Homeಕರೋನಾ ತಲ್ಲಣಬ್ಲ್ಯಾಕ್ ಫಂಗಸ್ (ಮ್ಯುಕಾರ್ ಮೈಕೋಸಿಸ್ MucorMycosis) ಕುರಿತ ಪ್ರಶ್ನೆಗಳಿಗೆ ವೈದ್ಯರ ಸರಳ ಉತ್ತರಗಳು

ಬ್ಲ್ಯಾಕ್ ಫಂಗಸ್ (ಮ್ಯುಕಾರ್ ಮೈಕೋಸಿಸ್ MucorMycosis) ಕುರಿತ ಪ್ರಶ್ನೆಗಳಿಗೆ ವೈದ್ಯರ ಸರಳ ಉತ್ತರಗಳು

ಈ ರೋಗವನ್ನು ಎಷ್ಟು ಬೇಗ ಕಂಡು ಹಿಡಿಯಲಾಗುತ್ತದೆಯೇ ಅಷ್ಟು ಬೇಗ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು ಎನ್ನುತ್ತಾರೆ ಬೆಂಗಳೂರಿನ ಅತ್ಯುತ್ತಮ‌ ಕಣ್ಣು ತಜ್ಞರಲ್ಲೊಬ್ಬರಾದ ಡಾ. ಕೃಷ್ಣ ಆರ್‌ ಮೂರ್ತಿರವರು.

- Advertisement -
- Advertisement -

ಬ್ಲ್ಯಾಕ್ ಫಂಗಸ್ (ಮ್ಯುಕಾರ್ ಮೈಕೋಸಿಸ್ MucorMycosis ) ಕುರಿತ ಹಲವು ಪ್ರಶ್ನೆಗಳಿಗೆ ಬೆಂಗಳೂರಿನ ಅತ್ಯುತ್ತಮ‌ ಕಣ್ಣು ತಜ್ಞರಲ್ಲೊಬ್ಬರಾದ ಡಾ. ಕೃಷ್ಣ ಆರ್‌ ಮೂರ್ತಿರವರು ಸರಳವಾಗಿ ವಿವರಿಸಿದ್ದಾರೆ..

ಮ್ಯೂಕರ್‌ಮೈಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಯಾರಿಗೆ ಮತ್ತು ಹೇಗೆ ಹರಡುತ್ತೆ?

ಬ್ಲ್ಯಾಕ್ ಫಂಗಸ್ ಇದು ಮೂಗಿನಿಂದ ಶುರುವಾಗಿ ಕಣ್ಣು ಮತ್ತು ಮೆದುಳಿಗೆ ಹರಡುತ್ತೆ. ಸಕ್ಕರೆ ಕಾಯಿಲೆಗಳಿದ್ದವರಲ್ಲಿ ಸಕ್ಕರೆಯ ಅಂಶ ಅಧಿಕವಾದಾಗ, ನಿಯಂತ್ರಣ ತಪ್ಪಿದಾಗ ಇದು ಕಾಣಿಸಿಕೊಳ್ಳಬಹುದು. ಜೊತೆಗೆ ಸಕ್ಕರೆ ಕಾಯಿಲೆಯ ಜೊತೆಗೆ ಕಿಡ್ನಿ ವೈಫಲ್ಯವಿದ್ದವರಿಗೆ ಇದು ಕಾಣಿಸಿಕೊಳ್ಳುವ ಸಂಭವವಿದೆ. ಇದು ಹೊಸ ಕಾಯಿಲೆಯೇನಲ್ಲ, ಮುಂಚಿನಿಂದಲೂ ನೋಡುತ್ತಾ ಬಂದಿದ್ದೇವೆ.

ಕೋವಿಡ್‌ಗೂ ಬ್ಲ್ಯಾಕ್ ಫಂಗಸ್‌ಗೂ ಸಂಬಂಧವಿದೆಯೇ?

