ತಾಪ್ಸಿ

ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ಅವರು ಭಾರತೀಯ ರೈತರ ಹೋರಾಟದ ವರದಿಯೊಂದನ್ನು ಉಲ್ಲೇಖಿಸಿ, “ನಾವೇಕೆ ರೈತ ಪ್ರತಿಭಟನೆಯ ಬಗ್ಗೆ ಮಾತನಾಡುತ್ತಿಲ್ಲ?” ಎಂದು ಟ್ವೀಟ್ ಮಾಡಿದ್ದರು. ಇದರ ನಂತರ ಭಾರತದ ರೈತ ಹೋರಾಟಕ್ಕೆ ಏಕಾಏಕಿಯಾಗಿ ಅಂತಾರಾಷ್ಟ್ರೀಯವಾಗಿ ಬೆಂಬಲ ಹೆಚ್ಚಾಗಿದ್ದು, ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು ಭಾರತೀಯ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ.

ಇದರಿಂದಾಗಿ ತೀವ್ರ ಮುಜುಗರಕ್ಕೊಳಗಾಗಿರುವ ಕೇಂದ್ರ ಸರ್ಕಾರ ಅದನ್ನು ಸರಿ ಪಡಿಸಲು, ರೈತ ಹೋರಾಟವು ದೇಶದ ಆಂತರಿಕ ಸಮಸ್ಯೆಯಾಗಿದ್ದು ವಿದೇಶಿಗರು ಇದರ ಬಗ್ಗೆ ಮಾತನಾಡಬಾರದು ಎಂದು ಹೇಳಿತ್ತು. ಜೊತೆಗೆ #FarmersProtest ಹ್ಯಾಶ್‌ಟ್ಯಾಗ್‌ಗೆ ವಿರುದ್ದವಾಗಿ ’ಇಂಡಿಯಾ ಟುಗೇದರ್‌’ ಮತ್ತು  ’ಇಂಡಿಯಾ ಅಗೇನ್ಸ್ಟ್‌‌ ಪ್ರೊಪಗಾಂಡ’ ಎಂಬ ಹ್ಯಾಶ್ ಟ್ಯಾಗನ್ನು ನೀಡಿತ್ತು.

ಇದನ್ನೂ ಓದಿ: ರೈತ ಹೋರಾಟಕ್ಕೆ ಗ್ರೇಥಾ ಥನ್‌‌ಬರ್ಗ್ ಮತ್ತು ಪಾಪ್‌ ಗಾಯಕಿ ರಿಹಾನ್ನಾ ಬೆಂಬಲ; ನೆಟ್ಟಿಗರ ಪ್ರತಿಕ್ರಿಯೆಯೇನು?

ಸಚಿನ್ ತೆಂಡುಲ್ಕರ್‌, ವಿರಾಟ್ ಕೋಹ್ಲಿ, ಅಜಿಂಕ ರಹಾನೆ, ಅನಿಲ್ ಕುಂಬ್ಳೆ, ಲತಾ ಮಂಗೇಶ್ಕರ್‌, ಅಕ್ಷಯ್ ಕುಮಾರ್‌, ಸೈನಾ ನೆಹ್ವಾಲ್, ಯುವರಾಜ್ ಸಿಂಗ್, ಸುರೇಶ್ ರೈನಾ, ಸುನಿಲ್ ಶೆಟ್ಟಿ, ಅಜಯ್ ದೇವಗನ್ ಸೇರಿದಂತೆ ಹಲವಾರು ಜನಪ್ರಿಯ ವ್ಯಕ್ತಿಗಳು ಈ ಹ್ಯಾಶ್‌ಟ್ಯಾಗ್‌‌ ಅನ್ನು ಬಳಸಿಕೊಂಡು, ವಿದೇಶಿಯರು ಭಾರತದ ಆಂತರಿಕ ವಿಷಯದಲ್ಲಿ ಮಾತನಾಡಬಾರದು ಎಂದು ಹೇಳಿದ್ದರು. ಜೊತೆಗೆ ಪ್ರೊಪಗಾಂಡ(ಅಪಪ್ರಚಾರ)ದ ವಿರುದ್ದ ಭಾರತ ಎಂದು ಟ್ವೀಟ್ ಮಾಡಿದ್ದರು.

ಈ ಹಿನ್ನಲೆಯಲ್ಲಿ ಸಾಮಾಜಿಕ ಸಮಸ್ಯೆಗಳ ವಿರುದ್ದ ಪ್ರತಿಬಾರಿ ಬಗ್ಗೆ ಧ್ವನಿ ಎತ್ತಿಕೊಂಡೆ ಬಂದಿರುವ ಬಾಲಿವುಡ್ ನಟಿ ತಾಪ್ಸಿ ಪನ್ನು, “ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಅಲ್ಲಾಡಿಸುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಒಂದು ಕಾರ್ಯಕ್ರಮ ನಿಮ್ಮ ಧಾರ್ಮಿಕ ನಂಬಿಕೆಯನ್ನು ಅಲ್ಲಾಡಿಸುವುದಾದರೆ, ಮೊದಲು ನೀವು ನಂಬಿರುವ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿ. ಅದರ ಬದಲು ಉಳಿದವರಿಗೆ ಪ್ರೊಪಗಂಡಾ ಕಲಿಸುವ ಟೀಚರ್‌ ಆಗಬೇಡಿ” ಎಂದು ಮೇಲಿನ ಸೆಲೆಬ್ರಿಟಿಗಳಿಗೆ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಪರವಾಗಿ ಕಾಪಿ-ಪೇಸ್ಟ್ ಟ್ವೀಟ್: ಸಿಕ್ಕಿಬಿದ್ದ ಭಾರತೀಯ ಸೆಲೆಬ್ರಿಟಿಗಳು!

ಪ್ರಸ್ತುತ ಟ್ವೀಟ್ ವೈರಲ್ ಆಗಿದ್ದು ಹಲವರು ತಾಪ್ಸಿ ಪನ್ನುಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಅಂತರಾಷ್ಟ್ರೀಯ ಸೆಲೆಬ್ರಿಟಿಗಳ ಬೆಂಬಲ: ಗರಂ ಆಯಿತೇ ವಿದೇಶಾಂಗ ಸಚಿವಾಲಯ?

ವಿಧಾನ ಸಭಾ ಅಧಿವೇಶನದ ಫೇಸ್‌ಹಕ್ ಲೈವ್ ನೋಡಿ

LEAVE A REPLY

Please enter your comment!
Please enter your name here