೆ ಪರೆಬಾರೆ ಆಗಿದೆ. ಹಾಗಾಗಿ 1963ರ ಲಿಮಿಟೇಷನ್ ಕಾಯ್ದೆಗೆ ಒಳಗಾಗಿ ಮಾರಾಟ ಸರಿಯಾಗಿದೆ ಎಂದು ತೀರ್ಪು ನೀಡಿದೆ. ಆದರೆ ಮಂಚೇಗೌಡರ ವಿಷಯದಲ್ಲಿ 1984ರಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ ಮತ್ತು ನೆಕ್ಕುಂಟಿ ಪ್ರಕರಣದ ಸರ್ವೆನಂಬರ್ ಬೇರೆ ಬೇರೆ ಇದೆ ಎಂದು ಎ ಸಿ, ಡಿ ಸಿ ಆದೇಶ ಹೊರಡಿಸಿದ ಬಗ್ಗೆ ಸುಪ್ರೀಂಕೋರ್ಟ್ಗೆ ಸರ್ಕಾರದ ಪರ ವಕೀಲರು ಸರಿಯಾಗಿ ದಾಖಲಿಸದೆ ಈ ತೀರ್ಪು ನೀಡಿದೆ. ಇದನ್ನ ಹಿಡಿದುಕೊಂಡು ಎಲ್ಲಾ ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರು ಮೈಸೂರು ಇನ್ನೂ ಬೇರೆ ಬೇರೆ ಕಡೆ PTCL ಕಾಯ್ದೆ ವಿರುದ್ಧ ಡಿ.ಸಿ ಕೋರ್ಟುಗಳು ತೀರ್ಪು ನೀಡಲಾಗುತ್ತಿದೆ.

ಇದು ಕಾಯ್ದೆ 1978ರ ಕಲಂ5(1)ಎ ರಂತೆ 1964ರ ಕಲಂ(39)ವಿವರಣೆಯನ್ನ ಎ ಸಿ, ಡಿ ಸಿ ಅಧಿಕಾರಿಗಳು ಪರಿಗಣಿಸುತ್ತಿಲ್ಲ. ನೆಕ್ಕುಂಟಿ ಪ್ರಕರಣವನ್ನು ಮುಂದಿಡುವ ಎ ಸಿ ಮತ್ತು ಡಿ ಸಿ ಅಧಿಕಾರಿಗಳು 2019ರ ಸುಪ್ರೀಂಕೋರ್ಟ್ ದಲಿತ ರೈತರ ಪರವಾದ ತೀರ್ಪು ನೀಡಿದ್ದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗೆಯೇ ಜಾರ್ಖಂಡ್ SC/ST ಜಮೀನು ಕಾಯ್ದೆ ಪ್ರಕಾರ 3/3/2020 ರ(SAR CIV 42644)ತೀರ್ಪು ನೀಡಿದೆ. ಇದನ್ನ ಯಾಕೆ ಅಧಿಕಾರಿಗಳು ಪರಿಗಣಿಸುತ್ತಿಲ್ಲ? ಇದು ಇಂಡಿಯನ್ ಲಿಮಿಟೇಷನ್ ಕಾಯ್ದೆಗೆ ಒಳಪಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಇದನ್ನ ತಿಳಿಯದ ಎ ಸಿ, ಡಿ ಸಿ ಅಧಿಕಾರಿಗಳು ಭೂ ಮಾಲೀಕರು, ಮಾಫಿಯ ರಾಜಕಾರಣಿಗಳ ಮತ್ತು ತಮ್ಮ ಹೊತ್ತಿನ ಕೂಳಿಗೆ ತಮ್ಮವರನ್ನೆ ಬಡಿದು ತಿನ್ನಲು ನಿಂತಿರುವ ಲೆಟರ್ ಪ್ಯಾಡ್ ಸ್ವಯಂ ಘೋಷಿತ ಏಜೆಂಟ್ ಗಳಿಂದ ಇಂದು ಈ PTCL ಕಾಯ್ದೆ ಜಾರಿಯಾಗದೆ ನಿಂತಿದೆ.