ಕೋವಿಡ್‌ ಸಂದರ್ಭದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಏಕೆಂದರೆ ಕೋವಿಡ್‌ ಬಂದವರಲ್ಲಿ ಸಕ್ಕರೆ ಕಾಯಿಲೆ ಇದ್ದವರಿಗೆ ಸಕ್ಕರೆಯ ಪ್ರಮಾಣ ನಿಯಂತ್ರಿಸಲಾಗದ ಮಟ್ಟಿಗೆ ಹೆಚ್ಚಾಗುವ ಸಾಧ್ಯತೆಯಿದೆ. ಕೋವಿಡ್‌ಗೆ ನೀಡುವ ಔಷಧಗಳಿಂದಲೂ ರಕ್ತದ ಸಕ್ಕರೆಯ ಅಂಶ ಏರು-ಪೇರಾಗಬಹುದು. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ಕೋವಿಡ್‌ ಬಂದವರಿಗೆ ಆಮ್ಲಜನಕ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಅದಕ್ಕೆ ಬಳಸುವ ಆಮ್ಲಜನಕ ನಾಳಗಳು ಸ್ವಚ್ಛವಾಗಿಲ್ಲದಿದ್ದಲ್ಲಿ ಆಗಲೂ ಸಹ ಮೂಗಿನ ಮೂಲಕ ಈ ಬ್ಲಾಕ್ ಫಂಗಸ್ ಹರಡಿಕೊಳ್ಳಬಹುದು. ಹಾಗಾಗಿ ಮನೆಯಲ್ಲಿಯೇ ಆಕ್ಸಿಜನ್ ಕೊಡುವ ಸಂದರ್ಭ ಬಂದಲ್ಲಿ ಈ ಆಕ್ಸಿಜನ್ ನೇಷಲ್ ಟ್ಯೂಬ್ ಸ್ವಚ್ಛತೆಗೆ ಗಮನ ಕೊಡಬೇಕು. ಮೂರನೇಯದಾಗಿ ಕೋವಿಡ್ ಕಾಯಿಲೆ ಕಾಣಿಸಿಕೊಂಡ ಸಂದರ್ಭದಲ್ಲಿ ನಮ್ಮ ಇಮ್ಯುನಿಟಿ (ರೋಗ ನಿರೋಧಕತೆ) ಸ್ವಲ್ಪ ತಗ್ಗಿರುತ್ತೆ. ಈ ಸಂದರ್ಭದಲ್ಲಿ ಬ್ಲಾಕ್ ಫಂಗಸ್ ಅಂಟಿಕೊಳ್ಳಬಹುದು. ಆದರೆ ಈ ರೋಗ ಒಬ್ಬರಿಂದ ಒಬ್ಬರಿಗೆ ಗಾಳಿಯಲ್ಲಿ ಹರಡುವುದಿಲ್ಲ.

ಬ್ಲ್ಯಾಕ್ ಫಂಗಸ್‌ನ ಲಕ್ಷಣಗಳೇನು?

ಮೂಗು ಕಟ್ಟಿಕೊಳ್ಳುವುದು, ಮೂಗಿನಿಂದ ರಕ್ತ ಅಥವಾ ಕಪ್ಪು ಬಣ್ಣದ ಗೊಣ್ಣೆ ಬರುವುದು, ಮುಖದ ಊತ, ಕಣ್ಣು ಮತ್ತು ಮೂಗಿನ ಸುತ್ತ ನೋವು ಬರುವುದು, ಮೂಗು ಅಥವಾ ಬಾಯಿಯೊಳಗೆ ಕಪ್ಪು ಬಣ್ಣದ ಗಾಯ ಕಾಣಿಸಿಕೊಳ್ಳುವುದು. ಕಣ್ಣಿನ ದೃಷ್ಟಿ ಕಡಿಮೆಯಾಗುವುದು, ಡಬಲ್ ವಿಷನ್ (ಎರಡೆರಡು ಕಾಣುವುದು), ಕಣ್ಣು ಉಬ್ಬಿ ಮುಂದೆ ಬರುವುದು ಮತ್ತು ತಲೆ ನೋವು.

ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆಯೇನು?

ಈ ರೋಗವನ್ನು ಎಷ್ಟು ಬೇಗ ಕಂಡು ಹಿಡಿಯಲಾಗುತ್ತದೆಯೇ ಅಷ್ಟು ಬೇಗ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಈ ಮೇಲಿನ ಗುಣಲಕ್ಷಣಗಳು ಕಂಡಬಂದಲ್ಲಿ ತಕ್ಷಣ ಇಎನ್‌ಟಿ (ಕಣ್ಣು, ಮೂಗು, ಗಂಟಲು ತಜ್ಞರು) ವೈದ್ಯರನ್ನು ಕಾಣಬೇಕು.

ನಾವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು?

ಡಯಾಬಿಟೀಸ್ ಇದ್ದವರು ಅದನ್ನು ನಿಯಂತ್ರಣದಲ್ಲಿಡಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು‌- ಅಂದರೆ ಆರೋಗ್ಯಕರ ಜೀವನಶೈಲಿ, ನಿಯಮಿತ ವ್ಯಾಯಾಮ.
(ಅನಗತ್ಯವಾಗಿ, ಅನಗತ್ಯ ಸಂದರ್ಭದಲ್ಲಿ, ಅನಗತ್ಯ ಪ್ರಮಾಣದಲ್ಲಿ ಸ್ಟಿರಾಯ್ಡ್‌ಗಳನ್ನು ವೈದ್ಯರು ಕೊಡಬಾರದು).

ಮಣ್ಣಿನಿಂದ‌ ಈ ಬ್ಲ್ಯಾಕ್ ಫಂಗಸ್ ಇನ್ಫೆಕ್ಷನ್ ಆಗತ್ತೆ ಅಂತಾರೆ. ಇದು ನಿಜವೆ?

ಈ ಮ್ಯುಕೋರ್‌ನ ಬೀಜಗಳು (spores) ಎಲ್ಲೆಡೆ ಇರುತ್ತವೆ. ಮಣ್ಣಿನಲ್ಲೂ ಸಹಾ.. ಹಾಗಾಗಿ ಎಚ್ಚರಿಕೆಯಿಂದಿರಬೇಕು.

ಕೋವಿಡ್ ನಂತರ ಎಷ್ಟು ಸಮಯ ಈ ಬ್ಲಾಕ್‌ ಫಂಗಸ್ ಬರದಂತೆ ಎಚ್ಚರ ವಹಿಸಬೇಕು?

ಇಂತಿಷ್ಟು ಕಾಲ ಎಂದು ಈಗಲೇ ಹೇಳಲಾಗದು. ಒಂದು ಸದೃಢ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬೇಕೆಂದು ಕೆಲಸ ಮಾಡಬೇಕು.

ಈ ಕುರಿತು ನಿಮಗೆ ಸಂದೇಹಗಳಿದ್ದಲ್ಲಿ, ಸಲಹೆ ಮತ್ತು ಚಿಕಿತ್ಸೆಯ ಕುರಿತು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಕೆಸಿವಿಟಿ ಹೆಲ್ಫ್‌ಲೈನ್‌ ಅನ್ನು (08047166115) ಸಂಪರ್ಕಿಸಬಹುದು.

ಈ ಕುರಿತು ವೈದ್ಯರು ಮಾತನಾಡಿರುವ ವಿಡಿಯೋ ನೋಡಿ:


ಇದನ್ನೂ ಓದಿ; ಬ್ಲಾಕ್ ಫಂಗಸ್: ಔಷಧಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರದ ಮೀನಾಮೇಷ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಬರೆದಿದ್ದ ವಿದ್ಯಾರ್ಥಿಗಳಿಗೆ 50% ಅಂಕ: ಮರುಮೌಲ್ಯಮಾಪನ ಮಾಡಿದಾಗ ಶೂನ್ಯಕ್ಕಿಳಿದ ಅಂಕ

0
ಪರೀಕ್ಷೆಗಳಿಗೆ ಬರೆದಿರುವ ಉತ್ತರಗಳ ಗುಣಮಟ್ಟದ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ. ಆದರೆ ಉತ್ತರಪ್ರದೇಶದ  ಜೌನ್‌ಪುರದಲ್ಲಿರುವ ವೀರ್‌ ಬಹದ್ದೂರ್‌ ಸಿಂಗ್‌ ಪೂರ್ವಾಂಚಲ ವಿಶ್ವವಿದ್ಯಾಲಯದಲ್ಲಿನ ಪರೀಕ್ಷೆಯಲ್ಲಿನ ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀರಾಮ್‌’ ಮತ್ತು ಕ್ರಿಕೆಟ್‌ ಆಟಗಾರರ ಹೆಸರುಗಳನ್ನು...