ನೆಕ್ಕಂಟಿ ಕೇಸ್ ನಿಂದ ಇಲ್ಲಿಯತನಕ ಸುಮಾರು 25 ಸಾವಿರ ಕೇಸ್‌ಗಳನ್ನು ಡಿಸಿಗಳು ವಜಾಗೊಳಿಸಿದ್ದಾರೆ. ಇನ್ನೂ ಬಾಕಿ 20 ಸಾವಿರ ಕೇಸ್‌ಗಳು ವಿಚಾರಣೆಯಲ್ಲಿವೆ. ಹಾಗಾಗಿ ದಲಿತರು 2 ಲಕ್ಷ ಎಕರೆಗಿಂತ ಹೆಚ್ಚಿನ ಭೂಮಿ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರ ಜೀವನ ನಾಶವಾಗಿದೆ.  ವಿಶೇಷ ಕಾಯ್ದೆಯಾಗಿರುವುದರಿಂದ ಕಾಲಮಿತಿ ಅನ್ವಯಿಸುವುದಿಲ್ಲ. ಆದರೂ ಬಲಾಢ್ಯರ ಕುತಂತ್ರದಿಂದ ಇದಕ್ಕೆಲ್ಲ ನೇರ ಕಾರಣ ಕಂದಾಯ ಇಲಾಖೆಯ ನೋಂದಣಿಧಿಕಾರಿಗಳು, VA, RI, ತಹಸೀಲ್ದಾರ್ ಸೇರಿಕೊಂಡು ದಲಿತರಿಗೆ ಕೊಳ್ಳಿ ಇಡುತ್ತಿದ್ದಾರೆ.

PTCL ಕಾಯ್ದೆಗೆ 10.12.11ಕಾಲಂ ರಂತೆ ಯಾವ ಕಾಲ ಮಿತಿ ಇದಕ್ಕೆ ಅನ್ವಯವಾಗುವುದಿಲ್ಲ.
ಎ ಸಿ ಗೆ ಅರ್ಜಿ ಹಾಕಿ ನಂತರ ಮೇಲ್ಮನವಿಗೆ 90 ದಿನಗಳ ಒಳಗೆ ಅರ್ಜಿ ಸಲ್ಲಿಸಲು ಮಿತಿ ಇದೆ. ಹಾಗೆ ಕಾಲ ಮಿತಿಗೆ ಕಾರಣ ತಿಳಿಸಿ ಮುಂದುವರೆಯಲು ಅವಕಾಶವಿದೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಶೋಷಿತರ ದಲಿತರ ಪರ ಕಾಳಜಿಯುಳ್ಳ ಸಂಘಟಕರು ಈ ಹೋರಾಟದ ಪರ ನಿಲ್ಲಬೇಕು. ಒಂದಷ್ಟು ಈ ವಿಷಯ ಕುರಿತು ಅಧ್ಯಯನ ಮಾಡಿ ಜಿಲ್ಲಾಧಿಕಾರಿಗಳಿಗೆ, ಉಪ ವಿಭಾಗಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಸರ್ಕಾರಕ್ಕೆ ಈ ಕಾಯ್ದೆ ಜಾರಿಗೆ ತರಲು ಸುಗ್ರೀವಾಜ್ಞೆ ಹೊರಡಿಸಲು ಒತ್ತಡ ತಂದು ರಾಜ್ಯದ ಪರಿಶಿಷ್ಟ ಜಾತಿ ವರ್ಗಗಳ ಜನರಿಗೆ ಭೂಮಿ ವಾಪಸ್ ಕೊಡಿಸಲು ಎಲ್ಲಾ ಹೋರಾಟಗಾರರು ಮುಂದಾಗಬೇಕು. ಚುನಾವಣೆಯಲ್ಲಿ ಬೀದಿಗಿಳಿದು ಹೋರಾಟ ಮಾಡಿದಂತೆ ಈಗಾಗಲೇ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 183 ದಿನಗಳಿಂದ ನಡೆಯುತ್ತಿರುವ ಭೂ ಹೀನ ಬಡವರ ಹೆಗಲಿಗೆ ಹೆಗಲೊಡ್ಡೋಣ.

ಕಂದೇಗಾಲ ಶ್ರೀನಿವಾಸ
ರಾಜ್ಯ ಉಪಾಧ್ಯಕ್ಷರು ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಬೆಂಗಳೂರು

ಇದನ್ನೂ ಓದಿ; ಉದ್ದೇಶಪೂರ್ವಕ ಜಾತಿನಿಂದನೆ ಮಾತ್ರ ಅಪರಾಧವಾ?; ಅಟ್ರಾಸಿಟಿ ಕಾನೂನು ನಿಷ್ಕ್ರಿಯೆ ಮಾಡಲಾಗುತ್ತಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...